ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿರುವ ವೇಸೈಡ್ (ದಾರಿ ಬದಿಯ) ಸೌಲಭ್ಯಗಳಲ್ಲಿ ವಾಹನ ದುರಸ್ತಿ ಮತ್ತು ಪಂಕ್ಚರ್ ಸೇವಾ ಸೌಕರ್ಯ ಅಭಿವೃದ್ಧಿಪಡಿಸಲು ಎನ್ ಎಚ್ ಎ ಐ ನಿರ್ದೇಶನ
प्रविष्टि तिथि:
22 JUN 2026 3:34PM by PIB Bengaluru
ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿರುವ ಸೌಲಭ್ಯಗಳ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಬಲವರ್ಧನೆಗೊಳಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ ಎಚ್ ಎ ಐ) ದ ಸಂಪೂರ್ಣ ಸ್ವಾಮ್ಯದ ನ್ಯಾಷನಲ್ ಹೈವೇಸ್ ಲಾಜಿಸ್ಟಿಕ್ಸ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ (ಎನ್ ಎಚ್ ಎಲ್ ಎಂ ಎಲ್)ಗೆ ವೇಸೈಡ್ ಸೌಲಭ್ಯ (ದಾರಿ ಬದಿಯ) ಗಳು (ಡಬ್ಲೂ ಎಸ್ ಎ) ಗುತ್ತಿಗೆದಾರರಿಗೆ ವಾಹನ ದುರಸ್ತಿ ಅಂಗಡಿಗಳು ಮತ್ತು ಪಂಕ್ಚರ್ ದುರಸ್ತಿ ಸೌಲಭ್ಯಗಳನ್ನು ಸ್ಥಾಪಿಸಲು ಆದ್ಯತೆ ನೀಡುವಂತೆ ಸಲಹೆ ನೀಡುವಂತೆ ತನ್ನ ವಲಯ ಕಚೇರಿಗಳಿಗೆ ನಿರ್ದೇಶನ ನೀಡಿದೆ. ಈ ಉಪಕ್ರಮವು ಒಟ್ಟಾರೆ ರಾಷ್ಟ್ರೀಯ ಹೆದ್ದಾರಿ ಪ್ರಯಾಣದ ಅನುಭವವನ್ನು ಸುಧಾರಿಸುವುದು, ವಾಹನಗಳ ಡೌನ್‌ಟೈಮ್ ಅನ್ನು ಕಡಿತಗೊಳಿಸುವುದು, ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವುದು ಮತ್ತು ರಾಷ್ಟ್ರೀಯ ಹೆದ್ದಾರಿ ಕಾರಿಡಾರ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಮತ್ತು ಸರಕು ಸಾಗಣೆದಾರರಿಗೆ ತ್ವರಿತ ಸಹಾಯ ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ.
ಹಲವು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಹೆಚ್ಚಿನ ಸಂಖ್ಯೆಯ ವಾಹನಗಳಿಗೆ ಪಂಕ್ಚರ್ ದುರಸ್ತಿ ಸೇವೆಗಳು ಅಗತ್ಯವಿದೆ ಎಂಬುದನ್ನು ಗಮನಿಸಲಾಗಿದೆ. ಇದು ಹೆದ್ದಾರಿ ಬಳಕೆದಾರರು ಸ್ಥಗಿತಗಳು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಯಾಂತ್ರಿಕ ಸಹಾಯ ಪಡೆಯಲು ಅನಾನುಕೂಲ ಮಾಡಿಕೊಡುವುದಲ್ಲದೆ, ಅನಗತ್ಯ ವಿಳಂಬಗಳು ಮತ್ತು ಸಂಭಾವ್ಯ ಸುರಕ್ಷತಾ ಕಾಳಜಿಗಳನ್ನು ತಪ್ಪಿಸಲು ಅನುವು ಮಾಡಿಕೊಡುತ್ತದೆ.
