ಔಷಧೀಯ ಇಲಾಖೆ
azadi ka amrit mahotsav

ಮೋದಿ ಆಡಳಿತದ 12 ವರ್ಷಗಳು: ಜಾಗತಿಕ ಅನಿಶ್ಚಿತತೆಗಳ ನಡುವೆ ಭಾರತವನ್ನು ಆತ್ಮನಿರ್ಭರ ರಸಗೊಬ್ಬರ ಕೇಂದ್ರವಾಗಿ ಪರಿವರ್ತಿಸಲಾಗಿದೆ 


ಮಣ್ಣನ್ನು ಸುರಕ್ಷಿತಗೊಳಿಸುವುದು: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕಾರ್ಯತಂತ್ರದ ಪರಿಕಲ್ಪನೆಯ ದೃಷ್ಟಿಕೋನವು ದಾಖಲೆಯ ರಸಗೊಬ್ಬರ ಉತ್ಪಾದನೆಯ ಗುರಿಯನ್ನು ಸಾಧಿಸಿತು ಮತ್ತು ಜಾಗತಿಕ ವಿಪರೀತ ಪರಿಸ್ಥಿತಿಯ ಭೀಕರ ಆಘಾತಗಳಿಂದ ರೈತರನ್ನು ಹೇಗೆ ರಕ್ಷಿಸಿದೆ 

ಆತ್ಮನಿರ್ಭರ ಭಾರತಕ್ಕೆ ಉತ್ತಮ ಉತ್ತೇಜನ: ಭಾರತ ಆಮದು ಅವಲಂಬನೆಯನ್ನು ಕಡಿತಗೊಳಿಸುತ್ತಿರುವುದರಿಂದ 2026 ರ ಖಾರಿಫ್‌ ಬೆಳೆಗೆ ಮುಂದುವರಿದ ಬಿತ್ತನೆ ದಾಸ್ತಾನು ಈಗಾಗಲೇ 51% ರ ಮಟ್ಟವನ್ನು ಮೀರಿದೆ

प्रविष्टि तिथि: 14 JUN 2026 6:22PM by PIB Bengaluru

ಕಳೆದ 12 ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ರಸಗೊಬ್ಬರ ಇಲಾಖೆಯು ಅದ್ವಿತೀಯ ಮೈಲಿಗಲ್ಲುಗಳನ್ನು ಸಾಧಿಸಿದೆ, ಭಾರತವನ್ನು ಸಂಪೂರ್ಣ ಸ್ವಾವಲಂಬನೆ (ಆತ್ಮನಿರ್ಭರ ಭಾರತ) ಕಡೆಗೆ ಕೊಂಡೊಯ್ಯುತ್ತದೆ ಮತ್ತು ಅನ್ನದಾತರನ್ನು (ರೈತರು) ಅಭೂತಪೂರ್ವ ಜಾಗತಿಕ ಮಾರುಕಟ್ಟೆ ಅಡೆತಡೆಗಳಿಂದ ರಕ್ಷಿಸುತ್ತಿದೆ.

ಪಶ್ಚಿಮ ಏಷ್ಯಾದಲ್ಲಿ ತೀವ್ರ ಭೌಗೋಳಿಕ ರಾಜಕೀಯ ಸಂಘರ್ಷಗಳು ಗಗನಕ್ಕೇರುತ್ತಿರುವ ಬೆಲೆಗಳು, ನೈಸರ್ಗಿಕ ಅನಿಲದ ತೀವ್ರ ಕೊರತೆ ಮತ್ತು ಸಾಗಣೆ ಮಾರ್ಗಗಳು ವಿಳಂಬವಾಗುತ್ತಿರುವುದರಿಂದ, ಭಾರತ ಸರ್ಕಾರವು ರಸಗೊಬ್ಬರ ಸಮರ್ಪಕತೆಯನ್ನು ಖಚಿತಪಡಿಸಿಕೊಳ್ಳಲು ಪೂರ್ವಭಾವಿಯಾಗಿ, ಯುದ್ಧೋಚಿತ ಪ್ರತಿಕ್ರಿಯೆಯನ್ನು ನೀಡಿದೆ.

