ರೈಲ್ವೇ ಸಚಿವಾಲಯ
ಗುಜರಾತ್ ನಲ್ಲಿ ರೈಲು ಸಂಪರ್ಕವನ್ನು ಹೆಚ್ಚಿಸಲು ಮತ್ತು ಬಲಪಡಿಸಲು ಕಚ್ ಪ್ರದೇಶದಲ್ಲಿ ₹493 ಕೋಟಿ ವೆಚ್ಚದಲ್ಲಿ ಆದಿಪುರ-ಭುಜ್ ದ್ವಿಗುಣಗೊಳಿಸುವ ಯೋಜನೆಗೆ ಭಾರತೀಯ ರೈಲ್ವೆ ಅನುಮೋದನೆ ನೀಡಿದೆ
ಪ್ರತಿ ದಿಕ್ಕಿನಲ್ಲಿ ಪ್ರತಿದಿನ ಎರಡು ಹೆಚ್ಚುವರಿ ಪ್ರಯಾಣಿಕ ರೈಲು ಸೇವೆಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡಲಿದೆ ಈ ದ್ವಿಗುಣಗೊಳಿಸುವ ಯೋಜನೆ
ಈ ದ್ವಿಗುಣಗೊಳಿಸುವ ಮಾರ್ಗವು, ಹೆಚ್ಚುವರಿ 12 ಎಂಟಿಪಿಎ ಸರಕು ಸಾಗಣೆಯನ್ನು ಸಕ್ರಿಯಗೊಳಿಸುವುದು, ಲಾಜಿಸ್ಟಿಕ್ಸ್ ಅನ್ನು ಬಲಪಡಿಸುವುದು ಮತ್ತು ಕೈಗಾರಿಕಾ ಸಂಪರ್ಕವನ್ನು ಹೆಚ್ಚಿಸುವುದು
प्रविष्टि तिथि:
17 JUN 2026 2:30PM by PIB Bengaluru
ಗುಜರಾತ್ ನಲ್ಲಿ ರೈಲ್ವೆ ಮೂಲಸೌಕರ್ಯ ಮತ್ತು ಸಾಮರ್ಥ್ಯ ವರ್ಧನೆಗೆ ಗಮನಾರ್ಹ ಉತ್ತೇಜನ ನೀಡುವಲ್ಲಿ, ಭಾರತೀಯ ರೈಲ್ವೆ ₹493 ಕೋಟಿ ವೆಚ್ಚದಲ್ಲಿ ಪಶ್ಚಿಮ ರೈಲ್ವೆಯ ಆದಿಪುರ-ಭುಜ್ ವಿಭಾಗದ ರೈಲು ಹಳಿವ್ಯವಸ್ಥೆಯನ್ನು (49 ಕಿಮೀ) ದ್ವಿಗುಣಗೊಳಿಸುವಿಕೆಯನ್ನು ಅನುಮೋದಿಸಿದೆ.
ದ್ವಿಗುಣಗೊಳಿಸುವಿಕೆ, ಟ್ರಿಪ್ಲಿಂಗ್ ಮತ್ತು ಇತರ ನೆಟ್ವರ್ಕ್ ವರ್ಧನೆ ಕಾರ್ಯಗಳ ಮೂಲಕ ಸಾಮರ್ಥ್ಯ ವೃದ್ಧಿಗಾಗಿ ಭಾರತೀಯ ರೈಲ್ವೆಯ ನಡೆಯುತ್ತಿರುವ ಕಾರ್ಯಕ್ರಮದ ಅಡಿಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಕಾರ್ಯತಂತ್ರದ ಪ್ರಮುಖ ವಿಭಾಗದ ದ್ವಿಗುಣಗೊಳಿಸುವಿಕೆಯು ಕಚ್ ಪ್ರದೇಶದಲ್ಲಿ ರೈಲು ಸಂಪರ್ಕವನ್ನು ಬಲಪಡಿಸುತ್ತದೆ ಮತ್ತು ಪ್ರಯಾಣಿಕರು ಮತ್ತು ಸರಕು ಸಾಗಣೆ ಎರಡರಲ್ಲೂ ನಿರೀಕ್ಷಿತ ಬೆಳವಣಿಗೆಯನ್ನು ಬೆಂಬಲಿಸುತ್ತದೆ.
