ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
'ವಿಕಸಿತ ಭಾರತಕ್ಕಾಗಿ ನಶೆ ಮುಕ್ತ ಯುವ' ಎಂಬ ವಿಷಯದಲ್ಲಿ 'ವಿಕಸಿತ ಭಾರತ ಯುವ ಸಂಪರ್ಕ ಕಾರ್ಯಕ್ರಮ'ವನ್ನು “ಮೈ ಭಾರತ್” ಉಪಕ್ರಮವು ಪ್ರಾರಂಭಿಸಲಿದೆ
ಜಾಗೃತಿ ಅಧಿವೇಶನಗಳನ್ನು ಯುವ ಐಕಾನ್ ಗಳು ಮುನ್ನಡೆಸಲಿದ್ದಾರೆ, ಹಾಗೂ, ಮಾದಕ ದ್ರವ್ಯ ಮುಕ್ತ ಮತ್ತು ವಿಕಸಿತ ಭಾರತವನ್ನು ನಿರ್ಮಿಸಲು ಒಂದು ತಿಂಗಳ ಕಾಲದ ಅಭಿಯಾನದಲ್ಲಿ ಯುವಕರನ್ನು ಪ್ರೇರೇಪಿಸಲಿದ್ದಾರೆ
प्रविष्टि तिथि:
15 JUL 2026 4:01PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ '2047ರಲ್ಲಿ ವಿಕಸಿತ ಭಾರತ' ಮತ್ತು ʼನಶೆ ಮುಕ್ತ ಭಾರತ' ವನ್ನು ನಿರ್ಮಿಸುವ ದೃಷ್ಟಿಕೋನಕ್ಕೆ ಅನುಗುಣವಾಗಿ , ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು 'ವಿಕಸಿತ ಭಾರತಕ್ಕಾಗಿ ನಶೆ ಮುಕ್ತ ಯುವ' ಎಂಬ ವಿಶೇಷ ಪರಿಕಲ್ಪನೆಯಡಿಯಲ್ಲಿ ಜುಲೈ 15 ರಿಂದ ಆಗಸ್ಟ್ 15, 2026 ರವರೆಗೆ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ 'ವಿಕಸಿತ ಭಾರತ ಯುವ ಸಂಪರ್ಕ- ಸಂವಾದ ಕಾರ್ಯಕ್ರಮ (ವಿ.ಬಿ.ವೈ.ಸಿ.ಪಿ.)' ಅನ್ನು ಆಯೋಜಿಸುತ್ತಿದೆ.

ಒಂದು ತಿಂಗಳ ಕಾಲ ನಡೆಯುವ ರಾಷ್ಟ್ರವ್ಯಾಪಿ ಉಪಕ್ರಮವು ಯುವ ನಾಗರಿಕರನ್ನು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನದೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ ಮತ್ತು ಮಾದಕ ದ್ರವ್ಯ ಸೇವನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ನಾಗರಿಕ ತೊಡಗಿಸಿಕೊಳ್ಳುವಿಕೆಯನ್ನು ಮಾದಕ ದ್ರವ್ಯ ವಿರೋಧಿ ಜಾಗೃತಿಯೊಂದಿಗೆ ಸಂಯೋಜಿಸುವ ಮೂಲಕ, ಈ ಕಾರ್ಯಕ್ರಮವು ಆರೋಗ್ಯಕರ, ಜವಾಬ್ದಾರಿಯುತ ಮತ್ತು ಮಾದಕ ದ್ರವ್ಯ ಮುಕ್ತ ಭಾರತದ ರಾಯಭಾರಿಗಳಾಗಲು ಯುವಕರನ್ನು ಸಬಲೀಕರಣಗೊಳಿಸಲು ಪ್ರಯತ್ನಿಸುತ್ತದೆ.
