ಜಲ ಶಕ್ತಿ ಸಚಿವಾಲಯ
azadi ka amrit mahotsav

ಮೂಲಸೌಕರ್ಯ ಸೃಷ್ಟಿಯಿಂದ ಸೇವಾ ವಿತರಣೆಯವರೆಗೆ: 10ನೇ ಜಿಲ್ಲಾಧಿಕಾರಿಗಳ ಸಂವಾದವನ್ನು ನಡೆಸಿದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (ಡಿಡಿಡಬ್ಲ್ಯೂಎಸ್)


ಜಲ ಜೀವನ್ ಮಿಷನ್ 2.0 ಅಡಿಯಲ್ಲಿ ಸುಸ್ಥಿರ ಗ್ರಾಮೀಣ ನೀರು ಸೇವಾ ವಿತರಣೆಯಲ್ಲಿ ಅತ್ಯುತ್ತಮ ಪದ್ಧತಿಗಳನ್ನು ಪ್ರದರ್ಶಿದ ಐದು ಜಿಲ್ಲೆಗಳು

प्रविष्टि तिथि: 14 JUL 2026 4:09PM by PIB Bengaluru

ಜಲ ಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (ಡಿಡಿಡಬ್ಲ್ಯೂಎಸ್) ವೀಡಿಯೊ ಕಾನ್ಫರೆನ್ಸ್ ಮೂಲಕ ಇಂದು 10ನೇ ಆವೃತ್ತಿಯ ಜಿಲ್ಲಾಧಿಕಾರಿಗಳ ಪೇಜಲ್ ಸಂವಾದದ ಆಯೋಜಿಸಿತ್ತು. ಸಮುದಾಯದ ಪಾಲ್ಗೊಳ್ಳುವಿಕೆ ಮೂಲಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರಿನ ಸೇವಾ ವಿತರಣೆಯನ್ನು ಬಲವರ್ಧನೆಗೊಳಿಸಲು ಜಲ ಜೀವನ್ ಮಿಷನ್ (ಜೆಜೆಎಂ) 2.0 ಜಾರಿಗೆ ವೇಗ ನೀಡುವ ಕುರಿತು ಚರ್ಚಿಸಲು ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು/ಪ್ರಾದೇಶಿಕ ಆಯುಕ್ತರು ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮಿಷನ್ ನಿರ್ದೇಶಕರನ್ನು ಒಗ್ಗೂಡಿಸಿತು. ಡಿಡಿಡಬ್ಲ್ಯೂಎಸ್ ಕಾರ್ಯದರ್ಶಿ ಶ್ರೀ ಅಶೋಕ್ ಕೆ.ಕೆ. ಮೀನಾ ಅಧ್ಯಕ್ಷತೆಯಲ್ಲಿ ಸಂವಾದ ನಡೆಯಿತು. ರಾಷ್ಟ್ರೀಯ ಜಲ ಜೀವನ್ ಮಿಷನ್ (ಎನ್‌ಜೆಜೆಎಂ) ನ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕ ಶ್ರೀ ಕಮಲ್ ಕಿಶೋರ್ ಸೋನ್ ಮತ್ತು ಡಿಡಿಡಬ್ಲ್ಯೂಎಸ್‌ನ ಇತರ ಹಿರಿಯ ಅಧಿಕಾರಿಗಳು ಸಹ ಭಾಗವಹಿಸಿದ್ದರು.

ಡಿಡಿಡಬ್ಲ್ಯೂಎಸ್ ಕಾರ್ಯದರ್ಶಿ ಶ್ರೀ ಅಶೋಕ್ ಕೆ.ಕೆ. ಮೀನಾ ತಮ್ಮ ಉದ್ಘಾಟನಾ ಭಾಷಣದಲ್ಲಿ, ಜಲ ಜೀವನ್ ಮಿಷನ್ ಹೊಸ ಹಂತವನ್ನು ಪ್ರವೇಶಿಸಿದ್ದು, ಅಲ್ಲಿ ಗಮನವು ಮೂಲಸೌಕರ್ಯ ಸೃಷ್ಟಿಯಿಂದ ಸಮುದಾಯ ನೇತೃತ್ವದ ಆಡಳಿತ (ಜನ ಭಾಗೀದಾರಿ) ಮೂಲಕ ಭರವಸೆಯ ಮತ್ತು ಸುಸ್ಥಿರ ಗ್ರಾಮೀಣ ಕೊಳವೆ ನೀರು ಸೇವಾ ವಿತರಣೆಯತ್ತ ಸಾಗಿದೆ ಎಂದು ಹೇಳಿದರು.

ಸಮುದಾಯ ಮಾಲೀಕತ್ವವನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದ ಶ್ರೀ ಅಶೋಕ್ ಕೆ.ಕೆ. ಮೀನಾ, ರಾಜ್ಯಗಳು ಮತ್ತು ಜಿಲ್ಲೆಗಳು ಹರ್ ಘರ್ ಜಲ (ಎಚ್ಜಿಜೆ) ಗ್ರಾಮ ಪಂಚಾಯತ್ಗಳ (ಜಿಪಿಗಳು) ಪ್ರಮಾಣೀಕರಣವನ್ನು ವೇಗಗೊಳಿಸಬೇಕು ಮತ್ತು ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಗಳ ಸ್ಥಳೀಯ ಮಾಲೀಕತ್ವವನ್ನು ಬಲಪಡಿಸಲು ಪ್ರತಿ ಗ್ರಾಮ ಪಂಚಾಯತಿಯಲ್ಲಿ ವಾರ್ಷಿಕ ಸಮುದಾಯ ನೇತೃತ್ವದ ಕಾರ್ಯಕ್ರಮವಾಗಿ ಜಲ ಅರ್ಪಣ್ ಅನ್ನು ಸಾಂಸ್ಥಿಕಗೊಳಿಸಬೇಕು ಎಂದು ಕರೆ ನೀಡಿದರು. ನೀರಿನ ಸೇವಾ ವಿತರಣೆಯನ್ನು ಪ್ರಾಮುಖ್ಯತೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, ಜಲ ಸೇವಾ ಆಂಕಲನ್ ಅಡಿಯಲ್ಲಿ ದೇಶಾದ್ಯಂತ 1.17 ಲಕ್ಷಕ್ಕೂ ಅಧಿಕ ಚಟುವಟಿಕೆಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ ಎಂದು ಉಲ್ಲೇಖಿಸಿದರು. ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆ (ಒ & ಎಂ) ಮತ್ತು ಮಿಷನ್ ಅಡಿಯಲ್ಲಿ ರಚಿಸಲಾದ ಸ್ವತ್ತುಗಳನ್ನು ಈಗ ಗ್ರಾಮ ಪಂಚಾಯತ್‌ಗಳು ಮತ್ತು ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು (ವಿಡಬ್ಲ್ಯೂಎಸ್‌ಸಿ) ನಿರ್ವಹಿಸಬೇಕು ಎಂದು ಅವರು ಒತ್ತಿ ಹೇಳಿದರು.

