ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ಕಾಮನ್‌ವೆಲ್ತ್ ಕ್ರೀಡಾಕೂಟ (ಸಿಡಬ್ಲ್ಯುಜಿ)ದ ಚಾಂಪಿಯನ್‌ಗಳೊಂದಿಗೆ ಪ್ರಧಾನಮಂತ್ರಿ ಅವರ ಸಂವಾದ
प्रविष्टि तिथि:
10 AUG 2026 1:11PM by PIB Bengaluru
ಪ್ರಧಾನಮಂತ್ರಿ: ಇಲ್ಲಿ ನಾನು ಈ ನಿವಾಸದಲ್ಲಿ ಸುಮಾರು 12-13 ವರ್ಷಗಳಿಂದ ವಾಸಿಸುತ್ತಿದ್ದೇನೆ. ನಾನು ನಿಯಮಿತವಾಗಿ ಮತ್ತು ಪ್ರತಿ ಬಾರಿ ಯಾರನ್ನಾದರೂ ಸ್ವಾಗತಿಸಿದ್ದರೆ, ನಾನು ಯಾರನ್ನಾದರೂ ಭೇಟಿಯಾಗಿದ್ದರೆ, ಅದು ಆಟಗಾರರು ಮಾತ್ರ. ಕಳೆದ 10-12 ವರ್ಷಗಳಿಂದ ನಿಮ್ಮೆಲ್ಲರ ಕಠಿಣ ಪರಿಶ್ರಮದಿಂದಾಗಿ ಭಾರತಕ್ಕೆ ನಿರಂತರ ವಿಜಯಗಳನ್ನು ತರುವ ನಿಮ್ಮ ಪ್ರಯತ್ನಗಳಿಂದಾಗಿ ಮತ್ತು ಯಶಸ್ಸಿನ ಹೊಸ ಎತ್ತರವನ್ನು ಮುಟ್ಟುವ ಸಂಪ್ರದಾಯದಿಂದಾಗಿ. ಬಹುಶಃ ನಾವು ಶಾಲೆಗಳಿಗೆ ಹೋಗಿ "ಆಡು, ಇದನ್ನು ಮಾಡು, ಅದನ್ನು ಮಾಡು" ಎಂದು ಹೇಳುವ ಮೂಲಕ ಮಾಡಬಹುದಾದ ಕೆಲಸದಿಂದ ಇವೆಲ್ಲಾ ಸಾಧ್ಯವಾಗಿದೆ, ನಿಮ್ಮೆಲ್ಲರ ಪದಕಗಳು ಎಲ್ಲಾ ಮಕ್ಕಳಿಗೂ ಹೆಚ್ಚಿನ ಸ್ಫೂರ್ತಿ ನೀಡುತ್ತವೆ.
ಪ್ರಧಾನಮಂತ್ರಿ: ಕಳೆದ ಬಾರಿ ನೀವು ನಿಮ್ಮಿಬ್ಬರ ಹೆಣ್ಣು ಮಕ್ಕಳು ಆಟಗಾರ್ತಿಯರಾಗುತ್ತಾರೆಂದು ನನಗೆ ಭರವಸೆ ನೀಡಿದ್ದಿರಿ?
ಆಟಗಾರ: ಹೌದು ಸರ್, ಅವರು ಇನ್ನೂ ಚಿಕ್ಕವರು, ಆದರೆ ಮುಂದಿನ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಒಂದೇ ಮನೆಯಿಂದ 3 ಪದಕಗಳು ಬರುತ್ತವೆ.
ಪ್ರಧಾನಮಂತ್ರಿ: ಖಂಡಿತ.
ಆಟಗಾರ: ಹೌದು ಸರ್.
ಆಟಗಾರ: ನನ್ನ ಕ್ರೀಡಾಕೂಟ ಜುಲೈ 29ರಂದು ಇದ್ದಾಗ ನಾನು ಓಡುತ್ತಿದ್ದೆ. ಆ ದಿನ ಗುರು ಪೂರ್ಣಿಮೆ. ಹಾಗಾಗಿ ಆ ದಿನ ನಾನು ನನ್ನ ಗುರುಗಳಿಗೆ ಉಡುಗೊರೆ ನೀಡಿದ್ದೇನೆ.