ಮೈ ಭಾರತ್ ವೇದಿಕೆಯಲ್ಲಿ ಸಂವಾದಾತ್ಮಕ ಅವಧಿಗಳು, ಪ್ರಸ್ತುತಿಗಳು, ಜಾಗೃತಿ ಚಟುವಟಿಕೆಗಳು ಮತ್ತು ಡಿಜಿಟಲ್ ಭಾಗವಹಿಸುವಿಕೆಯ ಮೂಲಕ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುತ್ತದೆ. ಮಾದಕ ದ್ರವ್ಯ ಮುಕ್ತ ಸಮಾಜವು '2047ರಲ್ಲಿ ವಿಕಸಿತ ಭಾರತ' ಸಂಕಲ್ಪದ ದೃಷ್ಟಿಕೋನವನ್ನು ಸಾಧಿಸಲು ಮೂಲಭೂತವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಸಕ್ರಿಯವಾಗಿ ಕೊಡುಗೆ ನೀಡುವಂತೆ ಯುವಜನರನ್ನು ಪ್ರೋತ್ಸಾಹಿಸಲು ಈ ಕಾರ್ಯಕ್ರಮವು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಯತ್ನಿಸುತ್ತದೆ.
ಕಾರ್ಯಕ್ರಮದ ಭಾಗವಾಗಿ, 'ವಿಕಸಿತ ಭಾರತ ನಾಯಕರ ಸಂಪರ್ಕ - ಸಂವಾದ ಕಾರ್ಯಕ್ರಮದ (ವಿ.ಬಿ.ವೈ.ಸಿ.ಪಿ.)' ರಾಜ್ಯ ಚಾಂಪಿಯನ್ ಗಳು, ವಿಕಸಿತ ಭಾರತ ಯುವ ಸಂಸತ್ತಿನ ವಿಜೇತರು, ಎನ್.ಎಸ್.ಎಸ್. ಪ್ರಶಸ್ತಿ ಪುರಸ್ಕೃತರು, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರು ಮತ್ತು ಇತರ ಸಾಧನೆಗೈದ ಯುವ ನಾಯಕರು ಸೇರಿದಂತೆ ಪ್ರತಿಷ್ಠಿತ ಯುವ ಐಕಾನ್ ಗಳು ವಿದ್ಯಾರ್ಥಿಗಳೊಂದಿಗೆ ಸಂವಹನ ಹಾಗೂ ಸಂವಾದ ನಡೆಸಲು ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡುತ್ತಾರೆ. ಅವರು ಭಾರತದ ಅಭಿವೃದ್ಧಿ ಪ್ರಯಾಣದ ಕುರಿತು ಒಳನೋಟಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಮಾದಕ ದ್ರವ್ಯ ದುರುಪಯೋಗವು ವೈಯಕ್ತಿಕ ಆಕಾಂಕ್ಷೆಗಳು, ಸಾಮಾಜಿಕ ಯೋಗಕ್ಷೇಮ ಮತ್ತು ರಾಷ್ಟ್ರೀಯ ಪ್ರಗತಿಗೆ ಹೇಗೆ ಗಂಭೀರ ಸವಾಲನ್ನು ಒಡ್ಡುತ್ತದೆ ಎಂಬುದನ್ನು ವಿವರಿಸಿ ಕೊಡುತ್ತಾರೆ.
ಭಾಗವಹಿಸುವವರು ಮಾದಕ ದ್ರವ್ಯ ದುರುಪಯೋಗದಿಂದ ಪ್ರಭಾವಿತರಾದ ವ್ಯಕ್ತಿಗಳು ಮತ್ತು ಕುಟುಂಬಗಳ ಅನುಭವಗಳನ್ನು ಒಳಗೊಂಡ ವಿಶೇಷವಾಗಿ ಸಂಗ್ರಹಿಸಲಾದ ಜಾಗೃತಿ ಚಲನಚಿತ್ರವನ್ನು ವೀಕ್ಷಿಸುತ್ತಾರೆ, ನಂತರ ಆರೋಗ್ಯಕರ ಜೀವನವನ್ನು ನಡೆಸುವ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವ ಬಗ್ಗೆ ಅವರ ಬದ್ಧತೆಯನ್ನು ಪುನರುಚ್ಚರಿಸುವ ನಶೆ ಮುಕ್ತ ಭಾರತ ಪ್ರತಿಜ್ಞೆಯನ್ನು ವೀಕ್ಷಿಸುತ್ತಾರೆ. ಸಾಧ್ಯವಾದಲ್ಲೆಲ್ಲಾ, ಅಭಿಯಾನದ ಪರಿಣಾಮವನ್ನು ಬಲಪಡಿಸಲು, ಎನ್.ಜಿ.ಒ.ಗಳು ಮತ್ತು ಆಧ್ಯಾತ್ಮಿಕ ಸಂಸ್ಥೆಗಳ ಸಹಯೋಗದೊಂದಿಗೆ “ರಿಕವರಿ ವಾರಿಯರ್ಸ್” ನ ವೈಯಕ್ತಿಕ ಪ್ರಶಂಸಾಪತ್ರಗಳನ್ನು ಸಹ ಸೇರಿಸಲಾಗುವುದು.
