ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಿ.ಎಂ.ಎ ಸಿ.ಜಿ.ಎಂ ಅಧ್ಯಕ್ಷರು ಮತ್ತು ಸಿ.ಇ.ಒ ರೊಡಾಲ್ಫ್ ಸಾದೇ ಅವರೊಂದಿಗೆ ಕಡಲ ಸಂಪರ್ಕ ಮತ್ತು ಸಹಯೋಗದ ಅವಕಾಶಗಳ ಕುರಿತು ಚರ್ಚೆ ನಡೆಸಿದ ಪ್ರಧಾನಮಂತ್ರಿ

प्रविष्टि तिथि: 18 JUN 2026 6:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸಿ.ಎಂ.ಎ ಸಿ.ಜಿ.ಎಂ (CMA CGM) ನ ಅಧ್ಯಕ್ಷರಾದ ಶ್ರೀ ರೊಡಾಲ್ಫ್ ಸಾದೇ ಅವರೊಂದಿಗೆ ಕಡಲ ಸಂಪರ್ಕ, ಜಾಗತಿಕ ಹಡಗು ಪ್ರವೃತ್ತಿಗಳು ಮತ್ತು ಭಾರತದ ವೇಗವಾಗಿ ಬೆಳೆಯುತ್ತಿರುವ ಕಡಲ ವಲಯದಲ್ಲಿ ಉದಯೋನ್ಮುಖ ಅವಕಾಶಗಳ ಕುರಿತು ಫಲಪ್ರದ ಚರ್ಚೆ ನಡೆಸಿದರು.

ಹಡಗು ನಿರ್ಮಾಣ, ಕಂಟೇನರ್ ತಯಾರಿಕೆ, ಡಿಜಿಟಲ್ ಕಡಲ ನಾವೀನ್ಯತೆ, ಸಾಗಣೆ (ಲಾಜಿಸ್ಟಿಕ್ಸ್) ಮತ್ತು ಕೌಶಲ್ಯಾಭಿವೃದ್ಧಿಯಲ್ಲಿ ಹೆಚ್ಚಿನ ಸಹಯೋಗಕ್ಕಾಗಿ ಮಾರ್ಗಗಳ ಕುರಿತು ಚರ್ಚಿಸಲಾಯಿತು ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ.

ಭಾರತದ ವಿಸ್ತರಿಸುತ್ತಿರುವ ಬಂದರು ಮೂಲಸೌಕರ್ಯವು ಜಾಗತಿಕ ಕಡಲ ನಾಯಕರಿಗೆ ಭರವಸೆಯ ಅವಕಾಶಗಳನ್ನು ತೆರೆದಿದೆ ಎಂದು ಶ್ರೀ ಮೋದಿ ಅವರು ಪ್ರತಿಪಾದಿಸಿದ್ದಾರೆ.

ಶ್ರೀ ಮೋದಿ ಅವರು ಎಕ್ಸ್ ಪೋಸ್ಟ್‌ನಲ್ಲಿ ಹೀಗೆ ಹೇಳಿದ್ದಾರೆ:

"ಭಾರತದ ಕ್ಷಿಪ್ರ ಬೆಳವಣಿಗೆಯ ಕಡಲ ವಲಯದಲ್ಲಿ ಹೊರಹೊಮ್ಮುತ್ತಿರುವ ಅವಕಾಶಗಳು, ಜಾಗತಿಕ ನೌಕಾಯಾನ ಪ್ರವೃತ್ತಿಗಳು ಮತ್ತು ಕಡಲ ಸಂಪರ್ಕ ಕುರಿತು ಸಿ.ಎಂ.ಎ ಸಿ.ಜಿ.ಎಂ.ನ ಶ್ರೀ ರೊಡಾಲ್ಫ್ ಸಾದೆ ಅವರೊಂದಿಗೆ ಫಲಪ್ರದ ಚರ್ಚೆ ನಡೆಸಿದೆ.

ಹಡಗು ನಿರ್ಮಾಣ, ಕಂಟೇನರ್ ತಯಾರಿಕೆ, ಡಿಜಿಟಲ್ ಕಡಲ ನಾವೀನ್ಯತೆ, ಸಾಗಣೆ ಮತ್ತು ಕೌಶಲ್ಯಾಭಿವೃದ್ಧಿಯಲ್ಲಿ ಹೆಚ್ಚಿನ ಸಹಯೋಗಕ್ಕಾಗಿ ಮಾರ್ಗಗಳ ಬಗ್ಗೆ ಚರ್ಚಿಸಿದೆವು.

ಭಾರತದ ವಿಸ್ತರಿಸುತ್ತಿರುವ ಬಂದರು ಮೂಲಸೌಕರ್ಯವು ಜಾಗತಿಕ ಕಡಲ ನಾಯಕರಿಗೆ ಭರವಸೆಯ ಅವಕಾಶಗಳನ್ನು ನೀಡಿದೆ.

@cmacgm"

******


(रिलीज़ आईडी: 2275004) आगंतुक पटल : 7
इस विज्ञप्ति को इन भाषाओं में पढ़ें: Malayalam , English , Urdu , Marathi , हिन्दी , Manipuri , Assamese , Bengali , Punjabi , Gujarati , Tamil , Telugu