ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ-ವಿವೇಕ ಸ್ಮಾರಕ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಭಾಷಣದ ಕ್ಷಣಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

प्रविष्टि तिथि: 02 AUG 2026 12:38AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರ್ನಾಟಕದ ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ-ವಿವೇಕ ಸ್ಮಾರಕ ಉದ್ಘಾಟನಾ ಸಮಾರಂಭದಲ್ಲಿನ ತಮ್ಮ ಭಾಷಣದ ಕೆಲವು ಭಾಗವನ್ನು ಹಂಚಿಕೊಂಡಿದ್ದಾರೆ.

ಶ್ರೀ ಮೋದಿ ಅವರು ಸರಣಿ ಎಕ್ಸ್ ಪೋಸ್ಟ್ ಗಳಲ್ಲಿ ಹೀಗೆ ಹೇಳಿದ್ದಾರೆ:

"ಸ್ವಾಮಿ ವಿವೇಕಾನಂದರ ಜೀವನದಲ್ಲಿ ಮೈಸೂರು ಪ್ರಮುಖ ಸ್ಥಾನವನ್ನು ಪಡೆದುಕೊಂಡಿತ್ತು.

ವಿವೇಕ ಸ್ಮಾರಕವು ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಲು ಯುವಜನರನ್ನು ಪ್ರೇರೇಪಿಸುವ ಒಂದು ಚೈತನ್ಯಶೀಲ ಸ್ಥಳವಾಗಲಿದೆ ಎಂದು ನನಗೆ ವಿಶ್ವಾಸವಿದೆ."

"ನಮ್ಮ ಯುವಜನರ ಸಾಮರ್ಥ್ಯದ ಬಲದೊಂದಿಗೆ, ಭಾರತವು ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದೆ. ಆತ್ಮನಿರ್ಭರ ಭಾರತ ಮತ್ತು ಭಾರತದಲ್ಲೇ ತಯಾರಿಸಿ ('ಮೇಕ್ ಇನ್ ಇಂಡಿಯಾ)’ ದಂತಹ ಉಪಕ್ರಮಗಳ ಯಶಸ್ಸಿಗೆ ನಮ್ಮ ಯುವಜನರ ಉತ್ಸಾಹವೇ ಪ್ರೇರಕ ಶಕ್ತಿಯಾಗಿದೆ."

"ರಾಷ್ಟ್ರೀಯ ಶಿಕ್ಷಣ ನೀತಿಯು 21 ನೇ ಶತಮಾನದ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ನಮ್ಮ ದೇಶದ ಯುವ ಸಮೂಹವನ್ನು ಸಜ್ಜುಗೊಳಿಸುತ್ತಿದೆ ಎಂಬುದನ್ನು ತಿಳಿದು ನನಗೆ ಹರ್ಷವಾಗಿದೆ."

"ಒಂದು ವಿಶೇಷ ಮನವಿ..."

 

*****


(रिलीज़ आईडी: 2293361) आगंतुक पटल : 3
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Assamese , Gujarati , Telugu , Malayalam