ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಜೂನ್ 27 ಮತ್ತು 28 ರಂದು ಕರ್ನಾಟಕ ಭೇಟಿ


ಬೆಂಗಳೂರಿನಲ್ಲಿ ನಡೆಯಲಿರುವ ನಾಡಪ್ರಭು ಶ್ರೀ ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಭಾಗಿ

ಪ್ರಕಟಣಾ ದಿನಾಂಕ: 26 JUN 2026 1:49PM by PIB Bengaluru

ಭಾರತದ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು 2026ರ ಜೂನ್ 27 ಮತ್ತು 28 ರಂದು ಎರಡು ದಿನ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ.

ಉಪರಾಷ್ಟ್ರಪತಿಗಳು 2026ರ ಜೂನ್ 27 ರಂದು, ಬೆಂಗಳೂರಿನಲ್ಲಿ ನಡೆಯಲಿರುವ ನಾಡಪ್ರಭು ಶ್ರೀ ಕೆಂಪೇಗೌಡರ  517 ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್ ಜಿ ಯು ಹೆಚ್ ಎಸ್)ನ ಸಂಸ್ಥಾಪನಾ ದಿನ ಹಾಗೂ ಅಂತಾರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ತಡೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನದ ಕಾರ್ಯಕ್ರಮದ ಭಾಗವಾಗಿ 2026 ರ ಜೂನ್ 28 ರಂದು ಆಯೋಜಿಸಲಾಗಿರುವ ನಶಾ ಮುಕ್ತ ಭಾರತ ಸಮಾವೇಶದಲ್ಲಿ ಉಪರಾಷ್ಟ್ರಪತಿಗಳು ಭಾಗಿಯಾಗಲಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2278221) ವಿಸಿಟರ್ ಕೌಂಟರ್ : 226
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Gujarati , Tamil , Malayalam