ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಎಂಎಸ್‌ಎಂಇಗಳನ್ನು ಡಿಜಿಟಲ್ ವಾಣಿಜ್ಯದ ಮೂಲಕ ಸ್ಥಳೀಯಮಟ್ಟದಿಂದ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಅನುವು ಮಾಡಿಕೊಡುವ ಕುರಿತು ಎಂಎಸ್‌ಎಂಇ ಸಚಿವಾಲಯದಿಂದ ಐಐಟಿ ಮದ್ರಾಸ್‌ನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜನೆ
ಎಂಎಸ್‌ಎಂಇಗಳೊಂದಿಗೆ ಪ್ರಾಯೋಗಿಕ ಒಳನೋಟಗಳನ್ನು ಹಂಚಿಕೊಳ್ಳಲಿರುವ ಡಿಜಿಎಫ್‌ಟಿ, ಇಸಿಜಿಸಿ, ಎಕ್ಸಿಮ್ ಬ್ಯಾಂಕ್ ಮತ್ತು ಡಿಜಿಟಲ್ ವಾಣಿಜ್ಯ ಪೂರಕ ವ್ಯವಸ್ಥೆಯ ತಜ್ಞರು
प्रविष्टि तिथि:
20 AUG 2026 10:54AM by PIB Bengaluru
ಭಾರತ ಸರ್ಕಾರದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯವು ಚೆನ್ನೈನ ಎಂಎಸ್‌ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿಯ ಮೂಲಕ ಐಐಟಿ ಮದ್ರಾಸ್‌ನ ಉದ್ಯಮಶೀಲತಾ ಕೋಶದ ಸಹಯೋಗದೊಂದಿಗೆ "ಸ್ಥಳೀಯಮಟ್ಟದಿಂದ ಜಾಗತಿಕ ಮಟ್ಟಕ್ಕೆ: ಡಿಜಿಟಲ್ ವಾಣಿಜ್ಯದ ಮೂಲಕ ರಫ್ತು-ಸಿದ್ಧ ಎಂಎಸ್‌ಎಂಇಗಳನ್ನು ಸಕ್ರಿಯಗೊಳಿಸುವುದು" ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಗಸ್ಟ್ 18 ರಂದು ಚೆನ್ನೈನ ಐಐಟಿ ಮದ್ರಾಸ್‌ನಲ್ಲಿ ಆಯೋಜಿಸಿತ್ತು.

ಈ ವಿಚಾರ ಸಂಕಿರಣವು ಎಂಎಸ್ ಎಂಇಗಳು, ಉದ್ಯಮಿಗಳು, ವಿದ್ಯಾರ್ಥಿಗಳು, ನೀತಿ ನಿರೂಪಕರು, ಹಣಕಾಸು ಸಂಸ್ಥೆಗಳು, ರಫ್ತು ಪೂರಕ ವ್ಯವಸ್ಥೆಯ ಪಾಲುದಾರರು ಮತ್ತು ಡಿಜಿಟಲ್ ವಾಣಿಜ್ಯ ತಜ್ಞರನ್ನು ಒಗ್ಗೂಡಿಸಿ ಎಂಎಸ್ ಎಂಇ ಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುವ ಪ್ರಾಯೋಗಿಕ ಮಾರ್ಗಗಳನ್ನು ಅನ್ವೇಷಿಸಲು ಅವಕಾಶ ಮಾಡಿಕೊಡಲಿದೆ.
