|
ಪ್ರಧಾನ ಮಂತ್ರಿಯವರ ಕಛೇರಿ
80ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕೆಂಪುಕೋಟೆಯ ಆವರಣದಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಪ್ರಮುಖ ಅಂಶಗಳು
प्रविष्टि तिथि:
15 AUG 2026 4:44PM by PIB Bengaluru
1. ಸಾಮಾನ್ಯ
- ಇಂದು ನಾವು 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಇಂದು ಪ್ರತಿಯೊಬ್ಬ ಭಾರತೀಯನ ಹೃದಯದ ಮಿಡಿತ ‘ವಂದೇ ಮಾತರಂ’ ಘೋಷದೊಂದಿಗೆ ಅನುರಣಿಸುತ್ತಿದೆ.
- ಇಂದು ‘ಹರ್ ಘರ್ ತಿರಂಗಾ ಹೈ, ಹರ್ ಮನ್ ತಿರಂಗಾ ಹೈʼ - ಅಂದರೆ, ಪ್ರತಿಯೊಂದು ಮನೆಯಲ್ಲೂ ತ್ರಿವರ್ಣ ಧ್ವಜವಿದೆ, ಪ್ರತಿಯೊಂದು ಹೃದಯದಲ್ಲೂ ತ್ರಿವರ್ಣ ಧ್ವಜವಿದೆ. ಇಂದು ದೇಶವು ಹೊಸ ಸಂಕಲ್ಪಗಳೊಂದಿಗೆ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಮುನ್ನಡೆಯುತ್ತಿದೆ.
- ಇಂದು ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿದ ಈ ಮಣ್ಣಿನ ಮಹಾನ್ ಪುತ್ರರು ಮತ್ತು ಪುತ್ರಿಯರನ್ನು ರಾಷ್ಟ್ರವು ಗೌರವಪೂರ್ವಕವಾಗಿ ಸ್ಮರಿಸುತ್ತಿದೆ. ತಮ್ಮ ತಪಸ್ಸು, ತ್ಯಾಗ ಮತ್ತು ಸಮರ್ಪಣೆಯ ಮೂಲಕ ಅವರು ತಮ್ಮ ಇಡೀ ಜೀವನವನ್ನು ಸ್ವಾತಂತ್ರ್ಯವೆಂಬ ಏಕೈಕ ಗುರಿಗೆ ಮುಡಿಪಾಗಿಟ್ಟರು.
- ಪೂಜ್ಯ ಬಾಪು ಸೇರಿದಂತೆ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ತ್ಯಾಗದ ಈ ಮಹಾನ್ ಪರಂಪರೆಗೆ ಸ್ಫೂರ್ತಿ ನೀಡಿದ ಮಹಾನ್ ಕ್ರಾಂತಿಕಾರಿಗಳಿಗೆ ನಾನು ಗೌರವಪೂರ್ವಕವಾಗಿ ನಮನ ಸಲ್ಲಿಸುತ್ತೇನೆ.
- ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಆಗಸ್ಟ್ 15ರಂದು ಕೆಂಪುಕೋಟೆಯಿಂದ ‘ವಂದೇ ಮಾತರಂ’ ಮೊಳಗುತ್ತಿದೆ. ಇಂದು ನಾವು ‘ವಂದೇ ಮಾತರಂ’ನ 150 ವರ್ಷಗಳನ್ನು ಆಚರಿಸುತ್ತಿರುವಾಗ, ಇದಕ್ಕಿಂತ ಶುಭ ಸಂದರ್ಭ ಇನ್ನಾವುದು ಇರಲು ಸಾಧ್ಯ?
- ಇತ್ತೀಚಿನ ದಿನಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ್ದು, ಇದರಿಂದ ಅನೇಕ ಕುಟುಂಬಗಳು ಬಾಧಿತವಾಗಿವೆ. ಅವರ ನೋವು ಮತ್ತು ಸಂಕಷ್ಟವನ್ನು ನಾವು ಆಳವಾಗಿ ಅರ್ಥಮಾಡಿಕೊಂಡಿದ್ದೇವೆ ಮತ್ತು ಅದರಲ್ಲಿ ಭಾಗಿಯಾಗುತ್ತೇವೆ. ಬಾಧಿತ ಕುಟುಂಬಗಳಿಗೆ ನಾವು ಮತ್ತು ಇಡೀ ದೇಶವು ಅವರೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ನಾನು ಭರವಸೆ ನೀಡುತ್ತೇನೆ.
- ಒಂದು ರಾಷ್ಟ್ರವು ತನ್ನ ಕನಸುಗಳು, ಸಂಕಲ್ಪಗಳು ಮತ್ತು ಸಾಮರ್ಥ್ಯದ ಬಲದಿಂದ ಮುನ್ನಡೆದಾಗಲೇ ಮಹಾನ್ ರಾಷ್ಟ್ರವಾಗುತ್ತದೆ ಹಾಗೂ ತನ್ನ ಆಶಯಗಳನ್ನು ಸಾಕಾರಗೊಳಿಸುತ್ತದೆ.
- ನಮ್ಮ ಆಶಯಗಳೂ ಉನ್ನತವಾಗಿರಬೇಕು. ಏಕೆಂದರೆ ನಮ್ಮ ಕನಸುಗಳು ಉನ್ನತವಾಗಿದ್ದು, ನಮ್ಮ ಸಂಕಲ್ಪ ದೃಢವಾಗಿದ್ದಾಗ ನಮ್ಮ ಸಾಮರ್ಥ್ಯದ ಮಟ್ಟವೂ ಹೆಚ್ಚುತ್ತದೆ, ನಮ್ಮ ಪ್ರಯತ್ನಗಳ ವ್ಯಾಪ್ತಿಯೂ ವಿಸ್ತರಿಸುತ್ತದೆ. ಆಗ ಮಾತ್ರ ನಮ್ಮ ಕನಸುಗಳನ್ನು ನನಸಾಗಿಸಲು ಸಾಧ್ಯ.
- ಇಂದು ಭಾರತವೂ ಬಹುದೊಡ್ಡ ಕನಸನ್ನು ಕಂಡಿದೆ. ಹೊಸ ಎತ್ತರಗಳನ್ನು ತಲುಪುವ ದೃಢ ಸಂಕಲ್ಪದೊಂದಿಗೆ ಆ ಕನಸನ್ನು ಕಂಡಿದೆ. ಆ ಕನಸು ಏನೆಂದರೆ - ದೇಶವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸುವ 2047ರ ವೇಳೆಗೆ ನಾವು ‘ವಿಕಸಿತ ಭಾರತ’ವನ್ನು ನಿರ್ಮಿಸುತ್ತೇವೆ.
- 140 ಕೋಟಿ ನಾಗರಿಕರ ಪರಿಶ್ರಮ ಮತ್ತು ದೃಢಸಂಕಲ್ಪದ ಮೂಲಕ ನಾವು ಈ ಗುರಿಯನ್ನು ಸಾಧಿಸಬೇಕು. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಂಕಲ್ಪ ಮಾಡಿದಾಗ, ಅದು ವಿಶ್ವದ ದೃಷ್ಟಿಯಲ್ಲಿ ನಮ್ಮ ಧೈರ್ಯವನ್ನು ಪ್ರತಿಬಿಂಬಿಸುತ್ತದೆ. ಜಗತ್ತು ನಮ್ಮನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಬೇಕಾಗುತ್ತದೆ.
- ಕಳೆದ 12 ವರ್ಷಗಳಲ್ಲಿ ದೇಶದ ಕೋಟ್ಯಂತರ ನಾಗರಿಕರು - ದಲಿತರು, ಶೋಷಿತರು, ವಂಚಿತರು, ಬುಡಕಟ್ಟು ಜನರು, ಗ್ರಾಮೀಣ ಅಥವಾ ನಗರ ಪ್ರದೇಶಗಳಲ್ಲಿ ವಾಸಿಸುವವರು, ಬಡವರು ಅಥವಾ ಮಧ್ಯಮ ವರ್ಗದವರು, ಯುವಜನರು ಅಥವಾ ಹಿರಿಯರು, ಮಹಿಳೆಯರು ಅಥವಾ ಪುರುಷರು, ಉತ್ತರ ಅಥವಾ ದಕ್ಷಿಣ, ಪೂರ್ವ ಅಥವಾ ಪಶ್ಚಿಮದ ಜನರು - ಎಲ್ಲರೂ ಸಂಕಲ್ಪ ಮತ್ತು ಸಮರ್ಪಣೆಯೊಂದಿಗೆ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ.
- ಅವರ ಪ್ರಯತ್ನಗಳನ್ನು ನಾನು ಗೌರವಪೂರ್ವಕವಾಗಿ ಗುರುತಿಸಿ, ಅಭಿನಂದಿಸುತ್ತೇನೆ. ಈ ಪ್ರಯತ್ನಗಳ ಫಲವಾಗಿ ಇಷ್ಟು ಕಡಿಮೆ ಅವಧಿಯಲ್ಲಿ 25 ಕೋಟಿ ನಾಗರಿಕರು ಬಡತನದಿಂದ ಹೊರಬಂದಿದ್ದಾರೆ.
- ಈ ನಾಗರಿಕರ ಪ್ರಯತ್ನಗಳ ಫಲವಾಗಿ, ಒಂದು ಕಾಲದಲ್ಲಿ ನಾವು ‘ದುರ್ಬಲ ಐದು’ (Fragile Five) ರಾಷ್ಟ್ರಗಳ ಸಾಲಿನಲ್ಲಿ ಪರಿಗಣಿಸಲ್ಪಡುತ್ತಿದ್ದೆವು. ಆದರೆ ಕೇವಲ 12 ವರ್ಷಗಳಲ್ಲೇ ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದ್ದೇವೆ.
- ಕಳೆದ 12 ವರ್ಷಗಳಲ್ಲಿ ರಕ್ಷಣಾ ಉತ್ಪಾದನೆ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. ಖಾದಿ ಮತ್ತು ಗ್ರಾಮೋದ್ಯಮ ಕ್ಷೇತ್ರದ ಉತ್ಪಾದನೆ ಸುಮಾರು ಐದು ಪಟ್ಟು ಹೆಚ್ಚಾಗಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆ ಸುಮಾರು ಏಳು ಪಟ್ಟು ಹೆಚ್ಚಾಗಿದೆ.
- ಆಧುನಿಕ ರೈಲ್ವೆ ಬೋಗಿಗಳ ಉತ್ಪಾದನೆ 21 ಪಟ್ಟು ಹೆಚ್ಚಾಗಿದೆ. ಮೊಬೈಲ್ ಫೋನ್ ಗಳ ಉತ್ಪಾದನೆ 35 ಪಟ್ಟು ಹೆಚ್ಚಾಗಿದೆ. ಅಷ್ಟೇ ಅಲ್ಲದೆ, ಡಿಜಿಟಲ್ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕ್ಷೇತ್ರದಲ್ಲಿಯೂ ಆಧುನಿಕ ಯುಗದ ಅಗತ್ಯಗಳಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ ನಾವು ನಮ್ಮದೇ ಛಾಪು ಮೂಡಿಸಿದ್ದೇವೆ.
- ಇಂಟರ್‌ನೆಟ್ ಬಳಕೆದಾರರು ಮತ್ತು ಗ್ರಾಹಕರ ಸಂಖ್ಯೆ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. ಮಂಜೂರಾದ ಪೇಟೆಂಟ್ ಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ.
- ಡಿಜಿಟಲ್ ವಹಿವಾಟುಗಳು 100 ಪಟ್ಟು ಹೆಚ್ಚಾಗಿವೆ. ಅದೇ ವೇಳೆ, ಸಾಮಾನ್ಯ ನಾಗರಿಕರ ದೈನಂದಿನ ಸೌಕರ್ಯ ಮತ್ತು ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿಯೂ ನಾವು ಅಷ್ಟೇ ಗಂಭೀರವಾಗಿ ಕಾರ್ಯನಿರ್ವಹಿಸಿದ್ದೇವೆ.
- ಪ್ರತಿ ವರ್ಷ ಮೊದಲಿಗಿಂತ ಸರಾಸರಿ 15 ಪಟ್ಟು ವೇಗದಲ್ಲಿ ನಲ್ಲಿ ನೀರಿನ ಸಂಪರ್ಕಗಳನ್ನು ಒದಗಿಸಿದ್ದೇವೆ.
- ಪ್ರತಿ ವರ್ಷ ಸರಾಸರಿ ಆರು ಪಟ್ಟು ವೇಗದಲ್ಲಿ ಅಡುಗೆ ಅನಿಲ ಸಂಪರ್ಕಗಳನ್ನು ಒದಗಿಸಲಾಗಿದೆ. ಪ್ರತಿ ವರ್ಷ ಬಡವರಿಗಾಗಿ ಶೌಚಾಲಯಗಳ ನಿರ್ಮಾಣ ಕಾರ್ಯ ನಾಲ್ಕು ಪಟ್ಟು ವೇಗದಲ್ಲಿ ನಡೆದಿದೆ. ಹಾಗೆಯೇ ಪ್ರತಿ ವರ್ಷ ಬಡವರಿಗೆ ಮನೆಗಳನ್ನು ಒದಗಿಸುವ ವೇಗ ಮೂರು ಪಟ್ಟು ಹೆಚ್ಚಾಗಿದೆ.
- ಆಡಳಿತ ವ್ಯವಸ್ಥೆಯಲ್ಲಿಯೂ ದೇಶ ಮಹತ್ವದ ಬದಲಾವಣೆಗಳನ್ನು ತಂದಿದೆ. ಸಾವಿರಾರು ಅನುಸರಣೆ ಅಗತ್ಯಗಳನ್ನು ರದ್ದುಗೊಳಿಸಲಾಗಿದೆ. ನೂರಾರು ಹಳೆಯ ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ಹಿಂದಿನ ಶತಮಾನದ ಕಾನೂನುಗಳೊಂದಿಗೆ ನಾವು 21ನೇ ಶತಮಾನಕ್ಕೆ ಮುನ್ನಡೆಯಲು ಸಾಧ್ಯವಿಲ್ಲ.
- ಆಧುನಿಕ ಮೂಲಸೌಕರ್ಯಕ್ಕಾಗಿ ಮೆಟ್ರೋ ಜಾಲವನ್ನು ವಿಸ್ತರಿಸಿದ್ದೇವೆ ಮತ್ತು ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಿದ್ದೇವೆ. ನಾವು ಕೆಲಸ ಮಾಡಿದ ವೇಗ, ಕೆಲಸದ ಪ್ರಮಾಣ, ಈ ವೇಗ, ಈ ವಿಸ್ತರಣೆ ಮತ್ತು ಈ ಸಾಧನೆಗಳನ್ನು ಸ್ವಾತಂತ್ರ್ಯಾನಂತರ ಕಳೆದ ಒಂದು ದಶಕದಲ್ಲಿ ಭಾರತ ಇದೇ ಮೊದಲ ಬಾರಿಗೆ ಕಂಡಿದೆ.
- ನಮ್ಮ ಮುಂದೆ ಇಷ್ಟೊಂದು ಸಾಧನೆಗಳಿರುವಾಗ, ಇಷ್ಟು ವೇಗದ ಪ್ರಗತಿ ಗೋಚರಿಸುತ್ತಿರುವಾಗ ಮತ್ತು ನಮ್ಮ ನಾಗರಿಕರ ಸಾಮರ್ಥ್ಯಗಳು ಪ್ರತಿ ಕ್ಷಣವೂ ಬಲಗೊಳ್ಳುತ್ತಿರುವಾಗ, 2047ರ ವೇಳೆಗೆ ‘ವಿಕಸಿತ ಭಾರತ’ ನಿರ್ಮಿಸುವ ನಮ್ಮ ಸಂಕಲ್ಪ ಎಂದಿಗೂ ಅಪೂರ್ಣವಾಗಿ ಉಳಿಯಲು ಸಾಧ್ಯವಿಲ್ಲ.
2. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
- ನಾವು ಕೂಡ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ನಮ್ಮ ಹಿತಾಸಕ್ತಿಗಳನ್ನು ರಕ್ಷಿಸಬೇಕು. ಅದಕ್ಕಾಗಿಯೇ ‘ಆತ್ಮನಿರ್ಭರ ಭಾರತ’ ನಿರ್ಮಿಸುವ ದೃಢ ಸಂಕಲ್ಪದೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ. ಇಂದು ಪ್ರತಿಯೊಬ್ಬ ಭಾರತೀಯನ ಹೃದಯ ಮತ್ತು ಮನಸ್ಸು ‘ಮೇಕ್ ಇನ್ ಇಂಡಿಯಾ’, ‘ಸ್ವದೇಶಿ’, ‘ವೋಕಲ್ ಫಾರ್ ಲೋಕಲ್’ ಮೊದಲಾದ ಉಪಕ್ರಮಗಳೊಂದಿಗೆ ಬೆಸೆದುಕೊಳ್ಳುತ್ತಿದೆ.
- 2014ರಿಂದೀಚೆಗೆ ನಾವು ವಿಶ್ವದ ಸುಮಾರು 40 ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ಇದರಿಂದ ತೆರೆದುಕೊಂಡಿರುವ ಅಪಾರ ಅವಕಾಶವನ್ನು ಗಮನಿಸಿ. ಈ ವ್ಯಾಪಾರ ಒಪ್ಪಂದಗಳು ಅತ್ಯಂತ ಮಹತ್ವದ ಅವಕಾಶವನ್ನು ಒದಗಿಸುತ್ತವೆ. ಆದ್ದರಿಂದ ನಮ್ಮ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ನಾನು ವಿಶೇಷವಾಗಿ ಹೇಳಲು ಬಯಸುತ್ತೇನೆ - ಈ ಅವಕಾಶವನ್ನು ನಾವು ಕೈಚೆಲ್ಲಬಾರದು.
- ನಾವು ವಿಶ್ವವನ್ನು ತಲುಪಬೇಕು. ಪ್ರತಿಯೊಂದು ಭಾರತೀಯ ಉತ್ಪನ್ನವೂ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಪಡೆಯಬೇಕು. ನಮ್ಮ ಜವಳಿಯಾಗಿರಲಿ, ಯಂತ್ರೋಪಕರಣಗಳಾಗಿರಲಿ ಅಥವಾ ಔಷಧಿಗಳಾಗಿರಲಿ - ನಾವು ಪ್ರತಿಯೊಂದು ಅವಕಾಶವನ್ನೂ ಸದುಪಯೋಗಪಡಿಸಿಕೊಳ್ಳಬೇಕು. ಆದರೆ ಅದೇ ವೇಳೆ ಜಾಗತಿಕ ಗುಣಮಟ್ಟ ಮತ್ತು ಮಾನದಂಡಗಳನ್ನು ಪೂರೈಸುವುದಷ್ಟೇ ಅಲ್ಲ, ಅವುಗಳನ್ನು ಮೀರಿಸಬೇಕು. ಜಗತ್ತಿನಿಂದ ನಾವು ಪಡೆಯುವುದಕ್ಕಿಂತ ಉತ್ತಮವಾದುದನ್ನು ಜಗತ್ತಿಗೆ ನೀಡಬೇಕು.
- ನಾವು ‘ಸುಧಾರಣಾ ಎಕ್ಸ್ ಪ್ರೆಸ್’ನಲ್ಲಿ ಪ್ರಯಾಣ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಸುಧಾರಣೆಗಳ ಮುಂದಿನ ಹಂತದತ್ತ ಸಾಗಲಿದ್ದೇವೆ. ಆದ್ದರಿಂದ ಸರ್ಕಾರ, ಸಮಾಜ, ಕೈಗಾರಿಕೆ, ಉತ್ಪಾದಕರು, ರೈತರು ಸೇರಿದಂತೆ ಪ್ರತಿಯೊಬ್ಬರೂ ತಮ್ಮ ಸಾಂಪ್ರದಾಯಿಕ ವ್ಯವಸ್ಥೆಗಳಲ್ಲಿ ಸುಧಾರಣೆ ತರಬೇಕಾಗುತ್ತದೆ. ನಮ್ಮ ಚಿಂತನೆಯಲ್ಲೂ ಸುಧಾರಣೆ ತರಬೇಕು, ನಮ್ಮ ಗುರಿಗಳಲ್ಲೂ ಸುಧಾರಣೆ ತರಬೇಕು.
- ಮುಂದಿನ ದಿನಗಳಲ್ಲಿ ನಾನು ‘ಸಪ್ತಧಾರೆ’ಯ ಕುರಿತು ಮಾತನಾಡುವಾಗ, ಅದರಲ್ಲಿ ಮೊದಲನೆಯದು ಉತ್ಪಾದನಾ ಶಕ್ತಿಯಾಗಿದೆ.
- ನಾವು ಉತ್ಪಾದನಾ ಕ್ಷೇತ್ರವನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಬೇಕು. ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ, ಅತ್ಯಂತ ಸಣ್ಣ ಬಿಡಿಭಾಗಗಳಿಂದ ಹಿಡಿದು ಅತ್ಯಂತ ದೊಡ್ಡ ಉತ್ಪನ್ನಗಳವರೆಗೆ ಎಲ್ಲವನ್ನೂ ನಾವು ದೇಶದಲ್ಲೇ ತಯಾರಿಸಬೇಕು.
- ಸಂಪೂರ್ಣ ಮೌಲ್ಯ ಸರಪಳಿಯೂ ನಮ್ಮದೇ ಆಗಬೇಕು. ಈ ದೃಷ್ಟಿಕೋನದೊಂದಿಗೆ ನಾವು ಮುನ್ನಡೆಯಬೇಕು. ನಮಗೆ ಬಿಡಿಭಾಗಗಳೂ ಬೇಕು, ಸಂಪೂರ್ಣ ಉತ್ಪಾದನೆಯೂ ಬೇಕು. ಸಂಪೂರ್ಣ ಉತ್ಪನ್ನವನ್ನೂ ನಾವೇ ತಯಾರಿಸಬೇಕು. ವಿನ್ಯಾಸದಿಂದ ಉತ್ಪಾದನೆಯವರೆಗೆ ಜಾಗತಿಕ ಪೂರೈಕೆ ಸರಪಳಿಯ ವಿಶ್ವಾಸಾರ್ಹ ಕೇಂದ್ರವಾಗಿ ಭಾರತ ಹೊರಹೊಮ್ಮಬೇಕು.
- ನಮ್ಮ ಕಾರ್ಖಾನೆಗಳು ಸ್ಪರ್ಧಾತ್ಮಕವಾಗಿರಬೇಕು. ನಮ್ಮ ಉತ್ಪನ್ನಗಳು ಬಳಕೆದಾರ ಸ್ನೇಹಿಯಾಗಿರಬೇಕು. ನಮ್ಮ ಪ್ಯಾಕೇಜಿಂಗ್ ಜಗತ್ತಿನಾದ್ಯಂತ ಜನರನ್ನು ಆಕರ್ಷಿಸುವಂತಿರಬೇಕು. ದೋಷರಹಿತ ಹಾಗೂ ನಿಖರ ಉತ್ಪಾದನೆಯೇ ನಮ್ಮ ಗುರುತಾಗಬೇಕು.
- ಪ್ರತಿಯೊಬ್ಬ ಉತ್ಪಾದಕ, ಉದ್ಯಮಿ ಮತ್ತು ಎಂ ಎಸ್ ಎಂ ಇ ಗೆ ನಾನು ಹೇಳಲು ಬಯಸುತ್ತೇನೆ: ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ಗುರುತು ವಿಶ್ವಾಸಾರ್ಹತೆ ಮತ್ತು ಗುಣಮಟ್ಟದ ಮೇಲೆ ನಿರ್ಮಾಣವಾಗಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಇರಬಾರದು. ಆದ್ದರಿಂದ ನಮ್ಮ ಮಂತ್ರ ಗುಣಮಟ್ಟ, ಗುಣಮಟ್ಟ, ಗುಣಮಟ್ಟ ಎಂಬುದಾಗಿರಬೇಕು. ಇದೇ ನಮ್ಮ ಜಾಗತಿಕ ಬ್ರ್ಯಾಂಡ್ ಮೌಲ್ಯದ ಅಡಿಪಾಯವಾಗಲಿದೆ.
3. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ
- ಸರ್ಕಾರವು ಭಾರಿ ಹೊರೆ ಹೊರುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ 3,000 ರೂಪಾಯಿ ಬೆಲೆ ಇರುವ ಒಂದು ಚೀಲ ಯೂರಿಯಾವನ್ನು ನಮ್ಮ ರೈತರಿಗೆ ಕೇವಲ 300 ರೂಪಾಯಿಗೆ ಒದಗಿಸಲಾಗುತ್ತಿದೆ.
- ಅಷ್ಟೇ ಅಲ್ಲ, ಜಾಗತಿಕ ಮಾರುಕಟ್ಟೆಯಲ್ಲಿ ಡಿಎಪಿ ಬೆಲೆ ಈಗ 5,000 ರೂಪಾಯಿಗೆ ತಲುಪಿದೆ. ಆದರೂ ನನ್ನ ದೇಶದ ರೈತರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ನಾವು ಡಿಎಪಿಯನ್ನು 1,350 ರೂಪಾಯಿಗೆ ಒದಗಿಸುತ್ತಿದ್ದೇವೆ.
- ಈ ‘ಸಪ್ತಧಾರೆ’ಯ ಎರಡನೇ ಶಕ್ತಿ ಕೃಷಿ ಮತ್ತು ಆಹಾರ ಉತ್ಪಾದನೆಯಾಗಿದೆ. ಆಹಾರ ಸಂಸ್ಕರಣೆಯ ದಿಕ್ಕಿನಲ್ಲಿಯೂ ನಾವು ಮುನ್ನಡೆಯಬೇಕು. ಜಾಗತಿಕ ಮಾರುಕಟ್ಟೆಗಳು ಈಗ ನಮ್ಮ ರೈತರಿಗೆ ತೆರೆದುಕೊಳ್ಳುತ್ತಿವೆ.
- ಮುಕ್ತ ವ್ಯಾಪಾರ ಒಪ್ಪಂದಗಳಿಂದಾಗಿ ನಮಗೆ ಅತ್ಯಂತ ದೊಡ್ಡ ಮಾರುಕಟ್ಟೆಗೆ ಪ್ರವೇಶ ದೊರೆಯುತ್ತಿದೆ. ನಾವು ಆ ಮಾರುಕಟ್ಟೆಗಳನ್ನು ತಲುಪಬೇಕು; ಅಲ್ಲಿ ನಮ್ಮ ಅಸ್ತಿತ್ವವನ್ನು ಸ್ಥಾಪಿಸಬೇಕು. ಹೊಲದಿಂದ ನೇರವಾಗಿ ರಫ್ತು ಮಾರುಕಟ್ಟೆಯವರೆಗೆ ನಾವು ಸಾಗಬೇಕು.
- ನಮ್ಮ ರೈತರು ರಾಸಾಯನಿಕ ಮುಕ್ತ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಏಕೆಂದರೆ ಇಂತಹ ಉತ್ಪನ್ನಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಹೆಚ್ಚಲಿದೆ. ನಮ್ಮ ಕೃಷಿ ಉತ್ಪನ್ನಗಳು ಎಲ್ಲ ರೀತಿಯಲ್ಲಿಯೂ ಜಾಗತಿಕ ಮಾನದಂಡಗಳನ್ನು ಪೂರೈಸಿದಾಗ ಮತ್ತು ಅವುಗಳಿಗೆ ತಕ್ಕಂತೆ ಗುಣಮಟ್ಟ ಹೊಂದಿದಾಗ, ನಾವು ಸುಲಭವಾಗಿ ಜಾಗತಿಕ ಮಾರುಕಟ್ಟೆಗಳನ್ನು ಪ್ರವೇಶಿಸಬಹುದು.
4. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
- ಮೊಬೈಲ್ ಫೋನ್ ಉತ್ಪಾದನೆಯು 35 ಪಟ್ಟು ಹೆಚ್ಚಾಗಿದೆ. ಅಷ್ಟೇ ಅಲ್ಲದೆ, ಡಿಜಿಟಲ್ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕ್ಷೇತ್ರದಲ್ಲಿಯೂ ಆಧುನಿಕ ಯುಗದ ಅಗತ್ಯಗಳಿಗೆ ಅನುಗುಣವಾಗಿ ನಾವು ನಮ್ಮದೇ ಛಾಪು ಮೂಡಿಸಿದ್ದೇವೆ.
- ಇಂಟರ್‌ನೆಟ್ ಬಳಕೆದಾರರು ಮತ್ತು ಗ್ರಾಹಕರ ಸಂಖ್ಯೆ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. ಮಂಜೂರಾದ ಪೇಟೆಂಟ್ ಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ.
- ಡಿಜಿಟಲ್ ವಹಿವಾಟುಗಳು 100 ಪಟ್ಟು ಹೆಚ್ಚಾಗಿವೆ. ಅದೇ ವೇಳೆ, ಸಾಮಾನ್ಯ ನಾಗರಿಕರ ಅನುಕೂಲ ಮತ್ತು ಜೀವನಮಟ್ಟವನ್ನು ಸುಧಾರಿಸಲು ನಾವು ಅಷ್ಟೇ ಗಂಭೀರತೆಯಿಂದ ಕಾರ್ಯನಿರ್ವಹಿಸಿದ್ದೇವೆ.
- ಇಂದಿನ ಡಿಜಿಟಲ್ ಜಗತ್ತಿನಲ್ಲಿ ಮತ್ತು ತಂತ್ರಜ್ಞಾನದ ಈ ಯುಗದಲ್ಲಿ ಚಿಪ್ ನ ಮಹತ್ವವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಅದು ಎಲೆಕ್ಟ್ರಾನಿಕ್ ಉತ್ಪನ್ನವಾಗಿರಲಿ, ವೈದ್ಯಕೀಯ ಉಪಕರಣವಾಗಿರಲಿ ಅಥವಾ ನಮ್ಮ ಸಾರಿಗೆ ವ್ಯವಸ್ಥೆಯಾಗಿರಲಿ - ಎಲ್ಲೆಡೆ ಚಿಪ್ ಗಳು ಅತ್ಯಗತ್ಯವಾಗಿವೆ.
- ಚಿಪ್ ಗಳಿಲ್ಲದೆ ಇಡೀ ಜಗತ್ತಿನ ಕಾರ್ಯಚಟುವಟಿಕೆಗಳೇ ಸ್ಥಗಿತಗೊಳ್ಳಬಹುದಾದ ಹಂತಕ್ಕೆ ನಾವು ತಲುಪಿದ್ದೇವೆ. ಆದ್ದರಿಂದ ಆತ್ಮನಿರ್ಭರತೆಯತ್ತ ಸಾಗುವ ನಿಟ್ಟಿನಲ್ಲಿ ಭಾರತ ಸೆಮಿಕಂಡಕ್ಟರ್ ಉತ್ಪಾದನೆಗಾಗಿ ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ. ಈಗಾಗಲೇ ಮೂರು ಸೆಮಿಕಂಡಕ್ಟರ್ ಘಟಕಗಳು ಕಾರ್ಯಾರಂಭ ಮಾಡಿವೆ.
- ಮುಂಬರುವ ಏಳೆಂಟು ವರ್ಷಗಳಲ್ಲಿ, ಇನ್ನು ಐದರಿಂದ ಎಂಟು ಸೆಮಿಕಂಡಕ್ಟರ್ ಘಟಕಗಳು ಸ್ಥಾಪನೆಯಾಗುವ ನಿರೀಕ್ಷೆಯಿದೆ ಎಂದು ನಾನು ದೇಶದ ಜನರಿಗೆ ಹೇಳಲು ಬಯಸುತ್ತೇನೆ. 'ಆತ್ಮನಿರ್ಭರ ಭಾರತ'ದತ್ತ ಸಾಗುವ ಈ ಪ್ರಯಾಣವು 'ವಿಕಸಿತ ಭಾರತ'ವಾಗಲು ನಮಗೆ ಮಹಾಮಾರ್ಗವನ್ನು ಒದಗಿಸುತ್ತದೆ.