12 ವರ್ಷಗಳ ಅಪ್ರತಿಮ ಸಾಧನೆಗಳು ಮತ್ತು ದೇಶೀಯ ಉತ್ಪಾದನೆಯ ಗರಿಷ್ಠತಮ ಏರಿಕೆ (2014–2026)

ಯೂರಿಯಾ ಉತ್ಪಾದನಾ ಘಟಕ ಕ್ರಾಂತಿ: 2014 ರಿಂದ ಆರು ಹೊಸ ಮೆಗಾ ಯೂರಿಯಾ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದ್ದು, ಇದು 76.2 ಲಕ್ಷ ಮೆಟ್ರಿಕ್ ಟನ್‌ ಗಳ (ಎಲ್.ಎಂ..ಟಿ) ಗಮನಾರ್ಹ ವಾರ್ಷಿಕ ಸಾಮರ್ಥ್ಯ ಹೆಚ್ಚಳವನ್ನು ಸೇರಿಸಿದೆ. 25.4 ಲಕ್ಷ ಮೆಟ್ರಿಕ್ ಟನ್‌ ಗಳ (ಎಲ್.ಎಂ..ಟಿ) ವಾರ್ಷಿಕ ಒಟ್ಟು ಸಾಮರ್ಥ್ಯದೊಂದಿಗೆ ಇನ್ನೂ ಎರಡು ಹೆಚ್ಚಿನ ಸಾಮರ್ಥ್ಯದ ಯೂರಿಯಾ ಉತ್ಪಾದನಾ ಘಟಕಗಳು ಶೀಘ್ರದಲ್ಲೇ ಉತ್ಪಾದನೆಯನ್ನು ಪ್ರಾರಂಭಿಸಲಿವೆ.

ದಾಖಲೆ ಮುರಿಯುವ ಯೂರಿಯಾ ಉತ್ಪಾದನೆ: ಭಾರತದ ದೇಶೀಯ ಯೂರಿಯಾ ಉತ್ಪಾದನೆಯು 2014-15 ರಲ್ಲಿ ಕೇವಲ 225 ಲಕ್ಷ ಮೆಟ್ರಿಕ್ ಟನ್‌ ಗಳ (ಎಲ್.ಎಂ..ಟಿ) ಯಿಂದ 2023-24 ರಲ್ಲಿ 314.07 ಲಕ್ಷ ಮೆಟ್ರಿಕ್ ಟನ್‌ ಗಳ (ಎಲ್.ಎಂ..ಟಿ) ಯ ಸಾರ್ವಕಾಲಿಕ ದಾಖಲೆಯ ಗರಿಷ್ಠಕ್ಕೆ ಏರಿದೆ. 2024-25 ರ ಇತ್ತೀಚಿನ ಹಣಕಾಸು ವರ್ಷದಲ್ಲಿ, ಉತ್ಪಾದನೆಯು 306.67 ಲಕ್ಷ ಮೆಟ್ರಿಕ್ ಟನ್‌ ಗಳ (ಎಲ್.ಎಂ..ಟಿ) ಯಲ್ಲಿ ಅದ್ಭುತವಾಗಿ ಉಳಿದಿದೆ. 

ಫಾಸ್ಫೇಟ್ ಮತ್ತು ಪೊಟ್ಯಾಸಿಕ್ (ಪಿ & ಕೆ) ಉತ್ಪಾದನಾ ಬೆಳವಣಿಗೆ: ಯೂರಿಯಾದಲ್ಲಿನ ಯಶಸ್ಸನ್ನು ಪ್ರತಿಬಿಂಬಿಸುವ ಪಿ & ಕೆ ರಸಗೊಬ್ಬರ ಉತ್ಪಾದನೆಯು 2024-25ರಲ್ಲಿ 211.22 ಎಲ್‌.ಎಮ್‌.ಟಿ.ಯ ಐತಿಹಾಸಿಕ ಗರಿಷ್ಠತಮ ಮಟ್ಟವನ್ನು ತಲುಪಿತು, 2014-15ರಲ್ಲಿ 159.54 ಎಲ್‌.ಎಮ್‌.ಟಿ..ಯಿಂದ ಗಮನಾರ್ಹವಾಗಿ ಹೆಚ್ಚಾಗಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯಗಳು ಅತ್ಯಾಧುನಿಕ ಪಿ & ಕೆ ಉತ್ಪಾದನಾ ಘಟಕಗಳನ್ನು ನಿರ್ಮಿಸುವ ಮೂಲಕ ಈ ತೀವ್ರಗತಿ  ಮುಂದುವರೆಸುತ್ತಿವೆ.

