ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಗ್ರಾಹಕ ರಕ್ಷಣೆ ಕುರಿತಾದ ಯುಎನ್ ಸಿ ಟಿ ಎ ಡಿ ಸಂಸ್ಥೆಯ ಅಂತರ-ಸರ್ಕಾರಿ ತಜ್ಞರ ಗುಂಪಿನ ಒಂಬತ್ತನೇ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಲಿರುವ ಭಾರತ
ಗ್ರಾಹಕ ರಕ್ಷಣೆ ಕುರಿತ ಜಾಗತಿಕ ಚರ್ಚೆಗಳ ನೇತೃತ್ವ ವಹಿಸಲಿರುವ ಭಾರತ; ಗ್ರಾಹಕ ಉತ್ಪನ್ನ ಸುರಕ್ಷತೆಗಾಗಿ ವಿಶ್ವಸಂಸ್ಥೆಯ ತತ್ವಗಳ ಬಿಡುಗಡೆಯಲ್ಲಿ ಭಾಗಿ
प्रविष्टि तिथि:
05 JUL 2026 1:30PM by PIB Bengaluru
ಸ್ವಿಟ್ಜರ್ಲೆಂಡ್ ನ ಜಿನೀವಾದಲ್ಲಿರುವ ಪಲೈಸ್ ಡೆಸ್ ನೇಷನ್ಸ್ ನಲ್ಲಿ 2026ರ ಜುಲೈ 6 ರಿಂದ 8ರವರೆಗೆ ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ (ಯುಎನ್ ಸಿ ಟಿ ಎ ಡಿ) ಆಯೋಜಿಸಿರುವ 'ಗ್ರಾಹಕ ರಕ್ಷಣಾ ಕಾಯ್ದೆ ಮತ್ತು ನೀತಿ' ಕುರಿತಾದ ಅಂತರ-ಸರ್ಕಾರಿ ತಜ್ಞರ ಗುಂಪಿನ (ಐಜಿಇ) ಒಂಬತ್ತನೇ ಅಧಿವೇಶನದ ಅಧ್ಯಕ್ಷತೆಯನ್ನು ಭಾರತ ವಹಿಸಲಿದೆ. ಈ ಅಧಿವೇಶನವು ಗ್ರಾಹಕ ರಕ್ಷಣೆ ಕಾಯ್ದೆ ಮತ್ತು ನೀತಿಯಲ್ಲಿ ಭವಿಷ್ಯದಲ್ಲಿ ಎದುರಾಗುವ ವಿಷಯಗಳ ಕುರಿತು ಚರ್ಚಿಸಲು ಸದಸ್ಯ ರಾಷ್ಟ್ರಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು, ಗ್ರಾಹಕ ರಕ್ಷಣಾ ಪ್ರಾಧಿಕಾರಗಳು, ಶಿಕ್ಷಣ ತಜ್ಞರು ಮತ್ತು ಇತರ ಪಾಲುದಾರರನ್ನು ಒಟ್ಟಿಗೆ ತರಲಿದೆ.
ವಿಶ್ವಸಂಸ್ಥೆಯ ಗ್ರಾಹಕ ರಕ್ಷಣೆಗಾಗಿ ಮಾರ್ಗಸೂಚಿಗಳ ಅಡಿಯಲ್ಲಿ ರಚಿಸಲಾದ ಅಂತರಸರ್ಕಾರಿ ತಜ್ಞರ ಗುಂಪು (ಐಜಿಇ), ಗ್ರಾಹಕ ರಕ್ಷಣಾ ಕಾನೂನು ಮತ್ತು ನೀತಿಯ ಕುರಿತು ಸಹಕಾರ ಮತ್ತು ಸಂವಾದಕ್ಕಾಗಿ ಪ್ರಮುಖ ಅಂತರಸರ್ಕಾರಿ ವೇದಿಕೆಯಾಗಿದೆ.
