ಶಿಕ್ಷಣ ಸಚಿವಾಲಯ
azadi ka amrit mahotsav

ಯುವ ಸಂಗಮ ಹಂತ VIIಕ್ಕೆ ಆನ್‌ಲೈನ್ ನೋಂದಣಿ ಆಗಸ್ಟ್ 4, 2026 ರಿಂದ ಆರಂಭವಾಗಿದೆ


ಶಿಕ್ಷಣ ಸಚಿವಾಲಯವು ಯುವ ಸಂಗಮ ಹಂತ VIIಕ್ಕೆ ಆನ್‌ಲೈನ್ ನೋಂದಣಿ ಪೋರ್ಟಲ್‌ ತೆರೆದಿದೆ

‘ಏಕ್ ಭಾರತ್ ಶ್ರೇಷ್ಠ ಭಾರತ್’ ಅಡಿಯಲ್ಲಿ ಯುವ ವಿನಿಮಯ ಕಾರ್ಯಕ್ರಮಗಳನ್ನು 20 ಉನ್ನತ ಶಿಕ್ಷಣ ಸಂಸ್ಥೆಗಳು ಮುನ್ನಡೆಸಲಿವೆ

प्रविष्टि तिथि: 04 AUG 2026 7:15PM by PIB Bengaluru

ಶಿಕ್ಷಣ ಸಚಿವಾಲಯವು ‘ಏಕ್ ಭಾರತ ಶ್ರೇಷ್ಠ ಭಾರತ್’ (ಇ ಬಿ ಎಸ್‌ ಬಿ) ಉಪಕ್ರಮದ ಅಡಿಯಲ್ಲಿ ಯುವ ಸಂಗಮ ಹಂತ VII ಕ್ಕೆ ಇಂದಿನಿಂದ ಆನ್‌ಲೈನ್ ನೋಂದಣಿ ಪೋರ್ಟಲ್ ಅನ್ನು ತೆರೆದಿದೆ. ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಎನ್‌ ಎಸ್‌ ಎಸ್ / ಎನ್‌ ವೈ ಕೆ ಎಸ್ ಸ್ವಯಂಸೇವಕರು ಮತ್ತು ಯುವ ವೃತ್ತಿಪರರು ಸೇರಿದಂತೆ 18 ರಿಂದ 30 ವರ್ಷದೊಳಗಿನ ಆಸಕ್ತ ಯುವಕರು https://ebsb.aicte-india.org ಅಧಿಕೃತ ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಲು ಅರ್ಹರಾಗಿದ್ದಾರೆ.

ಯುವ ಸಂಗಮ ಹಂತ VII ರ ನೋಂದಣಿಗೆ ಕೊನೆಯ ದಿನಾಂಕ ಆಗಸ್ಟ್ 18, 2026 ಆಗಿದೆ.

ಯುವ ಸಂಗಮ ಹಂತ VII ಕ್ಕಾಗಿ, 20 ಉನ್ನತ ಶಿಕ್ಷಣ ಸಂಸ್ಥೆಗಳನ್ನು – ಅಂದರೆ ಐಐಟಿ, ಐಐಎಂ, ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ಎನ್‌ ಐ ಟಿ ಗಳನ್ನು – ಈ ವಿನಿಮಯ ಕಾರ್ಯಕ್ರಮವನ್ನು ಆಯೋಜಿಸಲು ಮತ್ತು ನಿರ್ವಹಿಸಲು ನೋಡಲ್ ಸಂಸ್ಥೆಗಳಾಗಿ ಗುರುತಿಸಲಾಗಿದೆ. ಆಯ್ಕೆಯಾದ ಭಾಗವಹಿಸುವವರು ತಮಗೆ ಸೂಚಿಸಲಾದ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ 5 ರಿಂದ 7 ದಿನಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರವಾಸವನ್ನು (ಪ್ರಯಾಣದ ದಿನಗಳನ್ನು ಹೊರತುಪಡಿಸಿ) ಕೈಗೊಳ್ಳಲಿದ್ದಾರೆ. ಅಲ್ಲಿ ಅವರು ಸ್ಥಳೀಯ ಸಂಪ್ರದಾಯಗಳು, ಶೈಕ್ಷಣಿಕ ಸಂಸ್ಥೆಗಳು, ಆಡಳಿತಾತ್ಮಕ ಉಪಕ್ರಮಗಳು, ನಾವೀನ್ಯತೆ ವ್ಯವಸ್ಥೆಗಳು, ಉದ್ಯಮಗಳು, ಪಾರಂಪರಿಕ ತಾಣಗಳು ಮತ್ತು ಸಮುದಾಯ ಜೀವನದ ನೇರ ಅನುಭವವನ್ನು ಪಡೆಯಲಿದ್ದಾರೆ.