ಪ್ರಧಾನಮಂತ್ರಿ: ನೀವು ಬಹುದೊಡ್ಡ ಗೌರವ ತಂದಿದ್ದೀರಿ. ಎಷ್ಟೊಂದು ಕಣ್ಣೀರು ಹರಿಯುತ್ತಿತ್ತು, ಆ ಕಣ್ಣೀರಿನ ಪ್ರತಿ ಹನಿಯೂ ಚಿನ್ನದ ಪದಕವಾಗಿ ಬದಲಾಗಿದೆ ಎಂದು ನನಗೆ ಅನಿಸಿದೆ.
ಆಟಗಾರ: ಆ ದಿನ ನಾನು ತುಂಬಾ ಸಂತೋಷಪಟ್ಟೆ, ಭಾವನಾತ್ಮಕವಾಗಿದ್ದೆ. ಸಂತೋಷ ಹೆಚ್ಚಿತ್ತು, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಾನು 1 ಕೆಜಿಯಿಂದ ಪದಕ ಕಳೆದುಕೊಂಡಿದ್ದರಿಂದ ನಾನು ಅಳುತ್ತಿದ್ದೆ. ಆಟಗಾರರ ಜೀವನದಲ್ಲಿ ಈ ರೀತಿ ನಾವು ತುಂಬಾ ಎದುರಿಸುತ್ತೇವೆ. ಈ 4 ವರ್ಷಗಳಲ್ಲಿ ನಾನು ಅನೇಕ ವಿಷಯಗಳನ್ನು ಎದುರಿಸಿದೆ. ಯಾವಾಗಲೂ ಗಾಯಗಳು, ಕೌಟುಂಬಿಕ ಸಮಸ್ಯೆಗಳು, ಎಲ್ಲವೂ. ಆ 4 ವರ್ಷಗಳನ್ನು ಎದುರಿಸುವುದು ತುಂಬಾ ಕಷ್ಟಕರವಾಗಿತ್ತು. ನಾನು ವೇದಿಕೆಯ ಮೇಲೆ ನಿಂತಾಗ ಸರ್, ನಮ್ಮ ಧ್ವಜ ಹಾರಾಡಿದಾಗ, ನಮ್ಮ ರಾಷ್ಟ್ರಗೀತೆ ನುಡಿದಾಗ ಸರ್, ನಾವು ನಮ್ಮನ್ನು ತಡೆಯಲು ಸಾಧ್ಯವಿಲ್ಲ, ಕಣ್ಣೀರು ಹೊರಬರುತ್ತದೆ.
ಪ್ರಧಾನಮಂತ್ರಿ: ತುಂಬಾ ತುಂಬಾ ಚೆನ್ನಾಗಿದೆ.
ಪ್ರಧಾನಮಂತ್ರಿ: ನಾನು ಈ ಸಾಧನೆಯನ್ನು ನಿಮ್ಮದು ಎಂದು ಮಾತ್ರ ಪರಿಗಣಿಸುವುದಿಲ್ಲ. ಈ ಗೆಲುವು ಭವಿಷ್ಯದ ಪೀಳಿಗೆಗೆ ಒಂದು ದೊಡ್ಡ ಸ್ಫೂರ್ತಿಯಾಗುತ್ತದೆ.
ಆಟಗಾರ: ಎಲ್ಲರೂ ನಮ್ಮನ್ನು ನೋಡಿ ಭಯಪಡುತ್ತಿದ್ದರು, ಅವರು ಭಾರತದೊಂದಿಗೆ ಹೋರಾಡಿದರೆ, ಅವರು ಮೊದಲ ಹೋರಾಟದಲ್ಲೇ ಸೋಲುತ್ತೇವೆ, ನಮಗೆ ಪದಕ ಸಿಗುವುದಿಲ್ಲ ಎಂದು ಹೇಳುತ್ತಿದ್ದರು.
