ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2026ರ ವಿಕಸಿತ್ ವೈಬ್ರೆಂಟ್ ವಿಲೇಜ್ ಕಾರ್ಯಕ್ರಮದ ಭಾಗಿಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ


ಈ ಉಪಕ್ರಮವು ಯುವಜನರಲ್ಲಿ ರಾಷ್ಟ್ರ ನಿರ್ಮಾಣದ ಬಗ್ಗೆ ಆಳವಾದ ಪ್ರಜ್ಞೆಯನ್ನು ತುಂಬುತ್ತಿರುವುದನ್ನು ನೋಡಲು ಬಹಳ ಸಂತೋಷವಾಗುತ್ತಿದೆ: ಪ್ರಧಾನಮಂತ್ರಿ

ವಿಕಸಿತ ಗ್ರಾಮಗಳು ವಿಕಸಿತ ಭಾರತದ ಅಡಿಪಾಯವೂ ಹೌದು: ಪ್ರಧಾನಮಂತ್ರಿ

ನಮ್ಮ ಸರ್ಕಾರವು ಗಡಿ ಗ್ರಾಮಗಳನ್ನು ದೇಶದ ಮೊದಲ ಹಳ್ಳಿಗಳೆಂದು ಪರಿಗಣಿಸಿದೆ: ಪ್ರಧಾನಮಂತ್ರಿ

ವಿಕಸಿತ್ ವೈಬ್ರೆಂಟ್ ವಿಲೇಜ್‌ನ ಈ ಪ್ರಯಾಣವು ಎಲ್ಲರನ್ನೂ ಸಂಪರ್ಕಿಸುವ ಮತ್ತು ಎಲ್ಲರೊಂದಿಗೆ ಸಂಪರ್ಕ ಸಾಧಿಸುವ ಒಂದು ಮಾಧ್ಯಮವಾಗಿದೆ: ಪ್ರಧಾನಮಂತ್ರಿ

प्रविष्टि तिथि: 26 JUL 2026 7:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 2026ರ ವಿಕಸಿತ್ ವೈಬ್ರೆಂಟ್ ವಿಲೇಜ್ ಕಾರ್ಯಕ್ರಮದಲ್ಲಿ ಭಾಗಿಯಾಗಿರುವವರೊಂದಿಗೆ ಸಂವಾದ ನಡೆಸಿದರು. ಅದ್ಭುತ ರಾಷ್ಟ್ರವ್ಯಾಪಿ ಭಾಗವಹಿಸುವಿಕೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, ದೇಶಾದ್ಯಂತ ಸುಮಾರು ಇನ್ನೂರ ಐವತ್ತು ಜಿಲ್ಲೆಗಳನ್ನು ಪ್ರತಿನಿಧಿಸುವ ಉತ್ಸಾಹಭರಿತ ಯುವಜನರ ಭಾಗವಹಿಸುವವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು.

ಕೆಲವು ವರ್ಷಗಳ ಹಿಂದೆ 'ಮೇರಾ ಯುವ ಭಾರತ್ - ನನ್ನ ಭಾರತ್' ವೇದಿಕೆಯ ಯಶಸ್ವಿ ಸ್ಥಾಪನೆಯನ್ನು ಪ್ರತಿಬಿಂಬಿಸುತ್ತಾ, ಕೋಟ್ಯಂತರ ಯುವ ನಾಗರಿಕರನ್ನು ಒಳಗೊಳ್ಳುಂತಾಗಿರುವ ಅದರ ಬೃಹತ್ ವಿಸ್ತರಣೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ದೇಶಾದ್ಯಂತ ಯುವ ಜಾಲವು ಸಕ್ರಿಯವಾಗಿ ನಿರ್ವಹಿಸುತ್ತಿರುವ ಅತ್ಯಂತ ಪ್ರಶಂಸನೀಯ ಕೆಲಸವನ್ನು ಶ್ಲಾಘಿಸಿದ ಅವರು, ವಿಕಸಿತ ಭಾರತ ಸಂವಾದದಿಂದ ವಿಕಸಿತ್ ವೈಬ್ರೆಂಟ್ ವಿಲೇಜ್ ಕಾರ್ಯಕ್ರಮದವರೆಗೆ ಅವರ ಅತ್ಯುತ್ತಮ ಸಾಮರ್ಥ್ಯಗಳನ್ನು ನಿರ್ದಿಷ್ಟವಾಗಿ ಗಮನಿಸಿದರು. ⁠"ಇಂದು, ನನ್ನ ಭಾರತದ ಯುವ ಸ್ನೇಹಿತರು ಇಡೀ ದೇಶಾದ್ಯಂತ ಅಸಾಧಾರಣವಾದ ರೀತಿಯಲ್ಲಿ ಶ್ಲಾಘನೀಯ ಕೆಲಸವನ್ನು ಮಾಡುತ್ತಿದ್ದಾರೆ" ಎಂದು ಶ್ರೀ ಮೋದಿ ಹೇಳಿದರು. ⁠. ⁠