ಬೆಳೆಯುತ್ತಿರುವ ಸಂಚಾರ ಕಾರಿಡಾರ್ ನಲ್ಲಿ ಸಾಮರ್ಥ್ಯ ವರ್ಧನೆ
ಗಾಂಧಿಧಾಮ್-ನಲಿಯಾ ಕಾರಿಡಾರ್ನಲ್ಲಿ ಪ್ರಸ್ತುತ ಏಕ-ಮಾರ್ಗ ಮಾರ್ಗವಾಗಿರುವ ಆದಿಪುರ-ಭುಜ್ ವಿಭಾಗವು, ಈ ಪ್ರದೇಶದಲ್ಲಿ ಈಗಾಗಲೇ ಕಾರ್ಯಗತಗೊಳ್ಳುತ್ತಿರುವ ಹಲವಾರು ರೈಲ್ವೆ ಮೂಲಸೌಕರ್ಯ ಯೋಜನೆಗಳಿಂದಾಗಿ ಸಂಚಾರದಲ್ಲಿ ಗಣನೀಯ ಬೆಳವಣಿಗೆಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಇವುಗಳಲ್ಲಿ ಭುಜ್-ನಲಿಯಾ ಗೇಜ್ ಪರಿವರ್ತನೆ, ನಲಿಯಾ-ವಾಯೋರ್ ಮಾರ್ಗದ ವಿಸ್ತರಣೆ ಮತ್ತು ನಲಿಯಾ-ಜಖೌ, ವಯೋರ್-ಲಖ್ಪತ್ ಮತ್ತು ದೇಶಲ್ಪರ್-ಲೂನಾವನ್ನು ಸಂಪರ್ಕಿಸುವ ಹೊಸ ರೈಲ್ವೆ ಮಾರ್ಗಗಳು ಸೇರಿವೆ.
ಈ ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿರುವುದರಿಂದ, ಭುಜ್-ಆದಿಪುರ ವಿಭಾಗದ ಮೂಲಕ ಗಮನಾರ್ಹವಾದ ಹೆಚ್ಚುವರಿ ಪ್ರಯಾಣಿಕ ಮತ್ತು ಸರಕು ಸಾಗಣೆಯನ್ನು ಸಾಗಿಸುವ ನಿರೀಕ್ಷೆಯಿದೆ. ಆದ್ದರಿಂದ ಸಾಕಷ್ಟು ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲು, ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲು ಮತ್ತು ಭವಿಷ್ಯದ ಸಂಚಾರ ಬೇಡಿಕೆಯನ್ನು ಪೂರೈಸಲು ದ್ವಿಗುಣಗೊಳಿಸುವ ಯೋಜನೆಯನ್ನು ಅನುಮೋದಿಸಲಾಗಿದೆ.
ಸುಧಾರಿತ ಪ್ರಯಾಣಿಕ ಮತ್ತು ಸರಕು ಸಾಗಣೆ ಕಾರ್ಯಾಚರಣೆಗಳು
ಈ ಯೋಜನೆಯು ಪ್ರತಿದಿನ ಪ್ರತಿ ದಿಕ್ಕಿನಲ್ಲಿ ಎರಡು ಹೆಚ್ಚುವರಿ ಪ್ರಯಾಣಿಕ ರೈಲು ಸೇವೆಗಳ ಕಾರ್ಯಾಚರಣೆಯನ್ನು ಸುಗಮಗೊಳಿಸುವ, ಪ್ರದೇಶದಾದ್ಯಂತ ಪ್ರಯಾಣಿಕರಿಗೆ ಪ್ರಯಾಣ ಅನುಕೂಲತೆ ಮತ್ತು ಸಂಪರ್ಕವನ್ನು ಸುಧಾರಿಸುವ ನಿರೀಕ್ಷೆಯಿದೆ.
