ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಹಾಗೂ ವಿತರಣೆಯ ಮೇಲಿದ್ದ ತಾತ್ಕಾಲಿಕ ನಿರ್ಬಂಧಗಳನ್ನು ಹಿಂಪಡೆದ ಸರ್ಕಾರ
प्रविष्टि तिथि:
29 JUN 2026 8:00PM by PIB Bengaluru
ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಜುಲೈ 1, 2026 ರಿಂದ ಜಾರಿಗೆ ಬರುವಂತೆ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಮೋಟಾರ್ ಸ್ಪಿರಿಟ್ (ಎಂ.ಎಸ್) ಮತ್ತು ಹೈ ಸ್ಪೀಡ್ ಡೀಸೆಲ್ (ಹೆಚ್.ಎಸ್.ಡಿ) ಮಾರಾಟ ಮತ್ತು ವಿತರಣೆಯನ್ನು ನಿಯಂತ್ರಿಸುವ ತಾತ್ಕಾಲಿಕ ನಿಯಂತ್ರಕ ಕ್ರಮಗಳನ್ನು ಹಿಂತೆಗೆದುಕೊಂಡಿದೆ.
ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ಉಂಟಾದ ಅಡೆತಡೆಗಳ ಅವಧಿಯಲ್ಲಿ, ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ನ ಸ್ಥಿರ ಚಿಲ್ಲರೆ ಬೆಲೆಗಳನ್ನು ಕಾಯ್ದುಕೊಳ್ಳುವ ಮೂಲಕ ಅಂತರರಾಷ್ಟ್ರೀಯ ಇಂಧನ ಬೆಲೆಗಳಲ್ಲಿನ ತೀವ್ರ ಏರಿಕೆಯಿಂದ ಚಿಲ್ಲರೆ ಖರೀದಿ ಗ್ರಾಹಕರನ್ನು ರಕ್ಷಿಸುವುದನ್ನು ಮುಂದುವರೆಸಿತು. ಇದು ಚಿಲ್ಲರೆ ಇಂಧನ ಬೆಲೆಗಳು ಮತ್ತು ಬೃಹತ್ ಗ್ರಾಹಕರಿಗೆ ಅನ್ವಯವಾಗುವ ಬೆಲೆಗಳ ನಡುವೆ ಗಮನಾರ್ಹ ಬೆಲೆ ವ್ಯತ್ಯಾಸಕ್ಕೆ ಕಾರಣವಾಯಿತು. ಪರಿಣಾಮವಾಗಿ, ಕೆಲವು ಕೈಗಾರಿಕಾ, ವಾಣಿಜ್ಯ ಮತ್ತು ಸಾಂಸ್ಥಿಕ ಗ್ರಾಹಕರು ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಇಂಧನವನ್ನು ಸಂಗ್ರಹಿಸಲು ಪ್ರಾರಂಭಿಸಿದರು, ಇದು ಇಂಧನದ ಸಮಾನ ವಿತರಣೆಯ ಮೇಲೆ ಪರಿಣಾಮ ಬೀರುವ ತಿರುವು, ವ್ಯತ್ಯಯ, ಸಂಗ್ರಹಣೆ ಮತ್ತು ಕಪ್ಪು ಮಾರುಕಟ್ಟೆಯ ನಿದರ್ಶನಗಳಿಗೆ ಕಾರಣವಾಯಿತು.
ಈ ಪರಿಸ್ಥಿತಿಯನ್ನು ಪರಿಹರಿಸಲು, ಜೂನ್ 12, 2026 ರಂದು ಜಾರಿಗೆ ತರಲಾದ ತಾತ್ಕಾಲಿಕ ನಿಯಂತ್ರಕ ಕ್ರಮಗಳು, ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಪ್ರತಿ ಗ್ರಾಹಕ/ವಾಹನಕ್ಕೆ ದಿನಕ್ಕೆ 200 ಲೀಟರ್ ಹೈ ಸ್ಪೀಡ್ ಡೀಸೆಲ್ (ಹೆಚ್.ಎಸ್.ಡಿ) ತಾತ್ಕಾಲಿಕ ಮಿತಿಯನ್ನು ನಿಗದಿಪಡಿಸಿದವು ಮತ್ತು ಕೈಗಾರಿಕಾ, ಸಾಂಸ್ಥಿಕ ಮತ್ತು ವಾಣಿಜ್ಯ ಗ್ರಾಹಕರು ಚಿಲ್ಲರೆ ಮಾರಾಟ ಮಳಿಗೆಗಳ ಬದಲಿಗೆ ಗೊತ್ತುಪಡಿಸಿದ ಗ್ರಾಹಕ ಪಂಪ್ ಗಳ ಮೂಲಕ ಇಂಧನವನ್ನು ಖರೀದಿಸುವಂತೆ ಒತ್ತಾಯಿಸಲಾಯಿತು.ಕಳ್ಳಸಾಗಣಿಕೆ, ಕಪ್ಪು ಮಾರುಕಟ್ಟೆ, ಸಂಗ್ರಹಣೆ ಮತ್ತು ಡೀಸೆಲ್ ನ ತಿರುವುಗಳನ್ನು ತಡೆಗಟ್ಟುವ ಮತ್ತು ಚಿಲ್ಲರೆ ಗ್ರಾಹಕರಿಗೆ ಪೆಟ್ರೋಲ್ ಮತ್ತು ಡೀಸೆಲ್ ನ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಕ್ರಮಗಳು ಹೊಂದಿದ್ದವು.
ದೇಶದಲ್ಲಿ ಪ್ರಸ್ತುತ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ಪರಿಸ್ಥಿತಿಯ ಪರಿಶೀಲನೆಯ ನಂತರ, ಸಾರ್ವಜನಿಕ ಹಿತಾಸಕ್ತಿಯಲ್ಲಿ ತಾತ್ಕಾಲಿಕ ನಿಯಂತ್ರಕ ಕ್ರಮಗಳು ಇನ್ನು ಮುಂದೆ ಅಗತ್ಯವಿಲ್ಲ ಎಂದು ಸರ್ಕಾರ ತೀರ್ಮಾನಿಸಿದೆ. ಈ ಪ್ರಕಾರ, ಜೂನ್ 12, 2026 ರಂದು ಹೊರಡಿಸಲಾದ ಆದೇಶವನ್ನು ಜುಲೈ 1, 2026 ರಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.
ತಾತ್ಕಾಲಿಕ ಕ್ರಮಗಳು ಚಿಲ್ಲರೆ ಖರೀದಿ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವಾಗ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ನ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಿತು. ಅವುಗಳ ಹಿಂಪಡೆಯುವಿಕೆ ಪೂರೈಕೆ ಪರಿಸ್ಥಿತಿಯಲ್ಲಿನ ಸುಧಾರಣೆ ಮತ್ತು ಸಾಮಾನ್ಯ ಪೂರೈಕೆ ವ್ಯವಸ್ಥೆಗಳ ಪುನಃಸ್ಥಾಪನೆಯನ್ನು ಪ್ರತಿಬಿಂಬಿಸುತ್ತದೆ.
*****
(रिलीज़ आईडी: 2279158)
आगंतुक पटल : 57
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam