ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

ಅಸ್ಸಾಂನ ರಾಷ್ಟ್ರೀಯ ಹೆದ್ದಾರಿ-15 ರಲ್ಲಿ, ಮಂಗಲ್ದೊಯ್ ಬೈಪಾಸ್ (15.11 ಕಿಮೀ) ಹೊರತುಪಡಿಸಿ, ಗುವಾಹಾಟಿ ಬಳಿಯ ಬೈಹಾಟ ಚಾರಿಯಾಲಿ ಯಿಂದ ತೇಜ್‌ಪುರದವರೆಗೆ ಒಟ್ಟು 135.87 ಕಿಮೀ ಉದ್ದದ, Rs. 8970.20 ಕೋಟಿ ವೆಚ್ಚದ 4 ಪಥದ ಹೆದ್ದಾರಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಪ್ರಕಟಣಾ ದಿನಾಂಕ: 06 AUG 2026 4:12PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಚಿವ ಸಂಪುಟ ಸಮಿತಿಯು  ಅಸ್ಸಾಂನ ರಾಷ್ಟ್ರೀಯ ಹೆದ್ದಾರಿ (NH)-15 ರ 135.871 ಕಿಮೀ, 4 ಪಥದ ಪ್ರವೇಶ-ನಿಯಂತ್ರಣವಿರುವ ಗುವಾಹಟಿ-ತೇಜ್‌ಪುರ ಕಾರಿಡಾರ್ ಅಭಿವೃದ್ಧಿಗೆ ಅನುಮೋದನೆ ನೀಡಿದೆ. ಈ ಯೋಜನೆಯನ್ನು NH(O) ಅಡಿಯಲ್ಲಿ ಒಟ್ಟು ಬಂಡವಾಳ ವೆಚ್ಚ 8970.20 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ-ನಿರ್ವಹಣೆ-ವರ್ಗಾವಣೆ (BOT) ಟೋಲ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು.

ಈ ಯೋಜನೆಯು ತೇಜ್‌ಪುರ ಬೈಪಾಸ್‌ನಲ್ಲಿ ತುರ್ತು ಲ್ಯಾಂಡಿಂಗ್ ಸೌಲಭ್ಯ (ELF) (4.9 ಕಿಮೀ.) ನಿರ್ಮಾಣವನ್ನು ಉದ್ದೇಶಿಸಿದೆ, ಇದನ್ನು ಭಾರತೀಯ ವಾಯುಪಡೆಯ  ಸಮನ್ವಯದಿಂದ ಅಂತಿಮಗೊಳಿಸಲಾಗಿದೆ ಮತ್ತು ಬ್ರಹ್ಮಪುತ್ರ ನದಿಯ ದಕ್ಷಿಣ ಭಾಗದಲ್ಲಿ ಅಸ್ತಿತ್ವದಲ್ಲಿರುವ NH-27 (ಪೂರ್ವ-ಪಶ್ಚಿಮ ಕಾರಿಡಾರ್) ನಲ್ಲಿ ದಟ್ಟಣೆಯನ್ನು ತಗ್ಗಿಸುತ್ತದೆ. ಈ ಯೋಜನೆಯು 58.7 ಕಿ.ಮೀ. ಉದ್ದದ 05 ಪ್ರಮುಖ ಬೈಪಾಸ್‌ಗಳ ನಿರ್ಮಾಣವನ್ನು ಒಳಗೊಂಡಿದೆ, ಇದರಿಂದಾಗಿ ಬೈಹತಾ ಚರಿಯಾಲಿ, ಸಿಪಜಾರ್, ಖರುಪೇಟಿಯಾ, ಡೆಕಿಯಾಜುಲಿ, ತೇಜ್‌ಪುರದಂತಹ ಜನನಿಬಿಡ ಪ್ರದೇಶಗಳ ಮೂಲಕ ಹಾದುಹೋಗುವ ಪ್ರದೇಶಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡುತ್ತದೆ.

