ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ಪ್ರವೇಶ ಮತ್ತು ಲಾಭ ಹಂಚಿಕೆ ವ್ಯವಸ್ಥೆಯಡಿ 33 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಷ್ಟ್ರೀಯ ಸಂಸ್ಥೆಗಳಿಗೆ ಸುಮಾರು ₹3.79 ಕೋಟಿ ಬಿಡುಗಡೆ ಮಾಡಿದ ಎನ್‌ಬಿಎ (NBA)

ಪ್ರಕಟಣಾ ದಿನಾಂಕ: 09 AUG 2026 10:46AM by PIB Bengaluru

ರಾಷ್ಟ್ರೀಯ ಜೈವಿಕ ವೈವಿಧ್ಯ ಪ್ರಾಧಿಕಾರವು (NBA) 'ಪ್ರವೇಶ ಮತ್ತು ಲಾಭ ಹಂಚಿಕೆ' (ABS) ವ್ಯವಸ್ಥೆಯಡಿ 33 ರಾಜ್ಯ ಜೈವಿಕ ವೈವಿಧ್ಯ ಮಂಡಳಿಗಳು (SBBs) ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೈವಿಕ ವೈವಿಧ್ಯ ಮಂಡಳಿಗಳು (UTBCs), ಐಸಿಎಆರ್-ರಾಷ್ಟ್ರೀಯ ಸಸ್ಯ ಜೀನ್‌ಸಂಪನ್ಮೂಲಗಳ ಬ್ಯೂರೋ (NBPGR) ಹಾಗೂ ಹರಿಯಾಣ ರಾಜ್ಯ ಜೈವಿಕ ವೈವಿಧ್ಯ ಮಂಡಳಿಯ ಮೂಲಕ ಹಿಸಾರ್‌ನ ಜಾನುವಾರು ವೀರ್ಯ ಕೇಂದ್ರ ಮತ್ತು ಸಂಶೋಧನಾ ಕೇಂದ್ರಕ್ಕೆ ಸುಮಾರು ₹3.79 ಕೋಟಿ ಹಣವನ್ನು ಬಿಡುಗಡೆ ಮಾಡಿದೆ.

ಈ ಬಿಡುಗಡೆಯು ಟೊಮೆಟೊ, ಮೆಣಸಿನಕಾಯಿ, ಬದನೆಕಾಯಿ, ಕ್ಯುಲಿಫ್ಲವರ್, ಕಲ್ಲಂಗಡಿ, ಹಾಗಲಕಾಯಿ, ಸೋರೆಕಾಯಿ, ಬೆಂಡೆಕಾಯಿ, ಸಾಸಿವೆ ತಳಿಗಳು ಮತ್ತು ತೀವ್ರ-ಘನೀಕೃತ ಸಾಹಿವಾಲ್ ತಳಿಯ ಜಾನುವಾರುಗಳ ವೀರ್ಯ ಸೇರಿದಂತೆ ಭಾರತದ ವಿವಿಧ ಕೃಷಿ ಜೈವಿಕ ವೈವಿಧ್ಯತೆಯನ್ನು ಒಳಗೊಂಡಿದೆ. ಸಂಶೋಧನೆ ಮತ್ತು ವಾಣಿಜ್ಯ ಬಳಕೆಗೆ ತರಕಾರಿ ಮತ್ತು ಎಣ್ಣೆಕಾಳುಗಳ ಜೀನ್‌ಸಂಪನ್ಮೂಲಗಳನ್ನು ಪಡೆದುಕೊಂಡಿದ್ದಕ್ಕಾಗಿ ಮೆಸರ್ಸ್ ಬಾಯರ್ ಸೈನ್ಸ್ ಅಂಡ್ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್, ಮೆಸರ್ಸ್ ಎಚ್‌ಎಮ್ ಕ್ಲಾಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಮೆಸರ್ಸ್. ಅದ್ವಾಂತಾ ಎಂಟರ್‌ಪ್ರೈಸಸ್ ಲಿಮಿಟೆಡ್ ಸೇರಿದಂತೆ ವಿವಿಧ ಕಂಪನಿಗಳಿಂದ ಈ ಎಬಿಎಸ್ (ABS) ಮೊತ್ತವನ್ನು ಸಂಗ್ರಹಿಸಲಾಗಿತ್ತು.

