ಉಪರಾಷ್ಟ್ರಪತಿಗಳ ಕಾರ್ಯಾಲಯ
ಮಸ್ಸೂರಿಯ ಎಲ್‌ಬಿಎಸ್‌ಎನ್‌ಎಎಯಲ್ಲಿ 2024 ಬ್ಯಾಚ್‌ನ ತರಬೇತಿಯಲ್ಲಿರುವ ಐಎಎಸ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್
2047ರ ವಿಕಸಿತ ಭಾರತದ ದೂರದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ನಾಗರಿಕ ಅಧಿಕಾರಿಗಳು ಪ್ರಮುಖ ಕೊಂಡಿ: ಉಪರಾಷ್ಟ್ರಪತಿ
ತಂಡದ ಶ್ರೇಷ್ಠತೆ, ಸಮಗ್ರತೆ ಮತ್ತು ನಾಗರಿಕ ಕೇಂದ್ರಿತ ಆಡಳಿತಕ್ಕೆ ಆದ್ಯತೆ ನೀಡುವಂತೆ ಉಪರಾಷ್ಟ್ರಪತಿಗಳು ಐಎಎಸ್ ಅಧಿಕಾರಿಗಳಿಗೆ ಕರೆ
“ಸೇವಾ ಮನೋಭಾವ ಮತ್ತು ಕರ್ತವ್ಯ ಬೋಧವನ್ನು ನಿಮ್ಮ ಮಾರ್ಗದರ್ಶಿ ಮಂತ್ರವನ್ನಾಗಿ ಮಾಡಿಕೊಳ್ಳಿ”: ಉಪರಾಷ್ಟ್ರಪತಿ
“ನಿಜವಾದ ನಾಯಕತ್ವ ಅಧಿಕಾರ ಅಥವಾ ಸ್ಥಾನದಿಂದ ಅಳೆಯಲಾಗುವುದಿಲ್ಲ, ಆದರೆ ನೈತಿಕವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯದಿಂದ ಅಳೆಯಲಾಗುತ್ತದೆ”: ಉಪರಾಷ್ಟ್ರಪತಿ
ಭವಿಷ್ಯಕ್ಕೆ ಸಿದ್ಧವಾಗಿರುವ ನಾಗರಿಕ ಸೇವೆಗಳಿಗೆ ತಂತ್ರಜ್ಞಾನ, ನಿರಂತರ ಕಲಿಕೆ ಮತ್ತು ಹೊಂದಿಕೊಳ್ಳುವಿಕೆ ಅತ್ಯಗತ್ಯ: ಉಪರಾಷ್ಟ್ರಪತಿ
प्रविष्टि तिथि:
20 AUG 2026 2:28PM by PIB Bengaluru
ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಇಂದು ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ (ಎಲ್ ಬಿ ಎನ್ ಎ ಎ) 2024ರ ಬ್ಯಾಚ್‌ನ ಐಎಎಸ್ ಅಧಿಕಾರಿಗಳಿಗೆ ಎರಡನೇ ಹಂತದ ತರಬೇತಿಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಧಿಕಾರಿಗಳನ್ನು ಅಭಿನಂದಿಸಿದ ಉಪರಾಷ್ಟ್ರಪತಿಗಳು, ನಾಗರಿಕ ಸೇವೆಗಳು ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆಗಳನ್ನು ನೀಡಿವೆ ಮತ್ತು ತಳಮಟ್ಟದಲ್ಲಿ ನೀತಿ ಮತ್ತು ಅದರ ಅನುಷ್ಠಾನದ ನಡುವಿನ ಪ್ರಮುಖ ಕೊಂಡಿಯಾಗಿ ಉಳಿದಿವೆ ಎಂದು ಹೇಳಿದರು.
2047ರ ವಿಕಸಿತ ಭಾರತದೆಡೆಗಿನ ಪಯಣವನ್ನು ಉಲ್ಲೇಖಿಸಿದ ಶ್ರೀ ಸಿ.ಪಿ. ರಾಧಾಕೃಷ್ಣನ್, ಅಭಿವೃದ್ಧಿಯು ಕೊನೆಯ ಮೈಲಿಯನ್ನು ತಲುಬೇಕು ಮತ್ತು ಎಲ್ಲರನ್ನೂ ಒಳಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಕರೆ ನೀಡಿದರು. "ಸೇವಾ ಮನೋಭಾವ ಮತ್ತು ಕರ್ತವ್ಯಬೋಧ"ವನ್ನು ತಮ್ಮ ಮಾರ್ಗದರ್ಶಿ ಮಂತ್ರವನ್ನಾಗಿ ಮಾಡಿಕೊಳ್ಳಲು ಅವರು ಕರೆ ನೀಡಿದರು.
ತಂಡದ ಕೆಲಸಕ್ಕೆ ಒತ್ತು ನೀಡಬೇಕಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದ ಉಪರಾಷ್ಟ್ರಪತಿಗಳು ಯುವ ಅಧಿಕಾರಿಗಳನ್ನು ವೈಯಕ್ತಿಕ ಅಥವಾ ಗುಂಪು ಶ್ರೇಷ್ಠತೆಗಿಂತ ತಂಡದ ಶ್ರೇಷ್ಠತೆಗಾಗಿ ಶ್ರಮಿಸುವಂತೆ ಒತ್ತಾಯಿಸಿದರು. ಒಗ್ಗಟ್ಟಿನ ತಂಡಗಳನ್ನು ನಿರ್ಮಿಸುವುದು, ಸಹೋದ್ಯೋಗಿಗಳನ್ನು ಪ್ರೇರೇಪಿಸುವುದು ಮತ್ತು ಅವರ ಪೂರ್ವಜರು ಬಿಟ್ಟು ಹೋಗಿರುವ ಉತ್ತಮ ಪದ್ಧತಿಗಳನ್ನು ಮುಂದುವರಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.