ಅಲ್ಲದೆ ಈ ಯೋಜನೆಯು 15 ಪ್ರಮುಖ ಸೇತುವೆಗಳು, 30 ಸಣ್ಣ ಸೇತುವೆಗಳು, 19 ಮೇಲು ಸೇತುವೆಗಳು, 01 ಎಲಿಫೆಂಟ್ ಅಂಡರ್ ಪಾಸ್ (ತೇಜ್‌ಪುರ ಬೈಪಾಸ್‌ನಲ್ಲಿ) ಗೆ ಅವಕಾಶ ಕಲ್ಪಿಸುತ್ತದೆ. ಈ ಯೋಜನೆಯನ್ನು ಪ್ರವೇಶ ನಿಯಂತ್ರಿತವಾಗಿ ಅಭಿವೃದ್ಧಿಪಡಿಸಲು ಪ್ರಸ್ತಾಪಿಸಲಾಗಿರುವುದರಿಂದ ಸಂಚಾರದ ಅಡ್ಡ ಚಲನೆಯನ್ನು ಕಾಪಾಡಿಕೊಳ್ಳಲು ಯೋಜನೆಯ ಭಾಗವಾಗಿ 46 ಅಂಡರ್‌ಪಾಸ್‌ಗಳು ಮತ್ತು 210 ಕಿ.ಮೀ. ಸೇವಾ ರಸ್ತೆಯನ್ನು ಹೊಂದಿರುವ 19 ಮೇಲು ಸೇತುವೆಗಳನ್ನು ಸಹ ನಿರ್ಮಿಸಲಾಗುವುದು.

ಈ ಯೋಜನೆಯು ಸರಾಸರಿ ಪ್ರಯಾಣ ವೇಗವನ್ನು ಶೇ.100 ರಷ್ಟು ಹೆಚ್ಚಿಸುತ್ತದೆ, ಪ್ರಯಾಣದ ಸಮಯವನ್ನು ಅರ್ಧಕ್ಕೆ ಇಳಿಸುತ್ತದೆ, ಒಟ್ಟಾರೆ ರಸ್ತೆ ಸುರಕ್ಷತೆ ಸುಧಾರಿಸುತ್ತದೆ, ಇಂಧನ ದಕ್ಷತೆಯನ್ನು ವೃದ್ಧಿಸುತ್ತದೆ ಮತ್ತು ವಾಹನ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಪ್ರಾದೇಶಿಕ ಸಂಚಾರ(ಮೊಬಿಲಿಟಿ) ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಹೆಚ್ಚಳವಾಗಲಿದೆ.

ಈ ಯೋಜನೆಯು ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಾದ್ಯಂತ ಪ್ರಮುಖ ಆರ್ಥಿಕ, ಸಾಮಾಜಿಕ ಮತ್ತು ಲಾಜಿಸ್ಟಿಕ್ಸ್ ನೋಡ್‌ಗಳಿಗೆ ತಡೆರಹಿತ ಸಂಪರ್ಕ ಒದಗಿಸುತ್ತದೆ. ಹೆಚ್ಚುವರಿಯಾಗಿ, ನವೀಕರಿಸಿದ ಕಾರಿಡಾರ್ 08 PM ಗತಿ-ಶಕ್ತಿ ಆರ್ಥಿಕ ನೋಡ್‌ಗಳು (08 ಕೈಗಾರಿಕಾ ಉದ್ಯಾನವನಗಳು), 02 ಸಾಮಾಜಿಕ ನೋಡ್‌ಗಳು (02 ಮಹತ್ವಾಕಾಂಕ್ಷೆಯ ಜಿಲ್ಲೆಗಳು ದರ್ರಾಂಗ್ ಮತ್ತು ಉದಲ್ಗುರಿ), 03 ಪ್ರವಾಸಿ ಟಿಪ್ಪಣಿಗಳು (ಮಾ ಕಾಮಾಖಾಯ ದೇವಸ್ಥಾನ, ಕಾಜಿರಂಗ ರಾಷ್ಟ್ರೀಯ ಉದ್ಯಾನವನ, ಒರಾಂಗ್ ರಾಷ್ಟ್ರೀಯ ಉದ್ಯಾನವನ) ಮತ್ತು 07 ಲಾಜಿಸ್ಟಿಕ್ ನೋಡ್‌ಗಳು (03 ಪ್ರಮುಖ ರೈಲ್ವೆ ನಿಲ್ದಾಣಗಳು, 02 ವಿಮಾನ ನಿಲ್ದಾಣಗಳು, 02 ಜಲಮಾರ್ಗ ಟರ್ಮಿನಲ್) ಸಂಪರ್ಕವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಈ ಪ್ರದೇಶದಾದ್ಯಂತ ಸರಕು ಮತ್ತು ಪ್ರಯಾಣಿಕರ ವೇಗದ ಸಂಚಾರಕ್ಕೆ ಅನುಕೂಲವಾಗುತ್ತದೆ.

ಕಾರಿಡಾರ್‌ನ ನಕ್ಷೆ

 

*****


(ಪ್ರಕಟಣೆ ಐ.ಡಿ.: 2295536) ವಿಸಿಟರ್ ಕೌಂಟರ್ : 74