ವಿಕಸಿತ ಭಾರತ ಯುವ ನಾಯಕರ ಸಂವಾದದ ಸಂದರ್ಭದಲ್ಲಿ ತಳಮಟ್ಟದ ಉಪಕ್ರಮದ ಮೂಲವನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ, ಯುವಜನರು ವರ್ಚುವಲ್ ಸಂವಹನಗಳನ್ನು ಮೀರಿ ಹೆಜ್ಜೆ ಹಾಕಲು ಮತ್ತು ತಳಮಟ್ಟದಲ್ಲಿ ದೇಶದ ವಾಸ್ತವಗಳನ್ನು ಅರ್ಥಮಾಡಿಕೊಳ್ಳಲು ಪ್ರೋತ್ಸಾಹಿಸುವ ದೃಷ್ಟಿಕೋನವನ್ನು ವಿವರಿಸಿದರು. ಹಿಮಾಚಲ, ಉತ್ತರಾಖಂಡ್ ಮತ್ತು ಲಡಾಖ್‌ನ ಗಡಿ ಹಳ್ಳಿಗಳಿಗೆ ಯುವ ನಾಗರಿಕರನ್ನು ಕಳುಹಿಸುವ ಉದ್ದೇಶವನ್ನು ವಿವರಿಸಿದ ಅವರು, ಸ್ಥಳೀಯ ಸಂಸ್ಕೃತಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮತ್ತು ಈ ಪ್ರದೇಶಗಳನ್ನು ಮುನ್ನಡೆಸುವ ಆಳವಾದ ದೇಶಭಕ್ತಿಯ ಆಕಾಂಕ್ಷೆಗಳನ್ನು ವೀಕ್ಷಿಸಲು ಭಾಗವಹಿಸಿದ ಮೂರು ಲಕ್ಷ ಮಂದಿಯಲ್ಲಿ 400ಕ್ಕೂ ಹೆಚ್ಚು ಯುವಜನರನ್ನು ಆಯ್ಕೆ ಮಾಡಲಾಗಿದೆ ಎಂದು ಹಂಚಿಕೊಂಡರು. "ನಿಮ್ಮ ಸಂಸ್ಕೃತಿಯನ್ನು ಅಲ್ಲಿನ ಸಂಸ್ಕೃತಿಯೊಂದಿಗೆ ಸಂಪರ್ಕಿಸುವುದು ಏಕ ಭಾರತ, ಶ್ರೇಷ್ಠ ಭಾರತಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ" ಎಂದು ಶ್ರೀ ಮೋದಿ ದೃಢಪಡಿಸಿದರು.