ಎನ್ ಎಚ್ ಎಲ್ ಎಂ ಎಲ್, ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಡಿಯಲ್ಲಿ ದೀರ್ಘಾವಧಿಯ ಗುತ್ತಿಗೆ ಆಧಾರದ ಮೇಲೆ ಆಧುನಿಕ ವೇಸೈಡ್ ಸೌಲಭ್ಯಗಳ ಜಾಲ ಅಭಿವೃದ್ಧಿಪಡಿಸುತ್ತಿದೆ. ರಿಯಾಯಿತಿದಾರರು ಮತ್ತು ಗುತ್ತಿಗೆದಾರರೊಂದಿಗೆ ಕಾರ್ಯಗತಗೊಳಿಸಲಾದ ಅಸ್ತಿತ್ವದಲ್ಲಿರುವ ಗುತ್ತಿಗೆ ಒಪ್ಪಂದಗಳ ಅಡಿಯಲ್ಲಿ, ಪ್ರತಿ ಡಬ್ಲೂಎಸ್ ಎ ಗೆ ಸೂಚಿಸಲಾದ ಕಡ್ಡಾಯ ಸೌಲಭ್ಯಗಳ ಜೊತೆಗೆ ಅನುಮತಿಸಲಾದ ಸೌಲಭ್ಯಗಳ ಶ್ರೇಣಿಯನ್ನು ಅಭಿವೃದ್ಧಿಪಡಿಸಬಹುದು. ವಾಹನ ದುರಸ್ತಿ ಅಂಗಡಿಗಳು ಮತ್ತು ಪಂಕ್ಚರ್ ದುರಸ್ತಿ ಸೌಲಭ್ಯಗಳು ಒಪ್ಪಂದದ ಚೌಕಟ್ಟಿನಡಿಯಲ್ಲಿ ಅನುಮತಿಸಲಾದ ಸೌಲಭ್ಯಗಳಲ್ಲಿ ಸೇರಿವೆ.
ಈ ಡಬ್ಲೂಎಸ್ ಎಗಳನ್ನು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಪ್ರಯಾಣಿಕರು ಮತ್ತು ವಾಣಿಜ್ಯ ವಾಹನ ನಿರ್ವಾಹಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಸಂಯೋಜಿತ ಸೇವಾ ಕೇಂದ್ರಗಳಾಗಿ ಕಲ್ಪಿಸಲಾಗಿದೆ. ಅಂತಹ ಸೌಲಭ್ಯಗಳ ಅಭಿವೃದ್ಧಿಯು ವಿಶ್ವ ದರ್ಜೆಯ ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯ ಸೃಷ್ಟಿಸುವ ಮತ್ತು ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ತಡೆರಹಿತ ಸಂಚಾರ ಸೇವೆಗಳನ್ನು ತಲುಪಿಸುವ ವಿಶಾಲ ಉದ್ದೇಶಕ್ಕೆ ಪೂರಕವಾಗಿರುತ್ತದೆ.
ದೇಶಾದ್ಯಂತ ಪ್ರಯಾಣಿಕರು ಮತ್ತು ಲಾಜಿಸ್ಟಿಕ್ಸ್ ನಿರ್ವಾಹಕರ ವಿಕಸನಗೊಳ್ಳುತ್ತಿರುವ ಅಗತ್ಯತೆಗಳನ್ನು ಪೂರೈಸುವಾಗ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವ ಸುರಕ್ಷಿತ ಮತ್ತು ಬಳಕೆದಾರ ಸ್ನೇಹಿ ರಾಷ್ಟ್ರೀಯ ಹೆದ್ದಾರಿ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವ ಎನ್ ಎಚ್ ಎ ಐನ ಬದ್ಧತೆಯನ್ನು ಈ ಉಪಕ್ರಮವು ಬಲವಾಗಿ ಪ್ರತಿಪಾದಿಸುತ್ತದೆ
*****
(रिलीज़ आईडी: 2276643)
आगंतुक पटल : 17