ಕಾನೂನು ಮತ್ತು ನ್ಯಾಯ ಸಚಿವಾಲಯ
azadi ka amrit mahotsav

ನ್ಯಾಯಾಲಯಗಳಲ್ಲಿ ಮಹಿಳಾ ಸ್ನೇಹಿ ಮೂಲಸೌಕರ್ಯ

प्रविष्टि तिथि: 13 AUG 2026 3:53PM by PIB Bengaluru

ನ್ಯಾಯಾಂಗಕ್ಕೆ ಮೂಲಸೌಕರ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಪ್ರಾಥಮಿಕ ಜವಾಬ್ದಾರಿ ರಾಜ್ಯ ಸರ್ಕಾರಗಳ ಮೇಲಿದೆ. ಆದಾಗ್ಯೂ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಸಂಪನ್ಮೂಲಗಳನ್ನು ವೃದ್ಧಿಸಲು, ಕೇಂದ್ರ ಸರ್ಕಾರವು 1993-94 ರಿಂದ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ಮೂಲಸೌಕರ್ಯ ಸೌಲಭ್ಯಗಳ ಅಭಿವೃದ್ಧಿಗಾಗಿ ಕೇಂದ್ರ ಪ್ರಾಯೋಜಕತ್ವ ಯೋಜನೆಯನ್ನು (ಸಿ ಎಸ್‌ ಎಸ್) ಅನುಷ್ಠಾನಗೊಳಿಸಿದೆ. ಈ ಯೋಜನೆಯಡಿಯಲ್ಲಿನ ಐದು ಅಂಶಗಳೆಂದರೆ - ನ್ಯಾಯಾಲಯದ ಅಂಗಣ, ನ್ಯಾಯಾಂಗ ಅಧಿಕಾರಿಗಳ ವಸತಿ ಘಟಕಗಳು, ವಕೀಲರ ಸಭಾಂಗಣ, ಶೌಚಾಲಯ ಸಂಕೀರ್ಣಗಳು ಮತ್ತು ಡಿಜಿಟಲ್ ಕಂಪ್ಯೂಟರ್ ಕೊಠಡಿಗಳು.

ನ್ಯಾಯಾಲಯದ ಸಭಾಂಗಣಗಳಲ್ಲಿ ಮಹಿಳಾ ಸ್ನೇಹಿ ಮೂಲಸೌಕರ್ಯ ಸೇರಿದಂತೆ ನಿರ್ದಿಷ್ಟ ಅಂಶಗಳು ಹೈಕೋರ್ಟ್ ಗಳು ಮತ್ತು ರಾಜ್ಯ ಸರ್ಕಾರಗಳ ವ್ಯಾಪ್ತಿಯಡಿ ಸೇರಿವೆ. ಹೈಕೋರ್ಟ್ ನ ಕಟ್ಟಡ ಮೂಲಸೌಕರ್ಯ ಸಮಿತಿಯು ನ್ಯಾಯಾಂಗಣಗಳ ವಿನ್ಯಾಸ ಮತ್ತು ಸಿಎಸ್ಎಸ್ ಅಡಿಯಲ್ಲಿ ನಿಧಿಸಂಗ್ರಹಿಸಲ್ಪಡುವ ಯೋಜನೆಗಳನ್ನು ಅನುಮೋದಿಸುತ್ತದೆ. ಆದಾಗ್ಯೂ ಸಿ ಎಸ್‌ ಎಸ್ ಅಡಿಯಲ್ಲಿನ ಮಾರ್ಗಸೂಚಿಗಳು, ಸುಪ್ರೀಂ ಕೋರ್ಟ್ ನ ರಾಷ್ಟ್ರೀಯ ನ್ಯಾಯಾಲಯಗಳ ನಿರ್ವಹಣಾ ವ್ಯವಸ್ಥೆ (ಎನ್‌ ಸಿ ಎಂ ಎಸ್) ಸಮಿತಿಯ ಶಿಫಾರಸುಗಳು ಹಾಗೂ ವಿವಿಧ ರಾಜ್ಯಗಳು ಮತ್ತು ಸಿ ಪಿ ಡಬ್ಲ್ಯು ಡಿ ಅನುಸರಿಸುವ ಮಾನದಂಡಗಳು ಮತ್ತು ಅಭ್ಯಾಸಗಳನ್ನು ಆಧರಿಸಿದ ಮಾನದಂಡಗಳು ಮತ್ತು ನಿರ್ದಿಷ್ಟತೆಗಳನ್ನು ನ್ಯಾಯಾಂಗಣಗಳಿಗೆ ಒದಗಿಸುತ್ತವೆ. 

ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಖಾತೆ) ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್ ಅವರು ರಾಜ್ಯಸಭೆಯಲ್ಲಿ ಇಂದು ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ  ಈ ಮಾಹಿತಿ ನೀಡಿದ್ದಾರೆ.

 

*****


(रिलीज़ आईडी: 2299272) आगंतुक पटल : 3
इस विज्ञप्ति को इन भाषाओं में पढ़ें: English , Urdu , हिन्दी , Bengali , Telugu