ಸರ್ಕಾರಿ ಹುದ್ದೆಯನ್ನು ವಹಿಸಿಕೊಳ್ಳುವ ಮೊದಲು ವ್ಯಾಪಕ ಪ್ರಯಾಣಗಳ ಸಮಯದಲ್ಲಿ ಗಡಿ ಸಮುದಾಯಗಳೊಂದಿಗೆ ಹೊಂದಿದ್ದ ಆಳವಾದ ವೈಯಕ್ತಿಕ ಸಂಪರ್ಕಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ, ಮುಂಚೂಣಿಯಲ್ಲಿರುವ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸುವ  ಸಂಪ್ರದಾಯವನ್ನು ಉಲ್ಲೇಖಿಸಿದರು. ವೈಯಕ್ತಿಕ ಭವ್ಯ ಅನುಭವಗಳು ಮತ್ತು ಮರಳಿ ಬಂದ ಯುವಜನರು ಹಂಚಿಕೊಂಡ ರೋಮಾಂಚಕ ಅನುಭವಗಳನ್ನು ತುಲನೆ ಮಾಡಿದ ಅವರು, ಅಪಾರ ಸ್ಥಳೀಯ ಪ್ರೀತ್ಯಾದರಗಳನ್ನು/ವಾತ್ಸಲ್ಯವನ್ನು ಸಾಕ್ಷೀಕರಿಸುವುದರಿಂದ ಹಿಡಿದು ಸಶಸ್ತ್ರ ಪಡೆಗಳ ಅದ್ಭುತ ಧೈರ್ಯದವರೆಗೆ ಅವಲೋಕನಗೈದ ಅವರು, ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಸೈನಿಕರು ಮಾಡಿದ ಅಪಾರ ತ್ಯಾಗಗಳನ್ನು ಅವರು ಗೌರವದಿಂದ ಸ್ಮರಿಸಿದರು. "ಅತ್ಯಂತ ಸವಾಲಿನ ಸಂದರ್ಭಗಳಲ್ಲಿ ಧೈರ್ಯಶಾಲಿಗಳು ವಿಜಯದ ಧ್ವಜವನ್ನು ಹಾರಿಸಿದರು ಮತ್ತು ವಿಕಸಿತ್ ವೈಬ್ರಂಟ್ ಗ್ರಾಮದ ಈ ಸಂಪೂರ್ಣ ಅನುಭವವು ನಿಜವಾಗಿಯೂ ಭವ್ಯವಾಗಿದೆ" ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು.

ಅಭಿವೃದ್ಧಿ ಹೊಂದಿದ ಗ್ರಾಮಗಳು ವಿಕಸಿತ ಭಾರತ ನಿರ್ಮಾಣಕ್ಕೆ ಭದ್ರ ಅಡಿಪಾಯ ಸ್ತಂಭಗಳೆಂದು ಬಣ್ಣಿಸಿದ ಅವರು, ಈ ಪರಿವರ್ತನಾ ಪ್ರಯಾಣದ ನಿರಂತರ ಮತ್ತು ವಿಸ್ತಾರವಾದ ಸ್ವರೂಪವನ್ನು  ಒತ್ತಿ ಹೇಳಿದರು. ಯುವ ಪೀಳಿಗೆಯ ಸಕ್ರಿಯ, ತಳಮಟ್ಟದ ಒಳಗೊಳ್ಳುವಿಕೆ ವ್ಯಾಪಕ ರಾಷ್ಟ್ರೀಯ ದೃಷ್ಟಿಕೋನವನ್ನು ವಿಸ್ತರಿಸುವುದಲ್ಲದೆ, ದೇಶದ ಪ್ರಗತಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡುವ ಅವರ ವೈಯಕ್ತಿಕ ಸಂಕಲ್ಪವನ್ನು ಆಳವಾಗಿ ಬಲಪಡಿಸುತ್ತದೆ ಎಂದೂ ಒತ್ತಿ ಹೇಳಿದರು. ಹಾಗು ಈ ಸಂಪರ್ಕದ ಮಹತ್ವವನ್ನು ಎತ್ತಿ ತೋರಿಸಿದರು. ⁠"ದೇಶದ ಯುವಜನರು ತಳಮಟ್ಟದ ಜೊತೆ ಸಕ್ರಿಯವಾಗಿ ಸಂಪರ್ಕ ಸಾಧಿಸಿದಾಗ, ಅವರು ವಿಕ್ಷಿತ್ ಭಾರತದ ಸಮಗ್ರ ದೃಷ್ಟಿಕೋನವನ್ನು ಇನ್ನಷ್ಟು ವಿಶಾಲಗೊಳಿಸುತ್ತಾರೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು. ⁠