ಈ ದ್ವಿಗುಣ ಮಾರ್ಗವು ವರ್ಷಕ್ಕೆ ಹೆಚ್ಚುವರಿಯಾಗಿ 12 ವಾರ್ಷಿಕ ಮಿಲಿಯನ್ ಟನ್ ಸರಕು ಸಾಗಣೆ ಗೆ(ಎಂಟಿಪಿಎ) ಸಹಕಾರಿಯಾಗಲಿದೆ, ಪಶ್ಚಿಮ ಗುಜರಾತ್ನಲ್ಲಿ ಲಾಜಿಸ್ಟಿಕ್ಸ್ ಮತ್ತು ಕೈಗಾರಿಕಾ ಸಂಪರ್ಕವನ್ನು ಬಲಪಡಿಸಲಿದೆ.
ಭವಿಷ್ಯದ ಬೆಳವಣಿಗೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಬೆಂಬಲಿಸುತ್ತದೆ
ವಿಭಾಗದ ಪ್ರಸ್ತುತ ಮಾರ್ಗದ ಸಾಮರ್ಥ್ಯದ ಬಳಕೆಯನ್ನು 2029-30 ರ ವೇಳೆಗೆ ಪ್ರಸ್ತುತ ಮಟ್ಟದಿಂದ 123% ಕ್ಕೆ ಹೆಚ್ಚಿಸುವ ನಿರೀಕ್ಷೆಯಿದೆ, ಇದು ಸಕಾಲಿಕ ಸಾಮರ್ಥ್ಯ ಹೆಚ್ಚಳದ ಅಗತ್ಯವನ್ನು ಎತ್ತಿ ತೋರಿಸುತ್ತದೆ. ದ್ವಿಗುಣಗೊಳಿಸುವ ಕಾರ್ಯವು ಮಾರ್ಗದಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲು, ಕಾರ್ಯಾಚರಣೆಯ ನಿರ್ಬಂಧಗಳನ್ನು ಕಡಿಮೆ ಮಾಡಲು ಮತ್ತು ರೈಲು ಕಾರ್ಯಾಚರಣೆಗಳ ವಿಶ್ವಾಸಾರ್ಹತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಯೋಜನೆಯು ಕಚ್ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಬೆಂಬಲಿಸುವುದರ ಜೊತೆಗೆ ಪ್ರಯಾಣಿಕರು ಮತ್ತು ಸರಕು ಸಾಗಣೆಯನ್ನು ಹೆಚ್ಚಿಸುವ ಮೂಲಕ ಭಾರತೀಯ ರೈಲ್ವೆಗೆ ಹೆಚ್ಚುವರಿ ಆದಾಯವನ್ನು ಗಳಿಸುವ ನಿರೀಕ್ಷೆಯಿದೆ.
ಈ ಯೋಜನೆಯ ಅನುಮೋದನೆಯೊಂದಿಗೆ, ಭಾರತೀಯ ರೈಲ್ವೆಯು ಭವಿಷ್ಯಕ್ಕೆ ಸಿದ್ಧವಾದ ಮೂಲಸೌಕರ್ಯವನ್ನು ರಚಿಸುವುದು, ಸಂಪರ್ಕವನ್ನು ಸುಧಾರಿಸುವುದು ಮತ್ತು ಬೆಳೆಯುತ್ತಿರುವ ಸಾರಿಗೆ ಅಗತ್ಯಗಳನ್ನು ಪೂರೈಸಲು ರಾಷ್ಟ್ರೀಯ ರೈಲು ಜಾಲದ ಸಾಮರ್ಥ್ಯವನ್ನು ಹೆಚ್ಚಿಸುವ ಕಡೆಗೆ ತನ್ನ ಬದ್ಧತೆಯನ್ನು ಮುಂದುವರೆಸಿದೆ.
*****
(रिलीज़ आईडी: 2274003)
आगंतुक पटल : 5