ಜಲ ಆಡಳಿತದಲ್ಲಿ ಡಿಜಿಟಲ್ ತಂತ್ರಜ್ಞಾನಗಳ ಹೆಚ್ಚುತ್ತಿರುವ ಪಾತ್ರದ ಕುರಿತು ಮಾತನಾಡಿದ ಕಾರ್ಯದರ್ಶಿ, ಪ್ರಧಾನ ಮಂತ್ರಿ ಗತಿ ಶಕ್ತಿ ಪೋರ್ಟಲ್ನೊಂದಿಗೆ ಸಂಯೋಜಿಸಲ್ಪಟ್ಟ ಸುಜಲಾಂ ಭಾರತ್ ಡಿಜಿಟಲ್ ರಿಜಿಸ್ಟ್ರಿಯ ಮೂಲಕ ಜಲ ಮೂಲದಿಂದ ಕೊಳಾಯಿವರೆಗೆ ಎಲ್ಲಾ ಗ್ರಾಮೀಣ ನೀರು ಸರಬರಾಜು ಸ್ವತ್ತುಗಳ ಡಿಜಿಟಲ್ ಮ್ಯಾಪಿಂಗ್ ಅನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ರಾಜ್ಯ ಮತ್ತು ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಯೋಜನೆ, ಮೇಲ್ವಿಚಾರಣೆ, ಮುನ್ನೆಚ್ಚರಿಕೆ ಕ್ರಮಗಳು ಮತ್ತು ಸಾಕ್ಷ್ಯ ಆಧಾರಿತ ನಿರ್ಧಾರ ತೆಗೆದುಕೊಳ್ಳುವಿಕೆ ಬಲಪಡಿಸಲು ಎಲ್ಲಾ ನೀರು ಸರಬರಾಜು ಸ್ವತ್ತುಗಳನ್ನು ಜಿಯೋ-ಟ್ಯಾಗ್ ಮಾಡಬೇಕು ಎಂದು ಅವರು ಒತ್ತಿ ಹೇಳಿದರು.

A group of people sitting at a tableAI-generated content may be incorrect.

ಸಭೆಯನ್ನುದ್ದೇಶಿಸಿ ಮಾತನಾಡಿದ ಎನ್ ಜೆಜೆಎಂ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕ ಶ್ರೀ ಕಮಲ್ ಕಿಶೋರ್ ಸೋನ್, ಗ್ರಾಮೀಣ ಪ್ರದೇಶಗಳಲ್ಲಿ ಸುರಕ್ಷಿತ ಕುಡಿಯುವ ನೀರಿನ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಲು ಜೆಜೆಎಂ 2.0 ನ ಉದ್ದೇಶಗಳನ್ನು ಗಮನಾರ್ಹ ಫಲಿತಾಂಶಗಳಾಗಿ ಪರಿವರ್ತಿಸುವಲ್ಲಿ ಜಿಲ್ಲಾಡಳಿತಗಳ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು. ನಿರಂತರ ಸೇವಾ ವಿತರಣೆ, ಮೂಲ ಸುಸ್ಥಿರತೆ, ಸಮುದಾಯದ ಭಾಗವಹಿಸುವಿಕೆ ಮತ್ತು ತಂತ್ರಜ್ಞಾನ ಆಧಾರಿತ ಮೇಲ್ವಿಚಾರಣೆಯು ಮುಂದೆ ಈ ಮಿಷನ್‌ನ ನಿರ್ಣಾಯಕ ಸ್ತಂಭಗಳಾಗಿವೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಗ್ರಾಮೀಣ ಕುಡಿಯುವ ನೀರಿನ ವ್ಯವಸ್ಥೆಗಳ ದೀರ್ಘಕಾಲೀನ ಕಾರ್ಯವನ್ನು ಖಚಿತಪಡಿಸಿಕೊಳ್ಳಲು ಎಚ್ ಜಿಜೆ ಸ್ವತ್ತುಗಳನ್ನು ಸೂಕ್ತ ಮ್ಯಾಪ್ ಮಾಡುವ ಮೂಲಕ ಇಲಾಖೆಗಳ ನಡುವೆ ಸಂಯೋಜನೆಯನ್ನು ಬಲಪಡಿಸಲು, ನಿಗದಿತವಾಗಿ ಜಾರಿಯನ್ನು ಪರಿಶೀಲಿಸಲು ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಅವರು ಜಿಲ್ಲಾಧಿಕಾರಿಗಳಿಗೆ ಕರೆ ನೀಡಿದರು.

ಪೇಜಲ್ ಸಂವಾದದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸೇವೆಗಳ ಸುಸ್ಥಿರತೆಯನ್ನು ಬಲಪಡಿಸುವಲ್ಲಿ 16 ನೇ ಹಣಕಾಸು ಆಯೋಗದ ನೀರು, ನೈರ್ಮಲ್ಯ ಮತ್ತು ನೈರ್ಮಲ್ಯ (WaSH) ಅನುದಾನದ ಪ್ರಮುಖ ಪಾತ್ರವನ್ನು ವಿವರವಾದ ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಲಾಯಿತು. ಜೆಜೆಎಂ 2.0 ಅಡಿಯಲ್ಲಿ ಜಾರಿಯನ್ನು ಬಲಪಡಿಸುವಲ್ಲಿ ಇತರ ಜಿಲ್ಲೆಗಳಿಗೆ ಬೆಂಬಲ ನೀಡಲು ಮತ್ತು ಪರಸ್ಪರ ಕಲಿಕೆಯನ್ನು ಸುಲಭಗೊಳಿಸಲು ಐದು ಆಯ್ದ ಜಿಲ್ಲೆಗಳಾದ ಕಿನ್ನೌರ್ (ಹಿಮಾಚಲ ಪ್ರದೇಶ), ಹಾವೇರಿ (ಕರ್ನಾಟಕ), ದುಮ್ಕಾ (ಜಾರ್ಖಂಡ್), ದಕ್ಷಿಣ ಗೋವಾ (ಗೋವಾ) ಮತ್ತು ಉನಕೋಟಿ (ತ್ರಿಪುರ)ಗಳ ಪ್ರಗತಿ ಮತ್ತು ಉತ್ತಮ ಅಭ್ಯಾಸಗಳನ್ನು ಆಯಾ ಜಿಲ್ಲಾಧಿಕಾರಿಗಳು ಪ್ರಸ್ತುತಪಡಿಸಿದರು.

ಆಯಾ ಜಿಲ್ಲಾಧಿಕಾರಿ/ಜಿಲ್ಲಾ ನ್ಯಾಯಾಧೀಶರು ಪ್ರಸ್ತುತಪಡಿಸಿದ ಐದು ಜಿಲ್ಲೆಗಳು ಹಂಚಿಕೊಂಡ ನವೀನ ಅತ್ಯುತ್ತಮ ಪದ್ದತಿಗಳು.

  • ಕಿನ್ನೌರ್, ಹಿಮಾಚಲ ಪ್ರದೇಶ: ಜಿಲ್ಲಾಧಿಕಾರಿ ಡಾ. ಅಮಿತ್ ಕುಮಾರ್ ಶರ್ಮಾ, ಕಷ್ಟಕರವಾದ ಪರ್ವತ ಪ್ರದೇಶ, ಚದುರಿದ ವಾಸಸ್ಥಳಗಳು ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಸವಾಲುಗಳ ಹೊರತಾಗಿಯೂ ಎಲ್ಲಾ 210 ಹಳ್ಳಿಗಳಲ್ಲಿ ಶೇ.100ರಷ್ಟು ಹರ್ ಘರ್ ಜಲ ವ್ಯಾಪ್ತಿಯನ್ನು ಹೊಂದಿರುವ ಕಿನ್ನೌರ್‌ನ ಸಾಧನೆಯನ್ನು ಪ್ರದರ್ಶಿಸಿದರು. ದೀರ್ಘಕಾಲೀನ ನೀರಿನ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಮೂಲ ವರ್ಧನೆ, ಮೂಲಸೌಕರ್ಯ ಆಧುನೀಕರಣ, ಕೊಳದ ಪುನರುಜ್ಜೀವನ, ಹಿಮ-ನೀರಿನ ಕೊಯ್ಲು, ಅಂತರ್ಜಲ ಮರುಪೂರಣ ಮತ್ತು ಸಾಂಪ್ರದಾಯಿಕ ಜಲಮೂಲಗಳ ರಕ್ಷಣೆಯಂತಹ ನವೀನ ಮಧ್ಯಸ್ಥಿಕೆಗಳನ್ನು ಜಿಲ್ಲೆಯು ಎತ್ತಿ ತೋರಿಸಿದೆ. ಸುಜಲಾಂ ಭಾರತ್ ಡಿಜಿಟಲ್ ರಿಜಿಸ್ಟ್ರಿಯ ಅಳವಡಿಕೆ, ಜಿಐಎಸ್ ಆಧಾರಿತ ಮೇಲ್ವಿಚಾರಣೆ, ನಿಗದಿತ ಡಿಡಬ್ಲ್ಯೂಎಸ್‌ಎಂ ಅವಲೋಕನ ಸಭೆಗಳು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು (ವಿಡಬ್ಲ್ಯೂಎಸ್‌ಸಿಗಳು) ಬಲವರ್ಧನೆ, ಮತ್ತು ಜಲ ಮಹೋತ್ಸವ, ಜಲ ಅರ್ಪಣ್ ಮತ್ತು ಮಹಿಳೆಯರ ನೇತೃತ್ವದ ನೀರಿನ ಗುಣಮಟ್ಟ ಪರೀಕ್ಷೆಯಂತಹ ಸಮುದಾಯ ನೇತೃತ್ವದ ಉಪಕ್ರಮಗಳು ಜೆಜೆಎಂ 2.0 ಅಡಿಯಲ್ಲಿ ಸುಸ್ಥಿರ ಸೇವಾ ವಿತರಣೆಯನ್ನು ಮತ್ತಷ್ಟು ಬಲಪಡಿಸಿವೆ.

