ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ ತನ್ನ ಎರಡು ಮಹತ್ವದ ಡಿಜಿಟಲ್ ಉಪಕ್ರಮಗಳಾದ ಉದ್ಯಮ ನೋಂದಣಿ ಪೋರ್ಟಲ್ ಮತ್ತು ಉದ್ಯಮ ಸಹಾಯ ವೇದಿಕೆಗಳನ್ನು ಉದ್ಯಮಗಳಿಗೆ ಸಾಂಸ್ಥೀಕರಣಗೊಳಿಸುತ್ತಿದೆ, ಆ ಮೂಲಕ ಸರ್ಕಾರದ ನೆರವಿನ ಲಭ್ಯತೆ ವಿಸ್ತರಿಸುತ್ತಿದೆ ಮತ್ತು ಎಂ ಎಸ್ ಎಂ ಇ ಪೂರಕ ವ್ಯವಸ್ಥೆ ಬಲಪಡಿಸುತ್ತಿದೆ
ಉದ್ಯಮ ನೋಂದಣಿ ಪೋರ್ಟಲ್ ಸರಳ, ಕಾಗದರಹಿತ, ಸ್ವಯಂ ಘೋಷಣೆ ಆಧಾರಿತ ಮತ್ತು ಉಚಿತ ಆನ್‌ಲೈನ್ ನೋಂದಣಿ ಪ್ರಕ್ರಿಯೆಯ ಮೂಲಕ ಎಂ ಎಸ್ ಎಂ ಇ ಗಳಿಗೆ ಅಧಿಕೃತ ಗುರುತು ಒದಗಿಸುತ್ತದೆ; ಉದ್ಯಮ ಅಸಿಸ್ಟ್ ಪ್ಲಾಟ್‌ಫಾರ್ಮ್ ಅನೌಪಚಾರಿಕ ಅತಿಸಣ್ಣ ಉದ್ಯಮಗಳನ್ನು ಸಾಂಸ್ಥಿಕ ಆರ್ಥಿಕತೆಗೆ ತರುವ ಮೂಲಕ ಆ ಉಪಕ್ರಮಕ್ಕೆ ಪೂರಕವಾಗಿ ಕಾರ್ಯನಿರ್ವಹಣೆ
ಈ ಉಪಕ್ರಮಗಳು ಮಹಿಳೆಯರು, ಪ.ಜಾ/ಪ.ಪಂ ಉದ್ಯಮಿಗಳು, ಗ್ರಾಮೀಣ ಉದ್ಯಮಗಳು, ಸಾಂಪ್ರದಾಯಿಕ ಕುಶಲಕರ್ಮಿಗಳು, ಮೊದಲ ತಲೆಮಾರಿನ ಉದ್ಯಮಿಗಳು ಮತ್ತು ಯುವ ನೇತೃತ್ವದ ನವೋದ್ಯಮಗಳನ್ನು ಸರ್ಕಾರದ ನೆರವನ್ನು ಸುಲಭವಾಗಿ ಪಡೆಯಲು ನೆರವಾಗುವುದಲ್ಲದೆ, ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವ ಮೂಲಕ ಸಬಲೀಕರಣಗೊಳಿಸುತ್ತಿವೆ
प्रविष्टि तिथि:
14 JUL 2026 2:08PM by PIB Bengaluru
ಭಾರತದ ಉದ್ಯಮಶೀಲ ಆಯಾಮವು ಗಮನಾರ್ಹ ಪರಿವರ್ತನೆಗೆ ಸಾಕ್ಷಿಯಾಗುತ್ತಿದೆ. ರಾಷ್ಟ್ರವು ಜಾಗತಿಕ ಉತ್ಪಾದನೆ ಮತ್ತು ನಾವೀನ್ಯತೆ ಕೇಂದ್ರವಾಗುವತ್ತ ಸಾಗುತ್ತಿರುವಾಗ, ಉದ್ಯಮಶೀಲತೆಯು ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯ ಪ್ರಬಲ ಚಾಲಕಶಕ್ತಿಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ. ಲಕ್ಷಾಂತರ ವ್ಯಕ್ತಿಗಳು ಇಂದು ಉದ್ಯೋಗಗಳಿಗಾಗಿ ಸಾಂಪ್ರದಾಯಿಕ ಹುಡುಕಾಟವನ್ನು ಬಿಟ್ಟು, ತಮಗೆ ಮತ್ತು ಇತರರಿಗೆ ಜೀವನೋಪಾಯವನ್ನು ಉತ್ಪಾದಿಸುವ ಉದ್ಯಮಗಳನ್ನು ಸೃಷ್ಟಿಸುತ್ತಿದ್ದಾರೆ.