- ನನ್ನ ‘ಸಪ್ತಧಾರೆ’ಯ ಮೂರನೇ ಶಕ್ತಿ ತಂತ್ರಜ್ಞಾನ ಮತ್ತು ನಾವೀನ್ಯತೆ. ಇಂದು ಕೃತಕ ಬುದ್ಧಿಮತ್ತೆ (ಎಐ), ಕ್ವಾಂಟಂ ತಂತ್ರಜ್ಞಾನ, ಬಾಹ್ಯಾಕಾಶ, ರೋಬೋಟಿಕ್ಸ್ ಮತ್ತು ಡೇಟಾ ಕೇಂದ್ರಗಳ ಯುಗವಾಗಿದೆ. ನಮ್ಮ ಮುಂದೆ ಸಂಪೂರ್ಣ ಹೊಸ ಕ್ಷೇತ್ರವೊಂದು ತೆರೆದುಕೊಂಡಿದೆ.
- ಉದಯೋನ್ಮುಖ ತಂತ್ರಜ್ಞಾನಗಳು ಪ್ರತಿ ಕ್ಷಣವೂ ನಮಗೆ ಸವಾಲು ಹಾಕುತ್ತಿವೆ. ಆದ್ದರಿಂದ ನಾವು ಭಾರತವನ್ನು ಕೇವಲ ಜಗತ್ತಿನ ಮಾರುಕಟ್ಟೆಯನ್ನಾಗಿ ಮಾಡಬಾರದು; ಭಾರತವನ್ನು ನಾವೀನ್ಯತೆಯ ಕೇಂದ್ರವನ್ನಾಗಿ ಮಾಡಬೇಕು.
- ಯುಪಿಐ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮೂಲಕ ನಾವು ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ, ನಮ್ಮ ವಿಶ್ವಾಸಾರ್ಹತೆಯನ್ನು ಸ್ಥಾಪಿಸಿದ್ದೇವೆ. ಈಗ ಭಾರತ ತನ್ನ ಡಿಜಿಟಲ್ ಸಾರ್ವಜನಿಕ ತಂತ್ರಜ್ಞಾನಗಳನ್ನು ಜಗತ್ತಿನ ಪ್ರತಿಯೊಂದು ಮೂಲೆಗೂ ಕೊಂಡೊಯ್ಯಬೇಕು. ಮುಂದಿನ ಪೀಳಿಗೆಯ ಸಂವಹನ ತಂತ್ರಜ್ಞಾನಗಳಲ್ಲಿ ಭಾರತ ನಾಯಕತ್ವ ವಹಿಸಬೇಕು.
- ಭಾರತದಲ್ಲಿ ಅಭಿವೃದ್ಧಿಪಡಿಸಿದ 6ಜಿ ಜಗತ್ತಿನ ಪ್ರತಿಯೊಂದು ಮೂಲೆಗೂ ತಲುಪುವಂತೆ ಮಾಡುವುದು ನಮ್ಮ ಗುರಿಯಾಗಬೇಕು. ಈ ದಿಕ್ಕಿನಲ್ಲಿ ನಮ್ಮ ಪ್ರಯತ್ನಗಳನ್ನು ವೇಗಗೊಳಿಸಬೇಕು. ನಮ್ಮ ಬದ್ಧತೆ ಮತ್ತು ಪ್ರಯತ್ನಗಳಲ್ಲಿ ಯಾವುದೇ ಕುಂಠಿತತೆ ಇರಬಾರದು.
5. ಗಣಿ ಸಚಿವಾಲಯ
- ದೇಶಕ್ಕೆ ಅಗತ್ಯವಾದ ನಿರ್ಣಾಯಕ ಖನಿಜಗಳ ಭದ್ರತೆ ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ನಾವು ರಾಷ್ಟ್ರೀಯ ನಿರ್ಣಾಯಕ ಖನಿಜಗಳ ಮಿಷನ್ ಆರಂಭಿಸಿದ್ದೇವೆ. ಬಜೆಟ್‌ನಲ್ಲಿ ‘ನಿರ್ಣಾಯಕ ಖನಿಜಗಳ ಕಾರಿಡಾರ್’ ಘೋಷಣೆಯನ್ನೂ ಮಾಡಿದ್ದೇವೆ.
- ಹಲವು ದೇಶಗಳೊಂದಿಗೆ ನಾವು ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದೇವೆ. ನಿರ್ಣಾಯಕ ಖನಿಜಗಳ ವಿಷಯದಲ್ಲಿ ಜಗತ್ತಿನ ಅನೇಕ ರಾಷ್ಟ್ರಗಳು ಈಗ ಭಾರತದ ಮೇಲೆ ನಂಬಿಕೆ ಇಡಲು ಆರಂಭಿಸಿವೆ.
6. ಇಂಧನ ಸಚಿವಾಲಯ / ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
- ಇಂಧನವಿಲ್ಲದೆ ಹೊಸ ಜಗತ್ತನ್ನು ಮುನ್ನಡೆಸುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿದೆ. ಚಿಪ್ ಗಳಾಗಿರಲಿ, ಎಐ ಆಗಿರಲಿ ಅಥವಾ ಡೇಟಾ ಕೇಂದ್ರಗಳಾಗಿರಲಿ, ನಮಗೆ ಅಪಾರ ಪ್ರಮಾಣದ ವಿದ್ಯುತ್ ಅಗತ್ಯವಿದೆ.
- ಇಂಧನ ಭದ್ರತೆ ಇಂದಿನ ಕಾಲದ ಅಗತ್ಯವಾಗಿದೆ. ಆದ್ದರಿಂದ ಈ ದಿಕ್ಕಿನಲ್ಲಿ ನಾವು ಈಗಾಗಲೇ ಒಂದರ ನಂತರ ಒಂದರಂತೆ ದೃಢ ಹೆಜ್ಜೆಗಳನ್ನು ಇಟ್ಟಿದ್ದೇವೆ.
- ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಪ್ರಮುಖ ಮಾರ್ಗವೆಂದರೆ ಅಣುಶಕ್ತಿ. ಸಂಸತ್ತಿನಲ್ಲಿ ಶಾಂತಿ (SHANTI) ಕಾಯ್ದೆಯನ್ನು ಅಂಗೀಕರಿಸುವ ಮೂಲಕ ನಾವು ಹೊಸ ಗುರಿಯತ್ತ ಸಾಗಲು ದಾರಿ ಮಾಡಿಕೊಟ್ಟಿದ್ದೇವೆ. 2047ರ ವೇಳೆಗೆ 100 ಗಿಗಾವ್ಯಾಟ್ ಅಣು ವಿದ್ಯುತ್ ಸಾಮರ್ಥ್ಯ ಸಾಧಿಸುವ ಗುರಿಯತ್ತ ನಾವು ಕಾರ್ಯನಿರ್ವಹಿಸುತ್ತಿದ್ದೇವೆ.
- 2014ಕ್ಕೂ ಮೊದಲು ಪೈಪ್ ಮೂಲಕ ಅನಿಲವು ಕೇವಲ 20–22 ಲಕ್ಷ ಕುಟುಂಬಗಳಿಗೆ ತಲುಪುತ್ತಿತ್ತು. ಇಂದು ನಾವು ಸುಮಾರು 1.75 ಕೋಟಿ ಕುಟುಂಬಗಳಿಗೆ ಪೈಪ್ ಮೂಲಕ ಅನಿಲ ಒದಗಿಸುತ್ತಿದ್ದೇವೆ.
- ಹನ್ನೆರಡು ವರ್ಷಗಳ ಹಿಂದೆ ದೇಶದ ಸೌರಶಕ್ತಿ ಸಾಮರ್ಥ್ಯ ಕೇವಲ 2 ಗಿಗಾವ್ಯಾಟ್ ಆಗಿತ್ತು — ಕೇವಲ 2 ಗಿಗಾವ್ಯಾಟ್. ಇಂದು ನಾವು 160 ಗಿಗಾವ್ಯಾಟ್ ಸಾಮರ್ಥ್ಯವನ್ನು ಸಾಧಿಸಿದ್ದೇವೆ.
- ನಾವು ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯನ್ನು ಆರಂಭಿಸಿದ್ದೇವೆ. ಇಷ್ಟು ಕಡಿಮೆ ಅವಧಿಯಲ್ಲಿ 50 ಲಕ್ಷ ಕುಟುಂಬಗಳು ಸೌರಶಕ್ತಿಯನ್ನು ಅಳವಡಿಸಿಕೊಂಡಿರುವ ಮೈಲಿಗಲ್ಲನ್ನು ಈಗಾಗಲೇ ದಾಟಿದ್ದೇವೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ. ಈ ಕಾರ್ಯಕ್ರಮ ತ್ವರಿತಗತಿಯಲ್ಲಿ ಮುಂದುವರಿಯುತ್ತಿದ್ದು, ಇದರ ಪರಿಣಾಮವಾಗಿ ಸಾವಿರಾರು ಕುಟುಂಬಗಳ ವಿದ್ಯುತ್ ಬಿಲ್ ವಾಸ್ತವವಾಗಿ ಶೂನ್ಯವಾಗಿದೆ.
- ಸಾವಿರಾರು ಕುಟುಂಬಗಳು ತಮ್ಮ ಅಗತ್ಯಗಳನ್ನು ಪೂರೈಸಿದ ನಂತರ ಉತ್ಪಾದಿಸುವ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡುವ ಮೂಲಕ ಆದಾಯವನ್ನೂ ಗಳಿಸುತ್ತಿವೆ. ಈ ಉಪಕ್ರಮಕ್ಕಾಗಿ ಸರ್ಕಾರ ಪ್ರತಿ ಕುಟುಂಬಕ್ಕೆ 80,000 ರೂಪಾಯಿ ನೆರವು ನೀಡುತ್ತಿದೆ. ಈ ನೆರವಿನೊಂದಿಗೆ ನಾವು ಈ ಪರಿವರ್ತನೆಯನ್ನು ಪೂರ್ಣಗೊಳಿಸುವತ್ತ ಸಾಗುತ್ತಿದ್ದೇವೆ.
- ನಮ್ಮ ‘ಸಪ್ತಧಾರೆ’ಯ ಆರನೇ ಶಕ್ತಿ ಹಸಿರು ಆರ್ಥಿಕತೆ ಮತ್ತು ನೀಲಿ ಆರ್ಥಿಕತೆಯಾಗಿದೆ. ಇವು ಹಸಿರು ಉದ್ಯೋಗಗಳನ್ನೂ ಸೃಷ್ಟಿಸಲಿವೆ.
- ಹಸಿರು ಹೈಡ್ರೋಜನ್, ನವೀಕರಿಸಬಹುದಾದ ಇಂಧನ, ಇಂಧನ ಸಂಗ್ರಹಣೆ, ಹಸಿರು ಚಲನಶೀಲತೆ ಮತ್ತು ಹಸಿರು ಉತ್ಪಾದನೆ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದ ನಾಯಕತ್ವ ಸಾಧಿಸಬೇಕು. ಈ ಎಲ್ಲ ಕ್ಷೇತ್ರಗಳಲ್ಲಿಯೂ ನಾವು ಜಾಗತಿಕ ನಾಯಕತ್ವವನ್ನು ಸ್ಥಾಪಿಸಬೇಕು.
7. ಅಣುಶಕ್ತಿ ಇಲಾಖೆ
- ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಪ್ರಮುಖ ಮಾರ್ಗವೆಂದರೆ ಅಣುಶಕ್ತಿ. ಸಂಸತ್ತಿನಲ್ಲಿ ಶಾಂತಿ (SHANTI) ಕಾಯ್ದೆಯನ್ನು ಅಂಗೀಕರಿಸುವ ಮೂಲಕ ನಾವು ಹೊಸ ಗುರಿಯತ್ತ ಸಾಗಲು ದಾರಿ ಮಾಡಿಕೊಟ್ಟಿದ್ದೇವೆ. 2047ರ ವೇಳೆಗೆ 100 ಗಿಗಾವ್ಯಾಟ್ ಅಣು ವಿದ್ಯುತ್ ಸಾಮರ್ಥ್ಯ ಸಾಧಿಸುವ ಗುರಿಯತ್ತ ನಾವು ಕಾರ್ಯನಿರ್ವಹಿಸುತ್ತಿದ್ದೇವೆ.
- ಈ ದಶಕದಲ್ಲಿಯೇ ಐದು ಹೊಸ ಅಣು ರಿಯಾಕ್ಟರ್ ಗಳನ್ನು ಕಾರ್ಯಾರಂಭಗೊಳಿಸುವ ಗುರಿಯತ್ತ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಈ ವರ್ಷ ಭಾರತವು ಫಾಸ್ಟ್ ಬ್ರೀಡರ್ ರಿಯಾಕ್ಟರ್ ತಂತ್ರಜ್ಞಾನದಲ್ಲಿ ಪರಿಣತಿ ಸಾಧಿಸುವ ಮೂಲಕ ಮಹತ್ವದ ಮೈಲಿಗಲ್ಲು ದಾಟಿದೆ. ಇದರ ಫಲವಾಗಿ ಪರಮಾಣು ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರತೆಯತ್ತ ನಾವು ಮಹತ್ವದ ಹೆಜ್ಜೆ ಇಟ್ಟಿದ್ದೇವೆ.
8. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
- 2014ಕ್ಕೂ ಮೊದಲು, ಅಂದರೆ 12 ವರ್ಷಗಳ ಹಿಂದೆ, ದೇಶದ ಕೇವಲ 70 ನಗರಗಳಲ್ಲಿ ಪೈಪ್ ಮೂಲಕ ಅಡುಗೆ ಅನಿಲ ವಿತರಣಾ ವ್ಯವಸ್ಥೆ ಇತ್ತು. ಈ 12 ವರ್ಷಗಳಲ್ಲಿ ಆ ಜಾಲವನ್ನು 70 ನಗರಗಳಿಂದ 700 ನಗರಗಳಿಗೆ ವಿಸ್ತರಿಸಿದ್ದೇವೆ. ಇದೇ ವೇಗ. ಇದೇ ವಿಸ್ತರಣೆ. ಪ್ರತಿ ವರ್ಷ ಸರಾಸರಿ ಆರು ಪಟ್ಟು ವೇಗದಲ್ಲಿ ಅನಿಲ ಸಂಪರ್ಕಗಳನ್ನು ಒದಗಿಸಲಾಗಿದೆ.
- 2014ಕ್ಕೂ ಮೊದಲು ಪೈಪ್ ಮೂಲಕ ಅನಿಲ ಕೇವಲ 20–22 ಲಕ್ಷ ಕುಟುಂಬಗಳಿಗೆ ತಲುಪುತ್ತಿತ್ತು. ಇಂದು ನಾವು 1.75 ಕೋಟಿ ಕುಟುಂಬಗಳಿಗೆ ಪೈಪ್ ಮೂಲಕ ಅನಿಲ ಒದಗಿಸುತ್ತಿದ್ದೇವೆ. ಹನ್ನೆರಡು ವರ್ಷಗಳ ಹಿಂದೆ ದೇಶದ ಸೌರಶಕ್ತಿ ಸಾಮರ್ಥ್ಯ ಕೇವಲ 2 ಗಿಗಾವ್ಯಾಟ್ ಆಗಿತ್ತು — ಕೇವಲ 2 ಗಿಗಾವ್ಯಾಟ್. ಇಂದು ನಾವು 160 ಗಿಗಾವ್ಯಾಟ್ ಸಾಮರ್ಥ್ಯವನ್ನು ಸಾಧಿಸಿದ್ದೇವೆ.
