ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ವಿದ್ಯಾರ್ಥಿವೇತನ ಲಭ್ಯತೆಯನ್ನು ಸರಳಗೊಳಿಸಲು ಪ್ರಮುಖ ಸುಧಾರಣೆಗಳು ಮತ್ತು ಡಿಜಿಟಲ್ ಉಪಕ್ರಮಗಳನ್ನು ಪರಿಚಯಿಸಿದ ಡಿ ಒ ಎಸ್ ಜೆ ಇ


1.2 ಕೋಟಿ ವಿದ್ಯಾರ್ಥಿಗಳಿಗೆ ಪಾಲನೆ ಹೊರೆಯನ್ನು ತಗ್ಗಿಸಲು ಶೂನ್ಯ ವಾಸಸ್ಥಳ ಪ್ರಮಾಣಪತ್ರದ ಅವಶ್ಯಕತೆ

ಡಿಜಿಟಲ್ ವಿದ್ಯಾರ್ಥಿವೇತನ ಆಡಳಿತದಲ್ಲಿ ಕ್ರಾಂತಿಯನ್ನುಂಟುಮಾಡಲು ಉಮಂಗ್ ವೇದಿಕೆಯಲ್ಲಿ ಸೇತು ಪೋರ್ಟಲ್ ಆರಂಭ

प्रविष्टि तिथि: 19 JUN 2026 12:10PM by PIB Bengaluru

ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ (ಡಿ ಒ ಎಸ್ ಜೆ ಇ) ಪರಿಶಿಷ್ಟ ಜಾತಿ (ಎಸ್ ಸಿ) ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಲಭ್ಯತೆಯನ್ನು ಸುಧಾರಿಸಲು ಮತ್ತು ವಿದ್ಯಾರ್ಥಿವೇತನ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಪ್ರಮುಖ ಸುಧಾರಣೆಗಳು ಮತ್ತು ಡಿಜಿಟಲ್ ಉಪಕ್ರಮಗಳನ್ನು ಕೈಗೊಂಡಿದೆ.

ಪ್ರಮುಖ ಸುಧಾರಣಾ ಕ್ರಮವಾಗಿ, ವಿದ್ಯಾರ್ಥಿವೇತನ ಯೋಜನೆಗಳ ಅಡಿಯಲ್ಲಿ ಅರ್ಜಿ ಸಲ್ಲಿಸಲು ವಾಸಸ್ಥಳ (ಡೊಮಿಸೈಲ್) ಪ್ರಮಾಣಪತ್ರವನ್ನು ಸಲ್ಲಿಸುವ ಅಗತ್ಯತೆಯನ್ನು ತೆಗೆದುಹಾಕಲಾಗಿದೆ. ಈ ಹಂತವು ವಿದ್ಯಾರ್ಥಿಗಳ ಮೇಲಿನ ಅನುಸರಣಾ ಹೊರೆ ತಗ್ಗಿಸುತ್ತದೆ ಮತ್ತು ಅರ್ಜಿ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಹಾಗೂ ಪ್ರಯೋಜನಗಳನ್ನು ಸುಲಭವಾಗಿ ಪಡೆಯಲು ಅನುವು ಮಾಡಿಕೊಡುತ್ತದೆ. ಇದು ದೇಶಾದ್ಯಂತ ತಮ್ಮ ರಾಜ್ಯಗಳನ್ನು ಹೊರತುಪಡಿಸಿ ಇತರ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ಸಾವಿರಾರು ಅರ್ಹ ಅರ್ಜಿದಾರರಿಗೆ ಪ್ರಯೋಜನವನ್ನು ನೀಡುತ್ತದೆ.

ಪರಿಶಿಷ್ಟ ಜಾತಿ ಮತ್ತು ಒಬಿಸಿಗಳಿಗೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಗಳ ಅಡಿಯಲ್ಲಿ ಸುಮಾರು 1.2 ಕೋಟಿ ವಿದ್ಯಾರ್ಥಿಗಳು ವಾರ್ಷಿಕವಾಗಿ ವಿದ್ಯಾರ್ಥಿವೇತನ ಪ್ರಯೋಜನಗಳನ್ನು ಪಡೆಯುತ್ತಾರೆ. ಈವರೆಗೆ ಈ ಯೋಜನೆಗಳ ಅಡಿಯಲ್ಲಿ ವಾಸಸ್ಥಳ(ಡೊಮಿಸೈಲ್) ಪ್ರಮಾಣಪತ್ರವು ಅತ್ಯಗತ್ಯ ಅಗತ್ಯವಾಗಿತ್ತು. ಈ ಅವಶ್ಯಕತೆಯನ್ನು ತೆಗೆದುಹಾಕುವುದರಿಂದ ದಾಖಲಾತಿ ಅವಶ್ಯಕತೆಗಳನ್ನು ಕಡಿಮೆ ಮಾಡುವುದು, ಅನುಸರಣೆ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ವಿದ್ಯಾರ್ಥಿವೇತನ ಪ್ರಯೋಜನಗಳನ್ನು ಸುಲಭವಾಗಿ ಪಡೆಯಲು ಅನುಕೂಲವಾಗುವ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಹೆಚ್ಚು ವಿದ್ಯಾರ್ಥಿ ಸ್ನೇಹಿಯನ್ನಾಗಿ ಮಾಡುವ ನಿರೀಕ್ಷೆಯಿದೆ.

