ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಉಮಂಗ್ ಮತ್ತು ಡಿಜಿಲಾಕರ್ ಮೂಲಕ ನಾಗರಿಕ-ಸ್ನೇಹಿ ಡಿಜಿಟಲ್ ಸಾರ್ವಜನಿಕ ಸೇವಾ ವಿತರಣೆಯನ್ನು ವಿಸ್ತರಿಸಿದ ಕೇಂದ್ರ ಸರ್ಕಾರ
प्रविष्टि तिथि:
12 AUG 2026 1:40PM by PIB Bengaluru
ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸುವ ಮತ್ತು ನಾಗರಿಕರನ್ನು ಸಬಲೀಕರಣಗೊಳಿಸುವ ಗೌರವಾನ್ವಿತ ಪ್ರಧಾನಮಂತ್ರಿ ಅವರ ದೂರದೃಷ್ಟಿಗೆ ಅನುಗುಣವಾಗಿ, ಭಾರತ ಸರ್ಕಾರವು 2015ರ ಜುಲೈ ನಲ್ಲಿ ಡಿಜಿಟಲ್ ಇಂಡಿಯಾ ಕಾರ್ಯಕ್ರಮ ಆರಂಭಿಸಿತು. ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ, ಸರ್ಕಾರವು ಡಿಜಿಟಲ್ ಲಭ್ಯತೆಯನ್ನು ಸುಧಾರಿಸಲು ಮತ್ತು ಉಮಂಗ್ (ನವಯುಗ ಆಡಳಿತಕ್ಕಾಗಿ ಏಕೀಕೃತ ಮೊಬೈಲ್ ಅಪ್ಲಿಕೇಷನ್) ಮತ್ತು ಡಿಜಿಲಾಕರ್ ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಂತೆ ಅಡೆತಡೆರಹಿತ ನಾಗರಿಕ-ಸ್ನೇಹಿ ಸೇವಾ ವಿತರಣೆಯನ್ನು ಖಾತ್ರಿಪಡಿಸಿಕೊಳ್ಳಲು ಹಲವು ಉಪಕ್ರಮಗಳನ್ನು ಕೈಗೊಂಡಿದೆ.
2026ರ ಜುಲೈ 31ರಂತೆ ಭಾರತದಾದ್ಯಂತ ಸುಮಾರು 2,575 ಸೇವೆಗಳು [ಕೇಂದ್ರ ಸರ್ಕಾರ: 880; ರಾಜ್ಯ ಸರ್ಕಾರ: 1695] ಉಮಂಗ್ (ನವಯುಗ ಆಡಳಿತಕ್ಕಾಗಿ ಏಕೀಕೃತ ಮೊಬೈಲ್ ಅಪ್ಲಿಕೇಶನ್) ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ ಮತ್ತು 5,437 ದಾಖಲೆ ಪ್ರಕಾರಗಳು/ಸೇವೆಗಳು [ಕೇಂದ್ರ ಸರ್ಕಾರ: 661; ರಾಜ್ಯ ಸರ್ಕಾರ: 4,776] ಡಿಜಿಲಾಕರ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ.
ಉಮಂಗ್ ಕಳೆದ 3 ವರ್ಷಗಳಲ್ಲಿ ಸುಮಾರು 798 ಕೋಟಿ ವಹಿವಾಟುಗಳನ್ನು ಕಂಡಿರುವ 11.66 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿದೆ, ಮತ್ತು ಡಿಜಿಲಾಕರ್ ಕಳೆದ 3 ವರ್ಷಗಳಲ್ಲಿ 72.43 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿದೆ ಮತ್ತು ಸುಮಾರು 72.86 ಕೋಟಿ ದಾಖಲೆಯ ವಹಿವಾಟುಗಳನ್ನು ಹೊಂದಿದೆ.
ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಡಿಜಿಟಲ್ ಲಭ್ಯತೆಯನ್ನು ಸುಧಾರಿಸಲು ಸರ್ಕಾರ ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್‌ಸಿ) ಜಾಲವನ್ನು ವಿಸ್ತರಿಸಿದೆ. ಸಿಎಸ್‌ಸಿಗಳು ನಾಗರಿಕ ಕೇಂದ್ರಿತ ಡಿಜಿಟಲ್ ಸೇವೆಗಳನ್ನು ಒದಗಿಸುತ್ತವೆ. ಇವುಗಳಲ್ಲಿ ಸರ್ಕಾರ, ಬ್ಯಾಂಕಿಂಗ್, ಹಣಕಾಸು, ವಿಮೆ, ಪಿಂಚಣಿ ಮತ್ತು ಉಪಯುಕ್ತತೆ ಪಾವತಿ ಸೇವೆಗಳು ಸೇರಿವೆ. 2026ರ ಜೂನ್ 30 ರಂತೆ, 4,07,122 ಸಿಎಸ್‌ಸಿಗಳು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಅವುಗಳಲ್ಲಿ 70,069 ಸಿಎಸ್‌ಸಿಗಳನ್ನು ಮಹಿಳಾ ಗ್ರಾಮ ಮಟ್ಟದ ಉದ್ಯಮಿಗಳು ನಿರ್ವಹಿಸುತ್ತಿದ್ದರು.