ಗ್ರಾಹಕ ರಕ್ಷಣೆ ಕುರಿತ ಅಂತಾರಾಷ್ಟ್ರೀಯ ಚರ್ಚೆಗಳಲ್ಲಿ ಭಾರತವು ಸಕ್ರಿಯವಾಗಿ ಕೊಡುಗೆ ನೀಡುತ್ತಿದೆ. ಜುಲೈ 2025ರಲ್ಲಿ ಜಿನೀವಾದಲ್ಲಿ ನಡೆದ ಸ್ಪರ್ಧೆ ಮತ್ತು ಗ್ರಾಹಕ ರಕ್ಷಣೆ ಕುರಿತ ವಿಶ್ವಸಂಸ್ಥೆಯ ಒಂಬತ್ತನೇ ಸಮ್ಮೇಳನದಲ್ಲಿ, ಗ್ರಾಹಕ ವ್ಯವಹಾರಗಳ ಇಲಾಖೆಯು ವಿದೇಶದ ವಿವಾದಗಳ ಪರಿಹಾರದಲ್ಲಿ ಭಾರತದ ಅನುಭವವನ್ನು ಹಂಚಿಕೊಂಡಿತು ಮತ್ತು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (ಎನ್ ಸಿ ಎಚ್ ಹಾಗೂ ಅದರ ವ್ಯಾಜ್ಯ-ಪೂರ್ವ ಸಮನ್ವಯ ಮಾದರಿಯನ್ನು ಎತ್ತಿ ತೋರಿಸಿತು.
ಭಾರತ ಸರ್ಕಾರವನ್ನು ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾದ ಶ್ರೀಮತಿ ನಿಧಿ ಖಾರೆ ಅವರು ಪ್ರತಿನಿಧಿಸಲಿದ್ದು, ಒಂಬತ್ತನೇ ಅಧಿವೇಶನದ ಅಧ್ಯಕ್ಷತೆ ವಹಿಸಲು ಯುಎನ್ ಸಿಟಿಎಡಿ ಅವರಿಗೆ ಆಹ್ವಾನ ನೀಡಿದೆ. ಅಧ್ಯಕ್ಷರಾಗಿ ಅವರು ಮೂರು ದಿನಗಳ ಚರ್ಚೆಗಳ ಅಧ್ಯಕ್ಷತೆ ವಹಿಸಲಿದ್ದಾರೆ ಮತ್ತು ಪ್ರಮುಖ ಜಾಗತಿಕ ಗ್ರಾಹಕ ರಕ್ಷಣೆಯ ಆದ್ಯತೆಗಳ ಕುರಿತು ಸದಸ್ಯ ರಾಷ್ಟ್ರಗಳ ನಡುವಿನ ಚರ್ಚೆಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ.
ಅಧಿವೇಶನದ ಪ್ರಮುಖ ಮುಖ್ಯಾಂಶಗಳು:
- ಡಿಸೆಂಬರ್ 2025ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಅಂಗೀಕರಿಸಲ್ಪಟ್ಟ ಗ್ರಾಹಕ ಉತ್ಪನ್ನ ಸುರಕ್ಷತೆಗಾಗಿ ವಿಶ್ವಸಂಸ್ಥೆಯ ತತ್ವಗಳ ಬಿಡುಗಡೆ.
- "ಏಕೆ ಈ ತತ್ವಗಳು ಮುಖ್ಯವಾಗಿವೆ" ಎಂಬ ವಿಷಯದ ಕುರಿತಾದ ಉನ್ನತ ಮಟ್ಟದ ಫೈರ್ಸೈಡ್ ಚಾಟ್ ಇದರಲ್ಲಿ ಭಾರತ ಭಾಗವಹಿಸಲಿದೆ.
- ಸದಸ್ಯ ರಾಷ್ಟ್ರಗಳಿಂದ ಗ್ರಾಹಕ ರಕ್ಷಣೆಗಾಗಿ ವಿಶ್ವಸಂಸ್ಥೆಯ ಮಾರ್ಗಸೂಚಿಗಳ (ಯು ಎನ್ ಜಿ ಸಿ ಪಿ) ಅನುಷ್ಠಾನದ ಕುರಿತು ಚರ್ಚೆಗಳು.
- ಗ್ರಾಹಕ ಮಾಹಿತಿ ಮತ್ತು ಶಿಕ್ಷಣ, ಸುಸ್ಥಿರ ಬಳಕೆ, ಜಾಗತಿಕ ಮಾರುಕಟ್ಟೆಗಳಲ್ಲಿ ಗ್ರಾಹಕ ರಕ್ಷಣಾ ಕಾಯ್ದೆಯ ಜಾರಿ ಮತ್ತು ಗಡಿಯಾಚೆಗಿನ ಗ್ರಾಹಕ ರಕ್ಷಣೆ ಕುರಿತು ಚರ್ಚೆಗಳು.
- ಅರ್ಜೆಂಟೀನಾದ ಗ್ರಾಹಕ ರಕ್ಷಣೆ ಕಾಯ್ದೆ ಮತ್ತು ನೀತಿಯ ಸ್ವಯಂಪ್ರೇರಿತ ವಿಮರ್ಶೆ.