ಹೆಚ್ಚಿನ ಯುವ ಭಾಗವಹಿಸುವಿಕೆಯನ್ನು ಉತ್ತೇಜಿಸಲು, ಮೈ ಭಾರತ್ ಪೋರ್ಟಲ್ ನಲ್ಲಿ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಲು ಮತ್ತು ಸಂಸ್ಥೆಯ ವಿವಿಧ ಯುವ ಅಭಿವೃದ್ಧಿ ಉಪಕ್ರಮಗಳೊಂದಿಗೆ ಭಾಗವಹಿಸುವವರಿಗೆ ಪರಿಚಿತರಾಗಲು ಕಾರ್ಯಕ್ರಮದ ಸ್ಥಳಗಳಲ್ಲಿ ಮೈ ಭಾರತ್ ಫೆಸಿಲಿಟೇಶನ್ ಡೆಸ್ಕ್ ಗಳನ್ನು ಸ್ಥಾಪಿಸಲಾಗುವುದು. ಬ್ಯಾನರ್ ಗಳು, ಸ್ಟ್ಯಾಂಡ್ ಗಳು ಮತ್ತು ಡಿಜಿಟಲ್ ಪ್ರಚಾರದ ಮೂಲಕ ವ್ಯಾಪಕವಾದ ಪ್ರಚಾರವು ದೇಶಾದ್ಯಂತ ಅಭಿಯಾನವನ್ನು ಮತ್ತಷ್ಟು ವರ್ಧಿಸುತ್ತದೆ.
ಈ ಕಾರ್ಯಕ್ರಮವು ಪ್ರಾಥಮಿಕವಾಗಿ ಗ್ರಾಮೀಣ, ನಗರ ಮತ್ತು ಬುಡಕಟ್ಟು ಸಮುದಾಯಗಳ 15-25 ವರ್ಷ ವಯಸ್ಸಿನ ಯುವಕರನ್ನು ತೊಡಗಿಸಿಕೊಳ್ಳುತ್ತದೆ. ಭಾಗವಹಿಸುವ ಸಂಸ್ಥೆಗಳು ತರುವಾಯ ನಿರಂತರ ಯುವ ತೊಡಗಿಸಿಕೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಭವಿಷ್ಯದ ಮೈ ಭಾರತ್ ಉಪಕ್ರಮಗಳ ಅನುಷ್ಠಾನವನ್ನು ಸುಗಮಗೊಳಿಸಲು ಮೈ ಭಾರತ್ ಘಟಕಗಳನ್ನು ಸ್ಥಾಪಿಸಬಹುದು. ಎಲ್ಲಾ ನೋಂದಣಿಗಳು ಮತ್ತು ಕಾರ್ಯಕ್ರಮ-ಸಂಬಂಧಿತ ಚಟುವಟಿಕೆಗಳನ್ನು ಮೈ ಭಾರತ್ ಪೋರ್ಟಲ್ ಮೂಲಕ ಕೈಗೊಳ್ಳಲಾಗುತ್ತದೆ.
ವಿಕಸಿತ ಭಾರತ ಯುವ ಸಂಪರ್ಕ ಸಂವಾದ ಕಾರ್ಯಕ್ರಮವು ಮೈಭಾರತದ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಈ ಮೂಲಕ 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಮುನ್ನಡೆಸಲು ಯವಜನತೆ ಸಹಾಯ ಮಾಡುತ್ತಾರೆ ಮತ್ತು ಮಾದಕ ದ್ರವ್ಯ ಮುಕ್ತ ಸಮಾಜವನ್ನು ಮುನ್ನಡೆಸುತ್ತಾರೆ
*****
(रिलीज़ आईडी: 2284931)
आगंतुक पटल : 11