ಪ್ರಧಾನಮಂತ್ರಿ: ಅವರು ಹಾಗೆ ಊಹಿಸಿದರು.
ಆಟಗಾರ: ಹೌದು ಸರ್.
ಪ್ರಧಾನಮಂತ್ರಿ: ಏನಾಯಿತು, ನೀವು ರೆಸ್ಟೋರೆಂಟ್ ಜನರೊಂದಿಗೆ ಜಗಳವಾಡುತ್ತಿದ್ದಿರಾ?
ಆಟಗಾರ: ನಾವು ತುಂಬಾ ಉತ್ತಮ ಪ್ರದರ್ಶನ ನೀಡಿದ್ದೇವೆ, ಅದು ಕೊನೆಯ ದಿನವಾಗಿತ್ತು, ಎಲ್ಲರೂ ಗೆದ್ದಿದ್ದರು, ಆದರೆ ಎಲ್ಲಾ ಭಾರತೀಯರು ಅಲ್ಲಿದ್ದರು. ನನಗೆ ಸ್ವಲ್ಪ ಬೇಸರವಾಯಿತು. ಹಾಗಾಗಿ ನಾನು ಅವರೊಂದಿಗೆ ನಯವಾಗಿ ಮಾತನಾಡಿದೆ, ಮನವಿ ಮಾಡಿದೆ, ನಂತರ ಅವರು ಒಪ್ಪಿ ಅದನ್ನು ಬದಲಾಯಿಸಿದರು.
ಪ್ರಧಾನಮಂತ್ರಿ: ಈ ವಿಜಯ, ಸಂತೋಷ, ಸಂತೋಷ, ನಿಮ್ಮ ಒಡನಾಡಿಗಳೊಂದಿಗೆ, ಆಟಗಳು ಮುಗಿದ ನಂತರ, ನಗು ಮತ್ತು ಮೋಜಿನ ಮನಸ್ಥಿತಿ - ಅಂತಹ ಸಮಯದಲ್ಲಿ, ತಕ್ಷಣವೇ ಪದಕಗಳನ್ನು ನೀಡಿದಾಗ ರಾಷ್ಟ್ರವು ನಿಮ್ಮ ಜತೆ ನಿಲ್ಲುತ್ತದೆ, ಆದರೆ ರಾಷ್ಟ್ರವು ಒಳಗಿನಿಂದಲೂ ಅದನ್ನು ಅನುಭವಿಸಿತು. ನಾನು ನಿಮಗೆ ನಿಜವಾಗಿಯೂ ಹೇಳುತ್ತೇನೆ, ಈ ವೀಡಿಯೊ ಸಾಮಾನ್ಯವಲ್ಲ. ಜನರು ಅದನ್ನು ದೀರ್ಘಕಾಲ ನೆನಪಿಸಿಕೊಳ್ಳುತ್ತಾರೆ. ವಿಶ್ವಾದ್ಯಂತದ ಬಾಕ್ಸರ್‌ಗಳು ಸಹ ಈಗ ನಿಮ್ಮನ್ನು ನೋಡಿ ಭಯಪಡಲು ಪ್ರಾರಂಭಿಸಿದ್ದಾರೆ.
ಆಟಗಾರ: ಖಂಡಿತ ಸರ್, ಎಲ್ಲರೂ ಭಯಭೀತರಾಗಿದ್ದರು. ಒಂದರ ನಂತರ ಒಂದರಂತೆ, ಚಿನ್ನದ ಪದಕಗಳು ಬರುತ್ತಲೇ ಇದ್ದವು, ಕೊನೆಯಲ್ಲಿ ಅದು ಸ್ಫೋಟದಂತೆ ಇತ್ತು. ನಮಗೆ ಬೆಂಬಲ ಸಿಗುತ್ತಿರುವ ರೀತಿ, ಒಂದರ ನಂತರ ಒಂದರಂತೆ ಸ್ಪರ್ಧೆಗಳು, ಇದು ಒಂದು ದೊಡ್ಡ ವಿಷಯ. ನಮ್ಮ ಎಲ್ಲಾ ಯುವ ಕ್ರೀಡಾಪಟುಗಳು, ಅವರಲ್ಲಿ ಅನೇಕರು ಖೇಲೋ ಇಂಡಿಯಾ ಯೋಜನೆಯ ಮೂಲಕ ಬಂದಿದ್ದರು, ಇದು ಕ್ರೀಡೆಯಲ್ಲಿ ಬಹುದೊಡ್ಡ ಬದಲಾವಣೆ ತರುತ್ತಿದೆ.