A person sitting at a tableAI-generated content may be incorrect.

  • ಹಾವೇರಿ, ಕರ್ನಾಟಕ: ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ಬಿ. ದಾನಮ್ಮನವರ್ ಅವರು ತಂತ್ರಜ್ಞಾನ-ಆಧರಿತ ಆಡಳಿತ ಮತ್ತು ಸಮುದಾಯ ನೇತೃತ್ವದ ಕಾರ್ಯಾಚರಣೆ ಮತ್ತು ನಿರ್ವಹಣೆಯ ಮೂಲಕ ಸುಸ್ಥಿರ ಕುಡಿಯುವ ನೀರಿನ ಸೇವೆಗಳನ್ನು ಮುಂದುವರಿಸುವಲ್ಲಿ ಹಾವೇರಿಯ ಪ್ರಗತಿಯನ್ನು ಪ್ರಸ್ತುತಪಡಿಸಿದರು. ಜಿಲ್ಲೆಯು ಶೇ.95.36ರಷ್ಟು ಕ್ರಿಯಾತ್ಮಕ ಗೃಹಬಳಕೆಯ ಟ್ಯಾಪ್ ಸಂಪರ್ಕ (ಎಫ್ ಎಚ್ ಟಿಸಿ) ವ್ಯಾಪ್ತಿಯನ್ನು ಸಾಧಿಸಿದೆ ಮತ್ತು ವಿನ್ಯಾಸ-ನಿರ್ಮಾಣ-ನಿರ್ವಹಣೆ-ವರ್ಗಾವಣೆ (ಡಿಬಿಒಟಿ) ಮಾದರಿಯಡಿಯಲ್ಲಿ ದೊಡ್ಡ ಬಹು ಗ್ರಾಮ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಸಾರ್ವತ್ರಿಕ ಕಾರ್ಯನಿರ್ವಹಣೆ ಮತ್ತು ನಿರ್ವಹಣೆ ನೀತಿಗಳ ಅಳವಡಿಕೆ, ನೀರು ಸರಬರಾಜು ಸ್ವತ್ತುಗಳ ಜಿಯೋ-ಟ್ಯಾಗಿಂಗ್, ಸುಜಲ್ ಗಾಂವ್ ಆಧಾರಿತ ಆಸ್ತಿ ನಿರ್ವಹಣೆ, ಪಾರದರ್ಶಕ ನೀರಿನ ಗುಣಮಟ್ಟದ ಮೇಲ್ವಿಚಾರಣೆಗಾಗಿ ಜೀವ ಜಲ ಮೊಬೈಲ್ ಅಪ್ಲಿಕೇಶನ್ ಮತ್ತು ಆರು ಗ್ರಾಮಗಳನ್ನು 24×7 ನೀರು ಸರಬರಾಜು ಗ್ರಾಮಗಳಾಗಿ ಘೋಷಿಸುವುದು, ಸೇವಾ ದಕ್ಷತೆಯನ್ನು ಸುಧಾರಿಸುವುದು, ನೀರಿನ ಬಳಕೆಯನ್ನು ತಗ್ಗಿಸುವುದು ಮತ್ತು ಪಂಪಿಂಗ್ ಸಮಯವನ್ನು ತಗ್ಗಿಸುವುದು ಪ್ರಮುಖ ಆವಿಷ್ಕಾರಗಳಾಗಿವೆ.

