ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಪ್ರಾವಿಡೆಂಟ್ ಫಂಡ್ ಟ್ರಸ್ಟ್ ಗಳಿಂದ “ಕ್ಷಮಾದಾನ ಯೋಜನೆ”ಗೆ ಅರ್ಜಿಗಳನ್ನು ಇ.ಪಿ.ಎಫ್.ಒ. ಸಂಸ್ಥೆ ಆಹ್ವಾನಿಸಿದೆ
प्रविष्टि तिथि:
12 JUL 2026 9:35AM by PIB Bengaluru
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ನೌಕರರ ಭವಿಷ್ಯ ನಿಧಿ ಸಂಸ್ಥೆಯು (ಇ.ಪಿ.ಎಫ್.ಒ.), ನೂತನ “ಕ್ಷಮಾದಾನ ಯೋಜನೆ- 2026” ಅನ್ನು ಪರಿಚಯಿಸಿದೆ. ಇದು ಆದಾಯ ತೆರಿಗೆ ಕಾಯ್ದೆ, 1961 ರ ಅಡಿಯಲ್ಲಿ ಗುರುತಿಸಲ್ಪಟ್ಟ ವಿನಾಯಿತಿ ಪಡೆದ ಭವಿಷ್ಯ ನಿಧಿ (ಪಿಎಫ್) ಟ್ರಸ್ಟ್ ಗಳನ್ನು ನಿರ್ವಹಿಸುವ ಸಂಸ್ಥೆಗಳು ತಮ್ಮ ಸ್ಥಿತಿಯನ್ನು ಕ್ರಮಬದ್ಧಗೊಳಿಸಲು ಒಂದು ಬಾರಿಯ ಅವಕಾಶವನ್ನು ಒದಗಿಸುತ್ತದೆ, ಹಾಗೂ ಇದು ಆರು ತಿಂಗಳ ಅವಧಿಕಾಲ ತೆರೆದಿರುತ್ತದೆ. ಉದ್ಯೋಗದಾತರು, ಪಾಲುದಾರರು ಮತ್ತು ಸಾರ್ವಜನಿಕರು ಈ ಯೋಜನೆಯನ್ನು ಗಮನಿಸಿ ಸದುಪಯೋಗಪಡಿಸಿಕೊಳ್ಳಲು ಸೂಚಿಸಲಾಗಿದೆ.
ಹಣಕಾಸು ಕಾಯ್ದೆ, 2026 ಮಾನ್ಯತೆ ಪಡೆದ ಭವಿಷ್ಯ ನಿಧಿಗಳನ್ನು ನಿಯಂತ್ರಿಸುವ ಆದಾಯ ತೆರಿಗೆ ಚೌಕಟ್ಟನ್ನು , ನೌಕರರ ಭವಿಷ್ಯ ನಿಧಿ ಮತ್ತು ಇತರೆ ನಿಬಂಧನೆಗಳ ಕಾಯ್ದೆ, 1952 ರ ಶಾಸನಬದ್ಧ ಮತ್ತು ಆಡಳಿತಾತ್ಮಕ ನಿಬಂಧನೆಗಳೊಂದಿಗೆ ಜೋಡಿಸಿದೆ. ಆದಾಯ ತೆರಿಗೆ ಕಾಯ್ದೆ, 2025 ರ ಅಡಿಯಲ್ಲಿ ಮಾನ್ಯತೆ ನೌಕರರ ಭವಿಷ್ಯ ನಿಧಿ ಮತ್ತು ಇತರೆ ಸೆಕ್ಷನ್ 17 ರ ಅಡಿಯಲ್ಲಿ ವಿನಾಯಿತಿ ಪಡೆದ ಭವಿಷ್ಯ ನಿಧಿಗಳಿಗೆ ಮಾತ್ರ ಲಭ್ಯವಿರುತ್ತದೆ. ನಿಬಂಧನೆಗಳ ಕಾಯ್ದೆ, 1952. ಅಂತಹ ಸಂಸ್ಥೆಗಳಿಗೆ ಕಾಯ್ದೆಯ ಸೆಕ್ಷನ್ 17 ಮತ್ತು ಸಾಮಾಜಿಕ ಭದ್ರತಾ ಸಂಹಿತೆ, 2020 ರ ಸೆಕ್ಷನ್ 143 ರ ಅಡಿಯಲ್ಲಿ ಪೂರ್ವಾನ್ವಯವಾಗಿ ಕ್ಷಮಾದಾನ ನೀಡಲಾಗುತ್ತದೆ.