ಉದ್ಘಾಟನಾ ಗೋಷ್ಠಿಯಲ್ಲಿ ತಮಿಳುನಾಡು ಸರ್ಕಾರದ ಎಂಎಸ್ ಎಂಇ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀ ಪ್ರವೀಣ್ ಯಾದವ್ ಅವರು ವಿಶೇಷ ಭಾಷಣ ಮಾಡಿದರು. ಡಿಜಿಟಲ್ ವಾಣಿಜ್ಯವು ಭೌಗೋಳಿಕ ಗಡಿಗಳನ್ನು ಮೀರಿ ಜಾಗತಿಕ ಮಾರುಕಟ್ಟೆಗಳಿಗೆ ಎಂಎಸ್ ಎಂಇ ಯ ಲಭ್ಯತೆಯನ್ನು ಪರಿವರ್ತಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. ಎಂಎಸ್ ಎಂಇ ಗಳ ಜಾಗತಿಕ ಸ್ಪರ್ಧಾತ್ಮಕತೆಯನ್ನು ವೇಗಗೊಳಿಸುವ ಸಕ್ರಿಯಗೊಳಿಸುವ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಲು ಕೇಂದ್ರ-ರಾಜ್ಯಗಳ ಬಲವಾದ ಸಂಯೋಜನೆಗೆ ಅವರು ಕರೆ ನೀಡಿದರು.
ಐಐಟಿ ಮದ್ರಾಸ್‌ನ ಐಸಿ ಮತ್ತು ಎಸ್‌ಆರ್‌ನ ಡೀನ್ ಪ್ರೊಫೆಸರ್ ಮನು ಸಂತಾನಂ ಅವರ ವಿಶೇಷ ಭಾಷಣದಲ್ಲಿ MSME ಗಳು ಹೊಸ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು, ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುವಲ್ಲಿ ನಾವೀನ್ಯತೆ, ಶೈಕ್ಷಣಿಕ-ಉದ್ಯಮ ಸಹಯೋಗದ ನಿರ್ಣಾಯಕ ಪಾತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಯಿತು.
ಭಾರತೀಯ ರಾಜ್ಯ ಕೈಗಾರಿಕಾ ಅಭಿವೃದ್ಧಿ ಮತ್ತು ಹೂಡಿಕೆ ನಿಗಮದ ಮಹಾನಿರ್ದೇಶಕ ಶ್ರೀ ಹಂಸರಾಜ್ ವರ್ಮಾ ಅವರು ವಿಶೇಷ ಭಾಷಣ ಮಾಡಿದರು, ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸ್ಪರ್ಧಾತ್ಮಕತೆಯನ್ನು ಬಲಪಡಿಸಲು ಗುಣಮಟ್ಟವು ಮೂಲಭೂತವಾಗಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದರು ಮತ್ತು MSME ಗಳು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಡಿಜಿಟಲೀಕರಣದ ಮಹತ್ವವನ್ನು ಒತ್ತಿ ಹೇಳಿದರು.
ಚೆನ್ನೈನ ಎಂಎಸ್ ಎಂಇ ಡಿಎಫ್ ಒ ನ ನಿರ್ದೇಶಕರು ಮತ್ತು ಮುಖ್ಯಸ್ಥ ಶ್ರೀ ಧಯಾಳನ್ ಅವರು ಮುಖ್ಯ ಭಾಷಣ ಮಾಡಿ ಗಣ್ಯ ಅತಿಥಿಗಳನ್ನು ಸನ್ಮಾನಿಸಿದರು. ಚೆನ್ನೈನ ಎಂಎಸ್ ಎಂಇ ಡಿಎಫ್ ನ ಉಪ ನಿರ್ದೇಶಕಿ ಶ್ರೀಮತಿ ರೇಷ್ಮಾ ರಾಜೀವನ್ ಅವರು ಸ್ವಾಗತ ಭಾಷಣ ಮಾಡಿದರು ಮತ್ತು ವಿಚಾರ ಸಂಕಿರಣ ಅಯೋಜನೆಯ ಹಿನ್ನೆಲೆಯನ್ನು ವಿವರಿಸಿದರು, ದೇಶೀಯ ಮಾರುಕಟ್ಟೆಗಳಿಂದ ಜಾಗತಿಕ ಅವಕಾಶಗಳತ್ತ ಸಾಗುವಲ್ಲಿ MSME ಗಳನ್ನು ಬೆಂಬಲಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಅಂತಾರಾಷ್ಟ್ರೀಯ ವ್ಯಾಪಾರದ ಬದಲಾಗುತ್ತಿರುವ ಆಯಾಮಗಳು ಮತ್ತು ಎಂಎಸ್ ಎಂಇ ಗಳು ಭೌಗೋಳಿಕ ಗಡಿಗಳನ್ನು ಮೀರಿ ಗ್ರಾಹಕರನ್ನು ತಲುಪಲು ಅನುವು ಮಾಡಿಕೊಡುವಲ್ಲಿ ಡಿಜಿಟಲ್ ವಾಣಿಜ್ಯ, ತಂತ್ರಜ್ಞಾನ, ನಾವೀನ್ಯತೆ ಮತ್ತು ಮಾರುಕಟ್ಟೆ ಸಂಪರ್ಕಗಳ ಬೆಳೆಯುತ್ತಿರುವ ಪಾತ್ರದ ಮೇಲೆ ಈ ವಿಚಾರ ಸಂಕಿರಣವು ಕೇಂದ್ರೀಕರಿಸಿದೆ.

