ಸಂವಹನ ಸಚಿವಾಲಯ
azadi ka amrit mahotsav

'ಆಕ್ಸೆಸ್ (ವೈರ್‌ಲೈನ್ ಮತ್ತು ವೈರ್‌ಲೆಸ್) ಮತ್ತು ಬ್ರಾಡ್‌ಬ್ಯಾಂಡ್ (ವೈರ್‌ಲೈನ್ ಮತ್ತು ವೈರ್‌ಲೆಸ್) ಸೇವೆಗಳ ಗುಣಮಟ್ಟದ ಮಾನದಂಡಗಳ ನಿಯಮಾವಳಿಗಳು-2024' ರ ಕರಡು ತಿದ್ದುಪಡಿಗಳ ಕುರಿತು ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿದ ʻಟ್ರಾಯ್ʼ

प्रविष्टि तिथि: 05 AUG 2026 2:48PM by PIB Bengaluru

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಇಂದು 'ಆಕ್ಸೆಸ್ (ವೈರ್‌ಲೈನ್ ಮತ್ತು ವೈರ್‌ಲೆಸ್) ಮತ್ತು ಬ್ರಾಡ್‌ಬ್ಯಾಂಡ್ (ವೈರ್‌ಲೈನ್ ಮತ್ತು ವೈರ್‌ಲೆಸ್) ಸೇವೆಗಳ ಗುಣಮಟ್ಟದ ಮಾನದಂಡಗಳ ನಿಯಮಾವಳಿಗಳು-2024'ರಲ್ಲಿ ಪ್ರಸ್ತಾಪಿಸಲಾದ ಕರಡು ತಿದ್ದುಪಡಿಗಳ ಕುರಿತು ಸಮಾಲೋಚನಾ ಪತ್ರವನ್ನು ಹೊರಡಿಸಿದ್ದು, ಪಾಲುದಾರರಿಂದ ಅಭಿಪ್ರಾಯಗಳು ಮತ್ತು ಪ್ರತಿ-ಅಭಿಪ್ರಾಯಗಳನ್ನು ಆಹ್ವಾನಿಸಿದೆ.

ಆಗಸ್ಟ್ 2024ರಲ್ಲಿ, ʻಟ್ರಾಯ್ʼ ತನ್ನ ಹಿಂದಿನ ಸೇವಾ ಗುಣಮಟ್ಟದ ನೀತಿಚೌಕಟ್ಟನ್ನು ಸಮಗ್ರವಾಗಿ ಪರಿಶೀಲಿಸಿ, ಆಗಸ್ಟ್ 2, 2024ರಂದು 'ಆಕ್ಸೆಸ್ (ವೈರ್‌ಲೈನ್ ಮತ್ತು ವೈರ್‌ಲೆಸ್) ಮತ್ತು ಬ್ರಾಡ್‌ಬ್ಯಾಂಡ್ (ವೈರ್‌ಲೈನ್ ಮತ್ತು ವೈರ್‌ಲೆಸ್) ಸೇವೆಗಳ ಗುಣಮಟ್ಟದ ಮಾನದಂಡಗಳ ನಿಯಮಾವಳಿಗಳು-2024' ಎಂಬ ಏಕೀಕೃತ ನಿಯಮಾವಳಿಯನ್ನು ಪ್ರಕಟಿಸಿತು. ತಂತ್ರಜ್ಞಾನ-ತಟಸ್ಥ ಕಾರ್ಯಕ್ಷಮತೆಯ ಮಾನದಂಡಗಳು, ಸುಧಾರಿತವಾದ ವರದಿ ಮಾಡುವ ಕಾರ್ಯವಿಧಾನಗಳು ಮತ್ತು ಗ್ರಾಹಕರಿಗೆ ಪಾರದರ್ಶಕತೆಯನ್ನು ಹೆಚ್ಚಿಸುವ ಕ್ರಮಗಳ ಮೂಲಕ ʻಆಕ್ಸೆಸ್ʼ ಮತ್ತು ʻಬ್ರಾಡ್‌ಬ್ಯಾಂಡ್ʼ ಸೇವೆಗಳ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲು ಈ ನಿಯಮಾವಳಿಗಳು ನವೀಕರಿಸಿದ ಸೇವಾ ಗುಣಮಟ್ಟ ಚೌಕಟ್ಟನ್ನು ಒದಗಿಸುತ್ತವೆ. ಈ ನಿಯಮಾವಳಿಯು ಅಕ್ಟೋಬರ್ 1, 2024 ರಿಂದ ಜಾರಿಗೆ ಬಂದಿದೆ.