ಈ ಪರಿವರ್ತನೆಯ ಕೇಂದ್ರಬಿಂದು ಉದ್ಯಮ ನೋಂದಣಿ ಪೋರ್ಟಲ್ ಮತ್ತು ಉದ್ಯಮ ಸಹಾಯ ವೇದಿಕೆ, ಇವು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯದ ಎರಡು ಮಹತ್ವದ ಡಿಜಿಟಲ್ ಉಪಕ್ರಮಗಳಾಗಿವೆ. ಈ ವೇದಿಕೆಗಳು ಉದ್ಯಮಗಳಿಗೆ ಸಾಂಸ್ಥಿಕ ರೂಪ ನೀಡುತ್ತಿವೆ, ಸರ್ಕಾರದ ನೆರವಿನ ಲಭ್ಯತೆಯನ್ನು ವಿಸ್ತರಿಸುತ್ತಿವೆ ಮತ್ತು ಎಂ ಎಸ್ ಎಂ ಇ ಪೂರಕ ವ್ಯವಸ್ಥೆಯನ್ನು ಬಲವರ್ಧನೆಗೊಳಿಸುತ್ತಿವೆ.
ಎಂ ಎಸ್ ಎಂ ಇ ಸಾಂಸ್ಥೀಕರಣ
ಉದ್ಯಮ ನೋಂದಣಿ ಪೋರ್ಟಲ್ ಸರಳ, ಕಾಗದರಹಿತ, ಸ್ವಯಂ ಘೋಷಣೆ ಆಧಾರಿತ ಮತ್ತು ಉಚಿತ ಆನ್‌ಲೈನ್ ನೋಂದಣಿ ಪ್ರಕ್ರಿಯೆಯ ಮೂಲಕ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅಧಿಕೃತ ಮಾನ್ಯತೆಯನ್ನು ಒದಗಿಸುತ್ತದೆ.
ಉದ್ಯಮ ಸಹಾಯ ವೇದಿಕೆಯು ಅನೌಪಚಾರಿ ಸಣ್ಣ ಉದ್ಯಮಗಳನ್ನು ಔಪಚಾರಿಕ ಅಥವಾ ಸಾಂಸ್ಥಿಕ ಆರ್ಥಿಕತೆಗೆ ತರುವ ಮೂಲಕ ಈ ಉಪಕ್ರಮಕ್ಕೆ ಪೂರಕವಾಗಿದೆ. ಇದು ಇನ್ನೂ ಜಿ ಎಸ್ ಟಿ ನೋಂದಣಿಯನ್ನು ಹೊಂದಿರದ ಅಥವಾ ಆದಾಯ ತೆರಿಗೆ ವ್ಯವಸ್ಥೆಯಡಿಯಲ್ಲಿ ಒಳಗೊಳ್ಳದ ಉದ್ಯಮಗಳು ಅಧಿಕೃತ ಉದ್ಯಮ ಸಹಾಯ ಪಾಲುದಾರರು ಸಲ್ಲಿಸಿದ ದತ್ತಾಂಶ ಪರಿಶೀಲಿಸಿದ ಮೂಲಕ ಸೂಕ್ಷ್ಮ ಉದ್ಯಮಗಳಾಗಿ ಸಾಂಸ್ಥಿಕ ಮಾನ್ಯತೆಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಒಟ್ಟಾರೆ ಈ ವೇದಿಕೆಗಳು ಅತಿ ಸಣ್ಣ ಉದ್ಯಮಗಳು ಸಹ ಭಾರತದ ಸಾಂಸ್ಥಿಕ ಆರ್ಥಿಕತೆಯ ಭಾಗವಾಗಬಹುದು ಎಂದು ಖಾತ್ರಿಪಡಿಸಿಕೊಳ್ಳುವ ಮೂಲಕ ಹೆಚ್ಚು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ವ್ಯವಸ್ಥೆಯನ್ನು ರೂಪಿಸುತ್ತದೆ.