ತಾಂತ್ರಿಕ ಗೋಷ್ಠಿಗಳಲ್ಲಿ ಡಿಜಿಎಫ್ ಟಿ, ಎಕ್ಸಿಂ ಬ್ಯಾಂಕ್, ಇಸಿಜಿಸಿ ಐಐಟಿ ಮದ್ರಾಸ್, ರಫ್ತು ಮತ್ತು ಇ-ಕಾಮರ್ಸ್ ಸಲಹಾ ಕ್ಷೇತ್ರಗಳ ತಜ್ಞರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು, ಅವರು ರಫ್ತು ಕಾರ್ಯವಿಧಾನಗಳು, ವ್ಯಾಪಾರ ಹಣಕಾಸು, ರಫ್ತು ಅಪಾಯ ತಗ್ಗಿಸುವಿಕೆ, ಮಾರುಕಟ್ಟೆ ಗುರುತಿಸುವಿಕೆ, ಅಂತಾರಾಷ್ಟ್ರೀಯ ಪಾವತಿಗಳು, ಅನುಸರಣೆ, ಡಿಜಿಟಲ್ ಆನ್‌ಬೋರ್ಡಿಂಗ್ ಮತ್ತು ಜಾಗತಿಕ ಮಾರುಕಟ್ಟೆ ಪ್ರವೇಶಕ್ಕಾಗಿ ಇ-ಕಾಮರ್ಸ್ ಅನ್ನು ಬಳಸಿಕೊಳ್ಳಲು ಎಂಎಸ್ ಎಂಇ ಗಳಿಗೆ ಅವಕಾಶಗಳ ಕುರಿತು ಪ್ರಾಯೋಗಿಕ ಒಳನೋಟಗಳನ್ನು ಒದಗಿಸಿದರು.
ಎಂಎಸ್ಎಂಇ ಮಾರುಕಟ್ಟೆ ಲಭ್ಯತೆಯನ್ನು ಬಲಪಡಿಸಲು ಸರ್ಕಾರದ ನಿರಂತರ ಪ್ರಯತ್ನಗಳ ಸಂದರ್ಭದಲ್ಲಿ ಚರ್ಚೆಗಳು ವಿಶೇಷವಾಗಿ ಪ್ರಸ್ತುತವಾಗಿದ್ದವು. ಎಂಎಸ್ಎಂಇ ಸಚಿವಾಲಯದ ಖರೀದಿ ಮತ್ತು ಮಾರುಕಟ್ಟೆ ಬೆಂಬಲ (PMS) ಯೋಜನೆಯು ಮಾರುಕಟ್ಟೆ ಪ್ರವೇಶ, ಪ್ಯಾಕೇಜಿಂಗ್, ಆಮದು-ರಫ್ತು ಕಾರ್ಯವಿಧಾನಗಳು, ಇ-ಕಾಮರ್ಸ್ ವೇದಿಕೆಗಳು ಮತ್ತು ತಮ್ಮ ಮಾರುಕಟ್ಟೆಗಳನ್ನು ವಿಸ್ತರಿಸಲು ಸಂಬಂಧಿಸಿದ ಇತರ ಬೆಳವಣಿಗೆಗಳ ಕುರಿತು ಎಂಎಸ್ ಎಂಇ ಗಳಿಗೆ ಜಾಗೃತಿ ಮೂಡಿಸುವ ಮತ್ತು ಶಿಕ್ಷಣ ನೀಡುವ ಗುರಿಯನ್ನು ಹೊಂದಿರುವ ಅದರ ಸಾಮರ್ಥ್ಯ-ನಿರ್ಮಾಣ ಮಧ್ಯಸ್ಥಿಕೆಗಳ ಅಡಿಯಲ್ಲಿ ಮೀಸಲಾದ ಘಟಕವಾಗಿ ರಾಷ್ಟ್ರೀಯ ಕಾರ್ಯಾಗಾರಗಳು/ ವಿಚಾರ ಸಂಕಿರಣಗಳನ್ನು ಒಳಗೊಂಡಿದೆ. ಚೆನ್ನೈನಲ್ಲಿ ಆಯೋಜಿಸಲಾದ ರಾಷ್ಟ್ರೀಯ ಸೆಮಿನಾರ್ ಈ ಘಟಕದ ಭಾಗವಾಗಿ ನಡೆಯಿತು, ಇದು ಎಂಎಸ್ ಎಂಇ ಗಳಿಗೆ ತಜ್ಞರಿಗೆ ನೇರ ಲಭ್ಯತೆ ಮತ್ತು ಡಿಜಿಟಲ್ ವಾಣಿಜ್ಯ ಮತ್ತು ರಫ್ತು ಸಿದ್ಧತೆಯ ಬಗ್ಗೆ ಪ್ರಾಯೋಗಿಕ ಜ್ಞಾನವನ್ನು ಒದಗಿಸುತ್ತದೆ.
ಡಿಜಿಟಲ್ ವಾಣಿಜ್ಯ, ಉದ್ಯಮಶೀಲತೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಉದಯೋನ್ಮುಖ ಅವಕಾಶಗಳನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ವಿಚಾರ ಸಂಕಿರಣ ಒಂದು ಪ್ರಮುಖ ವೇದಿಕೆಯನ್ನು ಒದಗಿಸಿತು.
ಕಾರ್ಯಕ್ರಮವು ಗಣ್ಯ ಅತಿಥಿಗಳು, ಭಾಷಣಕಾರರು, ತಜ್ಞರು, ಸಂವಾದಕಾರರು, ಎಂಎಸ್ಎಂಇಗಳು, ವಿದ್ಯಾರ್ಥಿಗಳು, ಪಾಲುದಾರ ಸಂಸ್ಥೆಗಳು ಮತ್ತು ಸಂಘಟನಾ ತಂಡದ ಕೊಡುಗೆಯನ್ನು ಶ್ಲಾಘಿಸಿ ಧನ್ಯವಾದ ಸಮರ್ಪಣೆಯೊಂದಿಗೆ ಮುಕ್ತಾಯವಾಯಿತು

ಈ ಉಪಕ್ರಮವು ಮಾರುಕಟ್ಟೆ ಲಭ್ಯತೆ, ಡಿಜಿಟಲ್ ಅಳವಡಿಕೆ, ರಫ್ತು ಸಿದ್ಧತೆ ಮತ್ತು ಎಂಎಸ್ ಎಂಇ ಗಳಿಗೆ ಬೆಂಬಲ ನೀಡುವ ಮೂಲಕ ಭಾರತೀಯ ಉದ್ಯಮಗಳನ್ನು "ಫ್ರಮ್ ಲೋಕಲ್ ಟು ಗ್ಲೋಬಲ್ (ಸ್ಥಳೀಯಮಟ್ಟದಿಂದ ಜಾಗತಿಕ ಮಟ್ಟಕ್ಕೆ)" ಕೊಂಡೊಯ್ಯುವ ದೂರದೃಷ್ಟಿಗೆ ಕೊಡುಗೆ ನೀಡುವ ಎಂಎಸ್ ಎಂಇ ಸಚಿವಾಲಯದ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
*****
(रिलीज़ आईडी: 2301453)
आगंतुक पटल : 11