ಕ್ಷಮಾದಾನ ಯೋಜನೆಯ ಅನ್ವಯತೆ
ಈ ಯೋಜನೆಯು ಆದಾಯ ತೆರಿಗೆ ಕಾಯ್ದೆ, 1961 ರ ಅಡಿಯಲ್ಲಿ ಗುರುತಿಸಲ್ಪಟ್ಟ ಭವಿಷ್ಯ ನಿಧಿ ಟ್ರಸ್ಟ್ ಅನ್ನು ನಿರ್ವಹಿಸುತ್ತಿರುವ ಸಂಸ್ಥೆಗಳಿಗೆ ಅನ್ವಯಿಸುತ್ತದೆ, ಹಾಗೂ ಸಂದರ್ಭಾನುಸಾರ ಸೂಕ್ತ ಸರ್ಕಾರ - ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಔಪಚಾರಿಕ ವಿನಾಯಿತಿ ಅಧಿಸೂಚನೆಯನ್ನು ಹೊಂದಿಲ್ಲ.
ಕ್ಷಮಾದಾನ ಯೋಜನೆಯ ಮಾನ್ಯತೆ
- ಅವಧಿ: ಈ ಯೋಜನೆಯು ಅಧಿಸೂಚನೆಯ ದಿನಾಂಕದಿಂದ ಆರು (6) ತಿಂಗಳ ಅವಧಿ ವರೆಗೆ ಮಾನ್ಯವಾಗಿರುತ್ತದೆ. ಈ ಯೋಜನೆಯನ್ನು ಜೂನ್ 29, 2026 ರಂದು ಸೂಚಿಸಲಾಗಿದೆ.
ಅರ್ಹ ಸಂಸ್ಥೆಗಳು
- ವರ್ಗ-I: ವಿನಾಯಿತಿ ಪಡೆಯದ ಸ್ಥಾಪನೆಯಾಗಿ ಈಗಾಗಲೇ ಅನುಸರಣೆಯನ್ನು ಪ್ರಾರಂಭಿಸಿರುವ ಅಥವಾ ವಿನಾಯಿತಿ ಪಡೆಯದ ಸ್ಥಾಪನೆಯಾಗಿ ನಿರೀಕ್ಷಿತ ಅನುಸರಣೆಯನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಪೂರ್ವಾನ್ವಯ ಟ್ರಸ್ಟ್ ಗಳಿಗೆ, ತಾವಾಗಿಯೇ ಕ್ರಮಬದ್ಧಗೊಳಿಸುವಿಕೆಯನ್ನು ಬಯಸುವ ಸಂಸ್ಥೆಗಳು ಅರ್ಹವಾಗಿವೆ.
- ವರ್ಗ–II: ಸಾಮಾಜಿಕ ಭದ್ರತಾ ಸಂಹಿತೆ, 2020ರ ಅಡಿಯಲ್ಲಿ ವಿನಾಯಿತಿ ಪಡೆದ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು ಆಯ್ಕೆ ಮಾಡುವ ಮತ್ತು ಹಿಂದಿನ ಸೂಚಿತ ದಿನದಿಂದ ಇಂದಿನವರೆಗೆ ಸಂಪೂರ್ಣವಾಗಿ ಟ್ರಸ್ಟ್ ಕ್ರಮಬದ್ಧಗೊಳಿಸುವಿಕೆಯನ್ನು ಬಯಸುವ ಸಂಸ್ಥೆಗಳು ಅರ್ಹವಾಗಿವೆ.
ಪ್ರಮುಖ ಪ್ರಯೋಜನಗಳು ಮತ್ತು ಪರಿಹಾರಗಳನ್ನು ಒದಗಿಸಲಾಗಿದೆ
- ಹಿಂದಿನ ಸೂಚಿತ ಅವಧಿವರೆಗೆ ನಿಯಮಿತಗೊಳಿಸುವಿಕೆ: ವಿನಾಯಿತಿ ಸ್ಥಿತಿ ಮತ್ತು ಟ್ರಸ್ಟ್ ಮಾನ್ಯತೆಯನ್ನು ಟ್ರಸ್ಟ್ ನ ಪ್ರಾರಂಭದಿಂದ ಗೊತ್ತುಪಡಿಸಿದ ಕಟ್-ಆಫ್ ದಿನಾಂಕದವರೆಗೆ ನೀಡಲಾಗುತ್ತದೆ.
- ಸಾಮಾಜಿಕ ಭದ್ರತಾ ಸಂಹಿತೆ, 2020ರ ಅಡಿಯಲ್ಲಿ ಅವಶ್ಯಕತೆಗಳ ಮನ್ನಾ: ಕನಿಷ್ಠ ಉದ್ಯೋಗಿಗಳ ಸಂಖ್ಯೆ ಮತ್ತು ಹೆಚ್ಚವರಿ ನಿಧಿ(ಕಾರ್ಪಸ್)ಯ ಗಾತ್ರದ ನಿಯಮಗಳನ್ನು ಮನ್ನಾ ಮಾಡಲಾಗುತ್ತದೆ. 3 ವರ್ಷಗಳ ಹಿಂದಿನ ಅನುಸರಣೆ ನಿಯಮವನ್ನು ಪೂರೈಸಲಾಗಿದೆ ಎಂದು ಪರಿಗಣಿಸಲಾಗುತ್ತದೆ.
- ಕಾನೂನು ಪ್ರಕ್ರಿಯೆಗಳ ಕಡಿತ: ಸದಸ್ಯರ ಖಾತೆಗಳು ಶಾಸನಬದ್ಧ ದರಗಳಿಗೆ ಸಮಾನವಾಗಿ ಅಥವಾ ಅದಕ್ಕಿಂತ ಉತ್ತಮವಾದ ಬಡ್ಡಿ ಮತ್ತು ಕೊಡುಗೆಗಳನ್ನು ಪಡೆದರೆ, ಬಾಕಿ, ಹಾನಿ ಮತ್ತು ಬಡ್ಡಿಗಾಗಿ ಬಾಕಿ ಇರುವ ಮೌಲ್ಯಮಾಪನಗಳನ್ನು ಹಿಂಪಡೆಯಲಾಗುತ್ತದೆ ಮತ್ತು ರದ್ದುಗೊಳಿಸಲಾಗುತ್ತದೆ. ಹಿಂದಿನ ಅಂತಿಮ ಆದೇಶಗಳನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ.
ಕಡ್ಡಾಯ ಉದ್ಯೋಗದಾತರ ಬಾಧ್ಯತೆಗಳು:
- ಅರ್ಜಿ: ಅರ್ಹ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಔಪಚಾರಿಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಗಳನ್ನು ಸಂಬಂಧಪಟ್ಟ ಪ್ರಾದೇಶಿಕ ಕಚೇರಿಗೆ ಇಮೇಲ್ ಮೂಲಕ ಸಲ್ಲಿಸಬಹುದು. ಈ ಯೋಜನೆಯನ್ನು ಪಡೆಯಲು ಇಚ್ಛೆ ವ್ಯಕ್ತಪಡಿಸುವ ಆಸಕ್ತಿಯ ಅಭಿವ್ಯಕ್ತಿಯನ್ನು rc.exemption@epfindia.gov.in. ಗೆ ಇಮೇಲ್ ಮೂಲಕ ಕಳುಹಿಸಬಹುದು.
- ಆಡಿಟ್ ಅನುಸರಣೆ: ಹಣಕಾಸು ಖಾತೆಗಳನ್ನು ಚಾರ್ಟರ್ಡ್ ಅಕೌಂಟೆಂಟ್ ಆಡಿಟ್ ಮಾಡಬೇಕು. ಇ.ಪಿ.ಎಫ್ ಅಧಿಕಾರಿಗಳು ನಿರ್ದೇಶಿಸಿದ ವಿಶೇಷ/ಅನುಸರಣೆ ಲೆಕ್ಕಪರಿಶೋಧನೆಗಳನ್ನು ಅರ್ಜಿ ಸಲ್ಲಿಸಿದ 3 ತಿಂಗಳೊಳಗೆ ಪೂರ್ಣಗೊಳಿಸಬೇಕು.
ಮಾರ್ಗದರ್ಶನ ಮತ್ತು ಬೆಂಬಲ
ಈ ಕ್ಷಮಾದಾನ ಯೋಜನೆಯ ಕುರಿತು ವಿವರಗಳಿಗಾಗಿ, 29.06.2026ರ ಗೆಜೆಟ್ ಅಧಿಸೂಚನೆ ಜಿ.ಎಸ್.ಆರ್. 525(ಇ) ಮೂಲಕ ನೀಡಲಾದ ನೌಕರರ ಭವಿಷ್ಯ ನಿಧಿ ಯೋಜನೆ, 2026ರ ಅನುಬಂಧದ ಭಾಗ ಸಿ ಅನ್ನು ಉಲ್ಲೇಖಿಸಬಹುದು. ಹೆಚ್ಚುವರಿಯಾಗಿ, ಸುತ್ತೋಲೆ, ಎಸ್.ಒ.ಪಿ, ಇತ್ಯಾದಿಗಳಲ್ಲಿ ವಿವರಿಸಿರುವ ವಿವರವಾದ ಕಾರ್ಯವಿಧಾನಕ್ಕಾಗಿ ಇ.ಪಿ.ಎಫ್.ಒ. ವೆಬ್‌ಸೈಟ್ ಅನ್ನು ಉಲ್ಲೇಖಿಸಬಹುದು.
ಇ.ಪಿ.ಎಫ್.ಒ ಇದರ ನ್ಯಾಯವ್ಯಾಪ್ತಿಯ ಪ್ರಾದೇಶಿಕ ಕಚೇರಿಗಳು ಅಗತ್ಯ ಮಾರ್ಗದರ್ಶನವನ್ನು ಒದಗಿಸುತ್ತವೆ ಮತ್ತು ಸಂಸ್ಥೆಗಳಿಂದ ಅರ್ಜಿಗಳನ್ನು ಸ್ವೀಕರಿಸುತ್ತವೆ / ಪ್ರಕ್ರಿಯೆಗೊಳಿಸುತ್ತವೆ.
*****
(रिलीज़ आईडी: 2283826)
आगंतुक पटल : 7