ಪ್ರಧಾನಮಂತ್ರಿ: ನೀವು ಖೇಲೋ ಇಂಡಿಯಾದ ಪ್ರತಿಷ್ಠೆಯನ್ನು ಹೆಚ್ಚಿಸಿದರೆ, ಕೇವಲ ರಿಬ್ಬನ್‌ಗಳನ್ನು ಕತ್ತರಿಸುವುದರಿಂದ ಪ್ರತಿಷ್ಠೆ ಬರುವುದಿಲ್ಲ. ನೀವು ಒಬ್ಬ ಸಣ್ಣ ವಿದ್ಯಾರ್ಥಿ, ಚಿಕ್ಕ ಹುಡುಗ, ಯುವ ಆಟಗಾರ ಆಡುವಂತೆ ಆಡಬೇಕು. ಇದು ದೊಡ್ಡ ಕೊಡುಗೆಯಾಗುತ್ತದೆ. ಏಕೆಂದರೆ ನಾವು ಇನ್ನೂ ಹೆಚ್ಚಿನದನ್ನು ಮುಂದುವರಿಸಬೇಕು, ಇನ್ನೂ ಅನೇಕ ಪದಕಗಳನ್ನು ತರಬೇಕು. ಕಾರ್ಗಿಲ್ ವಿಜಯ್ ದಿವಸ್, ಅದು ಯಾರ ಗೆಲುವಾಗಿತ್ತು?
ಆಟಗಾರ: ಆ ದಿನ ಕಾರ್ಗಿಲ್ ದಿನ, ನಾನು ಪಾಕಿಸ್ತಾನದ ವಿರುದ್ಧ ಹೋರಾಡಿದ ದಿನವೂ ಅದೇ ದಿನ. ನಾನು ಭಾರತೀಯ ಸೇನೆಯಿಂದ ಬಂದವನು, ಆದ್ದರಿಂದ ನಾನು ಪಾಕಿಸ್ತಾನವನ್ನು ಸೋಲಿಸಲೇಬೇಕು ಎಂದು ಈಗಾಗಲೇ ನಿರ್ಧರಿಸಿದ್ದೆ. ನಾನು ಪಾಕಿಸ್ತಾನವನ್ನು 5-0 ಅಂತರದಿಂದ ಸೋಲಿಸಿದೆ. ಆ ವಿಜಯವನ್ನು ನಮ್ಮ ಭಾರತೀಯ ಸೇನೆಯ ಕಾರ್ಗಿಲ್ ವೀರರಿಗೆ ಅರ್ಪಿಸಿದೆ.
ಪ್ರಧಾನಮಂತ್ರಿ: ನೀವು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ಸ್ವತಃ ಸೇನೆಯಿಂದ ಬಂದವರಾಗಿರುವುದರಿಂದ, ನೀವು ವ್ಯಕ್ತಪಡಿಸಿದ ಭಾವನೆ - ಕಾರ್ಗಿಲ್ ವಿಜೇತರಿಗೆ ನಿಮ್ಮ ಪದಕವನ್ನು ಅರ್ಪಿಸುವುದು - ಆ ಗೆಲುವಿಗೆ ಮಹತ್ತರವಾದ ವೈಭವವನ್ನು ಸೇರಿಸಿದೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ. ನೀವು ಸೋಲಿಸಲೇಬೇಕಾದ ವ್ಯಕ್ತಿಯನ್ನು ನಿಖರವಾಗಿ ಸೋಲಿಸಿದ್ದೀರಿ.