ಡಿಜಿಟಲ್ ಆಡಳಿತವನ್ನು ಮತ್ತಷ್ಟು ಬಲಪಡಿಸುವ ಮೂಲಕ ಇಲಾಖೆಯು ವಿದ್ಯಾರ್ಥಿವೇತನ-ಸಂಬಂಧಿತ ಸೇವೆಗಳಿಗೆ ಸಮಗ್ರ ಪರಿಹಾರವಾಗಿ ಉಮಾಂಗ್ ವೇದಿಕೆಯಲ್ಲಿ ಸೇತು (ಶೈಕ್ಷಣಿಕ ಪರಿವರ್ತನೆ ಮತ್ತು ಉನ್ನತಿಗಾಗಿ ವಿದ್ಯಾರ್ಥಿವೇತನ) ಅನ್ನು ಆರಂಭಿಸಿದೆ. ಈ ವೇದಿಕೆಯು ಅರ್ಹ ಅರ್ಜಿದಾರರು, ಸಾಂಸ್ಥಿಕ ನೋಡಲ್ ಅಧಿಕಾರಿಗಳು, ಜಿಲ್ಲಾ ನೋಡಲ್ ಅಧಿಕಾರಿಗಳು ಮತ್ತು ರಾಜ್ಯ ಅಧಿಕಾರಿಗಳಿಗೆ ಅರ್ಜಿ ನೋಂದಣಿ, ಟ್ರ್ಯಾಕಿಂಗ್ ಮತ್ತು ಇತರ ಸೇವೆಗಳ ಮೌಲ್ಯೀಕರಣಕ್ಕಾಗಿ, ಪಾರದರ್ಶಕತೆ ಮತ್ತು ದಕ್ಷತೆಯನ್ನು ಸುಧಾರಿಸಲು ಒಂದೇ ಮುಖಾಮುಖಿ ವೇದಿಕೆ (ಇಂಟರ್ಫೇಸ್) ಯನ್ನು ಒದಗಿಸುತ್ತದೆ.

ಈ ಉಪಕ್ರಮಗಳು ಸೇರ್ಪಡೆಯನ್ನು ಉತ್ತೇಜಿಸುವುದು, ಕಾರ್ಯವಿಧಾನದ ಅಡೆತಡೆಗಳನ್ನು ನಿವಾರಣೆ ಮಾಡುವುದು ಮತ್ತು ಕಲ್ಯಾಣ ಯೋಜನೆಗಳ ಪರಿಣಾಮಕಾರಿ ವಿತರಣೆಯನ್ನು ಖಾತ್ರಿಪಡಿಸಿಕೊಳ್ಳುವ ಸರ್ಕಾರದ ವಿಶಾಲ ಉದ್ದೇಶದೊಂದಿಗೆ ಹೊಂದಿಕೆಯಾಗುತ್ತವೆ. ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿದ್ಯಾರ್ಥಿ ವೇತನ ತಲುಪುವಂತೆ ಮಾಡಲು ಮತ್ತು ಸಕಾಲಿಕ ಬೆಂಬಲವನ್ನು ಒದಗಿಸಲು ತಂತ್ರಜ್ಞಾನ-ಚಾಲಿತ ಸುಧಾರಣೆಗಳನ್ನು ಸದುಪಯೋಗಪಡಿಸಿಕೊಳ್ಳಲು ಇಲಾಖೆ ಬದ್ಧವಾಗಿದೆ.

 

*****


(रिलीज़ आईडी: 2275232) आगंतुक पटल : 10
इस विज्ञप्ति को इन भाषाओं में पढ़ें: English , Urdu , Marathi , हिन्दी , Gujarati , Tamil , Telugu