ಇದರ ಜೊತೆಗೆ, ಸಾಹಿವಾಲ್ ತಳಿಯ ಜಾನುವಾರು ವೀರ್ಯವನ್ನು ಪಡೆದುಕೊಂಡಿದ್ದಕ್ಕಾಗಿ ಶ್ರೀಲಂಕಾ ಸರ್ಕಾರದ ಪಶು ಉತ್ಪಾದನೆ ಮತ್ತು ಆರೋಗ್ಯ ಇಲಾಖೆಯಿಂದ ಎಬಿಎಸ್ ಮೊತ್ತವು ಬಂದಿದೆ. ಜೈವಿಕ ವೈವಿಧ್ಯತೆ ಕಾಯಿದೆ, 2002ರ ಅಡಿಯಲ್ಲಿ ಅನುಷ್ಠಾನಗೊಳಿಸಲಾದ ಮತ್ತು ನಗೋಯಾ ಪ್ರೋಟೋಕಾಲ್‌ಗೆ ಸರಿಹೊಂದುವ ಭಾರತದ ಎಬಿಎಸ್ ಚೌಕಟ್ಟು, ಇತರ ದೇಶಗಳ ಬಳಕೆದಾರರು ಜೈವಿಕ ಸಂಪನ್ಮೂಲಗಳನ್ನು ಬಳಸಿಕೊಂಡಾಗ ಸಮಾನ ಲಾಭ ಹಂಚಿಕೆಯನ್ನು ಖಚಿತಪಡಿಸುತ್ತದೆ. ಕಂಪನಿಗಳು ಮಾರುಕಟ್ಟೆಗಳು, ವ್ಯಾಪಾರಿಗಳು ಅಥವಾ ಮಧ್ಯವರ್ತಿಗಳ ಮೂಲಕ ಜೈವಿಕ ಸಂಪನ್ಮೂಲಗಳನ್ನು ಪಡೆದುಕೊಂಡಿದ್ದರಿಂದ, ಅವುಗಳ ಮೂಲ ಆಕರವನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಇಂತಹ ಪ್ರಕರಣಗಳಲ್ಲಿ, ಎನ್‌ಬಿಎ ತಜ್ಞರ ಸಮಿತಿಯು ಸಿದ್ಧಪಡಿಸಿದ ಮತ್ತು ಪ್ರಾಧಿಕಾರವು ಅನುಮೋದಿಸಿದ ಲಾಭ-ಹಂಚಿಕೆ ವಿಧಾನಗಳನ್ನು ಅಳವಡಿಸಿಕೊಂಡಿದೆ.

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಪ್ರಕಟಿಸಿದ ಸಾಗುವಳಿ-ಪ್ರದೇಶದ ದತ್ತಾಂಶವನ್ನು ಬಳಸಿ, ಆಯಾ ಬೆಳೆಗಳನ್ನು ಬೆಳೆಯುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಸ್‌ಬಿಬಿ (SBB) ಮತ್ತು ಯುಟಿಬಿಸಿಗಳಿಗೆ (UTBC) ಎಬಿಎಸ್ ಮೊತ್ತವನ್ನು ಪ್ರಮಾಣಾನುಗುಣವಾಗಿ ಬಿಡುಗಡೆ ಮಾಡಲಾಗಿದೆ. ಫಲಾನುಭವಿಗಳಿಗೆ ಬಿಡುಗಡೆ ಮಾಡಲಾದ ಜೈವಿಕ ಸಂಪನ್ಮೂಲಗಳು ಮತ್ತು ಎಬಿಎಸ್ ಮೊತ್ತದ ವಿವರಗಳನ್ನು ಕೆಳಗೆ ನೀಡಲಾಗಿದೆ:

ಜೈವಿಕ ಸಂಪನ್ಮೂಲ

ಸಂಸ್ಥೆ

ಬಿಡುಗಡೆಯಾದ ಎಬಿಎಸ್ (ABS) ಮೊತ್ತ

ರಾಜ್ಯಗಳು / ಫಲಾನುಭವಿಗಳು

ಹೂಕೋಸು (ಬ್ರಾಸಿಕಾ ಒಲೆರೇಸಿಯಾ ವೆರೈಟಿ ಬಾಟ್ರಿಟಿಸ್) ಬೀಜದ ತಳಿಗಳು ಮತ್ತು ಹೈಬ್ರಿಡ್‌ಗಳು

ಬಾಯರ್ ಸೈನ್ಸ್ ಅಂಡ್ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್ & ಎಚ್‌ಎಮ್ ಕ್ಲಾಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್