ಯುವ ಸಂಗಮ ಹಂತ VII ಕ್ಕಾಗಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಜೋಡಣೆ:

ಕ್ರ.ಸಂ.

ರಾಜ್ಯ

ಪ್ರಸ್ತಾಪಿತ ಸಂಯೋಜಿತ ಉನ್ನತ ಶಿಕ್ಷಣ ಸಂಸ್ಥೆಗಳು

ಸಂಯೋಜಿತ ರಾಜ್ಯ

ಪ್ರಸ್ತಾಪಿತ ಸಂಯೋಜಿತ ಉನ್ನತ ಶಿಕ್ಷಣ ಸಂಸ್ಥೆಗಳು

1

ಉತ್ತರ ಪ್ರದೇಶ

ಬಿ ಎಚ್‌ ಯು ವಾರಾಣಸಿ

ಕೇರಳ

ಐಐಟಿ ಪಾಲಕ್ಕಾಡ್

2

ಮಧ್ಯ ಪ್ರದೇಶ

ಎಸ್‌ ಪಿ ಭೋಪಾಲ್

ಕರ್ನಾಟಕ

ಸಿ ಯು ಕರ್ನಾಟಕ

3

ಅಸ್ಸಾಂ

ಐಐಟಿ ಗುವಾಹಾಟಿ

ತೆಲಂಗಾಣ

ಸಿ ಯು ಹೈದರಾಬಾದ್

4

ಗೋವಾ

ಎನ್‌ ಐ ಟಿ ಗೋವಾ

ಮಿಜೋರಾಂ

ಸಿ ಯು ಮಿಜೋರಾಂ

5

ರಾಜಸ್ಥಾನ

ಐಐಟಿ ಜೋಧಪುರ

ಸಿಕ್ಕಿಂ

ಸಿಕ್ಕಿಂ ವಿಶ್ವವಿದ್ಯಾಲಯ

6

ಜಮ್ಮು ಮತ್ತು ಕಾಶ್ಮೀರ, ಲಡಾಖ್

ಎನ್‌ ಐ ಟಿ ಶ್ರೀನಗರ

ಮಹಾರಾಷ್ಟ್ರ

ಐಐಟಿ ಬಾಂಬೆ

7

ಪಶ್ಚಿಮ ಬಂಗಾಳ

ಐಐಟಿ ಖರಗಪುರ

ಉತ್ತರಾಖಂಡ

ಎಚ್‌ ಬಿ ಎನ್‌ ಯು, ಶ್ರೀನಗರ

8

ಚಂಡೀಗಢ

ಎಸ್‌ ಇ ಆರ್ ಮೊಹಾಲಿ

ಗುಜರಾತ್

ಸಿ ಯು ಗುಜರಾತ್

9

ಹಿಮಾಚಲ ಪ್ರದೇಶ

ಎನ್‌ ಐ ಟಿ ಹಮೀರ್‌ಪುರ

ಒಡಿಶಾ

ಐಐಎಂ ಸಂಬಲ್ಪುರ

10

ದೆಹಲಿ

ದೆಹಲಿ ವಿಶ್ವವಿದ್ಯಾಲಯ

ತಮಿಳುನಾಡು

ಸಿ ಯು ತಮಿಳುನಾಡು

ಯುವ ಸಂಗಮ ಎಂಬುದು ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ಪ್ರಮುಖ ಯುವ ವಿನಿಮಯ ಕಾರ್ಯಕ್ರಮವಾಗಿದ್ದು, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಯುವಜನರ ನಡುವೆ ಭಾವನಾತ್ಮಕ ಬಂಧಗಳನ್ನು ಬಲಪಡಿಸುವ ಮತ್ತು ಪರಸ್ಪರ ತಿಳುವಳಿಕೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಈ ಉಪಕ್ರಮವು ಸಂಯೋಜಿತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವೆ ಯೋಜಿತ ಭೇಟಿಗಳನ್ನು ಒದಗಿಸುವ ಮೂಲಕ ಭಾರತದ ಶ್ರೀಮಂತ ಸಾಂಸ್ಕೃತಿಕ, ಭಾಷಿಕ, ಶೈಕ್ಷಣಿಕ ಮತ್ತು ಅಭಿವೃದ್ಧಿಯ ವೈವಿಧ್ಯತೆಯನ್ನು ನೇರವಾಗಿ ಅನುಭವಿಸಲು ಭಾಗವಹಿಸುವವರಿಗೆ ಅನುವು ಮಾಡಿಕೊಡುತ್ತದೆ ಹಾಗೂ "ವೈವಿಧ್ಯತೆಯಲ್ಲಿ ಏಕತೆ" ಯ ಸ್ಪೂರ್ತಿಯನ್ನು ಉತ್ತೇಜಿಸುತ್ತದೆ.

