ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಆಧಾರ್ ಆ್ಯಪ್ ಮೂಲಕ ಆಧಾರ್ ನಲ್ಲಿ ಉಚಿತ ಇಮೇಲ್ ನವೀಕರಣ ಮಾಡಲು ಯುಐಡಿಎಐ ಅನುವು ಮಾಡಿದೆ
ಮೊದಲ ಎರಡು ದಿನಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಇಮೇಲ್ ನವೀಕರಣಗಳ ದಾಖಲು
प्रविष्टि तिथि:
03 JUL 2026 12:45PM by PIB Bengaluru
ನಿವಾಸಿಗಳ ಅನುಕೂಲತೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ಈಗ ಜನರು ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಅಗತ್ಯವಿಲ್ಲದೆ, ಆಧಾರ್ ಆ್ಯಪ್ ಮೂಲಕ ನೇರವಾಗಿ ತಮ್ಮ ಇಮೇಲ್ ಐಡಿಯನ್ನು ಸೇರಿಸಲು ಅಥವಾ ನವೀಕರಿಸಲು ಅವಕಾಶ ಮಾಡಿಕೊಟ್ಟಿದೆ.
ಇದು ಆಧಾರ್ ಆ್ಯಪ್ ಮೂಲಕ ಮಾತ್ರ ಲಭ್ಯವಿರುವ ಉಚಿತ ಸೇವೆಯಾಗಿದ್ದು, 1 ಜುಲೈ 2026 ರಿಂದ ಆರು ತಿಂಗಳ ಅವಧಿಗೆ ಜಾರಿಗೆ ಬರಲಿದೆ. ಇದು ನಿವಾಸಿಗಳು ತಮ್ಮ ಆಧಾರ್ ಮಾಹಿತಿಯನ್ನು ಸುಲಭವಾಗಿ ನವೀಕರಿಸಲು ನೆರವಾಗಲಿದೆ. ಖುದ್ದು ಭೇಟಿಯ ಅಗತ್ಯವನ್ನು ತೆಗೆದುಹಾಕುವ ಮೂಲಕ, ಈ ಉಪಕ್ರಮವು ವಿಕಸಿತ ಭಾರತದ ಕಡೆಗೆ ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಜನಸ್ನೇಹಿ ಡಿಜಿಟಲ್ ಸೇವೆಯನ್ನು ಒದಗಿಸುವ ಯುಐಡಿಎಐ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.
ಆಧಾರ್ ಆ್ಯಪ್ ನಲ್ಲಿ ಈ ಹೊಸ ಸೇವೆ ಲಭ್ಯವಾದ ಎರಡು ದಿನಗಳಲ್ಲೇ 2,50,000ಕ್ಕೂ ಹೆಚ್ಚು ಜನರು ತಮ್ಮ ಇಮೇಲ್ ವಿಳಾಸವನ್ನು ನವೀಕರಿಸಿದ್ದಾರೆ. ಆಧಾರ್ ನೊಂದಿಗೆ ಇಮೇಲ್ ಲಿಂಕ್ ಮಾಡುವುದರಿಂದ ಯಾವುದೇ ಆಧಾರ್ ದೃಢೀಕರಣ ವಿನಂತಿಯನ್ನು ಕಾರ್ಯಗತಗೊಳಿಸಿದಾಗ ನೈಜ-ಸಮಯದ ಇಮೇಲ್ ಸೂಚನೆಗಳನ್ನು ಸ್ವೀಕರಿಸಲು ಸಹಾಯ ಮಾಡುತ್ತದೆ.
ಇದು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಮತ್ತು ಆಧಾರ್ ಸಂಖ್ಯೆ ಹೊಂದಿರುವವರು ಯಾವುದೇ ಉದ್ದೇಶಕ್ಕಾಗಿ ತಮ್ಮ ಆಧಾರ್ ಬಳಕೆಯ ಬಗ್ಗೆ ಸದಾ ಮಾಹಿತಿ ಹೊಂದಿರಲು ಅನುವು ಮಾಡಿಕೊಡುವ ಮೂಲಕ ಹೆಚ್ಚುವರಿ ಭದ್ರತೆಯನ್ನು ಒದಗಿಸುತ್ತದೆ.
ಜೀವನ ಸುಲಭತೆಯನ್ನು ಸುಧಾರಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾದ ಹೊಸ ಆಧಾರ್ ಆ್ಯಪ್, ಜನರು ತಮ್ಮ ಸ್ಮಾರ್ಟ್ ಫೋನ್ ಗಳಿಂದಲೇ ನೇರವಾಗಿ ಮೊಬೈಲ್ ಸಂಖ್ಯೆ ನವೀಕರಣ ಮತ್ತು ವಿಳಾಸ ನವೀಕರಣ ಸೇರಿದಂತೆ ಹಲವು ಸೇವೆಗಳನ್ನು ಸುಲಭವಾಗಿ ಪಡೆಯಲು ಅನುವು ಮಾಡಿಕೊಡುತ್ತಿದೆ.
ಇದುವರೆಗೆ 40 ಲಕ್ಷಕ್ಕೂ ಹೆಚ್ಚು ಜನರು ಹೊಸ ಆಧಾರ್ ಆ್ಯಪ್ ಬಳಸಿ ತಮ್ಮ ಮೊಬೈಲ್ ಸಂಖ್ಯೆಗಳನ್ನು ನವೀಕರಿಸಿದ್ದಾರೆ. ಅದೇ ಸಮಯದಲ್ಲಿ, ಸುಮಾರು 10 ಲಕ್ಷ ಜನರು ವಿಳಾಸವನ್ನು ನವೀಕರಿಸಲು ಈ ಆ್ಯಪ್ ಅನ್ನು ಬಳಸಿದ್ದಾರೆ.
ಆಧಾರ್ ನಲ್ಲಿ ಇಮೇಲ್ ಐಡಿಗಳನ್ನು ಸೇರಿಸಲು ಮತ್ತು ನವೀಕರಿಸಲು ಈ ಸೌಲಭ್ಯದ ಪ್ರಯೋಜನವನ್ನು ಪಡೆಯುವಂತೆ ಯುಐಡಿಎಐ ಜನರನ್ನು ಪ್ರೋತ್ಸಾಹಿಸುತ್ತದೆ. ನಿವಾಸಿಗಳು ಆಧಾರ್ ಆ್ಯಪ್ ಅನ್ನು ಡೌನ್ ಲೋಡ್ ಮಾಡುವ ಅಥವಾ ನವೀಕರಿಸುವ ಮೂಲಕ ಇಮೇಲ್ ನವೀಕರಣದ ವ್ಯವಸ್ಥೆಯನ್ನು ಉಪಯೋಗಿಸಬಹುದು.
ಹೊಸ ಆಧಾರ್ ಆ್ಯಪ್ ಆಂಡ್ರಾಯ್ಡ್ ಮತ್ತು ಆಪಲ್ ಐಒಎಸ್ ಎರಡರಲ್ಲೂ ಲಭ್ಯವಿದೆ. ಜನರು ಈ ಕೊಂಡಿಯಲ್ಲಿ ಡೌನ್ ಲೋಡ್ ಮಾಡಬಹುದು:
Android: https://play.google.com/store/apps/details?id=in.gov.uidai.pehchaan&hl=en_IN
iOS - https://apps.apple.com/in/app/aadhaar/id6744029871
*****
(रिलीज़ आईडी: 2280674)
आगंतुक पटल : 12