ಸಂಸದೀಯ ವ್ಯವಹಾರಗಳ ಸಚಿವಾಲಯ
azadi ka amrit mahotsav

ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗಾಗಿ 2024-25ನೇ ಸಾಲಿನ 17ನೇ ʻರಾಷ್ಟ್ರೀಯ ಯುವ ಸಂಸತ್ʼ ಸ್ಪರ್ಧೆ ಬಹುಮಾನ ವಿತರಣಾ ಸಮಾರಂಭ

प्रविष्टि तिथि: 06 JUL 2026 12:21PM by PIB Bengaluru

ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗಾಗಿ 2024-25ನೇ ಸಾಲಿನ 17ನೇ ʻರಾಷ್ಟ್ರೀಯ ಯುವ ಸಂಸತ್ ಸ್ಪರ್ಧೆʼಯ ಬಹುಮಾನ ವಿತರಣಾ ಸಮಾರಂಭವು 2026ರ ಜುಲೈ 7ರ ಮಂಗಳವಾರದಂದು ಮಧ್ಯಾಹ್ನ 3:00 ಗಂಟೆಯಿಂದ ನವದೆಹಲಿಯ ಸಂಸತ್ ಭವನ ಸಂಕೀರ್ಣದ ಸಂಸತ್ ಗ್ರಂಥಾಲಯ ಕಟ್ಟಡದ ʻಜಿಎಂಸಿ ಬಾಲಯೋಗಿ ಸಭಾಂಗಣʼದಲ್ಲಿ ನಡೆಯಲಿದೆ.

ಕಾನೂನು ಮತ್ತು ನ್ಯಾಯ ಖಾತೆ ಸಹಾಯಕ ಸಚಿವ (ಸ್ವತಂತ್ರ ನಿರ್ವಹಣೆ) ಮತ್ತು ಸಂಸದೀಯ ವ್ಯವಹಾರಗಳ ಸಹಾಯಕ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಪರ್ಧೆಯಲ್ಲಿ ಪ್ರತಿಭಾನ್ವಿತ ಸಾಧನೆಗಾಗಿ ಬಹುಮಾನ ವಿಜೇತ ವಿಶ್ವವಿದ್ಯಾಲಯಗಳು/ಕಾಲೇಜುಗಳು ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಿದ್ದಾರೆ. ಈ ಸಂದರ್ಭದಲ್ಲಿ, ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗಾಗಿ 2024-25ನೇ ಸಾಲಿನ 17ನೇ ʻರಾಷ್ಟ್ರೀಯ ಯುವ ಸಂಸತ್ ಸ್ಪರ್ಧೆʼಯಲ್ಲಿ ಪ್ರಥಮ ಸ್ಥಾನ ಪಡೆದ ಜಮ್ಮು-ಕಾಶ್ಮೀರದ ʻಕಾಶ್ಮೀರ ವಿಶ್ವವಿದ್ಯಾಲಯʼದ ವಿದ್ಯಾರ್ಥಿಗಳು ತಮ್ಮ ಯುವ ಸಂಸತ್ತಿನ ಅಧಿವೇಶನದ ಪುನರಾವರ್ತಿತ ಪ್ರದರ್ಶನವನ್ನು ನೀಡಲಿದ್ದಾರೆ.

ಸಂಸದೀಯ ವ್ಯವಹಾರಗಳ ಸಚಿವಾಲಯವು ಕಳೆದ 29 ವರ್ಷಗಳಿಂದ ವಿಶ್ವವಿದ್ಯಾಲಯಗಳು / ಕಾಲೇಜುಗಳಿಗಾಗಿ ಯುವ ಸಂಸತ್ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ʻಯುವ ಸಂಸತ್‌ʼ ಉಪಕ್ರಮದ ಅಡಿಯಲ್ಲಿ, ಸರಣಿಯ 17ನೇ ಸ್ಪರ್ಧೆಯನ್ನು ದೇಶದ 51 ವಿಶ್ವವಿದ್ಯಾಲಯಗಳು / ಕಾಲೇಜುಗಳ ನಡುವೆ ಆಯೋಜಿಸಲಾಗಿತ್ತು.

ಯುವ ಪೀಳಿಗೆಯಲ್ಲಿ ಸ್ವಯಂ ಶಿಸ್ತಿನ ಮನೋಭಾವ, ವೈವಿಧ್ಯಮಯ ಅಭಿಪ್ರಾಯಗಳ ಸಹಿಷ್ಣುತೆ, ದೃಷ್ಟಿಕೋನಗಳ ನ್ಯಾಯಯುತ ಅಭಿವ್ಯಕ್ತಿ ಹಾಗೂ ಪ್ರಜಾಪ್ರಭುತ್ವದ ಜೀವನ ವಿಧಾನ ಸೇರಿದಂತೆ ಉತ್ತಮ ಗುಣಗಳನ್ನು ಬೆಳೆಸುವ ಗುರಿಯನ್ನು ʻಯುವ ಸಂಸತ್ʼ ಯೋಜನೆಯು ಹೊಂದಿದೆ. ಇದಲ್ಲದೆ, ಈ ಉಪಕ್ರಮವು ವಿದ್ಯಾರ್ಥಿಗಳಿಗೆ ಸಂಸತ್ತಿನ ನಡಾವಳಿಗಳು ಮತ್ತು ಕಾರ್ಯವಿಧಾನಗಳು, ಚರ್ಚೆ ಮತ್ತು ಸಂವಾದ ತಂತ್ರಗಳನ್ನು ಪರಿಚಯಿಸುತ್ತದೆ. ಜೊತೆಗೆ ಅವರಲ್ಲಿ ಆತ್ಮವಿಶ್ವಾಸ, ನಾಯಕತ್ವದ ಗುಣಮಟ್ಟ ಹಾಗೂ ಪರಿಣಾಮಕಾರಿ ಭಾಷಣದ ಕಲೆ ಮತ್ತು ಕೌಶಲ್ಯವನ್ನು ಅಭಿವೃದ್ಧಿಪಡಿಸುತ್ತದೆ.

ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಜಮ್ಮು ಮತ್ತು ಕಾಶ್ಮೀರದ ʻಕಾಶ್ಮೀರ ವಿಶ್ವವಿದ್ಯಾಲʼಯಕ್ಕೆ ʻಅಟಲ್ ಬಿಹಾರಿ ವಾಜಪೇಯಿ ರನ್ನಿಂಗ್ ಪಾರ್ಲಿಮೆಂಟರಿ ಶೀಲ್ಡ್‌ʼ ಮತ್ತು ʻಟ್ರೋಫಿʼಯನ್ನು ನೀಡಲಾಗುವುದು. ಇದಲ್ಲದೆ, ಸ್ಪರ್ಧೆಯಲ್ಲಿ ಗುಂಪು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಈ ಕೆಳಗಿನ 7 ವಿಶ್ವವಿದ್ಯಾಲಯಗಳು/ಕಾಲೇಜುಗಳಿಗೆ ಗುಂಪು ಮಟ್ಟದ ವಿಜೇತ ಟ್ರೋಫಿಗಳನ್ನು ಸಚಿವರು ಪ್ರದಾನ ಮಾಡಲಿದ್ದಾರೆ:    

ಕ್ರಮ ಸಂಖ್ಯೆ.

 

ವಿಶ್ವವಿದ್ಯಾಲಯ/ಕಾಲೇಜಿನ ಹೆಸರು

  1.  

ಡಿ.ಎ.ವಿ. ಕಾಲೇಜು, ಜಲಂಧರ್, ಪಂಜಾಬ್

  1.  

ಜಾದವ್‌ಪುರ ವಿಶ್ವವಿದ್ಯಾಲಯ, ಕೋಲ್ಕತ್ತಾ, ಪಶ್ಚಿಮ ಬಂಗಾಳ

  1.  

ಶಿವಾಜಿ ವಿಶ್ವವಿದ್ಯಾಲಯ, ಕೊಲ್ಹಾಪುರ, ಮಹಾರಾಷ್ಟ್ರ

  1.  

ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯ, ಭಟಿಂಡಾ

  1.  

ಎಸ್.ಎಸ್.ಎಂ.ಆರ್‌.ವಿ. ಕಾಲೇಜು, ಬೆಂಗಳೂರು, ಕರ್ನಾಟಕ

  1.  

ಚಾಣಕ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ಪಾಟ್ನಾ, ಬಿಹಾರ

  1.  

ಕುರುಕ್ಷೇತ್ರ ವಿಶ್ವವಿದ್ಯಾಲಯ, ಕುರುಕ್ಷೇತ್ರ, ಹರಿಯಾಣ

 

 

 

 

 

 

 

 

 

 

 

 

 

 

 

 

 

*****


(रिलीज़ आईडी: 2281584) आगंतुक पटल : 19
इस विज्ञप्ति को इन भाषाओं में पढ़ें: Telugu , Tamil , English , Urdu , हिन्दी , Gujarati