ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರೊಂದಿಗೆ ಬಸ್ತಾರ್‌ ನ ಸಾಮಾಜಿಕ ಸಂಪ್ರದಾಯದ ಪ್ರಮುಖ ಪ್ರತಿನಿಧಿಗಳಾದ 'ಮಾಂಝಿ-ಚಾಲಕಿ' ಮತ್ತು ʼಬಸ್ತಾರ್ ಪಂಡುಮ್‌ʼ ಸ್ಪರ್ಧೆಯ ವಿಜೇತರೊಂದಿಗೆ ಸಂವಾದ ನಡೆಸಿದರು


ಬಸ್ತಾರ್ ನಿವಾಸಿಗಳು ಮೊದಲ ಬಾರಿಗೆ ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ರಾಷ್ಟ್ರಪತಿ ಭವನಕ್ಕೆ ಆಗಮಿಸಿದರು

ನಕ್ಸಲೀಯ ಹಿಂಸಾಚಾರದಿಂದಾಗಿ ಒಂದು ಕಾಲದಲ್ಲಿ ತನ್ನ ಶ್ರೀಮಂತ ಪರಂಪರೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಕಳೆದುಕೊಳ್ಳುತ್ತಿದ್ದ ಬಸ್ತಾರ್, ಇಂದು ನಕ್ಸಲ್ ಮುಕ್ತವಾಗಿದ್ದು ತನ್ನ ಪರಂಪರೆಯನ್ನು ಸಂರಕ್ಷಿಸುತ್ತಿದೆ

ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿರುವ ಬಸ್ತಾರ್, ಮುಂಬರುವ ವರ್ಷಗಳಲ್ಲಿ ಛತ್ತೀಸಗಢದ ಅತ್ಯಂತ ಅಭಿವೃದ್ಧಿ ಹೊಂದಿದ ವಿಭಾಗವಾಗಲಿದೆ

ಪ್ರಕಟಣಾ ದಿನಾಂಕ: 30 JUL 2026 6:56PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರೊಂದಿಗೆ ಇಂದು ಬಸ್ತಾರ್‌ ನ ಸಾಮಾಜಿಕ ಪರಂಪರೆಯ ಪ್ರಮುಖ ಪ್ರತಿನಿಧಿಗಳಾದ 'ಮಾಂಝಿ-ಚಾಲಕಿ' ಮತ್ತು ಬಸ್ತಾರ್ ಪಂಡುಮ್‌ ನ ವಿಜೇತರೊಂದಿಗೆ ಸಂವಾದ ನಡೆಸಿದರು.

'X' ನಲ್ಲಿ ಈ ಕುರಿತು  ಪೋಸ್ಟ್‌ ಹಂಚಿಕೊಂಡಿರುವ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು, "ಇಂದು ರಾಷ್ಟ್ರಪತಿ ಭವನದಲ್ಲಿ, ನಾನು ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರೊಂದಿಗೆ ಬಸ್ತಾರ್‌ ನ ಸಾಮಾಜಿಕ ಪರಂಪರೆಯ ಪ್ರಮುಖ ಪ್ರತಿನಿಧಿಗಳಾದ 'ಮಾಂಝಿ-ಚಾಲಕಿ' ಮತ್ತು ʼಬಸ್ತಾರ್ ಪಂಡುಮ್‌ʼ ನ ವಿಜೇತರೊಂದಿಗೆ ಸಂವಾದ ನಡೆಸಿದೆ. ಬಸ್ತಾರ್ ನಿವಾಸಿಗಳು ಮೊದಲ ಬಾರಿಗೆ ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ್ದು, ನಕ್ಸಲೀಯ ಹಿಂಸಾಚಾರದಿಂದಾಗಿ ಒಂದು ಕಾಲದಲ್ಲಿ ತನ್ನ ಶ್ರೀಮಂತ ಪರಂಪರೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಕಳೆದುಕೊಳ್ಳುತ್ತಿದ್ದ ಬಸ್ತಾರ್, ಇಂದು ನಕ್ಸಲ್ ಮುಕ್ತವಾಗಿ ತನ್ನ ಪರಂಪರೆಯನ್ನು ಸಂರಕ್ಷಿಸಿಕೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿರುವ ಬಸ್ತಾರ್, ಮುಂಬರುವ ವರ್ಷಗಳಲ್ಲಿ ಪ್ರಗತಿಯ ಹೊಸ ಮಾನದಂಡಗಳನ್ನು ಸ್ಥಾಪಿಸುವ ಮೂಲಕ ಛತ್ತೀಸಗಢದ ಅತ್ಯಂತ ಅಭಿವೃದ್ಧಿ ಹೊಂದಿದ ವಿಭಾಗವಾಗಲಿದೆ."

 

*****

 


(ಪ್ರಕಟಣೆ ಐ.ಡಿ.: 2292088) ವಿಸಿಟರ್ ಕೌಂಟರ್ : 46
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Punjabi , Gujarati , Odia , Malayalam