₹26.98 ಲಕ್ಷ

30 ಎಸ್‌ಬಿಬಿಗಳು/ಯುಟಿಬಿಸಿಗಳು

ಕಲ್ಲಂಗಡಿ (ಸಿಟ್ರುಲಸ್ ಲಾನಾಟಸ್) ಬೀಜದ ತಳಿಗಳು ಮತ್ತು ಹೈಬ್ರಿಡ್‌ಗಳು

ಬಾಯರ್ ಸೈನ್ಸ್ ಅಂಡ್ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್ & ಎಚ್‌ಎಮ್ ಕ್ಲಾಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್

₹24.32 ಲಕ್ಷ

25 ಎಸ್‌ಬಿಬಿಗಳು/ಯುಟಿಬಿಸಿಗಳು

ಟೊಮೆಟೊ (ಸೊಲಾನಮ್ ಲೈಕೋಪರ್ಸಿಕಮ್) ಬೀಜದ ತಳಿಗಳು ಮತ್ತು ಹೈಬ್ರಿಡ್‌ಗಳು

ಬಾಯರ್ ಸೈನ್ಸ್ ಅಂಡ್ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್ & ಎಚ್‌ಎಮ್ ಕ್ಲಾಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್

₹86.56 ಲಕ್ಷ

31 ಎಸ್‌ಬಿಬಿಗಳು/ಯುಟಿಬಿಸಿಗಳು

ಮೆಣಸಿನಕಾಯಿ (ಕ್ಯಾಪ್ಸಿಕಮ್ ಅನ್ನುಮ್) ಬೀಜದ ತಳಿಗಳು ಮತ್ತು ಹೈಬ್ರಿಡ್‌ಗಳು

ಬಾಯರ್ ಸೈನ್ಸ್ ಅಂಡ್ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್ & ಎಚ್‌ಎಮ್ ಕ್ಲಾಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್

₹83.76 ಲಕ್ಷ

32 ಎಸ್‌ಬಿಬಿಗಳು/ಯುಟಿಬಿಸಿಗಳು

ಬದನೆಕಾಯಿ (ಸೊಲಾನಮ್ ಮೆಲಾಂಗೇನಾ) ಬೀಜದ ತಳಿಗಳು ಮತ್ತು ಹೈಬ್ರಿಡ್‌ಗಳು

ಬಾಯರ್ ಸೈನ್ಸ್ ಅಂಡ್ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್ & ಎಚ್‌ಎಮ್ ಕ್ಲಾಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್

₹7.18 ಲಕ್ಷ

31 ಎಸ್‌ಬಿಬಿಗಳು/ಯುಟಿಬಿಸಿಗಳು

ಹಾಗಲಕಾಯಿ, ಸೋರೆಕಾಯಿ, ಬದನೆಕಾಯಿ, ಕ್ಯುಲಿಫ್ಲವರ್, ಮೆಣಸಿನಕಾಯಿ, ಬೆಂಡೆಕಾಯಿ ಮತ್ತು ಟೊಮೆಟೊ ಜೀನ್ ಪ್ಲಾಸ್ಮ್