A group of men sitting at a tableAI-generated content may be incorrect.

  • ದುಮ್ಕಾ, ಜಾರ್ಖಂಡ್: ಗ್ರಾಮೀಣ ಕುಡಿಯುವ ನೀರಿನ ಮೂಲಸೌಕರ್ಯವನ್ನು ಪುನಃಸ್ಥಾಪಿಸುವ ಮತ್ತು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ದುಮ್ಕಾದ ಯಶಸ್ವಿ ಸಂಯೋಜನೆ ಆಧಾರಿತ ವಿಧಾನವನ್ನು ಜಿಲ್ಲಾಧಿಕಾರಿ ಶ್ರೀ ಅಭಿಜೀತ್ ಸಿನ್ಹಾ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಸಮಗ್ರ ನಿಯಂತ್ರಣ ಕೊಠಡಿಯ ಸ್ಥಾಪನೆ, ಗ್ರಾಮ ಮಟ್ಟದ ನಿರ್ವಹಣಾ ಸಿಬ್ಬಂದಿಗೆ ತರಬೇತಿ, ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಬಿಡಿಭಾಗಗಳ ಪೂರೈಕೆ ಸರಪಳಿಗಳು ಮತ್ತು ಬಲಪಡಿಸಿದ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳು ಕಾರ್ಯಕ್ಷಮತೆ ಮತ್ತು ಸ್ಪಂದಿಸುವಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಿವೆ. ಜನ್ ಭಾಗೀದಾರಿ, ಜಲ ಅರ್ಪಣ್ ದಿವಸ್, ಜಲ ಸಹಿಯಾಸ್, ಬಳಕೆದಾರರ ಶುಲ್ಕ ಸಂಗ್ರಹಣೆ ಮತ್ತು ನೀರಿನ ಗುಣಮಟ್ಟದ ಕಣ್ಗಾವಲು ಮೂಲಕ ಸಮುದಾಯದ ಭಾಗವಹಿಸುವಿಕೆಯು ನೀರು ಸರಬರಾಜು ವ್ಯವಸ್ಥೆಗಳ ಮಾಲೀಕತ್ವ ಮತ್ತು ಸುಸ್ಥಿರತೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಿದೆ.

A screenshot of a video chatAI-generated content may be incorrect.

