ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಮಾದಕ ವಸ್ತುಗಳ ಬೇಡಿಕೆ ಕಡಿತ ಬಲಪಡಿಸಿದ ಸರ್ಕಾರ, ವ್ಯಸನ ಮುಕ್ತ ಸೇವೆಗಳನ್ನು ವಿಸ್ತರಿಸುತ್ತದೆ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ಬೆಂಬಲವನ್ನು ಸುಗಮಗೊಳಿಸುತ್ತದೆ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವರಾದ ಶ್ರೀ ಬಿ.ಎಲ್. ವರ್ಮಾ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಹೇಳಿಕೆ


ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನಗಳ ಮೂಲಕ ನಶ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ 29.68 ಕೋಟಿಗೂ ಅಧಿಕ ನಾಗರಿಕರಲ್ಲಿ ಜಾಗೃತಿ

ಎನ್ ಎ ಪಿ ಡಿ ಡಿ ಆರ್ ಅಡಿಯಲ್ಲಿ ದೇಶಾದ್ಯಂತ 765 ವ್ಯಸನ ಮುಕ್ತಿ ಮತ್ತು ಪುನರ್ವಸತಿ ಸೌಲಭ್ಯಗಳನ್ನು ಬೆಂಬಲಿಸಿದ ಸರ್ಕಾರ

प्रविष्टि तिथि: 23 JUL 2026 2:18PM by PIB Bengaluru

ಮಾದಕ ವಸ್ತುಗಳ ಬೇಡಿಕೆ ಕಡಿತ, ಪುನರ್ವಸತಿ ಮತ್ತು ಸಾಮಾಜಿಕ ನ್ಯಾಯ ಕ್ಷೇತ್ರಗಳಲ್ಲಿ ಸಕಾಲಿಕ ಹಣಕಾಸಿನ ನೆರವು, ಪಾರದರ್ಶಕತೆ ವೃದ್ಧಿ ಮತ್ತು ಸೇವೆಗಳ ಸುಧಾರಿತ ವಿತರಣೆ ಖಾತ್ರಿಪಡಿಸಿಕೊಳ್ಳಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಕೇಂದ್ರ ಪ್ರಾಯೋಜಿತ ಯೋಜನೆಗಳ ಜಾರಿಯನ್ನು ನಿರಂತರವಾಗಿ ಬಲಪಡಿಸುತ್ತಿದೆ. ದೇಶಾದ್ಯಂತ ನಿಧಿ ಬಿಡುಗಡೆ ಕಾರ್ಯವಿಧಾನಗಳನ್ನು ಸರಳಗೊಳಿಸಲು, ವ್ಯಸನ ಮುಕ್ತ ಕೇಂದ್ರಗಳ ಮೂಲಸೌಕರ್ಯವನ್ನು ವಿಸ್ತರಿಸಲು ಮತ್ತು ಪುನರ್ವಸತಿ ಸೇವೆಗಳ ಲಭ್ಯತೆಯನ್ನು ಹೆಚ್ಚಿಸಲು ಸಚಿವಾಲಯವು ಕ್ರಮಗಳನ್ನು ಪರಿಚಯಿಸಿದೆ.

ಲೋಕಸಭಾ ಸದಸ್ಯರಾದ ಶ್ರೀಮತಿ ಪ್ರತಿಮಾ ಮೊಂಡಲ್ ಅವರು ಕೇಳಿದ ಹಲವಾರು ಪ್ರಶ್ನೆಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ರಾಜ್ಯ ಸಚಿವರಾದ ಶ್ರೀ ಬಿ.ಎಲ್. ವರ್ಮ  ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

ವಿವಿಧ ಕೇಂದ್ರ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ಪ್ರಸ್ತಾವನೆಗಳ ಸಕಾಲಿಕ ಪ್ರಕ್ರಿಯೆ ಮತ್ತು ನಿಧಿಗಳ ಬಿಡುಗಡೆ ಖಾತ್ರಿಪಡಿಸಿಕೊಳ್ಳಲು ಇಲಾಖೆಯು ಕಠಿಣ ಮೇಲ್ವಿಚಾರಣಾ ಕಾರ್ಯವಿಧಾನವನ್ನು ಸ್ಥಾಪಿಸಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು. ಮಾದಕ ದ್ರವ್ಯ ಬೇಡಿಕೆ ಕಡಿತಕ್ಕಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (NAPDDR) ಮತ್ತು ಅಟಲ್ ವಯೋ ಅಭ್ಯುದಯ ಯೋಜನೆ (AVYAY) ನಂತಹ ಯೋಜನೆಗಳನ್ನು ನುಷ್ಠಾನಗೊಳಿಸುವ ಪಾಲುದಾರ ಸರ್ಕಾರೇತರ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಸರಳಗೊಳಿಸಲು ಪರಿಷ್ಕೃತ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (ಎಸ್ ಒಪಿ) ಪರಿಚಯಿಸಲಾಗಿದೆ, ಅವುಗಳನ್ನು ದಾಖಲಾತಿ ಅಗತ್ಯತೆಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ಆಡಳಿತಾತ್ಮಕ ದಕ್ಷತೆಯನ್ನು ಸುಧಾರಿಸುವ ಮೂಲಕ ಪರಿಚಯಿಸಲಾಗಿದೆ.

ಮಾದಕ ದ್ರವ್ಯ ಸೇವನೆ ತಗ್ಗಿಸಲು  ಸರ್ಕಾರ ಮಾಡುತ್ತಿರುವ ಪ್ರಯತ್ನಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿರುವ ಶ್ರೀ ವರ್ಮಾ, ಸಚಿವಾಲಯವು ಮಾದಕ ದ್ರವ್ಯ ಬೇಡಿಕೆ ಕಡಿತಕ್ಕಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (NAPDDR) ಅಡಿಯಲ್ಲಿ ಸಮಗ್ರ ಮತ್ತು ಪುರಾವೆ ಆಧಾರಿತ ಕಾರ್ಯತಂತ್ರವನ್ನು ಜಾರಿಗೆ ತರುತ್ತಿದೆ ಎಂದು ಹೇಳಿದರು. ಈ ಕಾರ್ಯತಂತ್ರವು ನವದೆಹಲಿಯ ಏಮ್ಸ್‌ನಲ್ಲಿರುವ ರಾಷ್ಟ್ರೀಯ ಔಷಧ ಅವಲಂಬನಾ ಚಿಕಿತ್ಸಾ ಕೇಂದ್ರ (NDDTC) ನಡೆಸಿದ ಭಾರತದಲ್ಲಿ ಮಾದಕ ದ್ರವ್ಯ ಬಳಕೆಯ ಪ್ರಮಾಣ ಮತ್ತು ಮಾದರಿಯ ಕುರಿತಾದ ಮೊದಲ ರಾಷ್ಟ್ರೀಯ ಸಮೀಕ್ಷೆಯ ಸಂಶೋಧನೆಗಳನ್ನು ಆಧರಿಸಿದೆ.

ಸಮೀಕ್ಷೆಯ ಅಂದಾಜಿನ ಪ್ರಕಾರ, ವಯಸ್ಕರಲ್ಲಿ (18 ರಿಂದ 75 ವರ್ಷ ವಯಸ್ಸಿನವರು) ಆಲ್ಕೋಹಾಲ್ ಹೆಚ್ಚು ವ್ಯಾಪಕವಾಗಿ ಸೇವಿಸುವ ವಸ್ತುವಾಗಿದೆ. ಸುಮಾರು 15.10 ಕೋಟಿ ಬಳಕೆದಾರರು, ನಂತರ 2.90 ಕೋಟಿ ಗಾಂಜಾ ಬಳಕೆದಾರರು, 1.90 ಕೋಟಿ ಒಪಿಯಾಯ್ಡ್ ಬಳಕೆದಾರರು, 1.10 ಕೋಟಿ ನಿದ್ದೆ ಬರಿಸುವ ಮದ್ಧು (ಸೆಡೆಟಿವ್) ಬಳಕೆದಾರರು ಮತ್ತು ವರ್ಗದಲ್ಲಿ 60 ಲಕ್ಷ ಇನ್ಹಲೇಂಟ್ ಬಳಕೆದಾರರು ಇದ್ದಾರೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ (10 ರಿಂದ 17 ವರ್ಷ ವಯಸ್ಸಿನವರು) ಸುಮಾರು 40 ಲಕ್ಷ ಒಪಿಯಾಯ್ಡ್ ಬಳಕೆದಾರರು, 30 ಲಕ್ಷ ಆಲ್ಕೋಹಾಲ್ ಬಳಕೆದಾರರು, 30 ಲಕ್ಷ ಇನ್ಹಲೇಂಟ್ ಬಳಕೆದಾರರು ಮತ್ತು 20 ಲಕ್ಷ ಗಾಂಜಾ ಬಳಕೆದಾರರನ್ನು ಸಮೀಕ್ಷೆಯು ಅಂದಾಜಿಸಿದೆ, ಇದು ನಿರಂತರ ಜಾಗೃತಿ, ತಡೆಗಟ್ಟುವಿಕೆ ಮತ್ತು ಚಿಕಿತ್ಸಾ ಉಪಕ್ರಮಗಳ ಅಗತ್ಯವನ್ನು ಒತ್ತಿಹೇಳುತ್ತದೆ.

