ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಬೇಟಿ ಬಚಾವೋ ಬೇಟಿ ಪಢಾವೋ: ಜನನ ಮತ್ತು ಬಾಲ್ಯದ ಆರಂಭಿಕ ಆರೈಕೆಯಲ್ಲಿ ಘನತೆಯ ಹೆಚ್ಚಳ
ʻಬೇಟಿ ಬಚಾವೋ ಬೇಟಿ ಪಢಾವೋʼ ಕಾರ್ಯಕ್ರಮವು ರಾಷ್ಟ್ರವ್ಯಾಪಿ ಆಂದೋಲನವಾಗಿ ವಿಕಸನಗೊಂಡಿದ್ದು, ನಡವಳಿಕೆಯಲ್ಲಿ ಬದಲಾವಣೆ ಮತ್ತು ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಕಾರಣವಾಗಿದೆ
प्रविष्टि तिथि:
13 JUN 2026 11:10AM by PIB Bengaluru
ಜನನದ ಸಮಯದಲ್ಲಿ ಆರೈಕೆಯು ಮಗುವಿನ ಜೀವನ ಮತ್ತು ತಾಯಿಯ ಯೋಗಕ್ಷೇಮದ ಅಡಿಪಾಯವನ್ನು ರೂಪಿಸುತ್ತದೆ. ಕಳೆದ ಹಲವು ವರ್ಷಗಳಲ್ಲಿ, ಆರೋಗ್ಯ ಸೇವೆಗಳು, ಪೌಷ್ಠಿಕಾಂಶ ಬೆಂಬಲ ಮತ್ತು ಸಾಂಸ್ಥಿಕ ವಿತರಣಾ ವ್ಯವಸ್ಥೆಗಳ ಸಂಯೋಜನೆಯ ಮೂಲಕ ಭಾರತವು ತಾಯಿಯ ಮತ್ತು ಮಗುವಿನ ಬಾಲ್ಯದ ಆರೈಕೆಯನ್ನು ಬಲಪಡಿಸಿದೆ.
ಭಾರತ ಸರ್ಕಾರದ ಪ್ರಮುಖ ಉಪಕ್ರಮವಾದ ʻಬೇಟಿ ಬಚಾವೋ ಬೇಟಿ ಪಢಾವೋʼ (ಬಿಬಿಬಿಪಿ), ದೇಶಾದ್ಯಂತ ಹೆಣ್ಣು ಮಗುವಿನ ಉಳಿವು, ರಕ್ಷಣೆ ಮತ್ತು ಸಬಲೀಕರಣವನ್ನು ಖಾತರಿಪಡಿಸುವಲ್ಲಿ ಪರಿವರ್ತನಾತ್ಮಕ ಬದಲಾವಣೆಯನ್ನು ಮುಂದುವರಿಸಿದೆ. 2015ರ ಜನವರಿ 22 ರಂದು ಪ್ರಾರಂಭವಾದ ʻಬೇಟಿ ಬಚಾವೋ ಬೇಟಿ ಪಢಾವೋʼ ಕಾರ್ಯಕ್ರಮವನ್ನು ಕ್ಷೀಣಿಸುತ್ತಿರುವ ಮಕ್ಕಳ ಲಿಂಗಾನುಪಾತ (ಸಿಎಸ್ಆರ್) ಮತ್ತು ವ್ಯಾಪಕವಾದ ಲಿಂಗ ಆಧಾರಿತ ತಾರತಮ್ಯಕ್ಕೆ ಪ್ರತಿಕ್ರಿಯೆಯಾಗಿ ರೂಪಿಸಲಾಗಿದೆ. ಈ ಯೋಜನೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ (ಎಂ.ಡಬ್ಲ್ಯು.ಸಿ.ಡಿ.), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂ.ಒ.ಎಚ್.ಡಬ್ಲ್ಯು.ಎಫ್.ಡಬ್ಲ್ಯು) ಹಾಗೂ ಶಿಕ್ಷಣ ಸಚಿವಾಲಯ (ಎಂ.ಒ.ಇ.) ಜಂಟಿ ಉಪಕ್ರಮವಾಗಿದೆ.