9. ರೈಲ್ವೆ ಸಚಿವಾಲಯ
- ಆಧುನಿಕ ರೈಲ್ವೆ ಬೋಗಿಗಳ ಉತ್ಪಾದನೆಯು 21 ಪಟ್ಟು ಹೆಚ್ಚಾಗಿದೆ. ನಮ್ಮ ರೈಲ್ವೆ ಜಾಲದ ವಿದ್ಯುದೀಕರಣ 1925ರಲ್ಲಿ ಆರಂಭವಾಯಿತು. ಆದರೆ ನಂತರದ 90 ವರ್ಷಗಳಲ್ಲಿ — 1925ರಿಂದ 2015ರವರೆಗೆ — ರೈಲ್ವೆ ಜಾಲದ ಕೇವಲ ಶೇ.30ರಷ್ಟು ಭಾಗ ಮಾತ್ರ ವಿದ್ಯುದೀಕರಣಗೊಂಡಿತ್ತು.
- ಉಳಿದ ಕಾರ್ಯವನ್ನು ಕೇವಲ ಒಂದು ದಶಕದಲ್ಲಿ ಪೂರ್ಣಗೊಳಿಸಿ, ಬಹುತೇಕ ಸಂಪೂರ್ಣ ವಿದ್ಯುದೀಕರಣ ಸಾಧಿಸಿದ್ದೇವೆ. 90 ವರ್ಷಗಳಲ್ಲಿ ಶೇ.30, 10 ವರ್ಷಗಳಲ್ಲಿ ಶೇ.70 - ಇದೇ ಪ್ರಗತಿಯ ವೇಗ.
- ಇದರ ಪರಿಣಾಮವಾಗಿ ವಿದೇಶದಿಂದ ಆಮದು ಮಾಡಿಕೊಳ್ಳಬೇಕಾದ ಡೀಸೆಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದ್ದೇವೆ. ನಮ್ಮ ರೈಲುಗಳು ಹೆಚ್ಚೆಚ್ಚು ವಿದ್ಯುತ್ ನಿಂದ ಸಂಚರಿಸುತ್ತಿದ್ದು, ಇದರಿಂದ ಪರಿಸರಕ್ಕೆ ಮಹತ್ವದ ಪ್ರಯೋಜನವಾಗುತ್ತಿದೆ.
- ದೇಶವು ತನ್ನ ಮೊದಲ ಹೈಡ್ರೋಜನ್ ಚಾಲಿತ ರೈಲನ್ನೂ ಪರಿಚಯಿಸಿದೆ. ಇದು ಅತ್ಯಂತ ಉದ್ದವಾದ ಮತ್ತು ಅತ್ಯಂತ ಶಕ್ತಿಶಾಲಿಯಾದ ಹೈಡ್ರೋಜನ್ ಚಾಲಿತ ರೈಲು ಎಂಬುದು ನನಗೆ ಸಂತೋಷದ ವಿಷಯ. ಹೈಡ್ರೋಜನ್ ರೈಲುಗಳ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕತ್ವವನ್ನೂ ಸ್ಥಾಪಿಸಿದೆ.
10. ಗೃಹ ಸಚಿವಾಲಯ
- ನಕ್ಸಲಿಸಂ ಮತ್ತು ಮಾವೋವಾದವು ಕೋಟ್ಯಂತರ ಯುವಕರ ಭವಿಷ್ಯವನ್ನು ನಾಶಮಾಡಿವೆ. ನಾಲ್ಕು ದಶಕಗಳ ಕಾಲ ನಕ್ಸಲಿಸಂ ದೇಶದ ದೊಡ್ಡ ಭಾಗವನ್ನು ಮತ್ತು ಅಪಾರ ಜನಸಂಖ್ಯೆಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡು, ಅವರನ್ನು ಬಂದೂಕಿನ ಭೀತಿಯಲ್ಲಿರಿಸಿತ್ತು. ಅದು ಸಂವಿಧಾನವನ್ನೇ ಹರಿದುಹಾಕಿತು. ಸಾಮಾನ್ಯ ನಾಗರಿಕರನ್ನು ರಕ್ಷಿಸುವ ಪ್ರಯತ್ನದಲ್ಲಿ ನಮ್ಮ 3,500ಕ್ಕೂ ಹೆಚ್ಚು ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ಸರ್ವೋಚ್ಚ ತ್ಯಾಗ ಮಾಡಿದ್ದಾರೆ.
- ಇಂದು ನಕ್ಸಲೈಟ್–ಮಾವೋವಾದಿ ಹಿಂಸಾಚಾರವು ತನ್ನ ಕೊನೆಯ ಉಸಿರನ್ನೂ ಎಳೆಯುವ ಸಾಮರ್ಥ್ಯವನ್ನು ಬಹುಶಃ ಕಳೆದುಕೊಂಡಿದೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ. ನಕ್ಸಲರು ಒಮ್ಮೆ ಬಂದೂಕು ಹಾರಿಸುತ್ತಿದ್ದ, ಮಣ್ಣು ರಕ್ತದಿಂದ ತೋಯುತ್ತಿದ್ದ ಪ್ರದೇಶಗಳಲ್ಲೇ ಇಂದು ಅಭಿವೃದ್ಧಿ, ವಿಶ್ವಾಸ ಮತ್ತು ಶ್ರಮದ ತ್ರಿವರ್ಣ ಧ್ವಜ ಹಾರುತ್ತಿದೆ. ಏಕೆಂದರೆ ಆ ಪ್ರದೇಶಗಳು ನಕ್ಸಲ್ ಮುಕ್ತವಾಗುತ್ತಿವೆ.
- ಸಶಸ್ತ್ರ ನಕ್ಸಲರನ್ನು ಸೋಲಿಸಲಾಗಿದೆ. ಆದರೆ ನಕ್ಸಲ್ ಮನಸ್ಥಿತಿ ಇನ್ನೂ ಉಳಿದಿದೆ. ಈ ಶಕ್ತಿಗಳು ಅವಕಾಶಗಳಿಗಾಗಿ ಕಾಯುತ್ತಿವೆ. ಹಿಂಸೆ ಮತ್ತು ಅರಾಜಕತೆಯ ಮಾರ್ಗಗಳನ್ನು ಹುಡುಕುತ್ತಿವೆ ಹಾಗೂ ಸಮಾಜವನ್ನು ತಪ್ಪು ದಾರಿಗೆ ಎಳೆಯಲು ವಿವಿಧ ತಂತ್ರಗಳನ್ನು ಬಳಸುತ್ತಿವೆ.
- ಈ ನಕ್ಸಲ್ ಮನಸ್ಥಿತಿಯನ್ನು ನಾವು ಗುರುತಿಸಬೇಕು. ಇಂತಹ ಅಂಶಗಳನ್ನು ಪ್ರತ್ಯೇಕಿಸಬೇಕು ಮತ್ತು ದೇಶದ ಯುವ ಪೀಳಿಗೆಯನ್ನು ವಿಕಸಿತ ರಾಷ್ಟ್ರ ನಿರ್ಮಾಣದ ಮುಖ್ಯವಾಹಿನಿಯ ಮಾರ್ಗಕ್ಕೆ ಸಂಪರ್ಕಿಸಬೇಕು.
- ಸುರಕ್ಷಿತ ಭಾರತ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ. ಸವಾಲು ನಮ್ಮ ಗಡಿಯೊಳಗಿನಿಂದ ಬಂದರೂ ಅಥವಾ ಗಡಿಯಾಚೆಯಿಂದ ಬಂದರೂ, ಭಾರತ ಪ್ರತಿಯೊಂದು ಪರಿಸ್ಥಿತಿಗೂ ಸಿದ್ಧವಾಗಿದೆ. ಇಂದು ಯುದ್ಧದ ಸ್ವರೂಪ ಬದಲಾಗುತ್ತಿದೆ. ಯುದ್ಧ ಕೇವಲ ಯುದ್ಧಭೂಮಿಯಲ್ಲಿ ಅಥವಾ ಗಡಿಯಲ್ಲಿ ಮಾತ್ರ ನಡೆಯುತ್ತದೆ ಎಂಬ ಖಾತರಿ ಈಗಿಲ್ಲ.
- ಮುಂದಿನ ದಿನಗಳಲ್ಲಿ ನಾವು ಸಕ್ರಿಯ ನಾಗರಿಕ ರಕ್ಷಣಾ ಜಾಲವನ್ನು ನಿರ್ಮಿಸುತ್ತೇವೆ ಎಂದು ಇಂದು ಕೆಂಪುಕೋಟೆಯಿಂದ ನಾನು ಘೋಷಿಸುತ್ತೇನೆ. ನಮ್ಮ ನಾಗರಿಕರು ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿಗೆ ಆಧುನಿಕ ವ್ಯವಸ್ಥೆಗಳು ಮತ್ತು ತಂತ್ರಜ್ಞಾನಗಳನ್ನು ಒದಗಿಸಿ, ಸಮಕಾಲೀನ ಸನ್ನದ್ಧತಾ ವಿಧಾನಗಳನ್ನು ಅವರಿಗೆ ಪರಿಚಯಿಸುತ್ತೇವೆ.
11. ರಕ್ಷಣಾ ಸಚಿವಾಲಯ
- ‘ಸಪ್ತಧಾರೆ’ಯ ಐದನೇ ಶಕ್ತಿ ರಕ್ಷಣಾ ಸಾಮರ್ಥ್ಯ. ರಕ್ಷಣಾ ಸಾಮರ್ಥ್ಯದ ಪ್ರಾಮುಖ್ಯತೆಯು ಪ್ರತಿಯೊಂದು ವಿಷಯದಲ್ಲೂ ನಿರಾಕರಿಸಲಾಗದಂತಹುದು. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವುದಕ್ಕೆ ಬೇರೆ ಯಾವುದೇ ಪರ್ಯಾಯವಿಲ್ಲ ಎಂಬುದನ್ನು ಭಾರತವು ಈಗ ಅರಿತುಕೊಂಡಿದೆ ಮತ್ತು ಜಗತ್ತು ಸಹ ಅದನ್ನು ಗುರುತಿಸಿದೆ.
- ಮುಂದಿನ ಪೀಳಿಗೆಯ ರಕ್ಷಣಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ, ಜಾಗತಿಕ ರಕ್ಷಣಾ ಪೂರೈಕೆದಾರ ರಾಷ್ಟ್ರವಾಗುವ ಗುರಿಯನ್ನು ನಾವು ಹೊಂದಬೇಕು. ಡ್ರೋನ್ ಗಳು ಮತ್ತು ಅವುಗಳನ್ನು ಎದುರಿಸುವ ಪ್ರತಿರೋಧಕ ಡ್ರೋನ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬೇಕು. ಹೈಪರ್‌ಸಾನಿಕ್ ರಕ್ಷಣಾ ತಂತ್ರಜ್ಞಾನಗಳಲ್ಲಿ ನಾವು ನಾಯಕತ್ವ ವಹಿಸಬೇಕು.
- ಇಂದು ಸೈಬರ್ ಭದ್ರತೆಯೂ ಪ್ರತಿಯೊಂದು ಕುಟುಂಬಕ್ಕೂ ಸವಾಲಾಗಿ ಪರಿಣಮಿಸುತ್ತಿದೆ. ಇದೂ ಕೂಡ ರಕ್ಷಣೆಯ ಒಂದು ಕ್ಷೇತ್ರವಾಗಿದೆ. ಇಲ್ಲಿ ನಮ್ಮ ಯುವಜನರ ಸಾಮರ್ಥ್ಯವನ್ನು ಬಳಸಿಕೊಂಡು, ಅವರ ಪ್ರತಿಭೆಯನ್ನು ದೇಶ ಮತ್ತು ಜಗತ್ತಿನ ಹಿತಕ್ಕಾಗಿ ಬಳಸಿಕೊಳ್ಳಬಹುದು.
- ಇತ್ತೀಚಿನ ವರ್ಷಗಳಲ್ಲಿ ನಾವು ‘ಮಿಷನ್ ಸುದರ್ಶನ ಚಕ್ರ’ವನ್ನು ಘೋಷಿಸಿದ್ದೇವೆ. ಅದರ ಕಾರ್ಯ ಅತ್ಯಂತ ವೇಗವಾಗಿ ಪ್ರಗತಿಯಲ್ಲಿದೆ. ಇಂದು ನಮ್ಮ ರಕ್ಷಣಾ ರಫ್ತುಗಳು ಸುಮಾರು 50 ಪಟ್ಟು ಹೆಚ್ಚಾಗಿವೆ ಮತ್ತು ನಮ್ಮ ಶಸ್ತ್ರಾಸ್ತ್ರಗಳು ಹಾಗೂ ರಕ್ಷಣಾ ಉಪಕರಣಗಳು ವಿಶ್ವದ ಸುಮಾರು 100 ದೇಶಗಳನ್ನು ತಲುಪುತ್ತಿವೆ.
12. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
- ‘ಸಪ್ತಧಾರೆ’ಯ ನಾಲ್ಕನೇ ಶಕ್ತಿ ‘ಗತಿ ಶಕ್ತಿ’. ಗತಿ ಶಕ್ತಿಯಡಿ ದೇಶದೊಳಗೆ ನಿರಂತರ ಹಾಗೂ ವೇಗದ ಸಂಪರ್ಕ ವ್ಯವಸ್ಥೆಗೆ ನಾವು ಒತ್ತು ನೀಡಬೇಕು.
- ನಮ್ಮ ನಗರಗಳನ್ನು ವೇಗದ ರೈಲುಗಳ ಮೂಲಕ ಸಂಪರ್ಕಿಸಬೇಕು. ನಮಗೆ ಆಧುನಿಕ ಹೆದ್ದಾರಿಗಳು, ಒಳನಾಡು ಜಲಮಾರ್ಗಗಳು, ವಿಮಾನ ನಿಲ್ದಾಣಗಳು ಮತ್ತು ಬಹುಮಾದರಿ ಸರಕು ಸಾಗಣೆ ವ್ಯವಸ್ಥೆಯ ಅಗತ್ಯವಿದೆ.
13. ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯ
- ಬಂದರುಗಳನ್ನು ಕೇವಲ ಸರಕುಗಳನ್ನು ಹತ್ತಿಸುವ ಮತ್ತು ಇಳಿಸುವ ಸ್ಥಳಗಳೆಂದು ಅಥವಾ ವಿಶ್ವದ ವಿವಿಧೆಡೆಯಿಂದ ಹಡಗುಗಳು ಬಂದು ಲಂಗರು ಹಾಕುವ ಸ್ಥಳಗಳೆಂದು ಮಾತ್ರ ನೋಡಬಾರದು. ಬಂದರು ಆಧಾರಿತ ಅಭಿವೃದ್ಧಿ ಮತ್ತು ಬೆಳವಣಿಗೆಯ ದಿಕ್ಕಿನಲ್ಲಿ ನಮ್ಮ ಬಂದರುಗಳನ್ನು ಮುನ್ನಡೆಸಬೇಕು.
- ನೀಲಿ ಆರ್ಥಿಕತೆಯಲ್ಲಿಯೂ ಭಾರತಕ್ಕೆ ಅಪಾರ ಅವಕಾಶವಿದೆ. ನಮಗೆ ಅತ್ಯಂತ ಉದ್ದವಾದ ಕರಾವಳಿಯಿದ್ದು, ನೀಲಿ ಆರ್ಥಿಕತೆಯಲ್ಲಿ ಅಪಾರ ಅವಕಾಶಗಳಿವೆ.
- ಮೀನುಗಾರಿಕೆ, ಕರಾವಳಿ ಪ್ರವಾಸೋದ್ಯಮ, ಸಾಗರ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಾವು ಮುನ್ನಡೆಯಬಹುದು.
14. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ
- ಕೇರಳದಿಂದ ಗುಜರಾತ್ ವರೆಗೆ ಮತ್ತು ತಮಿಳುನಾಡಿನಿಂದ ಬಂಗಾಳದವರೆಗೆ ನಮ್ಮ ಕರಾವಳಿಯುದ್ದಕ್ಕೂ ಇರುವ ಮೀನುಗಾರರಿಗೆ, ಈ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ನಮ್ಮ ಸೀಗಡಿ ರಫ್ತಿನ ಸಾಮರ್ಥ್ಯದಲ್ಲಿ ಗಮನಾರ್ಹ ಏರಿಕೆಯಾಗಿದೆ. ನಮ್ಮ ಸಮುದ್ರ ಉತ್ಪನ್ನಗಳು ಜಗತ್ತಿನಾದ್ಯಂತದ ಮಾರುಕಟ್ಟೆಗಳನ್ನು ತಲುಪುವ ಸಾಧ್ಯತೆಯೂ ಹೆಚ್ಚಾಗಿದೆ.