ಉದ್ಯಮ ಸಹಾಯ ವೇದಿಕೆ ಮೂಲಕ, ಬ್ಯಾಂಕ್‌ಗಳು, ಎನ್‌ಬಿಎಫ್‌ಸಿಗಳು ಮತ್ತು ಇತರ ಸಾಲ ನೀಡುವ ಸಂಸ್ಥೆಗಳಂತಹ ಅಧಿಕೃತ ಪಾಲುದಾರರು ಈ ಉದ್ಯಮಗಳು ಉದ್ಯಮ ನೆರವು ಪ್ರಮಾಣಪತ್ರ ಹೊಂದಿರುವವರಾಗಿ ಅಧಿಕೃತ ಮಾನ್ಯತೆ ಪಡೆಯಲು ಸಹಾಯ ಮಾಡುತ್ತಾರೆ, ಇದು ಅತಿಸಣ್ಣ ಉದ್ಯಮಗಳಿಗೆ ಉದ್ದೇಶಿಸಲಾದ ವಿವಿಧ ಸರ್ಕಾರಿ ಉಪಕ್ರಮಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಹಣಕಾಸು ಸೇರ್ಪಡೆಯನ್ನು ವಿಸ್ತರಿಸುವಲ್ಲಿ ಮತ್ತು ತಳಮಟ್ಟದ ಉದ್ಯಮಶೀಲತೆಯನ್ನು ಬಲಪಡಿಸುವಲ್ಲಿ ವೇದಿಕೆ ನಿರ್ಣಾಯಕ ಪಾತ್ರ ವಹಿಸುತ್ತಿದೆ.
ಉದ್ಯಮ ನೋಂದಣಿ ಪ್ರಕ್ರಿಯೆ
ಉದ್ಯಮ ನೋಂದಣಿ ಪ್ರಕ್ರಿಯೆಯನ್ನು ತ್ವರಿತ, ಪಾರದರ್ಶಕ ಮತ್ತು ತೊಂದರೆ-ಮುಕ್ತವಾಗಿ ವಿನ್ಯಾಸಗೊಳಿಸಲಾಗಿದೆ.
ಒಂದನೇ ಹಂತ : ಉದ್ಯಮ ನೋಂದಣಿ ಪೋರ್ಟಲ್‌ಗೆ ಭೇಟಿ ನೀಡಿ.
ಎರಡನೇ ಹಂತ : ಮಾಲೀಕರು, ಪಾಲುದಾರರು ಅಥವಾ ಅಧಿಕೃತ ಸಹಿದಾರರ ಆಧಾರ್ ವಿವರಗಳನ್ನು ನಮೂದಿಸಿ.
ಮೂರನೇ ಹಂತ : ಪ್ಯಾನ್ ವಿವರಗಳನ್ನು ಮೌಲ್ಯೀಕರಿಸಿ.
ನಾಲ್ಕನೇ ಹಂತ : ವ್ಯವಹಾರದ ಹೆಸರು, ವಿಳಾಸ, ಬ್ಯಾಂಕ್ ವಿವರಗಳು ಮತ್ತು ವ್ಯಾಪಾರ ಚಟುವಟಿಕೆಗಳಂತಹ ಉದ್ಯಮ ವಿವರಗಳನ್ನು ಭರ್ತಿ ಮಾಡಿ.
ಐದನೇ ಹಂತ : ಸ್ವಯಂ ಘೋಷಣೆಯ ಮೂಲಕ ಅರ್ಜಿಯನ್ನು ಸಲ್ಲಿಸಿ.
ಆರನೇ ಹಂತ : ಯಶಸ್ವಿ ಪರಿಶೀಲನೆಯ ನಂತರ, ವಿಶಿಷ್ಟ ಉದ್ಯಮ ನೋಂದಣಿ ಸಂಖ್ಯೆಯನ್ನು ಹೊಂದಿರುವ ಇ-ಪ್ರಮಾಣಪತ್ರವನ್ನು ತಕ್ಷಣವೇ ಸೃಷ್ಟಿಯಾಗುತ್ತದೆ.
ಉದ್ಯಮ ನೋಂದಣಿಯ ಪ್ರಯೋಜನಗಳು
ಉದ್ಯಮ ನೋಂದಣಿಯನ್ನು ಪಡೆಯುವುದರಿಂದ ಎಂಎಸ್ ಎಂಇಗಳ ಬೆಳವಣಿಗೆಗೆ ಸಹಾಯ ಮಾಡಲು ರೂಪಿಗೊಳಿಸಲಾದ ವ್ಯಾಪಕ ಶ್ರೇಣಿಯ ಸರ್ಕಾರಿ ನೆರವಿನ ಕ್ರಮಗಳ ಅವಕಾಶಗಳ ಬಾಗಿಲು ತೆರೆಯುತ್ತದೆ.
