ಸಂವಹನ ಸಚಿವಾಲಯ
azadi ka amrit mahotsav

ಗ್ರಾಹಕ ಉಪಯುಕ್ತತೆಗಳು, ಖಾಸಗಿ ಅಂಚೆ ಮತ್ತು ಸಾಗಣಿಕೆ ವಲಯದ ಘಟಕಗಳಿಂದ ಸೇವೆ ಮತ್ತು ವಹಿವಾಟು ಕರೆಗಳಿಗಾಗಿ 1601-ಸರಣಿಯ ದೂರವಾಣಿ ಸಂಖ್ಯೆಯನ್ನು ಹಂತ-ಹಂತದ ರೀತಿಯಲ್ಲಿ ಅನುಷ್ಠಾನವನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯಿ) ಪ್ರಾರಂಭಿಸಿದೆ

ಪ್ರಕಟಣಾ ದಿನಾಂಕ: 10 AUG 2026 4:28PM by PIB Bengaluru

ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ (ಬಿ.ಎಫ್.ಎಸ್.ಐ.) ವಲಯವನ್ನು ಹೊರತುಪಡಿಸಿ ಇತರ ವಲಯಗಳಲ್ಲಿನ ಸಂಸ್ಥೆಗಳು ಮತ್ತು 1600 ಸರಣಿಯ ದೂರವಾಣಿ ಸಂಖ್ಯೆಗಳನ್ನು ಬಳಸುತ್ತಿರುವ ಸರ್ಕಾರಿ ಸಂಸ್ಥೆಗಳು ವಹಿವಾಟು ಮತ್ತು ಸೇವಾ ಕರೆಗಳಿಗೆ 1601 ಸರಣಿ ಸಂಖ್ಯೆಗಳ ಬಳಕೆಯ ಕುರಿತು ಈ ಹಿಂದೆ ನೀಡಲಾದ ನಿರ್ದೇಶನವನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯಿ) ಇಂದು ಹೊರಡಿಸಿದೆ. ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ (ಬಿ.ಎಫ್.ಎಸ್.ಐ.) ವಲಯ ಮತ್ತು ಸರ್ಕಾರದಲ್ಲಿನ ಸಂಸ್ಥೆಗಳು ಮಾಡುವ ಸಂವಹನಗಳ ನಿರ್ಣಾಯಕ ಮತ್ತು ಸೂಕ್ಷ್ಮ ಸ್ವರೂಪವನ್ನು ಪರಿಗಣಿಸಿ, ಪ್ರಮುಖ ಹಣಕಾಸು ಧ್ವನಿ ಕರೆಗಳನ್ನು ಸೇವೆ ಮತ್ತು ಇತರ ವಲಯಗಳಿಂದ ವಹಿವಾಟು ಕರೆಗಳೊಂದಿಗೆ ಬೆರೆಸುವುದನ್ನು ತಪ್ಪಿಸಲು ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ (ಬಿ.ಎಫ್.ಎಸ್.ಐ.)  ಮತ್ತು ಸರ್ಕಾರವನ್ನು ಹೊರತುಪಡಿಸಿ ಇತರ ವಲಯಗಳಿಗೆ ಈ ಪ್ರತ್ಯೇಕ ಸರಣಿಯನ್ನು ನೀಡಲಾಗಿದೆ.

ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ (ಬಿ.ಎಫ್.ಎಸ್.ಐ.)  ವಲಯದ ಘಟಕಗಳು ಸೇವೆ ಮತ್ತು ವಹಿವಾಟು ಕರೆಗಳಿಗಾಗಿ 1600-ಸರಣಿ ಸಂಖ್ಯೆಗಳನ್ನು ವ್ಯಾಪಕವಾಗಿ ಅಳವಡಿಸಿಕೊಂಡ ನಂತರ, ಇದು ಇತರ ವಲಯಗಳಿಗೂ ವಿಶ್ವಾಸಾರ್ಹ ಸಂಖ್ಯೆಯ ಚೌಕಟ್ಟನ್ನು ವಿಸ್ತರಿಸಲು ಅಮೂಲ್ಯವಾದ ಅನುಭವವನ್ನು ಒದಗಿಸಿದೆ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯಿ) ಈಗ ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ (ಬಿ.ಎಫ್.ಎಸ್.ಐ.) ವಲಯ ಮತ್ತು ಸರ್ಕಾರವನ್ನು ಹೊರತುಪಡಿಸಿ ಇತರ ವಲಯಗಳಲ್ಲಿನ ಘಟಕಗಳಿಂದ ಇದೇ ರೀತಿಯ ಕರೆಗಳಿಗಾಗಿ ಡಿ.ಒ.ಟಿ.ಯಿಂದ ನಿಗದಿಪಡಿಸಲಾದ 1601-ಸರಣಿಯ ದೂರವಾಣಿ ಸಂಖ್ಯೆಗಳನ್ನು ಹಂತವಾರು ರೀತಿಯಲ್ಲಿ ಅನುಷ್ಠಾನ ಕಾರ್ಯವನ್ನು ಪ್ರಾರಂಭಿಸಿದೆ. ಪಾಲುದಾರರೊಂದಿಗೆ ಸಮಾಲೋಚನೆಯ ಆಧಾರದ ಮೇಲೆ, ಹಂತ-I ಅಡಿಯಲ್ಲಿ ಉಪಯುಕ್ತತೆಗಳು, ಖಾಸಗಿ ಅಂಚೆ(ಕೊರಿಯರ್) ಮತ್ತು ಸಾಗಣಿಕೆ(ಲಾಜಿಸ್ಟಿಕ್ಸ್ )ವಲಯಗಳಲ್ಲಿನ ಘಟಕಗಳನ್ನು ಒಳಗೊಂಡಂತೆ ಸರಣಿಯನ್ನು ಕಾರ್ಯಗತಗೊಳಿಸಲು ನಿರ್ಧರಿಸಲಾಗಿದೆ.

1601-ಸರಣಿ ಸಂಖ್ಯೆಗಳನ್ನು ದೂರಸಂಪರ್ಕ ಸೇವಾ ಪೂರೈಕೆದಾರರು (ಟಿ.ಎಸ್.ಪಿ) ಸರಿಯಾದ ಪರಿಶೀಲನೆಯ ನಂತರ ಮಧ್ಯವರ್ತಿಗಳು ಅಥವಾ ಸಂಗ್ರಾಹಕರಿಗೆ ಅಲ್ಲ, ಅರ್ಹ ಘಟಕಗಳಿಗೆ ನೇರವಾಗಿ ಹಂಚಲಾಗುತ್ತದೆ. ಆದ್ದರಿಂದ, ಅವರ ಅಳವಡಿಕೆಯು ಸಾಮಾನ್ಯ 10-ಅಂಕಿಯ ಸಂಖ್ಯೆಗಳನ್ನು ಬಳಸುವ ಮತ್ತು ಕಾನೂನುಬದ್ಧ ವ್ಯವಹಾರಗಳನ್ನು ಪ್ರತಿನಿಧಿಸುವುದಾಗಿ ಸುಳ್ಳು ಹೇಳಿಕೊಳ್ಳುವ ವಂಚಕರ ಸೋಗು ಹಾಕುವಿಕೆಯನ್ನು ಎದುರಿಸುವಲ್ಲಿ ಪ್ರಮುಖ ಸಾಧನವಾಗುವ ನಿರೀಕ್ಷೆಯಿದೆ. ಇದಲ್ಲದೆ, ವಿಶಿಷ್ಟ ಸಂಖ್ಯೆಯ ಗುರುತು ಗ್ರಾಹಕರು ಕಾನೂನುಬದ್ಧ ಸೇವೆ ಮತ್ತು ವಹಿವಾಟು ಕರೆಗಳನ್ನು ಸುಲಭವಾಗಿ ಗುರುತಿಸಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ, ಅಂತಹ ಧ್ವನಿ-ಆಧಾರಿತ ಸಂವಹನಗಳಲ್ಲಿ ನಂಬಿಕೆಯನ್ನು ಬಲಪಡಿಸುತ್ತದೆ.