2026 ರ ಖಾರಿಫ್‌ ಬೆಳೆಗಾಗಿ ಸ್ಥಿತಿಸ್ಥಾಪಕ ಬಿಕ್ಕಟ್ಟು ನಿರ್ವಹಣೆ ಮತ್ತು ಅಭೂತಪೂರ್ವ ಹೆಚ್ಚುವರಿ ಸಂಗ್ರಹಣೆ

ಹಾರ್ಮುಜ್ ಜಲಸಂಧಿಯ ಸುತ್ತಲಿನ ಸಾಗಣೆ ವಿಳಂಬವನ್ನು ಪರಿಹರಿಸಲು, ಕೇಂದ್ರ ಸರ್ಕಾರವು ಪರ್ಯಾಯ ಸಾರಿಗೆ ಮಾರ್ಗಗಳನ್ನು ತ್ವರಿತವಾಗಿ ಅನ್ವೇಷಿಸಿತು ಮತ್ತು ಜಾಗತಿಕ ಉತ್ಪಾದಕರಿಂದ ನೇರವಾಗಿ ವಸ್ತುಗಳನ್ನು ಪಡೆಯಲು ರಾಜತಾಂತ್ರಿಕ ಮಾರ್ಗಗಳನ್ನು ತೊಡಗಿಸಿಕೊಂಡಿತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇರ ಮಾರ್ಗದರ್ಶನದಲ್ಲಿ, ಏಳು ಸಬಲೀಕೃತ ಕಾರ್ಯದರ್ಶಿಗಳ ತಂಡಗಳನ್ನು ರಚಿಸಲಾಯಿತು - ರಸಗೊಬ್ಬರ ಕಾರ್ಯದರ್ಶಿಯವರು 10 ಉನ್ನತ ಮಟ್ಟದ ವಿಮರ್ಶೆ - ಚರ್ಚೆ- ಸಮಾವೇಶಗಳನ್ನು ಮುನ್ನಡೆಸಿದರು

ತಡೆರಹಿತ ಅಂತರ-ಸಚಿವಾಲಯದ ಒಮ್ಮುಖ ಪ್ರಯತ್ನ (ಸಿನರ್ಜಿ)ವನ್ನು ಖಾತರಿಪಡಿಸುವುದು ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದೊಂದಿಗೆ ಸಮನ್ವಯದೊಂದಿಗೆ ದೇಶೀಯ ನೈಸರ್ಗಿಕ ಅನಿಲ ಪೂರೈಕೆ ಸಮಸ್ಯೆಗಳನ್ನು ಪರಿಹರಿಸುವುದು.

ಐತಿಹಾಸಿಕ ಬಫರ್ ಸ್ಟಾಕ್: ಢಿ.ಎ.&ಎಫ್.ಡಬ್ಲೂ. ನಿಂದ ಮರುಮೌಲ್ಯಮಾಪನ ಮಾಡಲಾದ ಒಟ್ಟು ಅಗತ್ಯವು 383.9 ಲಕ್ಷ ಮೆಟ್ರಿಕ್ ಟನ್‌ ಗಳ (ಎಲ್.ಎಂ..ಟಿ) ಎಂದು ಅಂದಾಜಿಸಲಾಗಿದೆ, ಇಂದಿನಂತೆ ಈ ಸ್ಟಾಕ್ ಸುಮಾರು 195.79 ಲಕ್ಷ ಮೆಟ್ರಿಕ್ ಟನ್‌ ಗಳ (ಎಲ್.ಎಂ..ಟಿ) (51% ಕ್ಕಿಂತ ಹೆಚ್ಚು) ಆಗಿದ್ದು, ಭಾರತವು ಸುಮಾರು 200.98 ಲಕ್ಷ ಮೆಟ್ರಿಕ್ ಟನ್‌ ಗಳ (ಎಲ್.ಎಂ..ಟಿ) ಆರಂಭಿಕ ಸ್ಟಾಕ್ ಅನ್ನು ಹೊಂದಿದೆ. ಇದು 51% ಕ್ಕಿಂತ ಹೆಚ್ಚಿನ ಅಭೂತಪೂರ್ವ ಮುಂಗಡ ಲಭ್ಯತೆಯನ್ನು ಪ್ರತಿನಿಧಿಸುತ್ತದೆ, ಇದು ಸಾಂಪ್ರದಾಯಿಕ ಹೆಚ್ಚುವರಿ (ಬಫರ್) ಮಾನದಂಡವಾದ 33% ಕ್ಕಿಂತ ಅಧಿಕವಾಗಿದೆ .