ಗಡಿ ಪ್ರದೇಶಗಳಲ್ಲಿನ ಜೀವನದಲ್ಲಿ ಅಂತರ್ಗತವಾಗಿರುವ ತೀವ್ರ ಕಷ್ಟಗಳನ್ನು ಒಪ್ಪಿಕೊಂಡ ಪ್ರಧಾನಮಂತ್ರಿ, ಸ್ಥಳೀಯ ನಿವಾಸಿಗಳು ತಮ್ಮ ಕಠಿಣ ಪರಿಸ್ಥಿತಿಯ ಹೊರತಾಗಿಯೂ ಪ್ರತಿ ಕ್ಷಣವೂ ದೇಶಭಕ್ತಿಯನ್ನು ಉಸಿರಾಡುತ್ತಾ ಬದುಕಿದ್ದಕ್ಕಾಗಿ ಶ್ಲಾಘಿಸಿದರು. ರಸ್ತೆಗಳು, ವಿದ್ಯುತ್ ಮತ್ತು ಆಸ್ಪತ್ರೆಗಳಂತಹ ಮೂಲಭೂತ ಸೌಕರ್ಯಗಳಿಂದ ಸಂಪೂರ್ಣವಾಗಿ ವಂಚಿತರಾದ 'ಕೊನೆಯ ಹಳ್ಳಿಗಳು' ಎಂಬುದಾಗಿ ಈ ಪ್ರದೇಶಗಳನ್ನು ಕೈಬಿಟ್ಟ ಹಿಂದಿನ ಆಡಳಿತಾತ್ಮಕ ನಿರ್ಲಕ್ಷ್ಯವನ್ನು ಖಂಡಿಸಿದ ಅವರು, ಸ್ಥಳೀಯ ಜನಸಂಖ್ಯೆಯು ನಿರ್ವಹಿಸುತ್ತಿರುವ ಅವಿನಾಭಾವ ರಾಷ್ಟ್ರೀಯತಾವಾದಿ ಮನೋಭಾವದ ಬಗ್ಗೆ ಅಪಾರ ಹೆಮ್ಮೆ ವ್ಯಕ್ತಪಡಿಸಿದರು. "ಇಂತಹ ತೀವ್ರ ಸೌಲಭ್ಯ ವಂಚಿತ ಸಂದರ್ಭಗಳಲ್ಲಿಯೂ ಸಹ, ಗಡಿ ಹಳ್ಳಿಗಳ ಜನರ ದೇಶಭಕ್ತಿ ಎಂದಿಗೂ ದುರ್ಬಲಗೊಳ್ಳಲಿಲ್ಲ ಎಂದು ನಾವು ಅಪಾರ ಹೆಮ್ಮೆಪಡಬೇಕು" ಎಂದು ಶ್ರೀ ಮೋದಿ ಹೇಳಿದರು.