ಎನ್‌ಎಪಿಡಿಡಿಆರ್ ಅಡಿಯಲ್ಲಿ, ಸಚಿವಾಲಯವು ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು, ಎನ್‌ಜಿಒಗಳು ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಮುನ್ನೆಚ್ಚರಿಕೆ ಶಿಕ್ಷಣ, ಜಾಗೃತಿ ಮೂಡಿಸುವುದು, ಸಮಾಲೋಚನೆ, ಚಿಕಿತ್ಸೆ ಮತ್ತು ಪುನರ್ವಸತಿಗಾಗಿ ಹಣಕಾಸಿನ ನೆರವು ನೀಡುತ್ತದೆ ಎಂದು ಸಚಿವರು ಮಾಹಿತಿ ನೀಡಿದರು. ಪ್ರಸ್ತುತ, ಸಚಿವಾಲಯವು ದೇಶಾದ್ಯಂತ 344 ಸಂಯೋಜಿತ ವ್ಯಸನಿ ಪುನರ್ವಸತಿ ಕೇಂದ್ರಗಳು (IRCAs), 45 ಸಮುದಾಯ ಆಧಾರಿತ ಪೀರ್ ನೇತೃತ್ವದ ಮಧ್ಯಸ್ಥಿಕೆಗಳು (CPLIs), 76 ಜನಸಂಪರ್ಕ (ಔಟ್ರೀಚ್) ಮತ್ತು ಡ್ರಾಪ್-ಇನ್ ಕೇಂದ್ರಗಳು (ODICs), 145 ಜಿಲ್ಲಾ ವ್ಯಸನ ನಿವಾರಣೆ ಕೇಂದ್ರಗಳು (DDACs) ಮತ್ತು 155 ವ್ಯಸನ ಚಿಕಿತ್ಸಾ ಸೌಲಭ್ಯಗಳು (ATFs) ಗಳನ್ನು ಬೆಂಬಲಿಸುತ್ತದೆ.

2020ರ ಆಗಸ್ಟ್ 15 ರಂದು ಆರಂಭವಾದ ಮತ್ತು 2023 ರ ಆಗಸ್ಟ್ ನಲ್ಲಿ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲಾದ ನಶ ಮುಕ್ತ ಭಾರತ ಅಭಿಯಾನ (ಎನ್ ಎಂಬಿಎ) ಮಾದಕ ವ್ಯಸನದ ವಿರುದ್ಧ ವಿಶ್ವದ ಅತಿದೊಡ್ಡ ಜಾಗೃತಿ ಅಭಿಯಾನಗಳಲ್ಲಿ ಒಂದಾಗಿದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಲಾಗಿದೆ.

ಈವರೆಗೆ, ಈ ಅಭಿಯಾನವು ರಾಷ್ಟ್ರವ್ಯಾಪಿ ಜಾಗೃತಿ ಚಟುವಟಿಕೆಗಳ ಮೂಲಕ 11.43 ಕೋಟಿಗೂ ಅಧಿಕ ಯುವಕರು ಮತ್ತು 8.05 ಕೋಟಿ ಮಹಿಳೆಯರು ಸೇರಿ 29.68 ಕೋಟಿಗೂ ಅಧಿಕ ನಾಗರಿಕರನ್ನು ತಲುಪಿದೆ. ಸಮುದಾಯದ ಭಾಗವಹಿಸುವಿಕೆಯನ್ನು ಬಲಪಡಿಸಲು 1.17 ಲಕ್ಷಕ್ಕೂ ಹೆಚ್ಚು ನಶ ಮುಕ್ತಿ ಮಿತ್ರರು ಸಹ ಅಭಿಯಾನದಲ್ಲಿ ಸೇರಿದ್ದಾರೆ. ಇದಲ್ಲದೆ, ದೇಶಾದ್ಯಂತ 21.73 ಲಕ್ಷ ಶಿಕ್ಷಣ ಸಂಸ್ಥೆಗಳಲ್ಲಿ 28.29 ಲಕ್ಷಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ಮತ್ತು ಪುನರ್ವಸತಿ ಕಲ್ಪಿಸಲಾಗಿದೆ ಮತ್ತು ಅವರು ಸಂಪರ್ಕ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ.