ಆಟಗಾರ: ಪಾಕಿಸ್ತಾನದ ಬಗ್ಗೆ ಮಾತನಾಡುವುದು ನನಗೆ ಒಂದು ಘಟನೆಯನ್ನು ನೆನಪಿಸುತ್ತದೆ ಸರ್. 2015ರ ವಿಶ್ವ ಮಿಲಿಟರಿ ಕ್ರೀಡಾಕೂಟದಲ್ಲಿ, ನನ್ನ ಮೊದಲ ಹೋರಾಟ ಪಾಕಿಸ್ತಾನದ ವಿರುದ್ಧವಾಗಿತ್ತು. ಮಿಲಿಟರಿ ಜನರು ಕರೆ ಮಾಡಿ, "ಪಾಕಿಸ್ತಾನದ ವಿರುದ್ಧ ಸೋಲಬೇಡಿ" ಎಂದು ಹೇಳಿದರು. ಆದ್ದರಿಂದ ನಾನು ಮೊದಲ ಸುತ್ತನ್ನು 4-1, 2ನೇ ಸುತ್ತನ್ನು 3-2 ಅಂತರದಲ್ಲಿ ಗೆದ್ದೆ. ಆದರೆ ನಮ್ಮಿಬ್ಬರ ತಲೆಗಳು ಡಿಕ್ಕಿಯಾಗಿ ಇಬ್ಬರಿಗೂ ಗಾಯವಾಯಿತು, ನಾವಿಬ್ಬರೂ ಹೊಲಿಗೆಗಾಗಿ ಆಸ್ಪತ್ರೆಗೆ ಹೋದೆವು. ಆದರೆ ನಾನು ಹೋರಾಟದಲ್ಲಿ ಗೆದ್ದೆ.
ಪ್ರಧಾನಮಂತ್ರಿ: ಹೌದು.
ಆಟಗಾರ: ಅದರ ನಂತರ, ಇಬ್ಬರೂ ಹೊಲಿಗೆ ಹಾಕಿಸಿಕೊಳ್ಳಲು ಆಸ್ಪತ್ರೆಗೆ ಹೋದೆವು. ನಂತರ 2014ರಲ್ಲಿ ನೀವು ಮೊದಲು ಪ್ರಧಾನಿಯಾದಾಗ, ನಮ್ಮ ಸೇನಾ ತರಬೇತುದಾರ ನರೇಂದ್ರ ರಾಣಾ. ಅವರು ಸ್ವಲ್ಪ ಹೊತ್ತು ಯೋಚಿಸಿ, "ಸಹೋದರ, ನಾನು ಏನಾದರೂ ಹೇಳಬಹುದೇ?" ಎಂದು ಕೇಳಿದರು. ನಾನು ಹೌದು ಹೇಳಿ ಎಂದೆ. ಅವರು, "ಸಹೋದರ, ನಿಮ್ಮ ಹೆಸರು ನರೇಂದ್ರ, ನಿಮ್ಮ ತರಬೇತುದಾರರ ಹೆಸರು ನರೇಂದ್ರ, ನಿಮ್ಮ ಪ್ರಧಾನಿಯ ಹೆಸರು ನರೇಂದ್ರ. ನಾನು ನರೇಂದ್ರ ಎಂಬ ಹೆಸರನ್ನು ದ್ವೇಷಿಸಲು ಪ್ರಾರಂಭಿಸಿದ್ದೇನೆ" ಎಂದು ಹೇಳಿದರು.
ಪ್ರಧಾನಮಂತ್ರಿ: ನೀವು ಪದಕಗಳ ಸಂಖ್ಯೆಯನ್ನು ಹೆಚ್ಚಿಸಿದ್ದಷ್ಟೇ ಅಲ್ಲ, ನೀವು ಇಡೀ ಪೀಳಿಗೆಯನ್ನು ಸಿದ್ಧಪಡಿಸಿದ್ದೀರಿ.