ಸರ್ಕಾರದ ಕಾರ್ಯತಂತ್ರದ ವಿಧಾನದಲ್ಲಿ ಒಂದು ಮಾದರಿ ಬದಲಾವಣೆಯನ್ನು ವಿವರಿಸುತ್ತಾ, ಪ್ರಧಾನಮಂತ್ರಿಯವರು ಗಡಿ ಜನ ವಸತಿಗಳನ್ನು 'ಕೊನೆಯ' ಹಳ್ಳಿಯಿಂದ ಭಾರತದ 'ಮೊದಲ ಹಳ್ಳಿ'ಗಳಿಗೆ ಅಧಿಕೃತವಾಗಿ ಮರುವಿನ್ಯಾಸಗೊಳಿಸುವುದನ್ನು ಸಂಭ್ರಮದಿಂದ ಉಲ್ಲೇಖಿಸಿದರು. ಅಲ್ಲಿ ಬೆಳಗಿನ ಮೊದಲ ಕಿರಣಗಳು ಮತ್ತು ತ್ರಿವರ್ಣ ಧ್ವಜವು ಮೊದಲು ರಾಷ್ಟ್ರವನ್ನು ಸ್ವಾಗತಿಸುತ್ತದೆ. ವಿದ್ಯುತ್, ರಸ್ತೆಗಳು, ಕೊಳವೆ ನೀರು, ಅನಿಲ ಸಂಪರ್ಕಗಳು ಮತ್ತು ಅತ್ಯುತ್ತಮ ಇಂಟರ್ನೆಟ್‌ನ ಅಭೂತಪೂರ್ವ ಆಗಮನ ಸೇರಿದಂತೆ ಸ್ವಾತಂತ್ರ್ಯಾನಂತರದ ಐತಿಹಾಸಿಕ, ಮೂಲಸೌಕರ್ಯ ಮೈಲಿಗಲ್ಲುಗಳ ಅಲೆಯನ್ನು ಎತ್ತಿ ತೋರಿಸುತ್ತಾ, ಈ ಮೂಲಭೂತ ನಗರ ಸೌಲಭ್ಯಗಳು ಗಡಿ ನಿವಾಸಿಗಳ ಕೃಷಿ ಆರ್ಥಿಕತೆ ಮತ್ತು ದೈನಂದಿನ ಜೀವನವನ್ನು ಮೂಲಭೂತವಾಗಿ ಹೇಗೆ ಪರಿವರ್ತಿಸುತ್ತಿವೆ ಎಂಬುದನ್ನು  ಒತ್ತಿ ಹೇಳಿದರು. "ಈ ಐತಿಹಾಸಿಕ ಮನಸ್ಥಿತಿಯನ್ನು ಬದಲಾಯಿಸಿದ ಪರಿಣಾಮವಾಗಿ ನಮ್ಮ ಗಡಿ ಪ್ರದೇಶವು ಇಂದು ವೇಗವಾಗಿ ರೂಪಾಂತರಗೊಳ್ಳುತ್ತಿದೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಹೊಸದಾಗಿ ಸ್ಥಾಪಿಸಲಾದ ಮೂಲಸೌಕರ್ಯ ಸೌಲಭ್ಯಗಳಿಂದ ಉತ್ಪತ್ತಿಯಾಗುವ ಆರ್ಥಿಕ ಪ್ರಯೋಜನಗಳ ರೂಪರೇಷೆಗಳನ್ನು ವಿವರಿಸುತ್ತಾ, ಪ್ರಧಾನಮಂತ್ರಿಯವರು ಪ್ರಾದೇಶಿಕ ಪ್ರವಾಸೋದ್ಯಮದಲ್ಲಿ ಆಗಿರುವ ಭಾರಿ ಪುನರುಜ್ಜೀವನವನ್ನು ಎತ್ತಿ ತೋರಿಸಿದರು. ಒಂದು ಕಾಲದಲ್ಲಿ ನಿರ್ಜನವಾಗಿದ್ದ ಹಳ್ಳಿಗಳು ಈಗ ಉತ್ಸಾಹಭರಿತ ಚಟುವಟಿಕೆಗಳಿಂದ ತುಂಬಿವೆ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಸಬಲೀಕರಣ ವಾತಾವರಣ ಮತ್ತು ಸ್ಥಳೀಯ ಗಳಿಕೆಗೆ ಉತ್ತಮ ವಾತಾವರಣವನ್ನು ಬೆಳೆಸುತ್ತಿವೆ ಎಂದು ವಿವರಿಸಿದ ಅವರು, ಈ ಬದಲಾವಣೆಗಳನ್ನು ವೈಬ್ರಂಟ್ ವಿಲೇಜ್ ಕಾರ್ಯಕ್ರಮವು ವ್ಯವಸ್ಥಿತವಾಗಿ ವೇಗಗೊಳಿಸುತ್ತಿದೆ ಎಂದು ಗಮನಿಸಿದರು. "ವೈಬ್ರಂಟ್ ವಿಲೇಜ್ ಕಾರ್ಯಕ್ರಮವು ಗಡಿ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಅದ್ಭುತವಾದ ಹೊಸ ವೇಗವನ್ನು ಸಕ್ರಿಯವಾಗಿ ನೀಡುತ್ತಿದೆ" ಎಂದು ಶ್ರೀ ಮೋದಿ ಹೇಳಿದರು. ⁠