ಗ್ರಾಮೀಣ, ದೂರದ ಮತ್ತು ಸೇವೆ ಪಡೆಯದ ಪ್ರದೇಶಗಳಲ್ಲಿ ಡಿಜಿಟಲ್ ಲಭ್ಯತೆಯನ್ನು ಸುಧಾರಿಸಲು ಮತ್ತು ತಡೆರಹಿತ ಸೇವಾ ವಿತರಣೆಯನ್ನು ಖಾತ್ರಿಪಡಿಸಿಕೊಳ್ಳಲು ಇತರ ಪ್ರಮುಖ ಕ್ರಮಗಳು ಈ ಕೆಳಗಿನಂತಿವೆ:
- ಮೊಬೈಲ್ ಮತ್ತು ವೆಬ್ ಆಧಾರಿತ ಲಭ್ಯತೆ: ಉಮಂಗ್ ಮತ್ತು ಡಿಟಿಲಾಕರ್ ಎರಡೂ ಪ್ಲಾಟ್‌ಫಾರ್ಮ್‌ಗಳು ಮೊಬೈಲ್ ಅಪ್ಲಿಕೇಷನ್‌ಗಳು ಮತ್ತು ವೆಬ್ ಪೋರ್ಟಲ್‌ಗಳ ಮೂಲಕ ಲಭ್ಯವಿದೆ, ನಾಗರಿಕರು ಯಾವುದೇ ಸಮಯದಲ್ಲಿ ಮತ್ತು ಎಲ್ಲಿಯಾದರೂ ಸರ್ಕಾರಿ ಸೇವೆಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
- ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI) ನೊಂದಿಗೆ ಏಕೀಕರಣ: UMANG ಮತ್ತು DigiLocker ಆಧಾರ್, ಇ-ಸೈನ್, API ಸೇತು ಮತ್ತು ಇತರ ಪ್ರಮುಖ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಂತಹ ಪ್ರಮುಖ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಘಟಕಗಳೊಂದಿಗೆ ಸಂಯೋಜಿಸಲ್ಪಟ್ಟಿದ್ದು, ತಡೆರಹಿತ ಮತ್ತು ಕಾಗದರಹಿತ ಸೇವಾ ವಿತರಣೆಯನ್ನು ಸಕ್ರಿಯಗೊಳಿಸುತ್ತದೆ.
- ಸುರಕ್ಷಿತ ಮತ್ತು ಕಾಗದರಹಿತ ಆಡಳಿತ: ಎರಡೂ ಪ್ಲಾಟ್‌ಫಾರ್ಮ್‌ಗಳು ಸುರಕ್ಷಿತ ದೃಢೀಕರಣ, ಡಿಜಿಟಲ್ ದಾಖಲೆ ಪರಿಶೀಲನೆ ಮತ್ತು ಒಪ್ಪಿಗೆ ಆಧಾರಿತ ಹಂಚಿಕೆಯನ್ನು ಒದಗಿಸುತ್ತವೆ, ಪರಿಣಾಮಕಾರಿ ಸೇವಾ ವಿತರಣೆಯನ್ನು ಖಚಿತಪಡಿಸುವಾಗ ಭೌತಿಕ ಭೇಟಿಗಳು ಮತ್ತು ಕಾಗದ ಆಧಾರಿತ ಪ್ರಕ್ರಿಯೆಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ.
- ಡಿಜಿಟಲ್ ಸಾಕ್ಷರತೆ ಮತ್ತು ಜಾಗೃತಿ: ಸರ್ಕಾರವು PMGDISHA (ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ) ನಂತಹ ಉಪಕ್ರಮಗಳ ಮೂಲಕ ಡಿಜಿಟಲ್ ಸಾಕ್ಷರತೆಯನ್ನು ಉತ್ತೇಜಿಸುತ್ತದೆ ಮತ್ತು ಡಿಜಿಟಲ್ ವೇದಿಕೆಗಳ ಬಳಕೆಯನ್ನು ಉತ್ತೇಜಿಸಲು ಜಾಗೃತಿ ಅಭಿಯಾನಗಳನ್ನು ನಡೆಸುತ್ತದೆ.
- ಬಹುಭಾಷಾ ಮತ್ತು ಲಭ್ಯವಿರಬಹುದಾದ ಸೇವೆಗಳು: UMANG ಮತ್ತು DigiLocker ಬಹು ಭಾರತೀಯ ಭಾಷೆಗಳಲ್ಲಿ ಸೇವೆಗಳನ್ನು ನೀಡುತ್ತದೆ ಮತ್ತು ಡಿಜಿಟಲ್ ಸೇವೆಗಳನ್ನು ಹೆಚ್ಚು ಒಳಗೊಳ್ಳುವಂತೆ ಮಾಡಲು ಪ್ರವೇಶ ಮತ್ತು ಬಳಕೆದಾರ ಅನುಭವವನ್ನು ನಿರಂತರವಾಗಿ ಸುಧಾರಿಸುತ್ತದೆ.
- ಸೇವೆಗಳ ನಿರಂತರ ವಿಸ್ತರಣೆ: ಸರ್ಕಾರಿ ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳು ಉಮಾಂಗ್ ಮತ್ತು ಡಿಜಿಲಾಕರ್‌ನಲ್ಲಿ ಹೆಚ್ಚಿನ ನಾಗರಿಕ ಕೇಂದ್ರಿತ ಸೇವೆಗಳು ಮತ್ತು ಡಿಜಿಟಲ್ ದಾಖಲೆಗಳನ್ನು ಸಂಯೋಜಿಸಲು ನಿಯಮಿತವಾಗಿ ಕಾರ್ಯಪ್ರವೃತ್ತವಾಗಿವೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿರುವ ಉತ್ತರದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ವಾರ್ತಾ ಮತ್ತು ಪ್ರಸಾರ, ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು 2026ರ ಆ.07 ರಂದು ಈ ಮಾಹಿತಿಯನ್ನು ನೀಡಿದರು.
*****
(रिलीज़ आईडी: 2298222)
आगंतुक पटल : 25