ಪ್ರಧಾನ ಮಂತ್ರಿಯವರ ಕಛೇರಿ
2026ರ ಕಾಮನ್ ವೆಲ್ತ್ ಕ್ರೀಡಾಕೂಟದ ಜೂಡೋದಲ್ಲಿ ಬೆಳ್ಳಿ ಪದಕ ಗೆದ್ದ ಯಾಮಿನಿ ಮೌರ್ಯ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ
प्रविष्टि तिथि:
01 AUG 2026 8:45AM by PIB Bengaluru
ಕಾಮನ್ ವೆಲ್ತ್ ಕ್ರೀಡಾಕೂಟ 2026 ರಲ್ಲಿ 57 ಕೆ.ಜಿ ಜೂಡೋ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಯಾಮಿನಿ ಮೌರ್ಯ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಯಾಮಿನಿ ಮೌರ್ಯ ಅವರು ಅಸಾಧಾರಣವಾಗಿ ಉತ್ತಮವಾಗಿ ಆಡಿದರು ಮತ್ತು ಜೂಡೋ ಬಗ್ಗೆ ಅವರ ಉತ್ಸಾಹವು ಅವರ ಪ್ರದರ್ಶನದಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
ಅವರ ಸಾಧನೆಯು ಅನೇಕ ಯುವಕರಿಗೆ ಜೂಡೋ ಕಲಿಯಲು ಸ್ಫೂರ್ತಿ ನೀಡುತ್ತದೆ ಎಂದು ಶ್ರೀ ನರೇಂದ್ರ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದರು ಮತ್ತು ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸಿದರು.
ಎಕ್ಸ್ ಖಾತೆಯಲ್ಲಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಹೇಳಿದ್ದಾರೆ;
"ಜೂಡೋ 57 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಯಾಮಿನಿ ಮೌರ್ಯ ಅವರಿಗೆ ಅಭಿನಂದನೆಗಳು! ಅವರು ತುಂಬಾ ಚೆನ್ನಾಗಿ ಆಡಿದರು ಮತ್ತು ಜೂಡೋ ಬಗ್ಗೆ ಅವರ ಉತ್ಸಾಹವು ಅವರ ಪ್ರದರ್ಶನದಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತದೆ. ಅವರ ಸಾಧನೆಯು ಮುಂಬರುವ ದಿನಗಳಲ್ಲಿ ಅನೇಕ ಯುವಕರನ್ನು ಜೂಡೋದತ್ತ ಸೆಳೆಯುತ್ತದೆ. ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ.
#CWG2026"
*****
(रिलीज़ आईडी: 2292909)
आगंतुक पटल : 16
इस विज्ञप्ति को इन भाषाओं में पढ़ें:
Malayalam
,
Telugu
,
English
,
Urdu
,
हिन्दी
,
Marathi
,
Bengali
,
Assamese
,
Manipuri
,
Gujarati
,
Tamil