ಗಡಿ ಪ್ರವಾಸಯಾತ್ರೆಗಳನ್ನು ಭಾಗವಹಿಸುವಿಕೆಯ ಮೂಲಕ ಏಕತೆಯ ಆಳವಾದ ಪ್ರಯಾಣ ಎಂದು ಬಣ್ಣಿಸಿದ ಪ್ರಧಾನಮಂತ್ರಿ, ಹಿಂದಿರುಗಿದ ಯುವಜನರು  ಆತಿಥ್ಯಕ್ಕಿಂತ ಹೆಚ್ಚಾಗಿ ಆಳವಾದ ಸಾಂಸ್ಕೃತಿಕ ಶಿಕ್ಷಣ, ಆಳವಾದ ತೃಪ್ತಿ ಮತ್ತು ಅಪಾರ ಗೌರವವನ್ನು ಗಳಿಸಿದ್ದಾರೆ ಎಂದು ನೆನಪಿಸಿದರು. ಇಂತಹ ಅಮೂಲ್ಯವಾದ ತಳಮಟ್ಟದ ಅನುಭವಗಳನ್ನು ತರಗತಿಯಲ್ಲಿ ಎಂದಿಗೂ ಪುನರಾವರ್ತಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಅವರು, ಭಾಗವಹಿಸಿದವರು ತಮ್ಮ ಗೆಳೆಯರನ್ನು ಈ ಪ್ರದೇಶಗಳಿಗೆ ಭೇಟಿ ನೀಡಲು ಸಕ್ರಿಯವಾಗಿ ಪ್ರೇರೇಪಿಸುವಂತೆ ಒತ್ತಾಯಿಸಿದರು, ಇದು ಅನುಕ್ರಮವಾಗಿ ಆಧುನಿಕ ಸೌಲಭ್ಯಗಳ ಒಳಹರಿವನ್ನು ವೇಗಗೊಳಿಸುತ್ತದೆ. "ಭಾರತದ ಯುವಕರು ಗಡಿ ಹಳ್ಳಿಗಳನ್ನು ಹೆಚ್ಚು ಆಳವಾಗಿ ಅರ್ಥಮಾಡಿಕೊಂಡಷ್ಟೂ, ನಮ್ಮ ರಾಷ್ಟ್ರವು ಅಂತಿಮವಾಗಿ ಬಲಗೊಳ್ಳುತ್ತದೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಗಡಿ ಪ್ರವಾಸೋದ್ಯಮದ ಮೇಲೆ ಸರ್ಕಾರ ಹೊಂದಿರುವ ತೀವ್ರ ಗಮನವನ್ನು ಸಕ್ರಿಯವಾಗಿ ವರ್ಧಿಸಲು ಯುವಜನರಿಗೆ ಕರೆ ನೀಡಿದ ಪ್ರಧಾನಮಂತ್ರಿ,  ಭಾಗವಹಿಸಿರುವ ಪ್ರತಿಯೊಬ್ಬರೂ ಕನಿಷ್ಠ ನೂರು ಗೆಳೆಯರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕೆಂದು ದೃಢ ನಿರ್ದೇಶನ ನೀಡಿದರು. ಪ್ರಾದೇಶಿಕ ಸಂಸ್ಕೃತಿ ಮತ್ತು ಉತ್ಪನ್ನಗಳನ್ನು ಉತ್ತೇಜಿಸಲು ಸ್ಥಳೀಯ ವಿಷಯ ಸಾಮಗ್ರಿ ರಚನೆಕಾರರೊಂದಿಗೆ ಸಕ್ರಿಯ ಸಹಯೋಗವನ್ನು ಪ್ರೋತ್ಸಾಹಿಸುತ್ತಾ, ಯುವಜನರು ಅಧಿಕೃತ ಇಂಟರ್ನೆಟ್ ವಿಷಯವನ್ನು ಹಂಚಿಕೊಳ್ಳಲು, ಭವಿಷ್ಯದ ಕುಟುಂಬ ಪ್ರವಾಸಗಳನ್ನು ಯೋಜಿಸಲು ಮತ್ತು ಆಯಾ ಶೈಕ್ಷಣಿಕ ಸಂಸ್ಥೆಗಳ ಮೂಲಕ ಶೈಕ್ಷಣಿಕ ಪ್ರವಾಸಗಳನ್ನು ಆಯೋಜಿಸಲು ಪ್ರಧಾನಮಂತ್ರಿ ಒತ್ತಾಯಿಸಿದರು. "ನಿಮ್ಮಲ್ಲಿರುವ ಪ್ರತಿಯೊಬ್ಬ ಯುವ ಸ್ನೇಹಿತನೂ ಕನಿಷ್ಠ ನೂರು ಇತರ ಯುವಜನರೊಂದಿಗೆ ನಿಮ್ಮ ನಿಜವಾದ ಅನುಭವಗಳನ್ನು ಖಂಡಿತವಾಗಿಯೂ ಹಂಚಿಕೊಳ್ಳಬೇಕು ಎಂದು ನಾನು ಬಲವಾಗಿ ಒತ್ತಾಯಿಸುತ್ತೇನೆ" ಎಂದು ಶ್ರೀ ಮೋದಿ ನುಡಿದರು.

