ರೈಲ್ವೇ ಸಚಿವಾಲಯ
azadi ka amrit mahotsav

ಕಪುರ್ತಲಾದ ರೈಲು ಬೋಗಿ ಕಾರ್ಖಾನೆಯಿಂದ ಬಾಂಗ್ಲಾದೇಶ ರೈಲ್ವೆಗೆ ಮೊದಲ ರೇಕ್‌ ಎಲ್‌ಎಚ್‌ಬಿ ಬೋಗಿಗಳನ್ನು ಹೊರತರಲಿದೆ

ಪ್ರಕಟಣಾ ದಿನಾಂಕ: 11 AUG 2026 8:09PM by PIB Bengaluru

ಕಪುರ್ತಲಾದ ರೈಲು ಬೋಗಿ ಕಾರ್ಖಾನೆಯು 2026 ರ ಆಗಸ್ಟ್‌ 12ರಂದು ಬಾಂಗ್ಲಾದೇಶ ರೈಲ್ವೆಗಾಗಿ 19 ಎಲ್‌ಎಚ್‌ಬಿ ಬ್ರಾಡ್‌ ಗೈಜ್‌ ಪ್ರಯಾಣಿಕರ ಬೋಗಿಗಳನ್ನು ಒಳಗೊಂಡ ಮೊದಲ ರೇಕ್‌ಅನ್ನು ಹೊರತರುವುದರೊಂದಿಗೆ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಲು ಸಜ್ಜಾಗಿದೆ.

ಮೊದಲ ರೇಕ್‌ 03 ಎಸಿ ಸ್ಲೀಪರ್‌ಕಾರ್‌ಗಳು, 03 ಎಸಿ ಚೇರ್‌ಕಾರ್‌ಗಳು, 11 ನಾನ್‌-ಎಸಿ ಚೇರ್‌ಕಾರ್‌ಗಳು ಮತ್ತು 02 ಪವರ್‌ಕಾರ್‌ಗಳನ್ನು ಒಳಗೊಂಡಿದೆ. ಈ ಬೋಗಿಗಳು ಹಲವಾರು ವಿಶಿಷ್ಟ ವಿನ್ಯಾಸ ವೈಶಿಷ್ಟ ್ಯಗಳು ಮತ್ತು ಮಾರ್ಪಾಡುಗಳನ್ನು ಒಳಗೊಂಡಿವೆ, ಅವುಗಳಲ್ಲಿಅನೇಕವನ್ನು ಮೊದಲ ಬಾರಿಗೆ ಎಲ್‌ಎಚ್‌ಬಿ ಮಾದರಿಯ ಬೋಗಿಗಳಲ್ಲಿಅಭಿವೃದ್ಧಿಪಡಿಸಲಾಗಿದೆ.

ಬಾಂಗ್ಲಾದೇಶ ರೈಲ್ವೆಯ ಕಾರ್ಯಾಚರಣೆ ಮತ್ತು ಪ್ರಯಾಣಿಕರ ಅಗತ್ಯಗಳನ್ನು ಪೂರೈಸಲು ಬೋಗಿಗಳನ್ನು ವಿಶೇಷವಾಗಿ ಕಸ್ಟಮೈಸ್‌(ವಿನ್ಯಾಸ) ಮಾಡಲಾಗಿದೆ. ಆಸನ ವ್ಯವಸ್ಥೆಯು ಸ್ಟೇನ್ಲೆಸ್‌ ಸ್ಟೀಲ್‌ ಆರ್ಮ್‌ರೆಸ್‌ಟ್‌ಗಳು ಮತ್ತು ಸ್ಟೇನ್ಲೆಸ್‌ ಸ್ಟೀಲ್‌ ಫುಟ್ರೆಸ್‌ಗಳೊಂದಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಒರಗುವ ಕುರ್ಚಿಗಳನ್ನು ಒಳಗೊಂಡಿದೆ. ಇದು ಪ್ರಯಾಣಿಕರ ಆರಾಮಕ್ಕಾಗಿ ಅನೇಕ ಒರಗುವ ಸ್ಥಾನಗಳನ್ನು ನೀಡುತ್ತದೆ. ಹವಾನಿಯಂತ್ರಿತ ಬೋಗಿಗಳಲ್ಲಿನ ಫ್ಯಾನ್‌ಗಳು, ಸಮಗ್ರ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ, ಪ್ರಯಾಣಿಕರ ಎಚ್ಚರಿಕೆ ವ್ಯವಸ್ಥೆ, ಭಾಗಶಃ ತೆರೆಯಬಹುದಾದ ಕಿಟಕಿಗಳು, ಶಿಶು ಆರೈಕೆ ಕೊಠಡಿ ಮತ್ತು ಪ್ರಾರ್ಥನಾ ಕೊಠಡಿ ಸೇರಿದಂತೆ ಹಲವಾರು ಪ್ರಯಾಣಿಕ ಕೇಂದ್ರಿತ ವೈಶಿಷ್ಟ ್ಯಗಳನ್ನು ಬೋಗಿಗಳು ಸಜ್ಜುಗೊಳಿಸಿವೆ. ನಿರ್ದಿಷ್ಟ ಕಾರ್ಯಾಚರಣಾ ಪರಿಸ್ಥಿತಿಗಳನ್ನು ಪರಿಗಣಿಸಿ, ಹೆಚ್ಚಿನ ದಟ್ಟಣೆಯ ಅವಧಿಯಲ್ಲಿಮೇಲ್ಛಾವಣಿಯ ಮೇಲೆ ಪ್ರಯಾಣಿಸುವ ಪ್ರಯಾಣಿಕರಿಂದ ಉಂಟಾಗುವ ಹೆಚ್ಚುವರಿ ಲೋಡಿಂಗ್‌ಅನ್ನು ತಡೆದುಕೊಳ್ಳಲು ಮೇಲ್ಛಾವಣಿಯ ರಚನೆಯನ್ನು ಬಲಪಡಿಸಲಾಗಿದೆ.