ಆಟಗಾರ: ನನ್ನ ಹೃದಯ ಜೋರಾಗಿ ಬಡಿದುಕೊಳ್ಳುತ್ತಿದೆ ಸರ್.
ಪ್ರಧಾನಮಂತ್ರಿ: ಚಿಂತಿಸಬೇಡಿ.
ಆಟಗಾರ: ಆದರೂ...
ಪ್ರಧಾನಮಂತ್ರಿ: ನೀವು ಬಯಸಿದರೆ, ನೀವು ಮಾತನಾಡಿದ್ದಕ್ಕೂ ಪದಕ ಪಡೆಯುತ್ತೀರಿ.
ಆಟಗಾರ: ನನ್ನ ಸ್ನೇಹಿತರ ವಲಯದಲ್ಲಿ ಯಾರೋ ಒಬ್ಬರಿಗೆ ನಾನು ಅವರ ಒಳಿತಿಗಾಗಿ ಸಲಹೆ ನೀಡಿದಾಗ, ಅವರು "ನೀವು ಮೋದಿ ಅವರನ್ನು ಭೇಟಿಯಾಗುತ್ತೀರಾ?" ಎಂದು ಕೇಳುತ್ತಿದ್ದರು.
ಪ್ರಧಾನಮಂತ್ರಿ: ಹೌದಾ.
ಆಟಗಾರ: ಹರಿಯಾಣದಲ್ಲಿ ಅವರು, "ನೀವು ಮೋದಿ ಅವರನ್ನು ಭೇಟಿಯಾಗುತ್ತೀರಾ, ಅವರು ನಿಮ್ಮ ಮಾತನ್ನು ಕೇಳುತ್ತಾರೆ?" ಎಂದು ಹೇಳುತ್ತಿದ್ದರು. ಆದ್ದರಿಂದ ಇಂದು ನಾನು ನಿಮ್ಮನ್ನು ಭೇಟಿಯಾಗಿದ್ದೇನೆ ಸರ್. ನಾನು ಅವರಿಗೆ ಹೇಳಬಲ್ಲೆ, ಹೌದು, ನಾನು ಮೋದಿ ಜಿ ಅವರನ್ನು ಭೇಟಿಯಾದೆ.
ಆಟಗಾರ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಾನು ಬೆಳ್ಳಿ ಪದಕ ಗೆದ್ದೆ. ನಂತರ ನಾನು ಸರ್‌ಗೆ ಕ್ರೆಡಿಟ್ ನೀಡಿದ್ದೇನೆ. ಒಮ್ಮೆ ಪದಕ ಗೆಲ್ಲುವುದು ನನ್ನ ಕನಸಾಗಿತ್ತು. ಆದರೆ ತರಬೇತಿ ಕೇಂದ್ರ ಇರಲಿಲ್ಲ. ಭಾರತೀಯ ಕ್ರೀಡಾ ಪ್ರಾಧಿಕಾರ(ಎಸ್ಎಐ) ಸೇರಿದ ನಂತರ, ನಾನು ಕಠಿಣ ತರಬೇತಿ ಪಡೆದು ಪದಕ ಗೆದ್ದೆ. ಹಾಗಾಗಿ ನಾನು ಸಂತೋಷದಿಂದ ಸರ್‌ಗೆ ಕ್ರೆಡಿಟ್ ನೀಡಿದ್ದೇನೆ, ಏಕೆಂದರೆ ನಾನು ಬಹಳಷ್ಟು ಸುಧಾರಿಸಿದೆ.
ಪ್ರಧಾನಮಂತ್ರಿ: ನನಗೆ ಇದು ಬಹಳ ಗೌರವದ ವಿಷಯ. ನೀವು ಕಷ್ಟಪಟ್ಟು ಕೆಲಸ ಮಾಡಿದ್ದೀರಿ ಮತ್ತು ನೀವು ನನ್ನನ್ನು ನೆನಪಿಸಿಕೊಂಡಿದ್ದೀರಿ. ನಾನು ತುಂಬಾ ಕೃತಜ್ಞನಾಗಿದ್ದೇನೆ ನನ್ನ ಸ್ನೇಹಿತ.