ಸರ್ಕಾರಿ ಯೋಜನೆಗಳಿಗೆ ಲಭ್ಯತೆ
ನೋಂದಾಯಿತ ಎಂ ಎಸ್ ಎಂ ಇಗಳು ಹಣಕಾಸು, ತಂತ್ರಜ್ಞಾನ ಉನ್ನತೀಕರಣ, ಗುಣಮಟ್ಟದ ಪ್ರಮಾಣೀಕರಣ, ಕೌಶಲ್ಯ ಅಭಿವೃದ್ಧಿ, ಮಾರುಕಟ್ಟೆ ಪ್ರವೇಶ ಮತ್ತು ಉದ್ಯಮಶೀಲತೆ ಪ್ರಚಾರದ ಮೇಲೆ ಎಂ ಎಸ್ ಎಂ ಇ ಸಚಿವಾಲಯದ ವಿವಿಧ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗುತ್ತಾರೆ.
ಸಾಂಸ್ಥಿಕ ಸಾಲದ ಸುಲಭ ಲಭ್ಯತೆ
ಉದ್ಯಮ ನೋಂದಣಿಯು ಉದ್ಯಮಗಳು ತಮ್ಮ ಔಪಚಾರಿಕ ಗುರುತನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ, ಇದು ವ್ಯಾಪಾರ ಸಾಲಗಳು ಮತ್ತು ಸಾಲ ಬೆಂಬಲಕ್ಕಾಗಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಸಂಪರ್ಕಿಸಲು ಸುಲಭಗೊಳಿಸುತ್ತದೆ.
ವಿಳಂಬ ಪಾವತಿಗಳ ವಿರುದ್ಧ ರಕ್ಷಣೆ
ನೋಂದಾಯಿತ ಎಂ ಎಸ್ ಎಂ ಇ ಖರೀದಿದಾರರಿಂದ ವಿಳಂಬ ಪಾವತಿಗಳಿಗೆ ಸಂಬಂಧಿಸಿದಂತೆ ರಕ್ಷಣೆಯನ್ನು ಪಡೆಯಬಹುದು, ಇದು ವ್ಯವಹಾರದಲ್ಲಿ ನಗದು ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಎಂ ಎಸ್ ಎಂ ಇ ಆನ್‌ಲೈನ್ ವಿವಾದ ಪರಿಹಾರ (ಒಡಿಆರ್) ಪೋರ್ಟಲ್ ಒಂದು ಡಿಜಿಟಲ್ ವೇದಿಕೆಯಾಗಿದ್ದು, ಇದು ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳನ್ನು ಒಳಗೊಂಡ ವಿಳಂಬ ಪಾವತಿ ವಿವಾದಗಳ ತ್ವರಿತ, ಪಾರದರ್ಶಕ ಮತ್ತು ಕಡಿಮೆ ವೆಚ್ಚದಲ್ಲಿ ಪರಿಹಾರಗಳನ್ನು ಸುಗಮಗೊಳಿಸುತ್ತದೆ. ಪೋರ್ಟಲ್ ಆರಂಭದಿಂದ ಅಂತ್ಯದವರೆಗೆ, ಹಕ್ಕು ಸಲ್ಲಿಸುವುದರಿಂದ ಹಿಡಿದು ರಾಜಿ, ಮಧ್ಯಸ್ಥಿಕೆ ಮತ್ತು ಅಂತಿಮ ಪರಿಹಾರದವರೆಗೆ ಆನ್‌ಲೈನ್ ವಿವಾದ ಪರಿಹಾರವನ್ನು ಸಕ್ರಿಯಗೊಳಿಸುತ್ತದೆ.
ಸಾರ್ವಜನಿಕ ಖರೀದಿಯಲ್ಲಿ ಪಾಲ್ಗೊಳ್ಳುವಿಕೆ
ಉದ್ಯಮ-ನೋಂದಾಯಿತ ಉದ್ಯಮಗಳು ಸರ್ಕಾರಿ ಖರೀದಿ ಅವಕಾಶಗಳಲ್ಲಿ ಭಾಗವಹಿಸಬಹುದು ಮತ್ತು ಎಂ ಎಸ್ ಎಂ ಇ ಅನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಖರೀದಿ ನೀತಿಗಳಿಂದ ಪ್ರಯೋಜನ ಪಡೆಯಬಹುದು.