ನಿಯಮಾವಳಿಗಳ ಅನುಷ್ಠಾನದ ಸಮಯದಲ್ಲಿ ಪಡೆದ ಅನುಭವ, ಪಾಲುದಾರರಿಂದ ಸ್ವೀಕರಿಸಿದ ಪ್ರತಿಕ್ರಿಯೆಗಳು, ವಿಕಸನಗೊಳ್ಳುತ್ತಿರುವ ತಾಂತ್ರಿಕ ಬೆಳವಣಿಗೆಗಳು ಹಾಗೂ ವಿಶ್ವಾಸಾರ್ಹ ಮತ್ತು ಉತ್ತಮ ಗುಣಮಟ್ಟದ ಡಿಜಿಟಲ್ ಸಂಪರ್ಕಕ್ಕಾಗಿ ಹೆಚ್ಚುತ್ತಿರುವ ಗ್ರಾಹಕರ ನಿರೀಕ್ಷೆಗಳ ಆಧಾರದ ಮೇಲೆ, ಅನುಷ್ಠಾನದ ಹಂತದಲ್ಲಿ ಗುರುತಿಸಲಾದ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಸೇವಾ ಗುಣಮಟ್ಟದ ನೀತಿ ಚೌಕಟ್ಟಿನ ಪರಿಣಾಮಕಾರಿತ್ವವನ್ನು ಇನ್ನಷ್ಟು ಹೆಚ್ಚಿಸುವುದು ಅಗತ್ಯವೆಂದು ಪರಿಗಣಿಸಲಾಗಿದೆ. ಅದರಂತೆ, 'ಆಕ್ಸೆಸ್ (ವೈರ್‌ಲೈನ್ ಮತ್ತು ವೈರ್‌ಲೆಸ್) ಮತ್ತು ಬ್ರಾಡ್‌ಬ್ಯಾಂಡ್ (ವೈರ್‌ಲೈನ್ ಮತ್ತು ವೈರ್‌ಲೆಸ್) ಸೇವೆಗಳ ಗುಣಮಟ್ಟದ ಮಾನದಂಡಗಳ ನಿಯಮಾವಳಿಗಳು-2024'ರ ಕೆಲವು ನಿಬಂಧನೆಗಳನ್ನು ತಿದ್ದುಪಡಿ ಮಾಡಲು ಪ್ರಸ್ತಾಪಿಸಲಾಗಿದೆ.

ಪಾಲುದಾರರಿಂದ ಅಭಿಪ್ರಾಯಗಳು ಮತ್ತು ಪ್ರತಿ-ಅಭಿಪ್ರಾಯಗಳನ್ನು ಆಹ್ವಾನಿಸುವ ಉದ್ದೇಶದಿಂದ, 'ಆಕ್ಸೆಸ್ (ವೈರ್‌ಲೈನ್ ಮತ್ತು ವೈರ್‌ಲೆಸ್) ಮತ್ತು ಬ್ರಾಡ್‌ಬ್ಯಾಂಡ್ (ವೈರ್‌ಲೈನ್ ಮತ್ತು ವೈರ್‌ಲೆಸ್) ಸೇವೆಗಳ ಗುಣಮಟ್ಟದ ಮಾನದಂಡಗಳ (ಮೊದಲನೇ ತಿದ್ದುಪಡಿ) ನಿಯಮಾವಳಿಗಳು-2026' ಕರಡು ಅಧಿಸೂಚನೆಯನ್ನು ಒಳಗೊಂಡ ಸಮಾಲೋಚನಾ ಪತ್ರವನ್ನು ʻಟ್ರಾಯ್ʼ ವೆಬ್‌ಸೈಟ್: http://www.trai.gov.in ನಲ್ಲಿ ಪ್ರಕಟಿಸಲಾಗಿದೆ.

ಕರಡು ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾದ ತಿದ್ದುಪಡಿಗಳ ಬಗ್ಗೆ ಅಥವಾ ಸಂಬಂಧಪಟ್ಟ ಇತರೆ ಯಾವುದೇ ನಿಯಂತ್ರಣ ನಿಬಂಧನೆಗಳ ಬಗ್ಗೆ ಲಿಖಿತ ಅಭಿಪ್ರಾಯಗಳನ್ನು ಮತ್ತು ಪ್ರತಿ-ಅಭಿಪ್ರಾಯಗಳೇನಾದರೂ ಇದ್ದರೆ ಅವುಗಳನ್ನು, ಕ್ರಮವಾಗಿ ಆಗಸ್ಟ್ 26, 2026 ಮತ್ತು ಸೆಪ್ಟೆಂಬರ್ 7, 2026ರ ಒಳಗಾಗಿ ಇ-ಮೇಲ್ ಮೂಲಕ adv-qos1@trai.gov.in ಗೆ ಕಳುಹಿಸಬಹುದು.

ಯಾವುದೇ ಸ್ಪಷ್ಟೀಕರಣ/ಮಾಹಿತಿಗಾಗಿ, ಸಲಹೆಗಾರರಾದ (QoS-I) ಶ್ರೀ ತೇಜ್‌ಪಾಲ್ ಸಿಂಗ್ ಅವರನ್ನು ಇ-ಮೇಲ್ adv-qos1@trai.gov.in ಅಥವಾ ದೂರವಾಣಿ ಸಂಖ್ಯೆ +91-11-20907759 ಮೂಲಕ ಸಂಪರ್ಕಿಸಬಹುದು.

 

*****


(रिलीज़ आईडी: 2294841) आगंतुक पटल : 12
इस विज्ञप्ति को इन भाषाओं में पढ़ें: English , Urdu , हिन्दी , Gujarati , Tamil