- ನೀಲಿ ಆರ್ಥಿಕತೆಯಲ್ಲಿಯೂ ಭಾರತಕ್ಕೆ ಅಪಾರ ಅವಕಾಶವಿದೆ. ನಮಗೆ ಬಹಳ ಉದ್ದವಾದ ಕರಾವಳಿಯಿದ್ದು, ನೀಲಿ ಆರ್ಥಿಕತೆಯಲ್ಲಿ ಅಪಾರ ಅವಕಾಶಗಳಿವೆ. ಮೀನುಗಾರಿಕೆ, ಕರಾವಳಿ ಪ್ರವಾಸೋದ್ಯಮ, ಸಾಗರ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಾವು ಮುನ್ನಡೆಯಬಹುದು.
15. ಪ್ರವಾಸೋದ್ಯಮ ಸಚಿವಾಲಯ
- ಭಾರತವು ಅಪಾರ ವನ್ಯಜೀವಿ ಸಂಪತ್ತನ್ನು ಹೊಂದಿದೆ. ನಮ್ಮಲ್ಲಿ 100ಕ್ಕೂ ಹೆಚ್ಚು ರಾಷ್ಟ್ರೀಯ ಉದ್ಯಾನಗಳಿವೆ. ಸಾಮರ್ಥ್ಯ ಅಪಾರವಾಗಿದೆ. ಆದರೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ನಾವು ನಿರೀಕ್ಷಿತ ಮಟ್ಟವನ್ನು ತಲುಪಿಲ್ಲ. ವಿಶ್ವದಾದ್ಯಂತದ ಪ್ರವಾಸಿಗರನ್ನು ಭಾರತಕ್ಕೆ ಆಕರ್ಷಿಸಲು ನಮ್ಮ ‘ಸಾಫ್ಟ್ ಪವರ್’ ಅನ್ನು ಬಳಸಿಕೊಳ್ಳುವ ಅವಕಾಶ ನಮಗಿದೆ. ನಮ್ಮ ಸಾಮರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸಬೇಕು.
- ಇಂದು ಕ್ರೀಡೆಯೂ ಭಾರತದೆಡೆಗೆ ಆಕರ್ಷಣೆಯ ಪ್ರಮುಖ ಮೂಲವಾಗಿದೆ. ವಿಶ್ವದ ಕ್ರೀಡಾಕೂಟಗಳು ಭಾರತದಲ್ಲಿ ಏಕೆ ನಡೆಯಬಾರದು? ಸಂಗೀತ ಮತ್ತು ಮನರಂಜನಾ ಕಾರ್ಯಕ್ರಮಗಳ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದು, ಅದು ದೇಶದ ಯುವಜನರಿಗೆ ಪ್ರಮುಖ ಆಕರ್ಷಣೆಯಾಗಿದೆ.
- ಜಗತ್ತಿನ ಪ್ರತಿಯೊಬ್ಬ ಕಲಾವಿದನೂ ತನ್ನ ಜೀವನದಲ್ಲಿ ಒಮ್ಮೆಯಾದರೂ ಭಾರತದಲ್ಲಿ ಪ್ರದರ್ಶನ ನೀಡಲು ಬಯಸುತ್ತಾನೆ. ಇದೊಂದು ಅಪಾರವಾದ ಅವಕಾಶವಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಲು ಅಗತ್ಯ ಮೂಲಸೌಕರ್ಯ ಮತ್ತು ವ್ಯವಸ್ಥೆಗಳನ್ನು ನಾವು ನಿರ್ಮಿಸಬೇಕು.
16. ಸಂಸ್ಕೃತಿ ಸಚಿವಾಲಯ / ಜವಳಿ ಸಚಿವಾಲಯ
- ನಮ್ಮ ಏಳನೇ ಧಾರೆ ಭಾರತದ ‘ಸಾಫ್ಟ್ ಪವರ್’. ಇದೇ ಭಾರತದ ಸಾಂಸ್ಕೃತಿಕ ಶಕ್ತಿ. ಇಂದು ಯೋಗವು ಇಡೀ ಜಗತ್ತನ್ನು ಭಾರತದೊಂದಿಗೆ ಬೆಸೆದಿದೆ. ಯೋಗವು ಜಗತ್ತಿಗೆ ಶಕ್ತಿಯ ಮೂಲವಾಗಿ ದಿನದಿಂದ ದಿನಕ್ಕೆ ರೂಪುಗೊಳ್ಳುತ್ತಿದೆ.
- ಭಾರತದಲ್ಲಿ ನಂಬಿಕೆ ಮತ್ತು ಆಧ್ಯಾತ್ಮಿಕತೆಯ ಕೇಂದ್ರಗಳು, ಆಯುರ್ವೇದ ಹಾಗೂ ಸಮಗ್ರ ಆರೋಗ್ಯ ಸೇವಾ ವ್ಯವಸ್ಥೆ ಇದೆ. ‘ಹೀಲ್ ಇನ್ ಇಂಡಿಯಾ’ ಆಂದೋಲನದ ಮೂಲಕ ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ಕೊಂಡೊಯ್ಯಬಹುದು.
- ಕರಕುಶಲ ವಸ್ತುಗಳಾಗಿರಲಿ, ಸಂಸ್ಕೃತಿಯಾಗಿರಲಿ, ನಮ್ಮ ಚಲನಚಿತ್ರಗಳಾಗಿರಲಿ, ಸೃಜನಶೀಲ ಕ್ಷೇತ್ರವಾಗಿರಲಿ, ವಿ ಎಫ್ ಎಕ್ಸ್, ಅನಿಮೇಷನ್, ಗೇಮಿಂಗ್ ಅಥವಾ ಡಿಜಿಟಲ್ ವಿಷಯವಾಗಿರಲಿ, ಸೃಜನಶೀಲ ಜಗತ್ತಿನಲ್ಲಿ ಭಾರತದ ಸ್ಥಾನಮಾನವನ್ನು ನಾವು ಜಗತ್ತಿಗೆ ಪ್ರದರ್ಶಿಸಬಹುದು.
- ಇಂದು ಭಾರತವು ವೇವ್ಸ್ ಶೃಂಗಸಭೆಗೆ ಅಪಾರ ಶಕ್ತಿ ನೀಡಿದೆ. ಕ್ರಮೇಣ ಜಗತ್ತು ಭಾರತದ ‘ವಿಶ್ವ ಶ್ರವ್ಯ ಮತ್ತು ದೃಶ್ಯ ಮನರಂಜನಾ ಶೃಂಗಸಭೆ’ಗಾಗಿ ಎದುರುನೋಡುತ್ತಿದೆ. ಇದು ಭಾರತದ ಸಾಫ್ಟ್ ಪವರ್ ಮತ್ತು ಸೃಜನಶೀಲ ಜಗತ್ತನ್ನು ಜಾಗತಿಕ ಪ್ರೇಕ್ಷಕರಿಗೆ ಪರಿಚಯಿಸಲಿದೆ.
17. ಹಣಕಾಸು ಸಚಿವಾಲಯ / ಹಣಕಾಸು ಸೇವೆಗಳ ಇಲಾಖೆ
- ನಮ್ಮ ಸಹ ನಾಗರಿಕರ ಪ್ರಯತ್ನಗಳ ಫಲವಾಗಿ, ಒಂದು ಕಾಲದಲ್ಲಿ ‘ದುರ್ಬಲ ಐದು’ ರಾಷ್ಟ್ರಗಳಲ್ಲಿ ಒಂದಾಗಿದ್ದ ನಾವು ಕೇವಲ 12 ವರ್ಷಗಳಲ್ಲಿ ಪ್ರಮುಖ ಆರ್ಥಿಕತೆಯಾಗಿ ಮತ್ತು ಪ್ರಮುಖ ಆರ್ಥಿಕತೆಗಳ ಪೈಕಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದ್ದೇವೆ.
- ಒಂದು ದೇಶವೆಂದರೆ ಕೇವಲ ಸರ್ಕಾರವಲ್ಲ; ಪ್ರತಿಯೊಬ್ಬ ನಾಗರಿಕನೂ ರಾಷ್ಟ್ರದ ಒಂದು ಭಾಗ. ಮುಂದಿನ ದಶಕದೊಳಗೆ ಭಾರತದ 50 ಕಂಪನಿಗಳು ಫಾರ್ಚೂನ್ 500 ಪಟ್ಟಿಯಲ್ಲಿ ಸ್ಥಾನ ಪಡೆಯಬೇಕು ಎಂಬ ಗುರಿಯನ್ನು ನಾವು ಏಕೆ ಹೊಂದಬಾರದು? ಇದು ನಮ್ಮ ಗುರಿಯಾಗಬಾರದೇ?
- ಯುಪಿಐ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮೂಲಕ ನಾವು ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ, ನಮ್ಮ ವಿಶ್ವಾಸಾರ್ಹತೆಯನ್ನು ಸ್ಥಾಪಿಸಿದ್ದೇವೆ. ಡಿಜಿಟಲ್ ವಹಿವಾಟುಗಳು 100 ಪಟ್ಟು ಹೆಚ್ಚಾಗಿವೆ. ಈಗ ಭಾರತ ತನ್ನ ಡಿಜಿಟಲ್ ಸಾರ್ವಜನಿಕ ತಂತ್ರಜ್ಞಾನಗಳನ್ನು ಜಗತ್ತಿನ ಪ್ರತಿಯೊಂದು ಮೂಲೆಗೂ ಕೊಂಡೊಯ್ಯಬೇಕು. ಮುಂದಿನ ಪೀಳಿಗೆಯ ಸಂವಹನ ತಂತ್ರಜ್ಞಾನಗಳಲ್ಲಿ ಭಾರತ ನಾಯಕತ್ವ ವಹಿಸಬೇಕು.
- ಇಂದು ಬ್ಯಾಂಕಿಂಗ್ ಕ್ಷೇತ್ರ ಸಮೃದ್ಧವಾಗಿ ಬೆಳೆಯುತ್ತಿದೆ. ವಿಶ್ವದ ಅಗ್ರ ಬ್ಯಾಂಕುಗಳ ಸಾಲಿನಲ್ಲಿ ಭಾರತೀಯ ಬ್ಯಾಂಕಿನ ಧ್ವಜ ಏಕೆ ಹಾರಬಾರದು? ವಿಶ್ವದ ಅಗ್ರ ಐದು ಬ್ಯಾಂಕುಗಳಲ್ಲಿ ಒಂದು ಭಾರತೀಯ ಬ್ಯಾಂಕ್ ಕೂಡ ಇರಬೇಕು.
- ಸುಮಾರು 3.25 ಕೋಟಿ ಕುಟುಂಬಗಳು ಸ್ವಾಮಿತ್ವ ಯೋಜನೆಯಿಂದ ಪ್ರಯೋಜನ ಪಡೆದಿವೆ. ಇದರ ಪರಿಣಾಮವಾಗಿ ಸುಮಾರು ₹140 ಲಕ್ಷ ಕೋಟಿ ಮೌಲ್ಯದ ಆಸ್ತಿಗಳು ಮುಕ್ತಗೊಂಡಿವೆ. ಇದರಿಂದ ಜನರು ಬ್ಯಾಂಕುಗಳಿಂದ ಸಾಲ ಪಡೆದು ತಮ್ಮದೇ ಉದ್ಯಮಗಳನ್ನು ಆರಂಭಿಸಲು ಸಾಧ್ಯವಾಗಲಿದೆ.
18. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
- ಭಾರತದಲ್ಲಿ ನಂಬಿಕೆ ಮತ್ತು ಆಧ್ಯಾತ್ಮಿಕತೆಯ ಕೇಂದ್ರಗಳು, ಆಯುರ್ವೇದ ಹಾಗೂ ಸಮಗ್ರ ಆರೋಗ್ಯ ಸೇವಾ ವ್ಯವಸ್ಥೆ ಇದೆ. ‘ಹೀಲ್ ಇನ್ ಇಂಡಿಯಾ’ ಆಂದೋಲನದ ಮೂಲಕ ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ಕೊಂಡೊಯ್ಯಬಹುದು.
- ಔಷಧೀಯ (ಫಾರ್ಮಾಸ್ಯುಟಿಕಲ್) ಕ್ಷೇತ್ರದಲ್ಲಿ ನಾವು ಸಾಕಷ್ಟು ಕೆಲಸ ಮಾಡಿದ್ದೇವೆ. ಆದರೆ ಈಗಿನ ಅಗತ್ಯವೆಂದರೆ, ಭಾರತದ ಒಂದು ಅಥವಾ ಎರಡು ಔಷಧೀಯ ಕಂಪನಿಗಳು ವಿಶ್ವದ ಐದು ಅಗ್ರ ಔಷಧೀಯ ಕಂಪನಿಗಳಲ್ಲಿ ಸ್ಥಾನ ಪಡೆಯಬೇಕು.
- ಕಳೆದ ಐದರಿಂದ ಏಳು ದಶಕಗಳಲ್ಲಿ ಕೇವಲ 25 ಕೋಟಿ ಜನರಿಗೆ ಸಾಮಾಜಿಕ ಭದ್ರತೆಯ ರಕ್ಷಣೆ ದೊರೆತಿತ್ತು. ಆದರೆ ಒಂದೇ ದಶಕದಲ್ಲಿ ನಾವು 100 ಕೋಟಿ ನಾಗರಿಕರಿಗೆ ಸಾಮಾಜಿಕ ಭದ್ರತೆಯ ರಕ್ಷಣೆ ಒದಗಿಸಿದ್ದೇವೆ.
- ಆಯುಷ್ಮಾನ್ ಭಾರತ ಯೋಜನೆಯಡಿ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೂ ಈಗ ₹5 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು ಔಷಧಿಗಳನ್ನು ಒದಗಿಸಲಾಗುತ್ತಿದೆ.
19. ಶಿಕ್ಷಣ ಸಚಿವಾಲಯ
- ನಾವು ಬಾಹ್ಯಾಕಾಶ ಕ್ಷೇತ್ರವನ್ನು ಮುಕ್ತಗೊಳಿಸಿದ್ದೇವೆ. ರಾಷ್ಟ್ರೀಯ ಡ್ರೋನ್ ನೀತಿಯನ್ನು ರೂಪಿಸಿದ್ದೇವೆ. ‘ಖೇಲೋ ಇಂಡಿಯಾ’ ನೀತಿಯನ್ನು ಜಾರಿಗೆ ತಂದಿದ್ದೇವೆ. 35 ವರ್ಷಗಳಿಂದ ಯಾವುದೇ ಹೊಸ ಶಿಕ್ಷಣ ನೀತಿ ಇರಲಿಲ್ಲ; ನಾವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಂದಿದ್ದೇವೆ. ಇದರಿಂದ ಮಧ್ಯಮ ವರ್ಗದ ಕುಟುಂಬಗಳು ಪ್ರಯೋಜನ ಪಡೆದಿವೆ.
- 2004ರಿಂದ 2014ರವರೆಗೆ ನಮ್ಮ ದೇಶದಲ್ಲಿ 350ಕ್ಕಿಂತ ಕಡಿಮೆ ವಿಶ್ವವಿದ್ಯಾಲಯಗಳಿದ್ದವು. ಇಂದು ಕೇವಲ 10–12 ವರ್ಷಗಳಲ್ಲಿ ಸುಮಾರು 650 ಹೊಸ ವಿಶ್ವವಿದ್ಯಾಲಯಗಳು ಸೇರ್ಪಡೆಯಾಗಿವೆ. ನಾವು 1,000 ವಿಶ್ವವಿದ್ಯಾಲಯಗಳ ಸಂಖ್ಯೆಯನ್ನು ಸಮೀಪಿಸುತ್ತಿದ್ದೇವೆ.