ಚಿಕಿತ್ಸಾ ಸೇವೆಗಳ ಲಭ್ಯತೆಯನ್ನು ಸುಧಾರಿಸಲು, ಸಚಿವಾಲಯವು NMBA 2.0 ಮೊಬೈಲ್ ಅಪ್ಲಿಕೇಶನ್ ಅನ್ನು ಆರಂಭಿಸಿದೆ, ಇದು ನಾಗರಿಕರಿಗೆ ಹತ್ತಿರದ ವ್ಯಸನ ಮುಕ್ತ ಕೇಂದ್ರವನ್ನು ಕಂಡುಹಿಡಿಯಲು ಅನುವು ಮಾಡಿಕೊಡುತ್ತದೆ. 2024-25ರ ಅವಧಿಯಲ್ಲಿ, GAP ಜಿಲ್ಲೆಗಳಲ್ಲಿ 55 ಹೊಸ ಜಿಲ್ಲಾ ವ್ಯಸನ ಮುಕ್ತ ಕೇಂದ್ರಗಳನ್ನು (DDACs) ಅನುಮೋದಿಸಲಾಯಿತು, ಆದರೆ 2025-26 ಅವಧಿಯಲ್ಲಿ 21 ಹೆಚ್ಚುವರಿ DDACs ಅನ್ನು ಸ್ಥಾಪಿಸಲಾಯಿತು, ಇದು ದೇಶದ ವ್ಯಸನ ಮುಕ್ತ ಮೂಲಸೌಕರ್ಯವನ್ನು ಮತ್ತಷ್ಟು ವಿಸ್ತರಿಸಿತು.

2024ರ ಡಿಸೆಂಬರ್ ನಲ್ಲಿ ಮೆಸರ್ಸ್ ಡೆವಲಪ್‌ಮೆಂಟ್ & ರಿಸರ್ಚ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು 2025ರಲ್ಲಿ ನೀತಿ ಆಯೋಗ ನಡೆಸಿದ ಸ್ವತಂತ್ರ ತೃತೀಯ ವ್ಯಕ್ತಿಯ ಮೌಲ್ಯಮಾಪನಗಳು ಮಾದಕ ವಸ್ತುಗಳ ಬೇಡಿಕೆ ಕಡಿತಕ್ಕಾಗಿ ರಾಷ್ಟ್ರೀಯ ಕ್ರಿಯಾ ಯೋಜನೆಯು ದೇಶಾದ್ಯಂತ ಸಾಂಸ್ಥಿಕ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಮತ್ತು ಮಾದಕ ವಸ್ತುಗಳ ದುರುಪಯೋಗದ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.

ಪುನರ್ವಸತಿ ಮೂಲಸೌಕರ್ಯವನ್ನು ವಿಸ್ತರಿಸುವುದು, ಮುನ್ನೆಚ್ಚರಿಕೆ ಮಧ್ಯಸ್ಥಿಕೆಗಳನ್ನು ಹೆಚ್ಚಿಸುವುದು, ಅನುಷ್ಠಾನ ಕಾರ್ಯವಿಧಾನಗಳನ್ನು ಸರಳೀಕರಿಸುವುದು ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ಪರಿಣಾಮಕಾರಿ ವಿತರಣೆ ಖಾತ್ರಿಪಡಿಸಿಕೊಳ್ಳುವ ಮೂಲಕ ಸರ್ಕಾರವು ಮಾದಕವಸ್ತು ಮುಕ್ತ ಮತ್ತು ಸಾಮಾಜಿಕವಾಗಿ ಎಲ್ಲರನ್ನೂ ಒಳಗೊಂಡ ಭಾರತದತ್ತ ತನ್ನ ಬದ್ಧತೆಯನ್ನು ಬಲಪಡಿಸುವುದನ್ನು ಮುಂದುವರೆಸಿದೆ. ನಿರಂತರ ಸಮುದಾಯ ಭಾಗವಹಿಸುವಿಕೆ, ಸುಧಾರಿತ ಆಡಳಿತ ಮತ್ತು ತಂತ್ರಜ್ಞಾನ-ಸಕ್ರಿಯಗೊಳಿಸಿದ ಸೇವಾ ವಿತರಣೆಯ ಮೂಲಕ, ಸಚಿವಾಲಯವು ದುರ್ಬಲ ಸಮುದಾಯಗಳನ್ನು ರಕ್ಷಿಸಲು ಮತ್ತು ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಉತ್ತೇಜಿಸಲು ಬದ್ಧವಾಗಿದೆ.

 

*****


(रिलीज़ आईडी: 2288266) आगंतुक पटल : 32
इस विज्ञप्ति को इन भाषाओं में पढ़ें: English , Urdu , हिन्दी , Gujarati , Tamil , Telugu