ಅದ್ವಾಂತಾ ಎಂಟರ್‌ಪ್ರೈಸಸ್ ಲಿಮಿಟೆಡ್

₹148 ಲಕ್ಷ

31 ಎಸ್‌ಬಿಬಿಗಳು/ಯುಟಿಬಿಸಿಗಳು

ಸಾಸಿವೆ (ಬ್ರಾಸಿಕಾ ಜುನ್ಸಿಯಾ) ಬೀಜದ ತಳಿಗಳು

ಅದ್ವಾಂತಾ ಎಂಟರ್‌ಪ್ರೈಸಸ್ ಲಿಮಿಟೆಡ್

₹0.57 ಲಕ್ಷ

ಐಸಿಎಆರ್-ಎನ್‌ಬಿಪಿಜಿಆರ್, ನವದೆಹಲಿ

ಸಾಹಿವಾಲ್ ತಳಿಯ ಜಾನುವಾರು (ಬಾಸ್ ಇಂಡಿಕಸ್) ವೀರ್ಯ

ಪಶು ಉತ್ಪಾದನೆ ಮತ್ತು ಆರೋಗ್ಯ ಇಲಾಖೆ, ಶ್ರೀಲಂಕಾ

₹0.98 ಲಕ್ಷ

ಹಿಸಾರ್ ಜಾನುವಾರು ವೀರ್ಯ ಕೇಂದ್ರ & ಸಂಶೋಧನಾ ಕೇಂದ್ರ (ಹರಿಯಾಣ SBB ಮೂಲಕ)

ಆಯಾ ಬೆಳೆಗಳ ಸಾಗುವಳಿಗೆ ನೀಡಿರುವ ಗಮನಾರ್ಹ ಕೊಡುಗೆಯನ್ನು ಪ್ರತಿಬಿಂಬಿಸುವಂತೆ, ಎಬಿಎಸ್ ಮೊತ್ತದ ಅತಿ ದೊಡ್ಡ ಪಾಲು ಕೆಳಗಿನ ರಾಜ್ಯಗಳಿಗೆ ಬಿಡುಗಡೆಯಾಗಿದೆ:

ಕ್ರ.ಸಂ.

ರಾಜ್ಯ/ಕೇಂದ್ರಾಡಳಿತ ಪ್ರದೇಶ

ಬಿಡುಗಡೆಯಾದ ಮೊತ್ತ

1.

ಮಧ್ಯಪ್ರದೇಶ

₹46.93 ಲಕ್ಷ

2.

ಪಶ್ಚಿಮ ಬಂಗಾಳ

₹44.76 ಲಕ್ಷ

3.

ಒಡಿಶಾ

₹44.08 ಲಕ್ಷ

4.

ಗುಜರಾತ್

₹34.76 ಲಕ್ಷ

5.

ಆಂಧ್ರಪ್ರದೇಶ

₹29.21 ಲಕ್ಷ

6.

ಬಿಹಾರ

₹29.20 ಲಕ್ಷ

7.

ಕರ್ನಾಟಕ

₹21.34 ಲಕ್ಷ

8.

ಛತ್ತೀಸ್‌ಗಢ

₹18.49 ಲಕ್ಷ

9.

ತಮಿಳುನಾಡು

₹16.57 ಲಕ್ಷ

10.

ಉತ್ತರ ಪ್ರದೇಶ

₹16.24 ಲಕ್ಷ

11.

ಮಹಾರಾಷ್ಟ್ರ

₹16.15 ಲಕ್ಷ

12.

ತೆಲಂಗಾಣ

₹9.24 ಲಕ್ಷ

13.

ಹರಿಯಾಣ

₹8.76 ಲಕ್ಷ

14.

ಅಸ್ಸಾಂ

₹8.49 ಲಕ್ಷ

15.

ಜಾರ್ಖಂಡ್

₹8.14 ಲಕ್ಷ

16.

ಪಂಜಾಬ್

₹7.41 ಲಕ್ಷ

17.

ರಾಜಸ್ಥಾನ

₹5.17 ಲಕ್ಷ

18.