ನಿರ್ದೇಶನದ ಪ್ರಮುಖ ನಿಬಂಧನೆಗಳು

ಎ. ಹಂತ-I ವಲಯಗಳು: 1601-ಸರಣಿಯನ್ನು ಆರಂಭದಲ್ಲಿ ಈ ಕೆಳಗಿನ ವಲಯಗಳಲ್ಲಿನ ಅರ್ಹ ಘಟಕಗಳಿಗೆ ಹಂಚಲಾಗುತ್ತದೆ:

i. ಉಪಯುಕ್ತತೆಗಳು - ವಿದ್ಯುತ್ ವಿತರಣಾ ಕಂಪನಿಗಳು, ನೀರಿನ ಉಪಯುಕ್ತತೆಗಳು, ನಗರ ಅನಿಲ ವಿತರಣಾ ಕಂಪನಿಗಳು, ದವೀಕೃತ ಟಡುಗೆ ಅನಿಲ (ಎಲ್.ಪಿ.ಜಿ.) ವಿತರಣಾ ಘಟಕಗಳು ಮತ್ತು ಅಂತಹ ಇತರ ಉಪಯುಕ್ತತೆ ಸೇವಾ ಪೂರೈಕೆದಾರರು.

ii. ಸಾಗಣಿಕೆ ಮತ್ತು ಖಾಸಗಿ ಅಂಚೆ ಸೇವೆಗಳು - ಕೊರಿಯರ್ ಕಂಪನಿಗಳು, ಎಕ್ಸ್ಪ್ರೆಸ್ ಲಾಜಿಸ್ಟಿಕ್ಸ್ ಕಂಪನಿಗಳು, ಪಾರ್ಸೆಲ್ ವಿತರಣಾ ಸೇವಾ ಪೂರೈಕೆದಾರರು, ಸರಕುಗಳ ವಿತರಣೆಯಲ್ಲಿ ತೊಡಗಿರುವ ಸರಕು ಮತ್ತು ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರು.

ಬಿ. ಕಾಲಮಿತಿಯ ಅಳವಡಿಕೆ

ಆದೇಶವನ್ನು ನೀಡಿದ ದಿನಾಂಕದಿಂದ 90 ದಿನಗಳ ಒಳಗೆ ಹಂತ-I ಅಡಿಯಲ್ಲಿ ಬರುವ ಅರ್ಹ ಘಟಕಗಳ ವಲಸೆ ಮತ್ತು ಅಳವಡಿಕೆಯನ್ನು ಪೂರ್ಣಗೊಳಿಸಲು ಟೆಲಿಕಾಂ ಸೇವಾ ಪೂರೈಕೆದಾರರನ್ನು (ಟಿ.ಎಸ್. ಪಿ.ಗಳು) ತಿಳಿಸಲಾಗಿದೆ.

ಸಿ. ಪರಿಶೀಲನೆ ಮತ್ತು ವಿಶೇಷ ಬಳಕೆ

ಟೆಲಿಕಾಂ ಸೇವಾ ಪೂರೈಕೆದಾರರುಗಳು (ಟಿ.ಎಸ್.ಪಿ.) 1601-ಸರಣಿ ಸಂಖ್ಯೆಗಳನ್ನು ನಿಯೋಜಿಸುವ ಮೊದಲು ಘಟಕಗಳ ಅರ್ಹತೆಯನ್ನು ಪರಿಶೀಲಿಸಬೇಕು ಮತ್ತು ಸೇವೆ ಮತ್ತು ವಹಿವಾಟಿನ ಧ್ವನಿ ಕರೆಗಳಿಗಾಗಿ ಈ ಸಂಖ್ಯೆಗಳ ವಿಶೇಷ ಬಳಕೆಯ ಬಗ್ಗೆ ಅವರಿಂದ ಒಪ್ಪಂದವನ್ನು ಪಡೆಯಬೇಕು. ಯಾವುದೇ ಘಟಕದಿಂದ ಪ್ರಚಾರದ ಧ್ವನಿ ಕರೆಗಳಿಗಾಗಿ ಈ ವಿಶೇಷ ಸಂಖ್ಯೆಗಳನ್ನು ಬಳಸಲಾಗುವುದಿಲ್ಲ.

 

*****


(ಪ್ರಕಟಣೆ ಐ.ಡಿ.: 2297251) ವಿಸಿಟರ್ ಕೌಂಟರ್ : 69
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , हिन्दी , Bengali , Tamil , Malayalam