ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪರೋಪಕಾರಿ ಕಾರ್ಯಚಟುವಟಿಗಳ ಮತ್ತು ಇತರರ ಕಲ್ಯಾಣದ ಮಹತ್ವವನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

प्रविष्टि तिथि: 19 AUG 2026 8:18AM by PIB Bengaluru

ಮಾನವ ಜೀವನದ ನಿಜವಾದ ಸಾರ್ಥಕತೆಯು ಇತರ ಜೀವಿಗಳ ಕಲ್ಯಾಣ ಮತ್ತು ಯೋಗಕ್ಷೇಮಕ್ಕಾಗಿ ನಿರಂತರವಾಗಿ ಶ್ರಮಿಸುವುದರಲ್ಲಿ ಅಡಗಿದೆ ಎಂದು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಪ್ರಧಾನಮಂತ್ರಿಯವರು ಹಂಚಿಕೊಂಡಿದ್ದಾರೆ. 

ಪ್ರಧಾನಮಂತ್ರಿ ಅವರು ಹಂಚಿಕೊಂಡಿರುವ ಸಂಸ್ಕೃತ ಸುಭಾಷಿತ -

“एतावज्जन्मसाफल्यं देहिनामिह देहिषु।
प्राणैरर्थैर्धिया वाचा श्रेय एवाचरेत्सदा॥”

ಈ ಜಗತ್ತಿನಲ್ಲಿ ಮಾನವ ಜೀವನದ ಅಂತಿಮ ಸಾರ್ಥಕತೆಯು ಒಬ್ಬರ ದೈಹಿಕ ಸಾಮರ್ಥ್ಯಗಳು, ಸಂಪತ್ತು, ಬುದ್ಧಿಶಕ್ತಿ ಮತ್ತು ಮಾತಿನ ಮೂಲಕ ಇತರ ಜೀವಿಗಳ ಕಡೆಗೆ ನಿರಂತರವಾಗಿ ದಾನಶೀಲತೆ ಮತ್ತು ಕಲ್ಯಾಣ-ಆಧಾರಿತ ಕ್ರಿಯಾತ್ಮಕ ಕಾರ್ಯಚಟುವಟಿಕೆಗಳನ್ನು ಮಾಡುವುದರಲ್ಲಿ ಅಡಗಿದೆ ಎಂದು ಸುಭಾಷಿತವು ತಿಳಿಸುತ್ತದೆ.

ಎಕ್ಸ್ ತಾಣದಲ್ಲಿ ಪ್ರಧಾನಮಂತ್ರಿಯವರು ಈ ರೀತಿ ಬರೆದಿದ್ದಾರೆ;

“एतावज्जन्मसाफल्यं देहिनामिह देहिषु।

प्राणैरर्थैर्धिया वाचा श्रेय एवाचरेत्सदा॥”

 

 

*****


(रिलीज़ आईडी: 2301130) आगंतुक पटल : 3
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Bengali-TR , Assamese , Gujarati , Tamil , Telugu , Malayalam