ಪ್ರಧಾನಮಂತ್ರಿ: ನೀವು ವಾರಣಾಸಿಯಲ್ಲಿ ಅಭ್ಯಾಸ ಮಾಡುತ್ತಿದ್ದಿರಿ, ಸರಿಯೇ?
ಆಟಗಾರ: ಹೌದು ಸರ್.
ಪ್ರಧಾನಮಂತ್ರಿ: ಕ್ರೀಡಾಂಗಣ ಹೇಗಿದೆ?
ಆಟಗಾರ: ಸರ್, ಚೆನ್ನಾಗಿದೆ. ನಾನು ದೇವಸ್ಥಾನಕ್ಕೆ ಹೋಗಿದ್ದರಿಂದ 10-12 ದಿನಗಳ ತರಬೇತಿಗಾಗಿ ಅಲ್ಲಿಗೆ ಹೋಗಿದ್ದೆ, ಆದ್ದರಿಂದ ನಾನು ಅಲ್ಲಿ ತರಬೇತಿ ಪಡೆದೆ. ನಾನು ಅಲ್ಲಿಯೇ ನೆಲೆಸಲು ಬಯಸುತ್ತೇನೆ, ಏಕೆಂದರೆ ನನಗೆ ಕಾಶಿ ವಿಶ್ವನಾಥ ತುಂಬಾ ಇಷ್ಟ, ಸರ್.
ಪ್ರಧಾನಮಂತ್ರಿ: ನೀವು ಭೋಪಾಲ್‌ನಲ್ಲಿ ತರಬೇತಿ ಪಡೆಯುತ್ತಿದ್ದಿರಿ, ಸರಿಯೇ?
ಆಟಗಾರ: ಹೌದು ಸರ್.
ಪ್ರಧಾನಮಂತ್ರಿ: ನೀವು ಉಜ್ಜಯಿನಿಗೆ ಹೋಗಿದ್ದೀರಾ?
ಆಟಗಾರ: ಹೌದು ಸರ್, ನಾನು ಉಜ್ಜಯಿನಿಗೆ ಹೋಗಿದ್ದೆ.
ಪ್ರಧಾನಮಂತ್ರಿ: ಸರಿ, ಮಹಾಕಾಲದ ಬಳಿಗೆ ಹೋಗಿದ್ದಿರಾ.
ಆಟಗಾರ: ಹೌದು ಸರ್.
ಪ್ರಧಾನಮಂತ್ರಿ: ನೀವು ಒಮ್ಮೆ ಕಾಶಿ ವಿಶ್ವನಾಥನ ಬಳಿ ಹೋಗಿದ್ದೀರಿ.
ಆಟಗಾರ: ಹೌದು ಸರ್.
ಪ್ರಧಾನಮಂತ್ರಿ: ಈಗ ಶ್ರಾವಣ ಮಾಸ.
ಆಟಗಾರ: ನಾನು ಮನೆಗೆ ಹೋಗಿ ನಂತರ ಅಲ್ಲಿಗೆ ಹೋಗುತ್ತೇನೆ ಸರ್.
ಪ್ರಧಾನಮಂತ್ರಿ: ಸರಿ.
ಆಟಗಾರ: ಎಸ್ಎಐ ಕೂಡ ನನಗೆ ತುಂಬಾ ಬೆಂಬಲ ನೀಡಿದೆ ಸರ್. ಹಾಗಿಗಿಯೇ ನಾನು ಇಲ್ಲಿ. ತನಕ ತಲುಪಲು ಸಾಧ್ಯವಾಗಿದೆ. ನಾನು 2018ರಲ್ಲಿ ಖೇಲೋ ಇಂಡಿಯಾ ಯೋಜನೆಯಲ್ಲಿದ್ದೆ, ಅದು ಮೊದಲ ಖೇಲೋ ಇಂಡಿಯಾ. ನಾನು ಅಲ್ಲಿ ಬೆಳ್ಳಿ ಪದಕ ಗೆದ್ದೆ. ಉದ್ಘಾಟನಾ ಸಮಾರಂಭದಲ್ಲಿ ನಿಮ್ಮನ್ನು ನೋಡಿದೆ. ನಾನು ಅಲ್ಲಿ ಪದಕ ಗೆದ್ದೆ, ಯೋಜನೆಯನ್ನು ಪಡೆದುಕೊಂಡೆ. ಅದರಿಂದಾಗಿ ನಾನು ಇಲ್ಲಿಯ ತನಕ ತಲುಪಲು ಸಾಧ್ಯವಾಗಿದೆ ಸರ್.
