ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಸೌರಶಕ್ತಿ ಅಳವಡಿಕೆ ಮತ್ತು ಗ್ರಾಮೀಣ ಇಂಧನ ಸ್ವಾವಲಂಬನೆ ವೇಗ ನೀಡಲು ಪಿಎಂ ಕುಸುಮ್ ಮತ್ತು ಪಿಎಂ ಸೂರ್ಯ ಘರ್ ಯೋಜನೆಗಳ ಸಂಯೋಜನೆಯನ್ನು ಉತ್ತೇಜಿಸಿದ ಕೇಂದ್ರ ಸರ್ಕಾರ
प्रविष्टि तिथि:
28 JUL 2026 3:40PM by PIB Bengaluru
ವ್ಯಾಪಕ ಪ್ರಮಾಣದಲ್ಲಿ ಯೋಜನೆಗಳ ಅಳವಡಿಕೆಗೆ ಅನುಕೂಲವಾಗುವಂತತೆ, ಸಾಧ್ಯವಾದಲ್ಲೆಲ್ಲಾ ಸೂಕ್ತವಾದ ಕೇಂದ್ರ ಮತ್ತು ರಾಜ್ಯ ಕಾರ್ಯಕ್ರಮಗಳು ಮತ್ತು ಹಣಕಾಸು ಮೂಲಗಳೊಂದಿಗೆ ಪಿಎಂ ಕುಸುಮ್ ಮತ್ತು ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆಯ ಸಂಯೋಜನೆಯನ್ನು ಕೇಂದ್ರ ಸರ್ಕಾರ ಉತ್ತೇಜಿಸುತ್ತಿದೆ. ಉದಾಹರಣೆಗೆ ಪಿಎಂ ಕುಸುಮ್ ಯೋಜನೆಯ ಮಾರ್ಗಸೂಚಿಗಳು ಇತರ ಕೇಂದ್ರ ಯೋಜನೆಗಳೊಂದಿಗೆ ಸಂಯೋಜನೆಗೊಳ್ಳಲು ಅವಕಾಶ ನೀಡುತ್ತವೆ:
- ಸುಲಭ ಹಣಕಾಸು ಲಭ್ಯತೆಗಾಗಿ ಕೃಷಿ ಮೂಲಸೌಕರ್ಯ ನಿಧಿ (ಎಐಎಫ್ ) ಯೋಜನೆ.
- ಬೇರ್ಪಡಿಸಿದ ಕೃಷಿ ಫೀಡರ್‌ಗಳ ಸೌರೀಕರಣಕ್ಕಾಗಿ ಪರಿಷ್ಕೃತ ವಿತರಣಾ ವಲಯ ಯೋಜನೆ (ಆರ್ ಡಿಎಸ್ ಎಸ್).
- ಸೂಕ್ಷ್ಮ ನೀರಾವರಿ ತಂತ್ರಗಳ ಪ್ರಚಾರ ಮತ್ತು ಪ್ರತಿ ಹನಿಯಿಂದ ಹೆಚ್ಚಿನ ಬೆಳೆ ಯೋಜನೆ
- ಇಂಧನ ದಕ್ಷ ಪಂಪ್‌ಗಳೊಂದಿಗೆ ಕೃಷಿ ಪಂಪ್‌ಗಳನ್ನು ಬದಲಾಯಿಸುವುದು.
- ಗ್ರಾಮ ಮಟ್ಟದಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸಲು ಗ್ರಾಮ ಉರ್ಜಾ ಸ್ವರಾಜ್ ಅಭಿಯಾನ.
ಅದೇ ರೀತಿ ಪ್ರಧಾನ ಮಂತ್ರಿ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆಗೆ ಸಂಬಂಧಿಸಿದಂತೆ, ಡಿಎವೈ-ಎನ್ ಯುಎಲ್ ಎಂ ಅಡಿಯಲ್ಲಿ ಮಹಿಳಾ ಸ್ವ-ಸಹಾಯ ಗುಂಪು (ಎಸ್ ಎಚ್ ಜಿ) ಸದಸ್ಯರಿಗೆ ತರಬೇತಿ ನೀಡುವ ಸೌರ ದೀದಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ದೊಂದಿಗೆ ಸಂಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಅರ್ಹ ಫಲಾನುಭವಿಗಳಿಗೆ, ವಿಶೇಷವಾಗಿ ಬಿಪಿಎಲ್ ಕುಟುಂಬಗಳು, ಪಿಎಂಎವೈ ಫಲಾನುಭವಿಗಳು ಮತ್ತು ಇತರ ದುರ್ಬಲ ವರ್ಗಗಳಿಗೆ ಪ್ರಧಾನ ಮಂತ್ರಿ ಸೂರ್ಯ ಘರ್ ಜೊತೆಗೆ ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್) ನಿಧಿಗಳ ಸಂಯೋಜನೆಯನ್ನು ಪ್ರೋತ್ಸಾಹಿಸಲಾಗುತ್ತದೆ.
ಸಹಕಾರ ಸಚಿವಾಲಯ, ಪಂಚಾಯತಿ ರಾಜ್ ಸಚಿವಾಲಯ, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಸಚಿವಾಲಯ ಇತ್ಯಾದಿಗಳ ಯೋಜನೆಗಳೊಂದಿಗೆ ಪ್ರಧಾನ ಮಂತ್ರಿ ಕುಸುಮ್ ಮತ್ತು ಪಿಎಂಎಸ್ ಜಿ ಯೋಜನೆಗಳ ಒಗ್ಗೂಡಿಸುವಿಕೆಗೆ ಸಚಿವಾಲಯವು ಈಗಾಗಲೇ ಎಲ್ಲಾ ರಾಜ್ಯಗಳಿಗೆ ಸಂವಹನ ಮತ್ತು ಒಗ್ಗೂಡಿಸುವಿಕೆಯ ಸಂಭಾವ್ಯ ಕ್ಷೇತ್ರಗಳನ್ನು ಸೂಚಿಸಿದೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೊ ನಾಯಕ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ.
*****
(रिलीज़ आईडी: 2290516)
आगंतुक पटल : 15