- ಇತ್ತೀಚಿನ ಕಾನೂನು ಮತ್ತು ಸಾಂಸ್ಥಿಕ ಬೆಳವಣಿಗೆಗಳು, ಸಾಮರ್ಥ್ಯ ವೃದ್ಧಿ ಉಪಕ್ರಮಗಳ ಪರಿಶೀಲನೆ ಮತ್ತು ಮುಂದಿನ ಅಧಿವೇಶನದ ವರದಿ ಹಾಗೂ ತಾತ್ಕಾಲಿಕ ಕಾರ್ಯಸೂಚಿಯ ಅಳವಡಿಕೆ.
ಕಳೆದ ಹದಿನಾಲ್ಕು ತಿಂಗಳುಗಳಲ್ಲಿ, ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯು 36 ವಲಯಗಳಲ್ಲಿ ₹91.77 ಕೋಟಿಗೂ ಹೆಚ್ಚು ಮೊತ್ತದ ಮರುಪಾವತಿಯನ್ನು ಸುಗಮಗೊಳಿಸಿದೆ. ಇದು ವ್ಯಾಜ್ಯದ ಹಂತಕ್ಕೆ ತಲುಪುವ ಮುನ್ನವೇ 1.47 ಲಕ್ಷಕ್ಕೂ ಹೆಚ್ಚು ಮರುಪಾವತಿ ಸಂಬಂಧಿತ ಕುಂದುಕೊರತೆಗಳನ್ನು ಪರಿಹರಿಸುವ ಮೂಲಕ ಸಾಧ್ಯವಾಗಿದೆ.
ದೂರುಗಳನ್ನು ಆನ್‌ಲೈನ್ ನಲ್ಲಿ ದಾಖಲಿಸುವುದು, ವರ್ಚುವಲ್ ವಿಚಾರಣೆಗಳು, ಎಲೆಕ್ಟ್ರಾನಿಕ್ ಪ್ರಕರಣ ನಿರ್ವಹಣೆ ಮತ್ತು ನಡಾವಳಿಗಳಿಗೆ ಡಿಜಿಟಲ್ ಪ್ರವೇಶವನ್ನು ಸಕ್ರಿಯಗೊಳಿಸುವ ಎಐ-ಚಾಲಿತ ಡಿಜಿಟಲ್ ವೇದಿಕೆಯಾದ 'ಇ-ಜಾಗೃತಿ' ಮೂಲಕ ಇಲಾಖೆಯು ಗ್ರಾಹಕ ವಿವಾದಗಳ ಪರಿಹಾರವನ್ನು ಇನ್ನಷ್ಟು ಬಲಪಡಿಸಿದೆ. ಈ ವೇದಿಕೆಯು ಅನಿವಾಸಿ ಭಾರತೀಯರು ಮತ್ತು ವಿದೇಶದಲ್ಲಿ ವಾಸಿಸುವ ಗ್ರಾಹಕರು ಗ್ರಾಹಕ ದೂರುಗಳನ್ನು ಡಿಜಿಟಲ್ ರೂಪದಲ್ಲಿ ಮುಂದುವರಿಸಲು ಅನುವು ಮಾಡಿಕೊಡುತ್ತದೆ, ಇದು ವಿದೇಶದ ಗ್ರಾಹಕ ವಿವಾದಗಳ ಪರಿಹಾರವನ್ನು ಬೆಂಬಲಿಸುತ್ತದೆ. ಭಾರತವು ಒಂಬತ್ತನೇ ಅಧಿವೇಶನದ ಅಧ್ಯಕ್ಷತೆ ವಹಿಸುತ್ತಿರುವುದು ಅಂತಾರಾಷ್ಟ್ರೀಯ ಸಹಕಾರವನ್ನು ಬಲಪಡಿಸುವಲ್ಲಿ ಮತ್ತು ಪರಿಣಾಮಕಾರಿ ಗ್ರಾಹಕ ರಕ್ಷಣಾ ಚೌಕಟ್ಟುಗಳನ್ನು ಮುನ್ನಡೆಸುವಲ್ಲಿ ಅದರ ನಿರಂತರ ತೊಡಗಿಸಿಕೊಳ್ಳುವಿಕೆಯನ್ನು ಪ್ರತಿಬಿಂಬಿಸುತ್ತದೆ.
*****
(रिलीज़ आईडी: 2281367)
आगंतुक पटल : 15