ಪ್ರಧಾನಮಂತ್ರಿ: ಕ್ರೀಡಾ ವ್ಯವಸ್ಥೆಗಳು ಒಂದು ವಿಷಯ, ಆದರೆ ದೇಶದಲ್ಲಿ ಕ್ರೀಡಾ ಸಂಸ್ಕೃತಿ ನಿರ್ಮಿಸಿದಾಗ ದೇಶ ಪದಕಗಳನ್ನು ಗೆಲ್ಲುತ್ತದೆ. ಸ್ನೇಹಿತರೆ, ನೀವು ಉತ್ತಮ ಕೆಲಸ ಮಾಡಿದ್ದೀರಿ. ನೀವು ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ. ನಾನು ನಿಮ್ಮನ್ನು ತುಂಬಾ ಅಭಿನಂದಿಸುತ್ತೇನೆ. ನನ್ನನ್ನು ನಂಬಿರಿ, ಭವಿಷ್ಯದಲ್ಲಿಯೂ ನೀವು ವಿಜಯಶಾಲಿಯಾಗುತ್ತೀರಿ, ಮತ್ತೊಮ್ಮೆ ನಾವು ಇಲ್ಲಿ ಭೇಟಿಯಾಗುತ್ತೇವೆ. ತುಂಬು ಧನ್ಯವಾದಗಳು. ಶುಭಾಶಯಗಳು.
ಪ್ರಧಾನಮಂತ್ರಿ: ನೀವು ದೇಶಕ್ಕಾಗಿ ಪದಕವನ್ನು ತಂದಿರುವುದು ಇದು ಸತತ 3ನೇ ಬಾರಿ.
ಆಟಗಾರ: ಧನ್ಯವಾದಗಳು ಸರ್.
ಪ್ರಧಾನಮಂತ್ರಿ: ಆಶೀರ್ವಾದಗಳು, ಮಗು.
ಆಟಗಾರ: ತುಂಬು ಧನ್ಯವಾದಗಳು. ಸರ್ ಅವರ ಕೈಯಿಂದ ನಾನು ಲಡ್ಡು ತಿನ್ನುತ್ತಿದ್ದೇನೆ. ನಿನ್ನೆ ನನ್ನ ಹುಟ್ಟುಹಬ್ಬ, ಆದ್ದರಿಂದ ಇಂದು ಸರ್ ಅವರ ಕೈಯಿಂದ...
ಪ್ರಧಾನಮಂತ್ರಿ: ಅಭಿನಂದನೆಗಳು, ಅದ್ಭುತ.
ಪ್ರಧಾನಮಂತ್ರಿ: ನಗುವಿರಲಿ, ನನ್ನ ಸ್ನೇಹಿತ.
ಪ್ರಧಾನಮಂತ್ರಿ: ಯಾರು ಆಡಿದರೂ ಅರಳುತ್ತಾರೆ( ಜೋ ಖೇಲೆಗಾ, ವೋ ಖೇಲೆಗಾ).
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
(रिलीज़ आईडी: 2298759)
आगंतुक पटल : 9
इस विज्ञप्ति को इन भाषाओं में पढ़ें:
English
,
Urdu
,
हिन्दी
,
Bengali
,
Bengali-TR
,
Manipuri
,
Assamese
,
Punjabi
,
Gujarati
,
Telugu
,
Malayalam