ನಾಗರಿಕ ಸೇವೆಗಳಲ್ಲಿ ಹೆಚ್ಚುತ್ತಿರುವ ಮಹಿಳೆಯರ ಪ್ರಾತಿನಿಧ್ಯವನ್ನು ಪ್ರಮುಖವಾಗಿ ಉಲ್ಲೇಖಿಸಿದ ಶ್ರೀ ಸಿ.ಪಿ. ರಾಧಾಕೃಷ್ಣನ್, 2024 ರ ಬ್ಯಾಚ್‌ನಲ್ಲಿ ಸುಮಾರು ಶೇ. 41 ರಷ್ಟು ಮಹಿಳೆಯರಿದ್ದಾರೆ ಎಂದರು. ಈ ಪ್ರಗತಿಯು ನಾರಿ ಶಕ್ತಿಗೆ ಪ್ರಬಲ ಸಾಕ್ಷಿಯಾಗಿದೆ ಎಂದು ಅವರು ಬಣ್ಣಿಸಿದರು, ಅಲ್ಲಿ ಪ್ರತಿಭೆ ಏಕತಾನತೆ (ಸ್ಟೀರಿಯೊಟೈಪ್‌ಗಳನ್ನು) ಮೀರಿ ಮೇಲೇರುತ್ತದೆ ಮತ್ತು ನಿರ್ಣಯವು ಅಡೆತಡೆಗಳನ್ನು ಮೀರಿ ಮುನ್ನಡೆಯುತ್ತದೆ ಎಂದರು.
ದಕ್ಷತೆ, ಪಾರದರ್ಶಕತೆ ಮತ್ತು ನಾಗರಿಕ ಸೇವಾ ವಿತರಣೆಯನ್ನು ಸುಧಾರಿಸಲು ಕೃತಕ ಬುದ್ಧಿಮತ್ತೆ, ನೈಸರ್ಗಿಕ ಭಾಷಾ ಕಲಿಕೆ, ಯಂತ್ರ ಕಲಿಕೆ ಮತ್ತು ಬ್ಲಾಕ್‌ಚೈನ್ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಂತೆ ಉಪರಾಷ್ಟ್ರಪತಿ, ಅಧಿಕಾರಿಗಳಿಗೆ ಕರೆ ನೀಡಿದರು. ನಿರಂತರ ಕಲಿಕೆ, ಹೊಂದಿಕೊಳ್ಳುವಿಕೆ ಮತ್ತು ಭವಿಷ್ಯಕ್ಕೆ ಸಿದ್ಧರಾಗಿರಬೇಕು ಎಂದು ಬಲವಾಗಿ ಪ್ರತಿಪಾದಿಸಿದರು.
ಸಾರ್ವಜನಿಕ ಸೇವೆಗೆ ನಡವಳಿಕೆ ಮತ್ತು ಪ್ರಾಮಾಣಿಕತೆಯೇ ಅಡಿಪಾಯ ಎಂದು ಒತ್ತಿ ಹೇಳಿದ ಶ್ರೀ ಸಿ.ಪಿ. ರಾಧಾಕೃಷ್ಣನ್, ನಿಜವಾದ ನಾಯಕತ್ವವನ್ನು ಅಧಿಕಾರ ಅಥವಾ ಸ್ಥಾನದಿಂದ ಅಳೆಯಲಾಗುವುದಿಲ್ಲ, ಆದರೆ ಕಷ್ಟಕರ ಸಂದರ್ಭಗಳಲ್ಲಿಯೂ ಸಹ ನೈತಿಕವಾಗಿ ವರ್ತಿಸುವ ಸಾಮರ್ಥ್ಯದಿಂದ ಅಳೆಯಲಾಗುತ್ತದೆ ಎಂದು ಹೇಳಿದರು.
ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ ಅವರು, ದೇಶದ ಅತ್ಯಂತ ದೂರದ ಮೂಲೆಗಳಲ್ಲಿ ಜೀವನವನ್ನು ಪರಿವರ್ತಿಸುವ ಮೂಲಕ ಮತ್ತು ಪ್ರತಿಯೊಂದು ಕುಂದುಕೊರತೆಯನ್ನು ಆಲಿಸುವ ಮೂಲಕ ಮತ್ತು ಪ್ರತಿಯೊಬ್ಬ ನಾಗರಿಕನಿಗೆ ಅಧಿಕಾರ ನೀಡುವುದನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ತಮ್ಮ ಸೇವೆಯನ್ನು ಅರ್ಥಪೂರ್ಣಗೊಳಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಉತ್ತರಾಖಂಡದ ರಾಜ್ಯಪಾಲ, ಲೆಫ್ಟಿನೆಂಟ್ ಜನರಲ್ (ನಿವೃತ್ತ) ಗುರ್ಮಿತ್ ಸಿಂಗ್; ಉತ್ತರಾಖಂಡ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಹಾಗೂ ಸೈನಿಕ ಕಲ್ಯಾಣ ಸಚಿವರಾದ ಶ್ರೀ ಗಣೇಶ್ ಜೋಶಿ; ಎಲ್‌ಬಿಎಸ್‌ಎನ್‌ಎಎ ನಿರ್ದೇಶಕರಾದ ಡಾ. ಬಿ. ರಾಜೇಂದರ್ ಮತ್ತಿತರರು ಉಪಸ್ಥಿತರಿದ್ದರು.






*****
(रिलीज़ आईडी: 2301546)
आगंतुक पटल : 13