ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಗಸ್ಟ್ 12ರಂದು ಮಾಜಿ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರ ಆತ್ಮಚರಿತ್ರೆ ಬಿಡುಗಡೆ ಮಾಡಲಿರುವ ಪ್ರಧಾನಮಂತ್ರಿ


ಆತ್ಮಚರಿತ್ರೆಯ ಶೀರ್ಷಿಕೆ: "ಭಾರತೀಯ ಗಣರಾಜ್ಯದ ವಿಜಯ - ನನ್ನ ಜೀವನ, ನನ್ನ ಹೋರಾಟಗಳು"

प्रविष्टि तिथि: 11 AUG 2026 1:22PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಆಗಸ್ಟ್ 12ರಂದು ಬೆಳಗ್ಗೆ 9:30ಕ್ಕೆ ನವದೆಹಲಿಯ ವಿಜ್ಞಾನ ಭವನದಲ್ಲಿ "ಭಾರತೀಯ ಗಣರಾಜ್ಯದ ವಿಜಯ: ನನ್ನ ಜೀವನ, ನನ್ನ ಹೋರಾಟಗಳು" ಶೀರ್ಷಿಕೆಯ ಭಾರತದ ಮಾಜಿ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರ ಆತ್ಮಚರಿತ್ರೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಧಾನಮಂತ್ರಿ ಅವರಿಂದ ಆತ್ಮಚರಿತ್ರೆ ಬಿಡುಗಡೆಯು ಭಾರತದ ಅತ್ಯಂತ ಪ್ರತಿಷ್ಠಿತ ಸಾರ್ವಜನಿಕ ವ್ಯಕ್ತಿಗಳಲ್ಲಿ ಒಬ್ಬರ ಜೀವನ ಮತ್ತು ಕೊಡುಗೆಗಳನ್ನು ಆಚರಿಸುವ ಮಹತ್ವದ ಸಂದರ್ಭವಾಗಿದೆ. ಆತ್ಮಚರಿತ್ರೆಯು ಶ್ರೀ ರಾಮ್ ನಾಥ್ ಕೋವಿಂದ್ ಅವರ ಗಮನಾರ್ಹ ಜೀವನ ಪಯಣದ ಬಗ್ಗೆ ಆಳವಾದ ವೈಯಕ್ತಿಕ ವಿವರಣೆಯನ್ನು ನೀಡುತ್ತದೆ, ಅವರ ಆರಂಭಿಕ ವರ್ಷಗಳಿಂದ ಹಿಡಿದು ಅವರ ವಿಶಿಷ್ಟ ಸಾರ್ವಜನಿಕ ಜೀವನ ಮತ್ತು ಅಂತಿಮವಾಗಿ ಭಾರತದ 14ನೇ ರಾಷ್ಟ್ರಪತಿಯಾಗಿ ಅವರ ಸೇವೆಯವರೆಗಿನ ಅವರ ಅನುಭವಗಳು, ಹೋರಾಟಗಳು ಹಾಗೂ ಸಾಧನೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಕೋವಿಂದ್‌ ಅವರ ಪ್ರಯಾಣ ಮತ್ತು ಸಾರ್ವಜನಿಕ ಸೇವೆಯನ್ನು ರೂಪಿಸಿದ ಮೌಲ್ಯಗಳು, ಅನುಭವಗಳು ಮತ್ತು ಸಂದರ್ಭಗಳ ಒಳನೋಟಗಳನ್ನು ಪುಸ್ತಕವು ಒದಗಿಸಲಿದೆ.

 

*****


(रिलीज़ आईडी: 2297544) आगंतुक पटल : 55
इस विज्ञप्ति को इन भाषाओं में पढ़ें: Assamese , Bengali , Bengali-TR , Odia , English , Manipuri , Urdu , Marathi , हिन्दी , Punjabi , Gujarati , Tamil , Telugu , Malayalam