ಪ್ರಧಾನ ಮಂತ್ರಿಯವರ ಕಛೇರಿ
ಗುಣಮಟ್ಟದ ಆರೋಗ್ಯ ಸೇವೆಯನ್ನು ಹೆಚ್ಚು ಲಭ್ಯ ಮತ್ತು ಕೈಗೆಟಕುವಂತಾಗಿಸಲು ಕಳೆದ 12 ವರ್ಷಗಳಲ್ಲಿ ಮಾಡಿರುವ ಪ್ರಯತ್ನಗಳನ್ನು ವಿವರಿಸಿರುವ ಪ್ರಧಾನಮಂತ್ರಿ
ಆರೋಗ್ಯ ಕ್ಷೇತ್ರದ ರೂಪಾಂತರದ ನೋಟವನ್ನು ಹಂಚಿಕೊಳ್ಳುತ್ತಾ ಆರೋಗ್ಯಕರ ಭಾರತ ನಿರ್ಮಿಸುವ ಬದ್ಧತೆ ಪ್ರಧಾನಮಂತ್ರಿಗಳಿಂದ ಪುನರುಚ್ಚಾರ
प्रविष्टि तिथि:
14 JUN 2026 1:27PM by PIB Bengaluru
ಭಾರತದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಹೆಚ್ಚು ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಕಳೆದ 12 ವರ್ಷಗಳಲ್ಲಿ ಶ್ರಮಿಸಲಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೇಳಿದ್ದಾರೆ. ಅತ್ಯಂತ ದುರ್ಬಲ ವರ್ಗದವರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಆಯುಷ್ಮಾನ್ ಭಾರತ್ ಯೋಜನೆಯು ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣಾ ಕಾರ್ಯಕ್ರಮ ಎಂದು ಖ್ಯಾತಿ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದ್ದಾರೆ.
ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನದಂತಹ ಇತರ ಪ್ರಯತ್ನಗಳು ಔಷಧಗಳನ್ನು ಕೈಗೆಟುಕುವಂತೆ ಮಾಡಿದೆ ಎಂದು ಶ್ರೀ ಮೋದಿ ಅವರು ಗಮನ ಸೆಳೆದಿದ್ದಾರೆ.
ಸ್ಟೆಂಟ್ ಗಳು ಮತ್ತು ಮೊಣಕಾಲು ಇಂಪ್ಲಾಂಟ್ ಗಳು ಕೈಗೆಟುಕುವ ದರದಲ್ಲಿ ಲಭ್ಯವಿದ್ದು, ಅನೇಕರಿಗೆ ಅನುಕೂಲವಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದ್ದಾರೆ.
ಈಗ ವೈದ್ಯಕೀಯ ಶಿಕ್ಷಣ ನೀಡುವ ಸಂಸ್ಥೆಗಳು ಹೆಚ್ಚಾಗಿದ್ದು, ಹೆಚ್ಚು ಹೆಚ್ಚು ಸೀಟುಗಳು ಲಭ್ಯವಿರುವುದರಿಂದ ಜನರಿಗೆ ವೈದ್ಯಕೀಯ ಶಿಕ್ಷಣ ಹೆಚ್ಚು ಸುಲಭವಾಗಿ ಲಭ್ಯವಾಗುತ್ತಿದೆ ಎಂದು ಪ್ರಧಾನಮಂತ್ರಿ ಮೋದಿ ಗಮನಿಸಿದ್ದಾರೆ. ಆರೋಗ್ಯಕರ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಈವರೆಗೆ ಕೈಗೊಂಡಿರುವ ಕ್ರಮಗಳನ್ನು ಮುಂದುವರಿಸುವುದಾಗಿ ಒತ್ತಿ ಹೇಳಿರುವ ಅವರು, ಆರೋಗ್ಯ ಕ್ಷೇತ್ರವು ಹೇಗೆ ರೂಪಾಂತರಗೊಂಡಿದೆ ಎಂಬ ಬಗ್ಗೆ ನೋಟ ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಗಳು ಸರಣಿ ಎಕ್ಸ್ ಪೋಸ್ಟ್ ಗಳಲ್ಲಿ ಹೀಗೆ ಹಂಚಿಕೊಂಡಿದ್ದಾರೆ:
"ಗುಣಮಟ್ಟದ ಆರೋಗ್ಯ ಸೇವೆಯನ್ನು ಹೆಚ್ಚು ಕೈಗೆಟುಕುವಂತಾಗಿಸಲು ಮತ್ತು ಲಭ್ಯವಾಗುವಂತೆ ಮಾಡಲು ಕಳೆದ 12 ವರ್ಷಗಳಲ್ಲಿ ಭಾರತ ಶ್ರಮಿಸಿದೆ”.
“ಅತ್ಯಂತ ದುರ್ಬಲರಿಗೆ ಉತ್ತಮ ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಒದಗಿಸುವ ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣಾ ಕಾರ್ಯಕ್ರಮವಾದ ಆಯುಷ್ಮಾನ್ ಭಾರತ್ ಯೋಜನೆ ಹೊಂದಿರುವ ರಾಷ್ಟ್ರ ಎಂದು ನಾವು ಪ್ರಸಿದ್ಧರಾಗಿರುವುದು ಹೆಮ್ಮೆಯ ಸಂಗತಿ.”
“ಪಿಎಂ ಭಾರತೀಯ ಜನೌಷಧಿ ಪರಿಯೋಜನದಂತಹ ಇತರ ಪ್ರಯತ್ನಗಳು ಔಷಧಗಳನ್ನು ಕೈಗೆಟುಕುವ ದರದಲ್ಲಿ ಲಭ್ಯವಾಗಿಸಿವೆ. ಕೈಗೆಟುಕುವ ಬೆಲೆಗಳಲ್ಲಿ ಸ್ಟೆಂಟ್ ಗಳು ಮತ್ತು ಮೊಣಕಾಲು ಇಂಪ್ಲಾಂಟ್ ಗಳು ದೊರೆಯುತ್ತಿರುವುದರಿಂದ ಅನೇಕ ಜನರಿಗೆ ಸಹಾಯವಾಗಿದೆ.
ಅದೇ ವೇಳೆ, ಹೆಚ್ಚಿನ ಸಂಸ್ಥೆಗಳು ವೈದ್ಯಕೀಯ ಶಿಕ್ಷಣ ನೀಡುತ್ತಿದ್ದು ಹೆಚ್ಚು ಸೀಟುಗಳು ಲಭ್ಯವಿರುವುದರಿಂದ ಹೆಚ್ಚು ಜನರು ವೈದ್ಯಕೀಯ ಶಿಕ್ಷಣ ಪಡೆಯಬಹುದಾಗಿದೆ.
ಇದೇ ನೆಲಗಟ್ಟಿನಲ್ಲಿ ಆರೋಗ್ಯಕರ ಭಾರತವನ್ನು ನಿರ್ಮಿಸುವುದನ್ನು ಮುಂದುವರಿಸಲಿದ್ದೇವೆ.
#12YearsOfSwasthBharat"
"ಆರೋಗ್ಯ ಕ್ಷೇತ್ರವು ಹೇಗೆ ರೂಪಾಂತರಗೊಂಡಿದೆ ಎಂಬುದರ ಬಗ್ಗೆ ಒಂದು ನೋಟ...
#12YearsOfSwasthBharat"
*****
(रिलीज़ आईडी: 2272668)
आगंतुक पटल : 13
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Gujarati
,
Tamil
,
Telugu
,
Malayalam