- 2014ಕ್ಕೂ ಮೊದಲು ಸುಮಾರು 400 ವೈದ್ಯಕೀಯ ಸೀಟುಗಳಷ್ಟೇ ಇದ್ದವು; ಇಂದು ಸುಮಾರು 850 ವೈದ್ಯಕೀಯ ಸೀಟುಗಳಿವೆ. ಅಷ್ಟೇ ಅಲ್ಲದೆ, ವಿದೇಶಿ ವಿಶ್ವವಿದ್ಯಾಲಯಗಳೂ ಈಗ ಭಾರತಕ್ಕೆ ಬರುತ್ತಿವೆ. ಭಾರತದಲ್ಲೇ ವ್ಯಾಸಂಗ ಮಾಡುತ್ತಾ ವಿದೇಶಿ ವಿಶ್ವವಿದ್ಯಾಲಯಗಳ ಪದವಿಗಳನ್ನು ಪಡೆಯಲು ನಮ್ಮ ಯುವಜನರಿಗೆ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ.
- ನಮ್ಮ ದೇಶದ ಯುವ ಮನಸ್ಸುಗಳಲ್ಲಿ ಬಾಲ್ಯದಿಂದಲೇ ತಂತ್ರಜ್ಞಾನದ ಬಗ್ಗೆ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಅದಕ್ಕಾಗಿಯೇ 10,000ಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಲ್ಯಾಬ್ ಗಳನ್ನು ಮಕ್ಕಳಿಗೆ ಒದಗಿಸಲಾಗಿದ್ದು, ಅವುಗಳ ಮೂಲಕ ಅವರು ನಾವೀನ್ಯತೆ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬಹುದು.
- ವಿವಿಧ ಪರೀಕ್ಷೆಗಳಿಗೆ ನಮ್ಮ ಯುವಜನರಿಗೆ ಉಚಿತ ಆನ್‌ಲೈನ್ ಕೋಚಿಂಗ್ ಒದಗಿಸಲು ನಾವು ನಿರ್ಧರಿಸಿದ್ದೇವೆ. ನಮ್ಮ ಬಳಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಅತ್ಯುತ್ತಮ ಪ್ರತಿಭೆ ಮತ್ತು ಶಿಕ್ಷಕರಿದ್ದಾರೆ. ಈ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ದೇಶದ ಯುವಜನರಿಗೆ ಉಚಿತ ತರಬೇತಿ ನೀಡುವ ಸಂಪೂರ್ಣ ಜಾಲವನ್ನು ಸ್ಥಾಪಿಸಲಿದ್ದೇವೆ.
20. ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
- ‘ವಿಕಸಿತ ಭಾರತ’ದ ಪಯಣದಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅಷ್ಟೇ ಅಲ್ಲದೆ, ವಿಕಸಿತ ಭಾರತದ ಅತಿದೊಡ್ಡ ಫಲಾನುಭವಿಗಳೂ ನಮ್ಮ ದೇಶದ ಯುವಜನರೇ ಆಗಲಿದ್ದಾರೆ.
- ಆದ್ದರಿಂದ ವಿಕಸಿತ ಭಾರತದ ಗುರಿಯನ್ನು ನಮ್ಮ ಯುವಜನರೊಂದಿಗೆ ಜೋಡಿಸಿಕೊಂಡು ಮುನ್ನಡೆಯಬೇಕು. ಯುವಜನರನ್ನು ನಮ್ಮ ಅತ್ಯುನ್ನತ ಆದ್ಯತೆಯನ್ನಾಗಿ ಮಾಡಿಕೊಂಡು ಮುಂದೆ ಸಾಗಬೇಕು.
- ಕಳೆದ 10–12 ವರ್ಷಗಳಲ್ಲಿ ಈ ದಿಕ್ಕಿನಲ್ಲಿ ಬಹಳಷ್ಟು ಕೆಲಸ ನಡೆದಿದೆ. ‘ಸ್ಟಾರ್ಟ್‌ಅಪ್ ಇಂಡಿಯಾ’ ಅಭಿಯಾನದಡಿ ಈಗ ದೇಶಾದ್ಯಂತ 2.5 ಲಕ್ಷಕ್ಕೂ ಹೆಚ್ಚು ನೋಂದಾಯಿತ ನವೋದ್ಯಮಗಳಿವೆ.
- ನಮ್ಮ ದೇಶದ ಯುವಜನರು ತಮಗಾಗಿ ಉದ್ಯೋಗ ಸೃಷ್ಟಿಸಿಕೊಳ್ಳುವುದಷ್ಟೇ ಅಲ್ಲದೆ, ಇತರರಿಗೂ ಉದ್ಯೋಗ ಒದಗಿಸುತ್ತಿದ್ದಾರೆ.
- ಸರ್ಕಾರವು ₹1 ಲಕ್ಷ ಕೋಟಿ ಮೊತ್ತದ ನಾವೀನ್ಯತಾ ನಿಧಿಯನ್ನು ಘೋಷಿಸಿದೆ. ದೇಶದ ಯುವಜನರಿಗೆ ನಾನು ಹೇಳಲು ಬಯಸುತ್ತೇನೆ: ನಿಮ್ಮ ಕನಸುಗಳನ್ನು ನಮ್ಮ ಬಳಿಗೆ ತನ್ನಿ; ಸಂಪನ್ಮೂಲಗಳ ಕೊರತೆ ಉಂಟಾಗದಂತೆ ನಾವು ನೋಡಿಕೊಳ್ಳುತ್ತೇವೆ.
- ಡಿಜಿಟಲ್ ಇಂಡಿಯಾದ ಮೂಲಕ ಸಂಶೋಧನೆಗೆ ಹೊಸ ಅವಕಾಶಗಳು ಮತ್ತು ಕೈಗೆಟುಕುವ ದತ್ತಾಂಶ ನಮ್ಮ ಯುವಜನರನ್ನು ಸಬಲೀಕರಣಗೊಳಿಸಿವೆ.
- ಸರಾಸರಿ 28 ವರ್ಷ ವಯಸ್ಸಿನ ಯುವಜನರು ಸ್ಥಾಪಿಸಿರುವ ಭಾರತೀಯ ಖಾಸಗಿ ನವೋದ್ಯಮಗಳು ತಮ್ಮ ಮೊದಲ ಪ್ರಯತ್ನದಲ್ಲೇ ಉಪಗ್ರಹಗಳು ಮತ್ತು ರಾಕೆಟ್ ಗಳನ್ನು ಉಡಾವಣೆ ಮಾಡುವ ಮೂಲಕ ಗಮನಾರ್ಹ ಸಾಧನೆ ಮಾಡಿವೆ.
- ಇಂದು 2.5 ಲಕ್ಷಕ್ಕೂ ಹೆಚ್ಚು ನೋಂದಾಯಿತ ನವೋದ್ಯಮಗಳಿವೆ. ಇತ್ತೀಚೆಗೆ ನಾವು ಎಐ ಇಂಪ್ಯಾಕ್ಟ್ ಶೃಂಗಸಭೆಯನ್ನು ಆಯೋಜಿಸಿದೆವು. ಎಐ ನ ವಿಸ್ತರಣೆ ಅತ್ಯಂತ ವೇಗವಾಗಿ ನಡೆಯುತ್ತಿದೆ.
- ಕೆಂಪುಕೋಟೆಯ ಆವರಣದಿಂದ ದೇಶದ ಯುವಜನತೆಗಾಗಿ ನಾನು ಒಂದು ಘೋಷಣೆ ಮಾಡಲು ಬಯಸುತ್ತೇನೆ. ಮುಂದಿನ ಒಂದು ವರ್ಷದಲ್ಲಿ 1 ಕೋಟಿ ಯುವಜನರಿಗೆ ಎಐ ಕೌಶಲ್ಯಗಳಲ್ಲಿ ತರಬೇತಿ ನೀಡಲು ನಾವು ನಿರ್ಧರಿಸಿದ್ದೇವೆ. ಇದರಿಂದ ನಮ್ಮ ದೇಶದ ಯುವಜನರು ಎಐ ಜಗತ್ತಿನಲ್ಲಿಯೂ ನಾಯಕತ್ವ ವಹಿಸುವ ಸಾಮರ್ಥ್ಯ ಪಡೆಯುತ್ತಾರೆ.
- ದೇಶದ ಯುವಶಕ್ತಿಯು ಜೈವಿಕ ಆರ್ಥಿಕತೆಯಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. 2014ಕ್ಕೂ ಮೊದಲು ₹60,000 ಕೋಟಿ ವಹಿವಾಟು ಹೊಂದಿದ್ದ ಈ ಕ್ಷೇತ್ರ ಇಂದು ₹20 ಲಕ್ಷ ಕೋಟಿಗೆ ತಲುಪಿದೆ.
- ಟಾಪ್ಸ್ (TOPS) ಯೋಜನೆ ಅಪಾರ ಯಶಸ್ಸು ಸಾಧಿಸಿದೆ. ಖೇಲೋ ಇಂಡಿಯಾ ಕ್ರೀಡಾಕೂಟಗಳು, ವಿಶ್ವವಿದ್ಯಾಲಯ ಕ್ರೀಡಾಕೂಟಗಳು, ಚಳಿಗಾಲದ ಕ್ರೀಡಾಕೂಟಗಳು, ಬೀಚ್ ಗೇಮ್ಸ್, ಕ್ರೀಡಾ ಮೂಲಸೌಕರ್ಯ, ಕ್ರೀಡಾ ತರಬೇತಿ, ಕ್ರೀಡಾ ವೈದ್ಯಕೀಯ ಮತ್ತು ಕ್ರೀಡಾ ಪೌಷ್ಟಿಕಾಂಶ - ಈ ಎಲ್ಲ ಕ್ಷೇತ್ರಗಳಲ್ಲಿಯೂ ಭಾರತ ಈಗ ಶ್ರೇಷ್ಠತೆಯತ್ತ ಮುನ್ನಡೆಯುತ್ತಿದೆ.
- ವಿಶ್ವ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಸಾಧನೆ ಸುಧಾರಿಸುತ್ತಿದೆ ಮತ್ತು 2036ರ ಒಲಿಂಪಿಕ್ಸ್ ಗೆ ಪ್ರಬಲ ಸ್ಪರ್ಧಿಯಾಗಿ ನಾವು ಮುನ್ನಡೆಯುತ್ತಿದ್ದೇವೆ. 2030ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲು ಭಾರತ ಸಿದ್ಧವಾಗಿದೆ.
- 2036ರ ಒಲಿಂಪಿಕ್ಸ್ ಅನ್ನು ಭಾರತದಲ್ಲಿಯೂ ಆಯೋಜಿಸಬೇಕೆಂದು ನಾವು ಬಯಸುತ್ತೇವೆ. ಆದರೆ 2036ರಲ್ಲಿ ಭಾರತ ಇಂದು ಸ್ಪರ್ಧಿಸದ ಅಥವಾ ಅರ್ಹತೆ ಪಡೆಯದ, ಹಾಗೆಯೇ ಭಾರತ ಇದುವರೆಗೆ ಭಾಗವಹಿಸದ ಕ್ರೀಡಾ ಸ್ಪರ್ಧೆಗಳೂ ಇರಲಿವೆ.
- ಶೇ.75ರಷ್ಟು ಅವಕಾಶಗಳು ಇನ್ನೂ ನಮ್ಮನ್ನು ಕಾಯುತ್ತಿವೆ. ಭಾರತ ಈ ಕ್ಷೇತ್ರಗಳತ್ತ ಗಮನ ಹರಿಸಲಿದೆ. ಇದಕ್ಕಾಗಿ ನಾವು ಪ್ರತಿಭಾನ್ವೇಷಣಾ ಅಭಿಯಾನವನ್ನೂ ಆರಂಭಿಸಲು ಬಯಸುತ್ತೇವೆ.
- 5ರಿಂದ 15 ವರ್ಷದೊಳಗಿನ ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಲು ಗ್ರಾಮಗಳು, ನಗರಗಳು ಮತ್ತು ಶಾಲೆಗಳಲ್ಲಿ ಪ್ರತಿಭಾನ್ವೇಷಣಾ ಅಭಿಯಾನ ನಡೆಸಲಾಗುವುದು. ಅವರ ಪ್ರತಿಭೆಯನ್ನು ಮೌಲ್ಯಮಾಪನ ಮಾಡಿ, ದೇಶವನ್ನು ಪ್ರತಿನಿಧಿಸಬಲ್ಲ ಶ್ರೇಷ್ಠ ಕ್ರೀಡಾಪಟುಗಳಾಗಿ ಅವರನ್ನು ರೂಪಿಸಲು ವಿಶೇಷ ತರಬೇತಿ ನೀಡಲಾಗುವುದು.
- ದೇಶಕ್ಕೂ ಮತ್ತು ದೇಶದ ಯುವಜನರಿಗೂ ಮಾದಕ ವ್ಯಸನ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ‘ನಶಾ ಮುಕ್ತ ಭಾರತ’ ನಿರ್ಮಾಣ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಬೇಕು.
21. ಬಾಹ್ಯಾಕಾಶ ಇಲಾಖೆ
- ನನ್ನ ‘ಸಪ್ತಧಾರೆ’ಯ ಮೂರನೇ ಶಕ್ತಿ ತಂತ್ರಜ್ಞಾನ ಮತ್ತು ನಾವೀನ್ಯತೆ. ಇಂದು ಇದು ಎಐ, ಕ್ವಾಂಟಂ ತಂತ್ರಜ್ಞಾನ, ಬಾಹ್ಯಾಕಾಶ, ರೋಬೋಟಿಕ್ಸ್ ಮತ್ತು ಡೇಟಾ ಕೇಂದ್ರಗಳ ಯುಗವಾಗಿದೆ. ಸಂಪೂರ್ಣ ಹೊಸ ಕ್ಷೇತ್ರವೊಂದು ನಮ್ಮ ಮುಂದೆ ತೆರೆದುಕೊಂಡಿದೆ.
- ಉದಯೋನ್ಮುಖ ತಂತ್ರಜ್ಞಾನಗಳು ನಿರಂತರವಾಗಿ ನಮಗೆ ಸವಾಲು ಒಡ್ಡುತ್ತಿವೆ. ಆದ್ದರಿಂದ ನಾವು ದೇಶವನ್ನು ಕೇವಲ ಜಗತ್ತಿನ ಮಾರುಕಟ್ಟೆಯನ್ನಾಗಿ ಮಾಡಬಾರದು - ನಾವು ನಾವೀನ್ಯತೆಯ ಕೇಂದ್ರವಾಗಬೇಕು.
- ನಾವು ಬಾಹ್ಯಾಕಾಶ ಕ್ಷೇತ್ರವನ್ನು ಮುಕ್ತಗೊಳಿಸಿದ್ದೇವೆ. ರಾಷ್ಟ್ರೀಯ ಡ್ರೋನ್ ನೀತಿ ಮತ್ತು ‘ಖೇಲೋ ಇಂಡಿಯಾ’ ನೀತಿಯನ್ನು ರೂಪಿಸಿದ್ದೇವೆ. 35 ವರ್ಷಗಳಿಂದ ಯಾವುದೇ ಶಿಕ್ಷಣ ನೀತಿ ಇರಲಿಲ್ಲ. ಆದರೆ ನಾವು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದೇವೆ. ಇದರಿಂದ ಮಧ್ಯಮ ವರ್ಗದ ಕುಟುಂಬಗಳು ಪ್ರಯೋಜನ ಪಡೆದಿವೆ.
22. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
- ಇಂದು ರಾಷ್ಟ್ರ ನಿರ್ಮಾಣದಲ್ಲಿ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ನೀಡುತ್ತಿರುವ ಕೊಡುಗೆ ನಮ್ಮೆಲ್ಲರಿಗೂ ಮಹಾನ್ ಸ್ಫೂರ್ತಿಯಾಗಿದೆ. ಯುದ್ಧವಿಮಾನಗಳಲ್ಲಾಗಲಿ ಅಥವಾ ನಾಗರಿಕ ವಿಮಾನಯಾನದಲ್ಲಾಗಲಿ, ನಮ್ಮ ಹೆಣ್ಣುಮಕ್ಕಳು ಮುಂಚೂಣಿಯಲ್ಲಿದ್ದಾರೆ.