ಗುಣಮಟ್ಟ ಮತ್ತು ತಂತ್ರಜ್ಞಾನ ಬೆಂಬಲ ಲಭ್ಯತೆ
ವಿವಿಧ ಸಚಿವಾಲಯದ ಉಪಕ್ರಮಗಳ ಮೂಲಕ ಗುಣಮಟ್ಟದ ಪ್ರಮಾಣೀಕರಣ, ತಂತ್ರಜ್ಞಾನ ಉನ್ನತೀಕರಣ, ನೇರ ಉತ್ಪಾದನೆ, ಡಿಜಿಟಲೀಕರಣ ಮತ್ತು ಉತ್ಪಾದಕತೆ ವರ್ಧನೆಗೆ ಎಂಎಸ್ ಎಂಇ ಸಹಾಯವನ್ನು ಪಡೆಯಬಹುದು.
ಮಾರುಕಟ್ಟೆ ಉತ್ತೇಜನ
ನೋಂದಾಯಿತ ಉದ್ಯಮಗಳು ತಮ್ಮ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಲು ವಿವಿಧ ಎಂಎಸ್ ಎಂಇ ಕಾರ್ಯಕ್ರಮಗಳ ಅಡಿಯಲ್ಲಿ ಆಯೋಜಿಸಲಾದ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರದರ್ಶನಗಳು, ವ್ಯಾಪಾರ ಮೇಳಗಳು ಮತ್ತು ಖರೀದಿದಾರ-ಮಾರಾಟಗಾರರ ಸಭೆಗಳಲ್ಲಿ ಭಾಗವಹಿಸಬಹುದು
ಸಮಗ್ರ ಬೆಳವಣಿಗೆಗೆ ಚಾಲನೆ
ಉದ್ಯಮ ನೋಂದಣಿ ಪೋರ್ಟಲ್ ಮತ್ತು ಉದ್ಯಮ ಸಹಾಯ ವೇದಿಕೆಯ ಸಂಯೋಜಿತ ಪರಿಣಾಮವು ವ್ಯಾಪಾರ ನೋಂದಣಿಯನ್ನು ಮೀರಿ ವಿಸ್ತರಿಸುತ್ತದೆ. ಈ ಉಪಕ್ರಮಗಳು ಮಹಿಳೆಯರು, ಪ.ಜಾ/ಪ.ಪಂ ಉದ್ಯಮಿಗಳು, ಗ್ರಾಮೀಣ ಉದ್ಯಮಗಳು, ಸಾಂಪ್ರದಾಯಿಕ ಕುಶಲಕರ್ಮಿಗಳು, ಮೊದಲ ತಲೆಮಾರಿನ ಉದ್ಯಮಿಗಳು ಮತ್ತು ಯುವ ನೇತೃತ್ವದ ನವೋದ್ಯಮಗಳನ್ನು ಸರ್ಕಾರದ ನೆರವನ್ನು ಹೆಚ್ಚು ಸುಲಭವಾಗಿ ಪಡೆಯುವುದು ಮತ್ತು ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವ ಮೂಲಕ ಸಬಲೀಕರಣಗೊಳಿಸುತ್ತಿವೆ.
ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವ ಮೂಲಕ ಮತ್ತು ಎಂ ಎಸ್ ಎಂ ಇಗಳ ಸಾಂಸ್ಥಿಕ ನೆಲೆಯನ್ನು ವಿಸ್ತರಿಸುವ ಮೂಲಕ, ಈ ಡಿಜಿಟಲ್ ವೇದಿಕೆಗಳು ಉದ್ಯಮಶೀಲತಾ ಆಕಾಂಕ್ಷೆಗಳನ್ನು ಯಶಸ್ವಿ ಉದ್ಯಮಗಳಾಗಿ ಪರಿವರ್ತಿಸಲು ಸಹಾಯ ಮಾಡುತ್ತಿವೆ ಹಾಗೂ ವಿಕಸಿತ ಭಾರತ@2047 ನ ದೂರದೃಷ್ಟಿಯ ಸಾಕಾರಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತಿವೆ.
ಉದ್ಯಮ ನೋಂದಣಿ ಪೋರ್ಟಲ್ ಮತ್ತು ಉದ್ಯಮ ಸಹಾಯ ವೇದಿಕೆಯಲ್ಲಿ ಇಂದು 8.9 ಕೋಟಿಗೂ ಅಧಿಕ ಉದ್ಯಮಗಳನ್ನು ನೋಂದಾಯಿಸಲಾಗಿದ್ದು, ದೇಶಾದ್ಯಂತ 38 ಕೋಟಿಗೂ ಅಧಿಕ ಜನರಿಗೆ ಉದ್ಯೋಗವನ್ನು ಒದಗಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿಗೆ ಭೇಟಿ ನೀಡಿ: https://www.udyamregistration.gov.in/
*****
(रिलीज़ आईडी: 2284451)
आगंतुक पटल : 16