  • ದಕ್ಷಿಣ ಗೋವಾ, ಗೋವಾ: ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಶ್ರೀಮತಿ ಈಗನ್ ಕ್ಲೀಟಸ್, ಡಿಜಿಟಲ್ ತಂತ್ರಜ್ಞಾನಗಳು ಮತ್ತು ಸುಸ್ಥಿರ ಜಲ ಸಂಪನ್ಮೂಲ ನಿರ್ವಹಣೆಯ ಮೂಲಕ ಸ್ಮಾರ್ಟ್ ವಾಟರ್ ಯುಟಿಲಿಟಿಯನ್ನು ಅಭಿವೃದ್ಧಿಪಡಿಸುವ ದಕ್ಷಿಣ ಗೋವಾದ ದೂರದೃಷ್ಟಿಯನ್ನು ಪ್ರಸ್ತುತ ಪಡಿಸಿದರು. ಜಿಲ್ಲೆಯು ಎಲ್ಲಾ 118 ಜಲ ಜೀವನ್ ಮಿಷನ್ ಕಾರ್ಯಗಳನ್ನು ಪೂರ್ಣಗೊಳಿಸಿದೆ ಮತ್ತು ಕಾರ್ಯಾರಂಭ ಮಾಡಿದೆ, ಎಲ್ಲಾ ಗ್ರಾಮೀಣ ಮನೆಗಳಿಗೆ ಕೊಳಾಯಿ ನೀರಿನ ಸಂಪರ್ಕವನ್ನು ಖಚಿತಪಡಿಸುತ್ತದೆ, ಆದರೆ ರಾಜ್ಯದ ಕುಡಿಯುವ ನೀರಿನ ಬೇಡಿಕೆಯ ಸುಮಾರು ಶೇ. 96 ರಷ್ಟು ಮೇಲ್ಮೈ ನೀರು ಆಧಾರಿತ ಪ್ರಾದೇಶಿಕ ನೀರು ಸರಬರಾಜು ವ್ಯವಸ್ಥೆಗಳ ಮೂಲಕ ಪೂರೈಸಲಾಗುತ್ತಿದೆ. ಜಿಐಎಸ್-ಆಧಾರಿತ ನೆಟ್‌ವರ್ಕ್ ಮ್ಯಾಪಿಂಗ್, ಇಂಟರ್ ನೆಂಟ್ ಆಫ್ ಥಿಂಗ್ಸ್ IoT- ಆಧರಿಸಿದ ಮೇಲ್ವಿಚಾರಣೆ, SCADA ವ್ಯವಸ್ಥೆಗಳು, ಸ್ಮಾರ್ಟ್ ಮೀಟರಿಂಗ್ ಉಪಕ್ರಮಗಳು, ನಿಯಮಿತ DWSM ಅವಲೋಕನಗಳು, ಗ್ರಾಮ ಮಟ್ಟದ ನೀರಿನ ಗುಣಮಟ್ಟದ ಕಣ್ಗಾವಲು ಮತ್ತು ರಚನಾತ್ಮಕ O&M ಯೋಜನೆಗಳ ಅಳವಡಿಕೆಯು ವಿಶ್ವಾಸಾರ್ಹ, ಪರಿಣಾಮಕಾರಿ ಮತ್ತು ಸುಸ್ಥಿರ ಕುಡಿಯುವ ನೀರಿನ ಸೇವಾ ವಿತರಣೆಯನ್ನು ಬಲಪಡಿಸುತ್ತಿದೆ.

A screen shot of a personAI-generated content may be incorrect.