- 3 ಕೋಟಿ ಸಹೋದರಿಯರನ್ನು ‘ಲಕ್ಷಾಧಿಪತಿ ದೀದಿ’ಯರನ್ನಾಗಿ ಮಾಡುವ ಗುರಿಯನ್ನು ನಾವು ಹೊಂದಿದ್ದೆವು. ಆ ಗುರಿಯನ್ನು ಮೀರಿ ಸಾಧಿಸಿದ್ದೇವೆ. ಈಗ 6 ಕೋಟಿ ‘ಲಕ್ಷಾಧಿಪತಿ ದೀದಿ’ಯರನ್ನು ಸೃಷ್ಟಿಸುವ ಗುರಿಯೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ. 3 ಕೋಟಿ ಹೊಸ ‘ಲಕ್ಷಾಧಿಪತಿ ದೀದಿ’ಯರ ಸೃಷ್ಟಿಯು ಮಹಿಳಾ ಶಕ್ತಿಯಿಂದ ಮುನ್ನಡೆಸಲ್ಪಡುವ ಗ್ರಾಮೀಣ ಆರ್ಥಿಕತೆಯಲ್ಲಿ ಭಾರಿ ಪರಿವರ್ತನೆಯನ್ನು ಸೂಚಿಸುತ್ತದೆ.
- ಇಂದು ಕೆಂಪುಕೋಟೆಯ ಆವರಣದಿಂದ ತ್ರಿವರ್ಣ ಧ್ವಜದ ನೆರಳಿನಲ್ಲಿ ನಿಂತು, ದೇಶದ ಎಲ್ಲ ರಾಜಕೀಯ ಪಕ್ಷಗಳಿಗೆ ನಾನು ಮನವಿ ಮತ್ತು ಆಗ್ರಹ ಮಾಡುತ್ತೇನೆ - ಮಹಿಳೆಯರನ್ನು ಗೌರವಿಸುವ ನಿಟ್ಟಿನಲ್ಲಿ ಮುಂದೆ ಬನ್ನಿ. ವಿಧಾನಸಭೆಗಳು ಮತ್ತು ಲೋಕಸಭೆಯಲ್ಲಿ ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಶೇ.33ರಷ್ಟು ಪ್ರಾತಿನಿಧ್ಯವನ್ನು ಸಾಧ್ಯವಾದಷ್ಟು ಬೇಗ ಖಚಿತಪಡಿಸಿ. ಇದರಿಂದ ಭಾರತದ ನೀತಿಗಳನ್ನು ರೂಪಿಸುವಲ್ಲಿ ಅವರು ಕೊಡುಗೆ ನೀಡಲು ಸಾಧ್ಯವಾಗುತ್ತದೆ.
- ಇದು ಇಂದಿನ ಅಗತ್ಯವಾಗಿದೆ. ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ಮೂಲಕ ಮಹಿಳೆಯರ ಗೌರವಕ್ಕಾಗಿ ನಡೆಯುವ ಈ ಕಾರ್ಯದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಕೈಜೋಡಿಸಬೇಕೆಂದು ಮತ್ತೊಮ್ಮೆ ಮನವಿ ಮಾಡುತ್ತೇನೆ. ನೀವು ಕೀರ್ತಿಯನ್ನೂ ಪಡೆದುಕೊಳ್ಳಿ, ಶ್ರೇಯಸ್ಸನ್ನೂ ಪಡೆದುಕೊಳ್ಳಿ; ಆದರೆ ನನ್ನ ತಾಯಂದಿರು ಮತ್ತು ಸಹೋದರಿಯರಿಗೆ ಅವರ ಹಕ್ಕುಗಳನ್ನು ನೀಡಿ.
23. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
- ಈ ಪ್ರಯತ್ನಗಳನ್ನು ನಾನು ಗೌರವಪೂರ್ವಕವಾಗಿ ಗುರುತಿಸುತ್ತೇನೆ. ಇಷ್ಟು ಕಡಿಮೆ ಅವಧಿಯಲ್ಲಿ 25 ಕೋಟಿ ನಾಗರಿಕರು ಬಡತನದಿಂದ ಹೊರಬಂದು ಅದರಿಂದ ಮುಕ್ತರಾಗಿರುವುದು ಈ ಪ್ರಯತ್ನಗಳ ಫಲವಾಗಿದೆ.
- ಕಳೆದ 5–7 ದಶಕಗಳಲ್ಲಿ ಕೇವಲ 25 ಕೋಟಿ ಜನರನ್ನು ಬಡತನದಿಂದ ಹೊರತರಲಾಗಿತ್ತು. ಆದರೆ ಕೇವಲ ಒಂದು ದಶಕದಲ್ಲಿ ನಾವು 100 ಕೋಟಿ ನಾಗರಿಕರಿಗೆ ಸಾಮಾಜಿಕ ಭದ್ರತೆಯ ರಕ್ಷಾಕವಚ ಒದಗಿಸಿದ್ದೇವೆ.
- 3 ಕೋಟಿ ಸಹೋದರಿಯರನ್ನು ‘ಲಕ್ಷಾಧಿಪತಿ ದೀದಿ’ಗಳನ್ನಾಗಿ ಮಾಡುವ ಗುರಿಯನ್ನು ನಾವು ಹೊಂದಿದ್ದೆವು. ಆ ಗುರಿಯನ್ನು ಮೀರಿ ಸಾಧಿಸಿದ್ದೇವೆ. ಈಗ 6 ಕೋಟಿ ‘ಲಕ್ಷಾಧಿಪತಿ ದೀದಿ’ಗಳನ್ನು ಸೃಷ್ಟಿಸುವ ಗುರಿಯೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ.
- 3 ಕೋಟಿ ಹೊಸ ‘ಲಕ್ಷಾಧಿಪತಿ ದೀದಿ’ಗಳ ಸೃಷ್ಟಿಯು ಮಹಿಳಾ ಶಕ್ತಿಯಿಂದ ಮುನ್ನಡೆಸಲ್ಪಡುವ ಗ್ರಾಮೀಣ ಆರ್ಥಿಕತೆಯಲ್ಲಿ ಭಾರಿ ಪರಿವರ್ತನೆಯನ್ನು ಸೂಚಿಸುತ್ತದೆ.
- ಪ್ರತಿ ವರ್ಷ ಬಡವರಿಗಾಗಿ ಶೌಚಾಲಯಗಳ ನಿರ್ಮಾಣ ಕಾರ್ಯ ನಾಲ್ಕು ಪಟ್ಟು ವೇಗದಲ್ಲಿ ನಡೆದಿದೆ.
- ಪ್ರತಿ ವರ್ಷ ಬಡವರಿಗೆ ಮನೆಗಳನ್ನು ಒದಗಿಸುವ ಕಾರ್ಯ ಮೂರು ಪಟ್ಟು ವೇಗದಲ್ಲಿ ನಡೆದಿದೆ.
- ಆಯುಷ್ಮಾನ್ ಭಾರತ ಯೋಜನೆಯಡಿ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೂ ಈಗ ₹5 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗುತ್ತಿದೆ.
24. ಬುಡಕಟ್ಟು ವ್ಯವಹಾರಗಳ ಸಚಿವಾಲಯ
- ಕಳೆದ 12 ವರ್ಷಗಳಲ್ಲಿ ದೇಶದಾದ್ಯಂತ ಅಸಂಖ್ಯಾತ ನಾಗರಿಕರು - ದಲಿತರು, ಶೋಷಿತರು, ವಂಚಿತರು ಅಥವಾ ಬುಡಕಟ್ಟು ಜನರು; ಗ್ರಾಮೀಣ ಅಥವಾ ನಗರ ಪ್ರದೇಶಗಳ ನಿವಾಸಿಗಳು; ಬಡವರು ಅಥವಾ ಮಧ್ಯಮ ವರ್ಗದವರು; ಯುವಜನರು ಅಥವಾ ಹಿರಿಯರು; ಮಹಿಳೆಯರು ಅಥವಾ ಪುರುಷರು; ಉತ್ತರ, ದಕ್ಷಿಣ, ಪೂರ್ವ ಅಥವಾ ಪಶ್ಚಿಮದ ಜನರು - ಎಲ್ಲರೂ ಸಾಮೂಹಿಕ ಸಂಕಲ್ಪ ಮತ್ತು ಸಮರ್ಪಣೆಯೊಂದಿಗೆ ದೇಶವನ್ನು ಹೊಸ ಎತ್ತರಗಳಿಗೆ ಕೊಂಡೊಯ್ಯಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ.
25. ಗ್ರಾಮೀಣಾಭಿವೃದ್ಧಿ ಸಚಿವಾಲಯ
- ನಾವು ಪ್ರತಿ ವರ್ಷ ಮೊದಲಿಗಿಂತ ಸರಾಸರಿ 15 ಪಟ್ಟು ವೇಗದಲ್ಲಿ ನಲ್ಲಿ ನೀರಿನ ಸಂಪರ್ಕಗಳನ್ನು ಒದಗಿಸಿದ್ದೇವೆ. ಪ್ರತಿ ವರ್ಷ ಸರಾಸರಿ ಆರು ಪಟ್ಟು ಹೆಚ್ಚಿನ ವೇಗದಲ್ಲಿ ಜನರಿಗೆ ಅಡುಗೆ ಅನಿಲ ಸಂಪರ್ಕಗಳನ್ನು ಒದಗಿಸಲಾಗಿದೆ.
- ಪ್ರತಿ ವರ್ಷ ಬಡವರಿಗಾಗಿ ಶೌಚಾಲಯಗಳ ನಿರ್ಮಾಣ ಕಾರ್ಯ ನಾಲ್ಕು ಪಟ್ಟು ವೇಗದಲ್ಲಿ ನಡೆದಿದೆ. ಬಡವರಿಗೆ ಮನೆಗಳನ್ನು ಒದಗಿಸುವ ಕಾರ್ಯ ಪ್ರತಿ ವರ್ಷ ಮೂರು ಪಟ್ಟು ವೇಗದಲ್ಲಿ ನಡೆದಿದೆ.
- 3 ಕೋಟಿ ಸಹೋದರಿಯರನ್ನು ‘ಲಕ್ಷಾಧಿಪತಿ ದೀದಿ’ಗಳನ್ನಾಗಿ ಸಬಲೀಕರಿಸುವ ಗುರಿಯನ್ನು ನಾವು ಹೊಂದಿದ್ದೆವು. ಆ ಗುರಿಯನ್ನು ಮೀರಿ ಸಾಧಿಸಿದ್ದೇವೆ. ಈಗ 6 ಕೋಟಿ ‘ಲಕ್ಷಾಧಿಪತಿ ದೀದಿ’ಗಳನ್ನು ಸೃಷ್ಟಿಸುವ ಗುರಿಯೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ.
- 3 ಕೋಟಿ ಹೊಸ ‘ಲಕ್ಷಾಧಿಪತಿ ದೀದಿ’ಗಳ ಸೃಷ್ಟಿಯು ಮಹಿಳಾ ಶಕ್ತಿಯಿಂದ ಮುನ್ನಡೆಸಲ್ಪಡುವ ಗ್ರಾಮೀಣ ಆರ್ಥಿಕತೆಯಲ್ಲಿ ಭಾರಿ ಪರಿವರ್ತನೆಯನ್ನು ಸೂಚಿಸುತ್ತದೆ.
26. ಜಲ ಶಕ್ತಿ ಸಚಿವಾಲಯ
- ಪ್ರತಿ ವರ್ಷ ಸರಾಸರಿ 15 ಪಟ್ಟು ವೇಗದಲ್ಲಿ ನಲ್ಲಿ ನೀರಿನ ಸಂಪರ್ಕಗಳನ್ನು ಒದಗಿಸಿದ್ದೇವೆ.
- ಪ್ರತಿ ವರ್ಷ ಬಡವರಿಗಾಗಿ ಶೌಚಾಲಯಗಳ ನಿರ್ಮಾಣ ಕಾರ್ಯ ನಾಲ್ಕು ಪಟ್ಟು ವೇಗದಲ್ಲಿ ನಡೆದಿದೆ.
27. ನಾಗರಿಕ ವಿಮಾನಯಾನ ಸಚಿವಾಲಯ
- ನಮ್ಮ ಯುವಜನತೆಗಾಗಿ ವಿಮಾನಯಾನ ಕ್ಷೇತ್ರವೂ ವೇಗವಾಗಿ ಬೆಳೆಯುತ್ತಿದೆ. ಹೊಸ ವಿಮಾನ ನಿಲ್ದಾಣಗಳು, ಹೊಸ ಮಾರ್ಗಗಳು ಮತ್ತು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ.
- ನಿರ್ವಹಣೆ ಮತ್ತು ಸಮಗ್ರ ಪರಿಶೀಲನೆಗೆ ಸಂಬಂಧಿಸಿದ ಚಟುವಟಿಕೆಗಳು ದೇಶಾದ್ಯಂತ ಅಪಾರ ಸಂಖ್ಯೆಯ ನುರಿತ ಮಾನವ ಸಂಪನ್ಮೂಲಕ್ಕೆ ಉದ್ಯೋಗ ಒದಗಿಸುತ್ತಿವೆ.
- ‘ಮೇಕ್ ಇನ್ ಇಂಡಿಯಾ’ ವಿಮಾನಗಳ ತಯಾರಿಕೆಯ ದಿಕ್ಕಿನಲ್ಲಿ ನಾವು ಯಶಸ್ಸು ಸಾಧಿಸಿದ್ದೇವೆ.
- ‘ಮೇಕ್ ಇನ್ ಇಂಡಿಯಾ’ ಸಿ295 ರಕ್ಷಣಾ ಸಾರಿಗೆ ವಿಮಾನ ಈಗಾಗಲೇ ಯಶಸ್ವಿ ಹಾರಾಟ ನಡೆಸಿದೆ.
28. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ
- ಭಾರತ ಸರ್ಕಾರ ₹1 ಲಕ್ಷ ಕೋಟಿ ಮೊತ್ತದ ನಾವೀನ್ಯತಾ ನಿಧಿಯನ್ನು ಘೋಷಿಸಿದೆ. ದೇಶದ ಯುವಜನರಿಗೆ ನಾನು ಹೇಳಲು ಬಯಸುತ್ತೇನೆ: ನಿಮ್ಮ ಕನಸುಗಳೊಂದಿಗೆ ಬನ್ನಿ; ಸಂಪನ್ಮೂಲಗಳ ಯಾವುದೇ ಕೊರತೆ ಉಂಟಾಗದಂತೆ ನಾವು ನೋಡಿಕೊಳ್ಳುತ್ತೇವೆ.
- ನಮ್ಮ ದೇಶದ ಯುವ ಮನಸ್ಸುಗಳಲ್ಲಿ ಬಾಲ್ಯದಿಂದಲೇ ತಂತ್ರಜ್ಞಾನದ ಬಗ್ಗೆ ಆಸಕ್ತಿ ಬೆಳೆಸಲು ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಅದಕ್ಕಾಗಿಯೇ 10,000ಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಲ್ಯಾಬ್ ಗಳನ್ನು ಮಕ್ಕಳಿಗೆ ಒದಗಿಸಿದ್ದೇವೆ. ಇದರಿಂದ ಅವರು ನಾವೀನ್ಯತೆ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬಹುದು.
- ‘ಡಿಜಿಟಲ್ ಇಂಡಿಯಾ’ ಅಡಿಯಲ್ಲಿ ಸಂಶೋಧನೆಗೆ ದೊರೆತ ಹೊಸ ಅವಕಾಶಗಳು ಮತ್ತು ಕೈಗೆಟುಕುವ ದತ್ತಾಂಶ ಯುವಜನರನ್ನು ಸಬಲೀಕರಣಗೊಳಿಸಿವೆ.