ಬಿಕ್ಕಟ್ಟಿನ ನಂತರದ ನಿವ್ವಳ ಲಾಭ: ದೇಶೀಯ ಬಿಕ್ಕಟ್ಟಿನ ನಂತರದ ಉತ್ಪಾದನೆಯು 118.15 ಲಕ್ಷ ಮೆಟ್ರಿಕ್ ಟನ್‌ ಗಳ (ಎಲ್.ಎಂ..ಟಿ) ನಲ್ಲಿ ಸ್ಥಿರವಾಗಿದೆ. ಕಾರ್ಯತಂತ್ರದ ಆಮದುಗಳು ಮತ್ತು ಯಶಸ್ವಿಯಾಗಿ ಮುಕ್ತಾಯಗೊಂಡ ಜಂಟಿ ಜಾಗತಿಕ ಟೆಂಡರ್‌ ಗಳೊಂದಿಗೆ ಸಂಯೋಜಿಸಿದಾಗ, ಬಿಕ್ಕಟ್ಟಿನ ನಂತರದ ಒಟ್ಟು ರಸಗೊಬ್ಬರ ಲಭ್ಯತೆಯು 153.79 ಲಕ್ಷ ಮೆಟ್ರಿಕ್ ಟನ್‌ ಗಳ (ಎಲ್.ಎಂ..ಟಿ) ನಿವ್ವಳ ಸೇರ್ಪಡೆಗೆ ಸಾಕ್ಷಿಯಾಗಿದೆ.

ರೈತರಿಗೆ ಸಂಪೂರ್ಣ ಕೈಗೆಟುಕುವ ಬೆಲೆಯ ನಿಯಂತ್ರಣ

ಅಂತಾರಾಷ್ಟ್ರೀಯ ಹಣದುಬ್ಬರ ಆಘಾತಗಳನ್ನು ಹೀರಿಕೊಳ್ಳುವ ಮೂಲಕ ಮೋದಿ ಸರ್ಕಾರ ರೈತರ ಹಿತಾಸಕ್ತಿಗಳನ್ನು ಅತ್ಯುನ್ನತವಾಗಿರಿಸಿದೆ.  ಭೌಗೋಳಿಕ ರಾಜಕೀಯ ಸಂಘರ್ಷಗಳು ಜಾಗತಿಕ ಬೆಲೆಗಳನ್ನು ಗಗನಕ್ಕೇರಿಸಿದ್ದರೂ, ಭಾರತೀಯ ರೈತರಿಗೆ ರಸಗೊಬ್ಬರಗಳ ಚಿಲ್ಲರೆ ಬೆಲೆಯನ್ನು ಒಂದೇ ಒಂದು ಪೈಸೆ ಹೆಚ್ಚಿಸಲಾಗಿಲ್ಲ:

  • ಯೂರಿಯಾ: ಜಾಗತಿಕ ಮಾರುಕಟ್ಟೆ ಬೆಲೆ ಪ್ರತಿ ಚೀಲಕ್ಕೆ ₹4100 ಮೀರಿದ್ದರೂ, ಭಾರತೀಯ ರೈತರು 45 ಕೆಜಿ ಚೀಲವನ್ನು ಕೇವಲ ₹266.5 ರ ಅತ್ಯಧಿಕ ರಿಯಾಯಿತಿ/ಸಬ್ಸಿಡಿ ದರದಲ್ಲಿ ಪಡೆಯುತ್ತಿದ್ದಾರೆ.
  • ಡಿಎಪಿ: ಜಾಗತಿಕ ಬೆಲೆ 50 ಕೆಜಿ ಚೀಲಕ್ಕೆ ₹5,000 ಕ್ಕಿಂತ ಹೆಚ್ಚಿದ್ದರೂ, ಅದನ್ನು ಭಾರತೀಯ ರೈತರಿಗೆ ಕೇವಲ ₹1,350 ಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ.

ಸುಸ್ಥಿರ ಮತ್ತು ಹಸಿರು ಕೃಷಿಯತ್ತ ಪರಿವರ್ತನೆ

"ಭೂತಾನ್(ಧರತಿ ಮಾ)"ಯನ್ನು ರಕ್ಷಿಸುವ ಮತ್ತು ಪೋಷಕಾಂಶಗಳ ಸಮತೋಲನವನ್ನು ಉತ್ತಮಗೊಳಿಸುವ ಪ್ರಧಾನಮಂತ್ರಿಯವರ ಪರಿಕಲ್ಪನೆಯ ದೃಷ್ಟಿಕೋನದಿಂದ ಪ್ರೇರೇಪಿಸಲ್ಪಟ್ಟ, ಮಾರ್ಚ್ ನಿಂದ ಮೇ ವರೆಗೆ ಬೃಹತ್ ರಾಷ್ಟ್ರವ್ಯಾಪಿ ಸಾಮೂಹಿಕ ಜಾಗೃತಿ ಅಭಿಯಾನವನ್ನು ನಡೆಸಲಾಯಿತು.  ರೈತರು ಅಗಾಧ ಪ್ರಮಾಣದ ಉತ್ಸಾಹದಿಂದ ಪ್ರತಿಕ್ರಿಯಿಸಿದ್ದಾರೆ:

  • 2024-25ಕ್ಕೆ ಹೋಲಿಸಿದರೆ 2025-26ರ ಹಣಕಾಸು ವರ್ಷದಲ್ಲಿ ಬಲವರ್ಧಿತ ಸಾವಯವ ಗೊಬ್ಬರ (ಎಫ್.ಒ.ಎಂ), ದ್ರವ ಎಫ್.ಒ.ಎಂ (ಎಲ್.ಎಫ್.ಒ.ಎಂ), ಮತ್ತು ಫಾಸ್ಫೇಟ್-ಸಮೃದ್ಧ ಸಾವಯವ ಗೊಬ್ಬರ (ಪ್ರೊಮ್) ನಂತಹ ಪರಿಸರ ಸ್ನೇಹಿ ಪರ್ಯಾಯಗಳ ಸಂಯೋಜಿತ ಮಾರಾಟವು ಏಳು ಪಟ್ಟು ಹೆಚ್ಚಾಗಿದೆ.
  • ಅಮೋನಿಯಂ ಸಲ್ಫೇಟ್ ಬಳಕೆ ಸುಮಾರು 60,000 ಟನ್‌ ಗಳಷ್ಟು ಹೆಚ್ಚಾಗಿದೆ.
  • ಕೃಷಿ ವಿಜ್ಞಾನ ಕೇಂದ್ರಗಳ (ಕೆವಿಕೆ) ತಾಂತ್ರಿಕ ಮಾರ್ಗದರ್ಶನದಲ್ಲಿ ದಾಖಲೆಯ 1.84 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಹಸಿರು ಗೊಬ್ಬರ ಬಳಕೆಯನ್ನು ಪರಿಚಯಿಸಲಾಯಿತು.

ಅಂತಿಮವಾಗಿ ಹೇಳುವುದಾದರೆ, ಭಾರತದ ರಸಗೊಬ್ಬರ ಭದ್ರತೆಯು ಬಲಿಷ್ಠವಾಗಿದೆ, ಸ್ಥಿರವಾಗಿದೆ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟಿದೆ, ಲಭ್ಯತೆಯು ಎಲ್ಲಾ ಪ್ರಮುಖ ರಸಗೊಬ್ಬರಗಳಲ್ಲಿ ನಿರಂತರವಾಗಿ ಅವಶ್ಯಕತೆಗಳನ್ನು ಮೀರುತ್ತಿದೆ. ಭಾರತ ಸರ್ಕಾರದ ಹೆಚ್ಚು ಪರಿಣಾಮಕಾರಿ ಮತ್ತು ಕಾರ್ಯತಂತ್ರದ ಉಪಕ್ರಮಗಳ ಮೂಲಕ, ದೇಶೀಯ ಉತ್ಪಾದನೆಯು ಹೊಸ ಎತ್ತರವನ್ನು ತಲುಪುತ್ತಲೇ ಇದೆ, ರಾಷ್ಟ್ರವು ದೃಢವಾದ ಮತ್ತು ಅಡೆತಡೆಯಿಲ್ಲದ ಮೀಸಲು ಕಾಯ್ದುಕೊಳ್ಳುವುದನ್ನು ಖಚಿತಪಡಿಸುತ್ತದೆ. ಈ ಸಮಗ್ರ ರೀತಿಯ ಸನ್ನದ್ಧತೆಯು ನಮ್ಮ ಅನ್ನದಾತರ ನಿರ್ಣಾಯಕ ಕೃಷಿ ಅಗತ್ಯಗಳನ್ನು ಸರಾಗವಾಗಿ ಪೂರೈಸುವುದನ್ನು ಖಾತರಿಪಡಿಸುತ್ತದೆ, ಅವರಿಗೆ ಹೆಚ್ಚು ಕೈಗೆಟುಕುವ ಮತ್ತು ರಿಯಾಯಿತಿ/ಸಬ್ಸಿಡಿ ದರಗಳಲ್ಲಿ ಅಗತ್ಯ ರಸಗೊಬ್ಬರಗಳಿಗೆ ವಿಶ್ವಾಸಾರ್ಹ, ತೊಂದರೆ-ಮುಕ್ತ ರೀತಿಯಲ್ಲಿ ಸುಲಭ ಸಾಧ್ಯ ಅವಕಾಶಗಳನ್ನು ಒದಗಿಸುತ್ತದೆ.

 

*****


(रिलीज़ आईडी: 2272740) आगंतुक पटल : 12
इस विज्ञप्ति को इन भाषाओं में पढ़ें: Urdu , English , हिन्दी , Gujarati , Malayalam