ಇತರರು

₹13.70 ಲಕ್ಷ

ಮೊತ್ತವನ್ನು ಪಡೆದುಕೊಂಡ ಎಸ್‌ಬಿಬಿಗಳು ಮತ್ತು ಯುಟಿಬಿಸಿಗಳು ಈ ನಿಧಿಯನ್ನು ಜನರ ಜೈವಿಕ ವೈವಿಧ್ಯತವರ ರಿಜಿಸ್ಟರ್‌ಗಳನ್ನು (People's Biodiversity Registers) ಸಿದ್ಧಪಡಿಸುವುದು ಮತ್ತು ನವೀಕರಿಸುವುದು, ಜೈವಿಕ ವೈವಿಧ್ಯತೆಯ ಇನ್-ಸಿಟು ಮತ್ತು ಎಕ್ಸ್-ಸಿಟು ಸಂರಕ್ಷಣೆ, ಜೈವಿಕ ವೈವಿಧ್ಯತೆಯ ಪರಂಪರೆಯ ತಾಣಗಳ ಬಲವರ್ಧನೆ, ಜೈವಿಕ ವೈವಿಧ್ಯ ನಿರ್ವಹಣಾ ಸಮಿತಿಗಳ ಸಾಮರ್ಥ್ಯ ವರ್ಧನೆ ಮತ್ತು ಸ್ಥಳೀಯ ಸಮುದಾಯಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಂತಹ ಚಟುವಟಿಕೆಗಳಿಗೆ ಬಳಸಬೇಕಾಗುತ್ತದೆ. ಇದು ಭಾರತದ ಜೈವಿಕ ಸಂಪನ್ಮೂಲಗಳ ವಾಣಿಜ್ಯ ಬಳಕೆಯಿಂದ ಬರುವ ಲಾಭಗಳನ್ನು ಜೈವಿಕ ವೈವಿಧ್ಯತೆಯ ಸಂರಕ್ಷಣೆ ಮತ್ತು ಸಮುದಾಯದ ಕಲ್ಯಾಣಕ್ಕಾಗಿ ಮರುಹೂಡಿಕೆ ಮಾಡುವುದನ್ನು ಖಚಿತಪಡಿಸುತ್ತದೆ.

ಈ ಬಿಡುಗಡೆಗಳು ಕುನ್ಮಿಂಗ್-ಮಾಂಟ್ರಿಯಲ್ ಜಾಗತಿಕ ಜೈವಿಕ ವೈವಿಧ್ಯತೆಯ ಚೌಕಟ್ಟನ್ನು ಅನುಷ್ಠಾನಗೊಳಿಸುವ ಭಾರತದ ಬದ್ಧತೆಯನ್ನು ಮರುಸ್ಥಾಪಿಸುತ್ತವೆ, ವಿಶೇಷವಾಗಿ ಜೀನ್‌ಸಂಪನ್ಮೂಲಗಳ ಬಳಕೆಯಿಂದ ಉಂಟಾಗುವ ಲಾಭಗಳ ನ್ಯಾಯಯುತ ಮತ್ತು ಸಮಾನ ಹಂಚಿಕೆಯ ಗುರಿ 13 ಮತ್ತು ಜೀನ್‌ಸಂಪನ್ಮೂಲಗಳ ವೈವಿಧ್ಯತೆಯನ್ನು ಸಂರಕ್ಷಿಸುವ ಗುರಿ 4 ಅನ್ನು ಇದು ಒಳಗೊಂಡಿದೆ. ಈ ಉಪಕ್ರಮವು ಎಸ್‌ಡಿಜಿ 2 (ಶೂನ್ಯ ಹಸಿವು), ಎಸ್‌ಡಿಜಿ 12 (ಜವಾಬ್ದಾರಿಯುತ ಬಳಕೆ ಮತ್ತು ಉತ್ಪಾದನೆ), ಎಸ್‌ಡಿಜಿ 15 (ನೆಲದ ಮೇಲಿನ ಜೀವನ) ಮತ್ತು ಎಸ್‌ಡಿಜಿ 17 (ಗುರಿಗಳಿಗಾಗಿ ಪಾಲುದಾರಿಕೆಗಳು) ಸೇರಿದಂತೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (SDGs) ಸಾಧಿಸಲು ಕೊಡುಗೆ ನೀಡುತ್ತದೆ.

ಎನ್‌ಬಿಎಯಿಂದ ಸಂಚಿತ ಎಬಿಎಸ್ ಬಿಡುಗಡೆಯು ಈಗ ₹166 ಕೋಟಿಗಿಂತ ಹೆಚ್ಚಾಗಿದ್ದು, ಪ್ರತಿಯೊಂದು ಬಿಡುಗಡೆಯು ಜೈವಿಕ ವೈವಿಧ್ಯತೆಯ ಸಂರಕ್ಷಣೆ, ವೈಜ್ಞಾನಿಕ ಸಂಶೋಧನೆ ಮತ್ತು ಭಾರತದ ಶ್ರೀಮಂತ ಜೈವಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಸಮುದಾಯಗಳ ಜೀವನೋಪಾಯದ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2296767) ವಿಸಿಟರ್ ಕೌಂಟರ್ : 74
ಪ್ರಕಟಣೆಯನ್ನು ಇದರಲ್ಲಿ ಓದಿ: English , Marathi , Urdu , हिन्दी , Gujarati , Tamil