29. ಜೈವಿಕ ತಂತ್ರಜ್ಞಾನ ಇಲಾಖೆ
- ದೇಶದ ಯುವಶಕ್ತಿಯು ಜೈವಿಕ ಆರ್ಥಿಕತೆಯಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಸ್ನೇಹಿತರೇ, 2014ಕ್ಕೂ ಮೊದಲು ₹60,000 ಕೋಟಿ ವಹಿವಾಟು ಹೊಂದಿದ್ದ ಜೈವಿಕ ಆರ್ಥಿಕತೆ ಇಂದು ₹20 ಲಕ್ಷ ಕೋಟಿಗೆ ತಲುಪಿದೆ.
30. ಭಾರಿ ಕೈಗಾರಿಕೆಗಳ ಸಚಿವಾಲಯ
- 2009–10ರಲ್ಲಿ ಕೇವಲ 1.5 ಲಕ್ಷ ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿದ್ದವು. 2025–26ರಲ್ಲಿ 25 ಲಕ್ಷ ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿವೆ.
31. ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯ
- ಕೆಂಪುಕೋಟೆಯಿಂದ ದೇಶದ ಯುವಜನತೆಗಾಗಿ ನಾನು ಒಂದು ಘೋಷಣೆ ಮಾಡಲು ಬಯಸುತ್ತೇನೆ. ಮುಂದಿನ ಒಂದು ವರ್ಷದಲ್ಲಿ 1 ಕೋಟಿ ಯುವಜನರಿಗೆ ಎಐ ಕೌಶಲ್ಯಗಳಲ್ಲಿ ತರಬೇತಿ ನೀಡಲು ನಾವು ನಿರ್ಧರಿಸಿದ್ದೇವೆ. ಇದರಿಂದ ನಮ್ಮ ದೇಶದ ಯುವಜನರು ಎಐ ಜಗತ್ತಿನಲ್ಲಿ ನಾಯಕತ್ವ ವಹಿಸುವ ಸಾಮರ್ಥ್ಯ ಪಡೆಯುತ್ತಾರೆ.
- ವಿಮಾನಯಾನ ಕ್ಷೇತ್ರವೂ ವೇಗವಾಗಿ ವಿಸ್ತರಿಸುತ್ತಿದ್ದು, ನಮ್ಮ ಯುವಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಹೊಸ ವಿಮಾನ ನಿಲ್ದಾಣಗಳು ಮತ್ತು ಮಾರ್ಗಗಳು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ.
- ನಿರ್ವಹಣೆ ಮತ್ತು ಸಮಗ್ರ ಪರಿಶೀಲನೆಯಂತಹ ಚಟುವಟಿಕೆಗಳು ದೇಶಾದ್ಯಂತ ಅಪಾರ ಸಂಖ್ಯೆಯ ನುರಿತ ಮಾನವ ಸಂಪನ್ಮೂಲಕ್ಕೆ ಉದ್ಯೋಗ ಒದಗಿಸುತ್ತಿವೆ.
- ‘ಮೇಕ್ ಇನ್ ಇಂಡಿಯಾ’ ವಿಮಾನಗಳ ಉತ್ಪಾದನೆಯಲ್ಲಿ ನಾವು ಯಶಸ್ಸು ಸಾಧಿಸಿದ್ದೇವೆ. ‘ಮೇಕ್ ಇನ್ ಇಂಡಿಯಾ’ ಸಿ295 ರಕ್ಷಣಾ ಸಾರಿಗೆ ವಿಮಾನ ಈಗಾಗಲೇ ಯಶಸ್ವಿ ಹಾರಾಟ ನಡೆಸಿದೆ.
32. ಕಾನೂನು ಮತ್ತು ನ್ಯಾಯ ಸಚಿವಾಲಯ
- ದೇಶವು ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ. ಸಾವಿರಾರು ಅನುಸರಣೆ ಅಗತ್ಯಗಳನ್ನು ರದ್ದುಗೊಳಿಸಲಾಗಿದೆ ಮತ್ತು ನೂರಾರು ಹಳೆಯ ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ಕಳೆದ ಶತಮಾನದ ಕಾನೂನುಗಳು 21ನೇ ಶತಮಾನದ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಿಲ್ಲ.
- ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳಿಗೆ - ಮತ್ತು ಇದು ಭಾರತ ಸರ್ಕಾರದ ಜವಾಬ್ದಾರಿಯೂ ಹೌದು - ನಾವು ಸುಧಾರಣೆಗಳ ವೇಗವನ್ನು ಹೆಚ್ಚಿಸಬೇಕು ಎಂದು ನಾನು ಹೇಳಲು ಬಯಸುತ್ತೇನೆ.
- 2047ರ ದೃಷ್ಟಿಕೋನವನ್ನು ಸಾಕಾರಗೊಳಿಸುವಂತೆ ನಮ್ಮ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬೇಕು. ಹಿಂದಿನ ಕಾಲದ ನೀತಿಗಳು ಮತ್ತು ನಿಯಮಗಳ ಮೇಲೆ ಅವಲಂಬಿತರಾಗಿ ನಾವು ಮುಂದುವರಿಯಲು ಸಾಧ್ಯವಿಲ್ಲ. ಭವಿಷ್ಯದ ಆಶಯಗಳಿಗೆ ತಕ್ಕಂತೆ ನೀತಿಗಳು ಮತ್ತು ನಿಯಮಗಳನ್ನು ರೂಪಿಸಬೇಕು.
33. ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ / ಭಾರತದ ಜನಗಣತಿ
- ಜನಗಣತಿ ಪ್ರಕ್ರಿಯೆ ನಡೆಯುತ್ತಿದೆ, ಗಣತಿ ಕಾರ್ಯ ಮುಂದುವರಿದಿದೆ. ಆದರೆ ಗಣತಿ ಎಂದರೆ ಕೇವಲ ಸಂಖ್ಯೆಗಳನ್ನು ಎಣಿಸುವುದಲ್ಲ.
- ಈ ದತ್ತಾಂಶದೊಳಗಿನ ಸೂಕ್ಷ್ಮ ಮಾಹಿತಿಯೇ ನೀತಿಗಳು ಮತ್ತು ಯೋಜನೆಗಳನ್ನು ರೂಪಿಸುತ್ತದೆ ಹಾಗೂ ಪ್ರಗತಿಯ ಮಾರ್ಗಸೂಚಿಯನ್ನು ಸಿದ್ಧಪಡಿಸಲು ದೇಶಕ್ಕೆ ನೆರವಾಗುತ್ತದೆ. ಆದ್ದರಿಂದ ನಿಖರ ಮಾಹಿತಿಯನ್ನು ಹೊಂದಿರುವುದು ಅತ್ಯಂತ ಮಹತ್ವದ್ದಾಗಿದೆ.
- ದೇಶದ ಯುವಜನರು ತಮ್ಮ ಕುಟುಂಬದ ಸದಸ್ಯರೊಂದಿಗೆ ಕುಳಿತು ಅರ್ಜಿಯ ನಮೂನೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವಂತೆ ನಾನು ಮನವಿ ಮಾಡುತ್ತೇನೆ.
- ನೋಡಿ, ದೇಶವು ಇಂತಹ ಬೃಹತ್ ಕಾರ್ಯವನ್ನು ಪೂರ್ಣಗೊಳಿಸಲಿದೆ. ದೇಶದ ಸಮಯ ಮತ್ತು ಶಕ್ತಿಯನ್ನು ಸರಿಯಾದ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗುವುದು. ಆದ್ದರಿಂದ ದೇಶದ ಯುವಜನರು ಜನಗಣತಿ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ನಾನು ಮನವಿ ಮಾಡುತ್ತೇನೆ.
34. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ / ಔಷಧೀಯ ಇಲಾಖೆ
- ಔಷಧೀಯ (ಫಾರ್ಮಾಸ್ಯುಟಿಕಲ್) ಕ್ಷೇತ್ರದಲ್ಲಿ ನಾವು ಸಾಕಷ್ಟು ಕೆಲಸ ಮಾಡಿದ್ದೇವೆ. ಆದರೆ ಈಗಿನ ಅಗತ್ಯವೆಂದರೆ, ಭಾರತದ ಒಂದು ಅಥವಾ ಎರಡು ಔಷಧೀಯ ಕಂಪನಿಗಳು ವಿಶ್ವದ ಐದು ಅಗ್ರ ಔಷಧೀಯ ಕಂಪನಿಗಳಲ್ಲಿ ತಮ್ಮ ಸ್ಥಾನವನ್ನು ಮಾಡಿಕೊಳ್ಳಬೇಕು.
- ನಮ್ಮ ಯಾವುದೇ ಸಲಹಾ ಸಂಸ್ಥೆಗಳು ಅಥವಾ ಲೆಕ್ಕಪರಿಶೋಧನಾ ಸಂಸ್ಥೆಗಳು ವಿಶ್ವದ ಅಗ್ರ ಸಂಸ್ಥೆಗಳ ಸಾಲಿನಲ್ಲಿ ಏಕೆ ಇರಬಾರದು? ಭಾರತೀಯ ತಂತ್ರಜ್ಞಾನ ಕಂಪನಿಗಳನ್ನು ವಿಶ್ವದ ನಾಯಕತ್ವದ ಸ್ಥಾನಕ್ಕೆ ಕೊಂಡೊಯ್ಯುವುದು ನಮ್ಮ ಗುರಿಯಾಗಬೇಕು.
- ಜಗತ್ತನ್ನು ಆಕರ್ಷಿಸುವ ಬ್ರ್ಯಾಂಡ್ ಗಳನ್ನು ನಾವು ಹೊಂದಬೇಕು. ನಮ್ಮ ಬ್ರ್ಯಾಂಡ್ ಗಳನ್ನು ದೇಶದ ಗುರುತಾಗಿ ಮತ್ತು ಜಗತ್ತಿಗೆ ಆಕರ್ಷಣೆಯ ತಾಣವಾಗಿ ರೂಪಿಸಲು ನಾವು ಕಾರ್ಯನಿರ್ವಹಿಸಬೇಕು.
35. ವಿಕಸಿತ ಭಾರತ
- ಒಂದು ದೇಶವೆಂದರೆ ಕೇವಲ ಸರ್ಕಾರವಲ್ಲ; ಅದು ಪ್ರತಿಯೊಬ್ಬ ನಾಗರಿಕನನ್ನೂ ಒಳಗೊಂಡಿದೆ. ಫಾರ್ಚೂನ್ 500 ಬಗ್ಗೆ ನಾವು ಬಹಳಷ್ಟು ಕೇಳುತ್ತೇವೆ. ಮುಂದಿನ ದಶಕದೊಳಗೆ ಫಾರ್ಚೂನ್ 500 ಕಂಪನಿಗಳಲ್ಲಿ 50 ಕಂಪನಿಗಳು ಭಾರತದಿಂದಲೇ ಇರಬೇಕು ಎಂಬ ಕನಸನ್ನು ನಾವು ಕಾಣಬಾರದೇ? ಆ ಗುರಿಯನ್ನು ಹೊಂದಬಾರದೇ?
- ಜಗತ್ತನ್ನು ಆಕರ್ಷಿಸುವ ಬ್ರ್ಯಾಂಡ್ ಗಳನ್ನು ನಾವು ಹೊಂದಬೇಕು. ನಮ್ಮ ಬ್ರ್ಯಾಂಡ್ ಗಳನ್ನು ದೇಶದ ಗುರುತಾಗಿ ಮತ್ತು ಜಗತ್ತಿಗೆ ಆಕರ್ಷಣೆಯ ತಾಣವಾಗಿ ರೂಪಿಸಲು ನಾವು ಕಾರ್ಯನಿರ್ವಹಿಸಬೇಕು.
- ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳಿಗೆ - ಮತ್ತು ಇದು ಭಾರತ ಸರ್ಕಾರದ ಜವಾಬ್ದಾರಿಯೂ ಹೌದು - ಸುಧಾರಣೆಗಳ ವೇಗವನ್ನು ಹೆಚ್ಚಿಸಬೇಕು ಎಂದು ನಾನು ಹೇಳಲು ಬಯಸುತ್ತೇನೆ.
- 2047ರ ಗುರಿಗಳನ್ನು ಸಾಧಿಸುವಂತೆ ನಮ್ಮ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬೇಕು. ಹಿಂದಿನ ಕಾಲದ ನೀತಿಗಳು ಮತ್ತು ನಿಯಮಗಳ ಮೇಲೆ ಅವಲಂಬಿತರಾಗಬಾರದು. ಬದಲಾಗಿ, ಭವಿಷ್ಯದ ನಮ್ಮ ಆಶಯಗಳನ್ನು ಪ್ರತಿಬಿಂಬಿಸುವ ನೀತಿಗಳನ್ನು ರೂಪಿಸಬೇಕು.
- ನಾನು ಕೆಂಪುಕೋಟೆಯಿಂದ ‘ಪಂಚಪ್ರಾಣ’ಗಳ ಕುರಿತು ಮಾತನಾಡಿದ್ದೆ. ಈ ಐದು ಸಂಕಲ್ಪಗಳು ರಾಷ್ಟ್ರಕ್ಕೆ ಅಪಾರ ಶಕ್ತಿಯನ್ನು ನೀಡಿದ್ದು, ಆತ್ಮಗೌರವದ ಭಾವನೆಯೊಂದಿಗೆ ಮತ್ತು ತನ್ನ ಗುರಿಗಳನ್ನು ಮೀರಿಸುವ ಸಾಮರ್ಥ್ಯದೊಂದಿಗೆ ಮುಂದೆ ಸಾಗಲು ದೇಶವನ್ನು ಸಶಕ್ತಗೊಳಿಸಿವೆ. ಗುಲಾಮಗಿರಿಯ ಮನಸ್ಥಿತಿಯನ್ನು ಪ್ರತಿಕ್ಷಣವೂ ನಿರ್ಮೂಲನೆ ಮಾಡುತ್ತಲೇ ಇರಬೇಕು.
- ವೈಯಕ್ತಿಕ ಹಿತಕ್ಕಿಂತ ರಾಷ್ಟ್ರದ ಹಿತವೇ ಮೇಲಾಗಿರಬೇಕು. ರಾಷ್ಟ್ರದ ಹಿತಾಸಕ್ತಿಯು ನಮ್ಮ ಸ್ವಂತ ಹಿತಾಸಕ್ತಿಗಿಂತ ಮೇಲಿರಬೇಕು ಮತ್ತು ಕರ್ತವ್ಯವೇ ನಮ್ಮ ಗುರುತಾಗಬೇಕು. ಸಮಯ ನಮ್ಮದು, ಅವಕಾಶ ನಮ್ಮದು, ಸಂಕಲ್ಪ ನಮ್ಮದು, ನಮ್ಮ ಕನಸುಗಳನ್ನು ಸಂಕಲ್ಪವಾಗಿ, ಸಂಕಲ್ಪವನ್ನು ಶಕ್ತಿಯಾಗಿ ಮತ್ತು ಶಕ್ತಿಯನ್ನು ಯಶಸ್ಸಾಗಿ ಪರಿವರ್ತಿಸೋಣ ಎಂದು ನಾನು ನನ್ನ ಎಲ್ಲಾ ದೇಶವಾಸಿಗಳಿಗೆ ಹೇಳಲು ಬಯಸುತ್ತೇನೆ.
- ನಮ್ಮ ಪ್ರತಿಯೊಂದು ಹೆಜ್ಜೆಯೂ ಅಭಿವೃದ್ಧಿಯ ಹೆಜ್ಜೆಯಾಗಲಿ. ಹೆಜ್ಜೆಗೆ ಹೆಜ್ಜೆ ಜೋಡಿಸೋಣ, ಹೃದಯಕ್ಕೆ ಹೃದಯ ಬೆಸೆಯೋಣ, ನಮ್ಮ ಗುರಿಯೊಂದಿಗೆ ಸದಾ ಸಂಪರ್ಕದಲ್ಲಿರೋಣ. ಒಂದು ದೀಪವು ಸಾವಿರಾರು ದೀಪಗಳನ್ನು ಬೆಳಗಿಸುತ್ತದೆ. ನಾವೆಲ್ಲರೂ ಒಗ್ಗೂಡಿ ವಿಕಸಿತ ಭಾರತವನ್ನು ನಿರ್ಮಿಸೋಣ.
*****
(रिलीज़ आईडी: 2300067)
|