ಕಾರ್ಯಕ್ರಮವನ್ನು ಪರ್ಯಟನ್ (ಪ್ರವಾಸೋದ್ಯಮ), ಪರಂಪರಾ (ಸಂಪ್ರದಾಯ ಮತ್ತು ಸಂಸ್ಕೃತಿ), ಪ್ರಗತಿ (ಅಭಿವೃದ್ಧಿ ಮತ್ತು ಆಡಳಿತ), ಪರಸ್ಪರ ಸಂಪರ್ಕ (ಜನರ ನಡುವಿನ ಸಂಪರ್ಕ) ಮತ್ತು ತಂತ್ರಜ್ಞಾನ (ತಂತ್ರಜ್ಞಾನ ಮತ್ತು ನಾವೀನ್ಯತೆ) ಎಂಬ ಐದು ಪ್ರಮುಖ ವಿಷಯಾಧಾರಿತ ಸ್ತಂಭಗಳ (5 P) ಆಧಾರದ ಮೇಲೆ ರೂಪಿಸಲಾಗಿದೆ. ಈ ವಿಷಯಾಧಾರಿತ ಚಟುವಟಿಕೆಗಳ ಮೂಲಕ, ಭಾಗವಹಿಸುವವರು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ ಇ ಪಿ) 2020ರ ಆಶಯಕ್ಕೆ ಅನುಗುಣವಾಗಿ ಪರಸ್ಪರ ತಿಳುವಳಿಕೆ ಮತ್ತು ರಾಷ್ಟ್ರೀಯ ಏಕತೆಯನ್ನು ಪೋಷಿಸುವ ಜೊತೆಗೆ ಭಾರತದ ಸಾಂಸ್ಕೃತಿಕ ವೈವಿಧ್ಯತೆಯ ಬಗ್ಗೆ ಆಳವಾದ ಗೌರವವನ್ನು ಬೆಳೆಸಿಕೊಳ್ಳುತ್ತಾರೆ.

ಯುವ ಸಂಗಮ ಕಾರ್ಯಕ್ರಮವನ್ನು ಪಾಲ್ಗೊಳ್ಳುವ ಸಚಿವಾಲಯಗಳು, ಇಲಾಖೆಗಳು, ರಾಜ್ಯ ಸರ್ಕಾರಗಳು ಮತ್ತು ಪಾಲುದಾರ ಉನ್ನತ ಶಿಕ್ಷಣ ಸಂಸ್ಥೆಗಳ ಸಕ್ರಿಯ ಬೆಂಬಲದೊಂದಿಗೆ ಸಮಗ್ರ "ಇಡೀ-ಸರ್ಕಾರ" ವಿಧಾನದ ಮೂಲಕ ಜಾರಿಗೆ ತರಲಾಗುತ್ತಿದೆ. ಈ ಕಾರ್ಯಕ್ರಮದ ಹಿಂದಿನ ಆವೃತ್ತಿಗಳು ದೇಶಾದ್ಯಂತದ ಯುವಜನರಿಂದ ಅಗಾಧವಾದ ಭಾಗವಹಿಸುವಿಕೆಗೆ ಸಾಕ್ಷಿಯಾಗಿವೆ.

ಭಾರತದ ರೋಮಾಂಚಕ ವೈವಿಧ್ಯತೆಯನ್ನು ಅನುಭವಿಸಲು, ವಿವಿಧ ಪ್ರದೇಶಗಳ ಯುವಜನರೊಂದಿಗೆ ಸಂವಹನ ನಡೆಸಲು ಮತ್ತು 'ಏಕ್ ಭಾರತ್ ಶ್ರೇಷ್ಠ ಭಾರತ್' ದೃಷ್ಟಿಕೋನದ ರಾಯಭಾರಿಗಳಾಗಲು ಅನನ್ಯ ಅವಕಾಶವನ್ನು ಬಳಸಿಕೊಳ್ಳುವಂತೆ ಶಿಕ್ಷಣ ಸಚಿವಾಲಯವು ದೇಶಾದ್ಯಂತದ ಯುವಜನರನ್ನು ಪ್ರೋತ್ಸಾಹಿಸುತ್ತದೆ.

 

*****

 


(रिलीज़ आईडी: 2294654) आगंतुक पटल : 16
इस विज्ञप्ति को इन भाषाओं में पढ़ें: English , Urdu , हिन्दी , Marathi , Malayalam