ಯುರೋಪಿಯನ್‌ ಸ್ಟಾ ್ಯಂಡರ್ಡ್‌ ಇಎನ್‌ 15227 ಗೆ ಅನುಸಾರವಾಗಿ ಕ್ರ್ಯಾಶ್‌ ವರ್ಥ್‌ ವಿನ್ಯಾಸ ನಿಬಂಧನೆಗಳನ್ನು ಸಂಯೋಜಿಸುವುದು ಒಂದು ಪ್ರಮುಖ ತಾಂತ್ರಿಕ ವೈಶಿಷ್ಟ ವಾಗಿದೆ. ಘರ್ಷಣೆಯ ಕಾರ್ಯಕ್ಷ ಮತೆ ಮತ್ತು ಪ್ರಯಾಣಿಕರ ಸುರಕ್ಷ ತೆಯನ್ನು ಹೆಚ್ಚಿಸಲು ಕಾರ್‌ಬಾಡಿ ಶೆಲ್‌ನ ಸಮಗ್ರ ಮರುವಿನ್ಯಾಸದ ಅಗತ್ಯವಿತ್ತು. ಭಾರತೀಯ ರೈಲ್ವೆ ಬೋಗಿಗಳಲ್ಲಿಬಳಸುವ ಸಾಂಪ್ರದಾಯಿಕ 750 ವಿ ವ್ಯವಸ್ಥೆಗೆ ಬದಲಾಗಿ ಈ ಬೋಗಿಗಳ ಎಲೆಕ್ಟ್ರಿಕಲ್‌ ವ್ಯವಸ್ಥೆಯನ್ನು 415 ವಿ ಕಾರ್ಯಾಚರಣೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಆರ್‌.ಸಿ.ಎಫ್‌. ಮತ್ತು ಬಾಂಗ್ಲಾದೇಶ ರೈಲ್ವೆ ನಡುವಿನ ಸಂಬಂಧವು 2015-16ರ ಅವಧಿಯಲ್ಲಿ120 ಎಲ್‌.ಎಚ್‌.ಬಿ. ಬ್ರಾಡ್‌ ಗೇಜ್‌ ಪ್ರಯಾಣಿಕರ ಬೋಗಿಗಳನ್ನು ಯಶಸ್ವಿಯಾಗಿ ಪೂರೈಸುವುದರೊಂದಿಗೆ ಪ್ರಾರಂಭವಾಯಿತು. ಈ ಯಶಸ್ವಿ ಪಾಲುದಾರಿಕೆಯ ಆಧಾರದ ಮೇಲೆ, ಬಾಂಗ್ಲಾದೇಶ ರೈಲ್ವೆಯು ಮತ್ತೊಮ್ಮೆ ರೈಟ್ಸ… ಮೂಲಕ 200 ಬ್ರಾಡ್‌ ಗೇಜ್‌ ಪ್ರಯಾಣಿಕರ ಬೋಗಿಗಳ ಏಳು ರೂಪಾಂತರಗಳಲ್ಲಿ200 ಬ್ರಾಡ್‌ ಗೇಜ್‌ ಪ್ರಯಾಣಿಕರ ಬೋಗಿಗಳ ತಯಾರಿಕೆ ಮತ್ತು ಪೂರೈಕೆಗಾಗಿ ಪ್ರತಿಷ್ಠಿತ ಆದೇಶವನ್ನು ಆರ್‌ಸಿಎಫ್‌ಗೆ ವಹಿಸಿತು.

 

*****


(ಪ್ರಕಟಣೆ ಐ.ಡಿ.: 2298015) ವಿಸಿಟರ್ ಕೌಂಟರ್ : 64
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Gujarati , Odia , Tamil , Telugu