ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ “ಬಲಿದಾನ ದಿವಸ”ದ ಅಂಗವಾಗಿ ಅವರಿಗೆ ಪ್ರಧಾನಮಂತ್ರಿಯವರು ಗೌರವ ನಮನ ಸಲ್ಲಿಸಿದರು, ಹಾಗೂ, ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡರು

प्रविष्टि तिथि: 23 JUN 2026 3:39PM by PIB Bengaluru

ಡಾ. ಶ್ಯಾಮ ಪ್ರಸಾದ್ ಮುಖರ್ಜಿ  ಅವರ “ಬಲಿದಾನ ದಿವಸ”ದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅವರಿಗೆ ಗೌರವ ನಮನ ಸಲ್ಲಿಸಿದರು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವರ ಅಪಾರ ಕೊಡುಗೆಯನ್ನು ಸ್ಮರಿಸಿಕೊಂಡರು.

ಡಾ. ಮುಖರ್ಜಿ ಅವರನ್ನು ಭಾರತದ ಅಭಿವೃದ್ಧಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಒಬ್ಬ ವಿಶಿಷ್ಟ ದೇಶಭಕ್ತ, ವಿದ್ವಾಂಸ ಮತ್ತು ರಾಜಕಾರಣಿ ಎಂದು ಪ್ರಧಾನಮಂತ್ರಿಯವರು ಬಣ್ಣಿಸಿದರು. ಡಾ. ಮುಖರ್ಜಿ ಅವರ ಅಚಲ ದೃಢನಿಶ್ಚಯ, ಸಾರ್ವಜನಿಕ ಜೀವನದಲ್ಲಿ ಧೈರ್ಯ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಬದ್ಧತೆ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದು ಶ್ರೀ ಮೋದಿ ಅವರು ಹೇಳಿದರು. ಡಾ. ಮುಖರ್ಜಿ ಅವರ ತ್ಯಾಗವು ರಾಷ್ಟ್ರದ ಸಾಮೂಹಿಕ ಸ್ಮರಣೆಯಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಅವರು ತಿಳಿಸಿದರು.

ಡಾ. ಮುಖರ್ಜಿ ಅವರಿಗೆ ಗೌರವಯುತ ಗೌರವ ನಮನಗಳನ್ನು ಸಲ್ಲಿಸುತ್ತಾ, ಡಾ. ಮುಖರ್ಜಿಯವರು ತಮ್ಮ ಇಡೀ ಜೀವನವನ್ನು ರಾಷ್ಟ್ರ ಮತ್ತು ಸಮಾಜದ ನಿಸ್ವಾರ್ಥ ಸೇವೆಗೆ ಮುಡಿಪಾಗಿಟ್ಟಿದ್ದರು ಎಂದು ಪ್ರಧಾನಮಂತ್ರಿಯವರು ಹೇಳಿದರು. ಡಾ. ಮುಖರ್ಜಿ ಅವರ ಆಳವಾದ ಆಲೋಚನೆಗಳು ಮತ್ತು ಆದರ್ಶಗಳು ದೇಶದ ಪ್ರತಿಯೊಂದು ಪೀಳಿಗೆಗೂ ಮಾತೃಭೂಮಿಗೆ ಸೇವೆ ಸಲ್ಲಿಸಲು ಸ್ಫೂರ್ತಿ ನೀಡುತ್ತಲೇ ಇರುತ್ತವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಂಸ್ಕೃತ ಸುಭಾಷಿತವನ್ನು ಸಹ ಹಂಚಿಕೊಂಡರು:

“न कर्मणा न प्रजया धनेन त्यागेनैके अमृतत्वमानशुः।

परेण नाकं निहितं गुहायां विभ्राजते यद्यतयो विशन्ति॥”

ಅಮರತ್ವವನ್ನು ಕಾರ್ಯಗಳು, ಸಂಪತ್ತು ಅಥವಾ ವಂಶಾವಳಿಯ ಮೂಲಕ ಪಡೆಯಲಾಗುವುದಿಲ್ಲ ಬದಲಾಗಿ ತ್ಯಾಗ ಮತ್ತು ಉದಾತ್ತ ಆದರ್ಶಗಳಿಗೆ ಸಂಪೂರ್ಣ ಸಮರ್ಪಣೆಯಿಂದ ಸಾಧಿಸಲಾಗುತ್ತದೆ ಎಂದು ಈ ಸುಭಾಷಿತವು ಹೇಳುತ್ತದೆ. ರಾಷ್ಟ್ರ, ಸಮಾಜ ಮತ್ತು ಸತ್ಯಕ್ಕಾಗಿ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ತ್ಯಜಿಸುವ ಆ ಉದಾತ್ತ ಆತ್ಮಗಳು ಕಾಲದ ಮಿತಿಗಳನ್ನು ಮೀರಿ ಜನರ ಹೃದಯದಲ್ಲಿ ಅಮರರಾಗುತ್ತಾರೆ.

ಎಕ್ಸ್ ತಾಣದಲ್ಲಿ ಪ್ರಧಾನಮಂತ್ರಿಯವರು ಈ ರೀತಿ ಸಂದೇಶ ಬರೆದಿದ್ದಾರೆ;

"ಬಲಿದಾನ ದಿವಸ್”ದಂದು, ಭಾರತದ ಅಭಿವೃದ್ಧಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಶ್ರೇಷ್ಠ ದೇಶಭಕ್ತ, ವಿದ್ವಾಂಸ ಮತ್ತು ರಾಜಕಾರಣಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರಿಗೆ ನಾನು ಗೌರವ ನಮನವನ್ನು ಸಲ್ಲಿಸುತ್ತೇನೆ. ಸಾರ್ವಜನಿಕ ಜೀವನದಲ್ಲಿ ಅವರ ಅಚಲ ದೃಢನಿಶ್ಚಯ, ಧೈರ್ಯ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಬದ್ಧತೆಗಳು ಸದಾ  ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ. ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ತ್ಯಾಗ ನಮ್ಮ ಸಾಮೂಹಿಕ ಸ್ಮರಣೆಯಲ್ಲಿ ಅಚ್ಚಳಿಯದೆ ಉಳಿದಿದೆ. ಅವರು ಪಾಲಿಸಿದ ಮತ್ತು ಕೊನೆಯ ಉಸಿರಿನವರೆಗೂ ಸೇವೆ ಸಲ್ಲಿಸಿದ ಮೌಲ್ಯಗಳಿಂದ ಮಾರ್ಗದರ್ಶಿಸಲ್ಪಟ್ಟ ಬಲವಾದ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ನಾವು ಈ ಮೂಲಕ ಪುನರುಚ್ಚರಿಸುತ್ತೇವೆ."

“निःस्वार्थ भाव से राष्ट्र और समाज की सेवा में आजीवन समर्पित रहे देश की महान विभूति डॉ. श्यामा प्रसाद मुखर्जी जी को उनके बलिदान दिवस पर आदरपूर्ण श्रद्धांजलि। उनके प्रखर विचार और आदर्श देश की हर पीढ़ी को मातृभूमि की सेवा के लिए प्रेरित करते रहेंगे।

न कर्मणा न प्रजया धनेन त्यागेनैके अमृतत्वमानशुः।

परेण नाकं निहितं गुहायां विभ्राजते यद्यतयो विशन्ति॥”

 

*****


(रिलीज़ आईडी: 2277257) आगंतुक पटल : 5
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Bengali-TR , Assamese , Gujarati , Odia , Tamil , Telugu