ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಬಾಬು ಜಗಜೀವನ್ ರಾಮ್ ಅವರ 40ನೇ ಪುಣ್ಯತಿಥಿ ಪ್ರಯುಕ್ತ ನವದೆಹಲಿಯಲ್ಲಿ ಗೌರವ ಸಮಾರಂಭ

प्रविष्टि तिथि: 06 JUL 2026 9:38PM by PIB Bengaluru

ಬಾಬು ಜಗಜೀವನ್ ರಾಮ್ ಅವರ 40ನೇ ಪುಣ್ಯತಿಥಿಯ ಅಂಗವಾಗಿ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧೀನದಲ್ಲಿರುವ ʻಬಾಬು ಜಗಜೀವನ್ ರಾಮ್ ನ್ಯಾಷನಲ್ ಫೌಂಡೇಶನ್ʼ (ಬಿಜೆಆರ್‌ಎನ್‌ಎಫ್‌) ಇಂದು ನವದೆಹಲಿಯ ದೆಹಲಿ ಗೇಟ್‌ನ ʻಸಮತಾ ಸ್ಥಳʼದಲ್ಲಿ ಗೌರವ ಸಮಾರಂಭವನ್ನು ಆಯೋಜಿಸಿತ್ತು. ಇದರ ನಂತರ ನವದೆಹಲಿಯ ಕೃಷ್ಣ ಮೆನನ್ ಮಾರ್ಗದ 6ರಲ್ಲಿ ʻಸರ್ವ ಧರ್ಮ ಪ್ರಾರ್ಥನೆʼ ಕಾರ್ಯಕ್ರಮ ನೆರವೇರಿತು.

ಗೌರವಾನ್ವಿತ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ, ಗೌರವಾನ್ವಿತ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ. ವೀರೇಂದ್ರ ಕುಮಾರ್, ಗೌರವಾನ್ವಿತ ಮಾಜಿ ಲೋಕಸಭಾ ಸ್ಪೀಕರ್ ಶ್ರೀಮತಿ ಮೀರಾ ಕುಮಾರ್, ಗೌರವಾನ್ವಿತ ಸಹಾಯಕ ಸಚಿವ ಶ್ರೀ ಬಿ.ಎಲ್. ವರ್ಮಾ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಸುಧಾಂಶ್ ಪಂತ್  ಅವರು ಪುಷ್ಪ ನಮನ ಸಲ್ಲಿಸಿದರು. ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಪ್ರತಿಷ್ಠಾನದ ಪದಾಧಿಕಾರಿಗಳು, ಸಂಸತ್ ಸದಸ್ಯರು, ಇತರೆ ಗಣ್ಯರು ಮತ್ತು ಬಾಬು ಜಗಜೀವನ್ ರಾಮ್ ಅವರ ಅನುಯಾಯಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

ಬಾಬು ಜಗಜೀವನ್ ರಾಮ್ ಅವರು ಧೀಮಂತ ಸ್ವಾತಂತ್ರ್ಯ ಹೋರಾಟಗಾರರು, ದೂರದೃಷ್ಟಿಯುಳ್ಳ ರಾಜಕೀಯ ಮುತ್ಸದ್ದಿ ಮತ್ತು ವಿಶಿಷ್ಟ ರಾಷ್ಟ್ರೀಯ ನಾಯಕರಾಗಿದ್ದರು. ಅವರು ದಮನಿತ ಸಮುದಾಯಗಳ ಉನ್ನತಿ ಮತ್ತು ಸಾಮಾಜಿಕ ನ್ಯಾಯದ ಪ್ರಗತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು.

ಕೇಂದ್ರ ಸಂಪುಟ ಸಚಿವರಾಗಿ 35 ವರ್ಷಗಳ ಅವರ ವಿಶಿಷ್ಟ ಸಾರ್ವಜನಿಕ ಸೇವೆಯಲ್ಲಿ, ಅವರು ಭಾರತದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.

ಕೇಂದ್ರ ಆಹಾರ ಮತ್ತು ಕೃಷಿ ಸಚಿವರಾಗಿ, ಅವರು ಹಸಿರು ಕ್ರಾಂತಿಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು, ದೇಶದ ಆಹಾರ ಭದ್ರತೆಯನ್ನು ಬಲಪಡಿಸಿದರು.

1971ರ ಭಾರತ-ಪಾಕ್ ಯುದ್ಧದ ಸಮಯದಲ್ಲಿ ರಕ್ಷಣಾ ಸಚಿವರಾಗಿ, ಅವರ ಅನುಕರಣೀಯ ನಾಯಕತ್ವವು ಭಾರತದ ಐತಿಹಾಸಿಕ ವಿಜಯ ಮತ್ತು ಬಾಂಗ್ಲಾದೇಶದ ಉದಯಕ್ಕೆ ಕೊಡುಗೆ ನೀಡಿತು.

ಬಾಬು ಜಗಜೀವನ್ ರಾಮ್ ಅವರ ಜೀವನ ಮತ್ತು ಪರಂಪರೆಯು ರಾಷ್ಟ್ರ ನಿರ್ಮಾಣ, ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗಾಗಿ ಅವರ ಅಚಲ ಬದ್ಧತೆಯ ಮೂಲಕ ಮುಂದಿನ ಪೀಳಿಗೆಗಳಿಗೆ ಸ್ಫೂರ್ತಿದಾಯಕವಾಗಿ ಮುಂದುವರಿಯಲಿದೆ.

ಜಗಜೀವನ್‌ ರಾಮ್‌ ಅವರ ಆದರ್ಶಗಳು, ಸಮಾನ ಮತ್ತು ಎಲ್ಲರನ್ನೂ ಒಳಗೊಂಡ ಸಮಾಜದ ದೃಷ್ಟಿಕೋನವನ್ನು ಮುಂದುವರಿಸುವ ಬದ್ಧತೆಯನ್ನು ʻಬಾಬು ಜಗಜೀವನ್ ರಾಮ್ ರಾಷ್ಟ್ರೀಯ ಪ್ರತಿಷ್ಠಾನʼವು ಪುನರುಚ್ಚರಿಸಿತು.

 

*****


(रिलीज़ आईडी: 2281911) आगंतुक पटल : 14
इस विज्ञप्ति को इन भाषाओं में पढ़ें: English , Urdu , हिन्दी , Gujarati , Tamil