ಯುವ ಪೀಳಿಗೆಯಲ್ಲಿ ತಮಗಿರುವ ಅಚಲ ವಿಶ್ವಾಸವನ್ನು ವ್ಯಕ್ತಪಡಿಸುತ್ತ  ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿ, 21ನೇ ಶತಮಾನದ ಜಾಗತಿಕ ಭೂದೃಶ್ಯವನ್ನು ರೂಪಿಸುವ ನೈಜ ಭವಿಷ್ಯವನ್ನು ಯುವಜನರು ಹೊಂದಿದ್ದಾರೆ ಎಂದು ಘೋಷಿಸಿದರು. ಅವರನ್ನು ಏಕಕಾಲದಲ್ಲಿ ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರದ ಚಾಲನಾ ಶಕ್ತಿ ಮತ್ತು ಅಂತಿಮ ಫಲಾನುಭವಿಗಳೆಂದು ಬಣ್ಣಿಸಿದ ಪ್ರಧಾನಮಂತ್ರಿ, ದೇಶದ ಪ್ರಮುಖ ಸವಾಲುಗಳು ಮತ್ತು ಪರಿಹಾರಗಳೊಂದಿಗೆ ಅವರ ನೇರ ಮುಖಾಮುಖಿಯಿಂದ ಉಂಟಾಗುವ ಉಜ್ವಲ ರಾಷ್ಟ್ರೀಯ ಭವಿಷ್ಯದ ಬಗ್ಗೆಯೂ  ಗಮನಸೆಳೆದರು. ⁠"ನಮ್ಮ ಯುವ ಶಕ್ತಿಯು ದೇಶದ ಸವಾಲುಗಳು ಮತ್ತು ಪರಿಹಾರಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸಿದಾಗ, ಭವಿಷ್ಯವು ಸಂಪೂರ್ಣವಾಗಿ ಮತ್ತು ಖಂಡಿತವಾಗಿಯೂ ಉಜ್ವಲವಾಗಿರುತ್ತದೆ" ಎಂದು ಶ್ರೀ ಮೋದಿ ದೃಢವಾಗಿ ನುಡಿದರು.

 

*****


(रिलीज़ आईडी: 2289784) आगंतुक पटल : 10
इस विज्ञप्ति को इन भाषाओं में पढ़ें: Odia , Khasi , English , Urdu , Marathi , हिन्दी , Manipuri , Bengali , Assamese , Gujarati , Tamil , Telugu , Malayalam