  • ಉನಕೋಟಿ, ತ್ರಿಪುರ: ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಕಲೆಕ್ಟರ್ ಶ್ರೀಮತಿ ಮೇಘಾ ಜೈನ್, ಗ್ರಾಮೀಣ ಕುಡಿಯುವ ನೀರಿನ ಲಭ್ಯತೆಯನ್ನು ವಿಸ್ತರಿಸುವಲ್ಲಿ ಜಿಲ್ಲೆಯ ಪ್ರಗತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಶೇ. 89.16 ರಷ್ಟು ಎಫ್ ಎಚ್ ಟಿಸಿ ವ್ಯಾಪ್ತಿಯು 47,800 ಕ್ಕೂ ಹೆಚ್ಚು ಮನೆಗಳಿಗೆ ಪ್ರಯೋಜನವನ್ನು ನೀಡಿತು. ನಿಯಮಿತ ಡಿಡಬ್ಲೂ ಎಸ್ ಎಂ ಸಭೆಗಳು, ಮೂರನೇ ವ್ಯಕ್ತಿಯ ತಪಾಸಣೆಗಳು, ಡಿಜಿಟಲ್ ಕುಂದುಕೊರತೆ ಪರಿಹಾರ ವೇದಿಕೆಗಳು ಮತ್ತು ಸಮುದಾಯ ತೊಡಗಿಸಿಕೊಳ್ಳುವ ಕಾರ್ಯವಿಧಾನಗಳ ಮೂಲಕ ಜಿಲ್ಲೆಯು ಬಲವಾದ ಮೇಲ್ವಿಚಾರಣೆಯನ್ನು ಪ್ರದರ್ಶಿಸಿತು. ಅಂತರ್ಜಲ ಮರುಪೂರಣ, ಮೂಲ ಸುಸ್ಥಿರತೆ, ಮನ್ರೇಗಾದೊಂದಿಗೆ ಸಂಯೋಜನೆ, ಹಣಕಾಸು ಆಯೋಗದ ಅನುದಾನಗಳು ಮತ್ತು ಎಸ್ ಬಿಎಂ (ಜಿ), ನವೀನ ಮರುಪೂರಣ ಮಧ್ಯಸ್ಥಿಕೆಗಳ ಮೇಲೆ ಒತ್ತು ನೀಡಲಾಯಿತು. ಕಲಿಗಿರಿ ಮೇಲ್ಮೈ ನೀರಿನ ಯೋಜನೆಯ ಯಶಸ್ವಿ ಅನುಷ್ಠಾನವು ಸಮುದಾಯ-ನೇತೃತ್ವದ ಯೋಜನೆಯು ಕಾಲಮಿತಿಯಲ್ಲಿ ಮತ್ತು ಟ್ಯಾಂಕರ್ ಆಧಾರಿತ ಸರಬರಾಜುಗಳನ್ನು ಸುಸ್ಥಿರ ಪೈಪ್ ಕುಡಿಯುವ ನೀರಿನಿಂದ ಬದಲಾಯಿಸುವ ಮೂಲಕ ದೂರದ ಗಡಿ ಹಳ್ಳಿಗಳಲ್ಲಿ ನೀರಿನ ಲಭ್ಯತೆಯನ್ನು ಹೇಗೆ ಪರಿವರ್ತಿಸಿತು, ಸಾರ್ವಜನಿಕ ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಹೇಗೆ ಗಮನಾರ್ಹವಾಗಿ ಸುಧಾರಿಸಿತು ಎಂಬುದನ್ನು ಪ್ರದರ್ಶಿಸಲಾಯಿತು.

A screenshot of a video conferenceAI-generated content may be incorrect.

ತಮ್ಮ ಸಮಾರೋಪ ಭಾಷಣದಲ್ಲಿ ಎನ್ ಜೆಜೆಎಂ ನ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕ ಶ್ರೀ ಕಮಲ್ ಕಿಶೋರ್ ಸೋನ್, ಜಿಲ್ಲೆಗಳು ಜಾರಿಗೆ ತಂದ ನವೀನ ವಿಧಾನಗಳನ್ನು ಶ್ಲಾಘಿಸಿದರು ಮತ್ತು ಜೆಜೆಎಂ 2.0 ನ ಯಶಸ್ಸು ಸಮುದಾಯ-ನೇತೃತ್ವದ ಆಡಳಿತವನ್ನು ಸಜ್ಜುಗೊಳಿಸುವಲ್ಲಿ ಜಿಲ್ಲಾಧಿಕಾರಿಗಳ ಸಕ್ರಿಯ ನಾಯಕತ್ವವನ್ನು ಅವಲಂಬಿಸಿದೆ ಎಂದು ಒತ್ತಿ ಹೇಳಿದರು. ಪೇಜಲ್ ಸಂವಾದವು ಜೆಜೆಎಂ ಅಡಿಯಲ್ಲಿ ಸಾಧನೆಗಳು, ನಡೆಯುತ್ತಿರುವ ಸವಾಲುಗಳು ಮತ್ತು ಉತ್ತಮ ಅಭ್ಯಾಸಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿತು, ಹರ್ ಘರ್ ಜಲ್ ಅಡಿಯಲ್ಲಿ ಪ್ರಗತಿಯನ್ನು ವೇಗಗೊಳಿಸಲು ಅಳವಡಿಸಿಕೊಂಡ ವಿಧಾನಗಳ ವೈವಿಧ್ಯತೆಯನ್ನು ತಿಳಿಸಿಕೊಟ್ಟಿತು.

 

*****


(रिलीज़ आईडी: 2284504) आगंतुक पटल : 47
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Tamil