ಕಳೆದ ಹನ್ನೊಂದು ವರ್ಷಗಳಲ್ಲಿ, ʻಬೇಟಿ ಬಢಾವೋ ಬೇಟಿ ಪಢಾವೋʼ ಕಾರ್ಯಕ್ರಮವು ಉದ್ದೇಶಿತ ನೀತಿ ಮಧ್ಯಸ್ಥಿಕೆಯಿಂದ ರಾಷ್ಟ್ರವ್ಯಾಪಿ ಆಂದೋಲನವಾಗಿ ವಿಕಸನಗೊಂಡಿದೆ. ಸರ್ಕಾರ, ಮಾಧ್ಯಮ, ನಾಗರಿಕ ಸಮಾಜ ಮತ್ತು ಸಮುದಾಯಗಳಾದ್ಯಂತ ಮಧ್ಯಸ್ಥಗಾರರನ್ನು ಸಜ್ಜುಗೊಳಿಸಿದೆ. ಈ ಉಪಕ್ರಮವು ಜನನದ ಸಮಯದಲ್ಲಿ ಘನತೆ, ಹೆಣ್ಣು ಮಗುವಿನ ರಕ್ಷಣೆ ಮತ್ತು ಬಾಲ್ಯದ ಆರೈಕೆ ಮತ್ತು ಶಿಕ್ಷಣದ ಲಭ್ಯತೆಯ ಮಹತ್ವವನ್ನು ಒತ್ತಿಹೇಳುತ್ತದೆ, ಆ ಮೂಲಕ ಆಕೆಯ ಸಮಗ್ರ ಅಭಿವೃದ್ಧಿಗೆ ಅನುವು ಮಾಡಿಕೊಡುವ ವಾತಾವರಣವನ್ನು ಬೆಳೆಸುತ್ತದೆ.
ಪ್ರಮುಖ ಲಿಂಗ ಸೂಚಕಗಳನ್ನು ಸುಧಾರಿಸಲು ಈ ಯೋಜನೆಯು ಗಮನಾರ್ಹ ಕೊಡುಗೆ ನೀಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ʻಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆʼ(ಎಚ್ಎಂಐಎಸ್) ದತ್ತಾಂಶದ ಪ್ರಕಾರ, ರಾಷ್ಟ್ರೀಯ ಮಟ್ಟದಲ್ಲಿ ಜನನದ ಲಿಂಗಾನುಪಾತವು(ಎಸ್ಆರ್‌ಬಿ) 2014-15ರಲ್ಲಿ 918 ರಿಂದ 2024-25ರಲ್ಲಿ 929ಕ್ಕೆ ಸುಧಾರಿಸಿದೆ. ಇದು ಲಿಂಗ ತಾರತಮ್ಯ, ಲಿಂಗ ಆಯ್ಕೆಯನ್ನು ತಡೆಗಟ್ಟುವ ಮತ್ತು ಸಾಂಸ್ಥಿಕ ಹೆರಿಗೆಗಳನ್ನು ಉತ್ತೇಜಿಸುವ ನಿರಂತರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ.
ಶಿಕ್ಷಣ ಕ್ಷೇತ್ರದಲ್ಲಿ, ಬಾಲಕಿಯರ ಶಾಲಾ ಶಿಕ್ಷಣದ ಪ್ರವೇಶವನ್ನು ಹೆಚ್ಚಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿದೆ. ಶಿಕ್ಷಣ ಸಚಿವಾಲಯದ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ (ಯುಡಿಐಎಸ್ಇ) ದತ್ತಾಂಶದ ಪ್ರಕಾರ, ಮಾಧ್ಯಮಿಕ ಹಂತದಲ್ಲಿ ಬಾಲಕಿಯರ ದಾಖಲಾತಿ 2014-15ರಲ್ಲಿ ಶೇ.75.51ರಿಂದ 2024-25ರಲ್ಲಿ ಶೇ.80.2ಕ್ಕೆ ಏರಿದೆ. ಇದು ಶಾಲೆಯಲ್ಲಿ ಉಳಿಯುವಿಕೆ ಹೆಚ್ಚಳ ಮತ್ತು ಪರಿವರ್ತನೆ ದರಗಳನ್ನು ಸೂಚಿಸುತ್ತದೆ.
ʻಬೇಟಿ ಬಚಾವೋ ಪಢಾವೋʼ ಯೋಜನೆಯು ಸುರಕ್ಷಿತ ಮತ್ತು ಗೌರವಯುತ ಜನನದಿಂದ ಪ್ರಾರಂಭವಾಗುವ ಜೀವನಚಕ್ರ ವಿಧಾನಕ್ಕೆ ಒತ್ತು ನೀಡುತ್ತಲೇ ಇದೆ, ಬಾಲ್ಯದ ಆರಂಭಿಕ ಆರೈಕೆಯನ್ನು ಖಾತರಿಪಡಿಸುತ್ತದೆ ಮತ್ತು ಬಾಲಕಿಯರ ಶಿಕ್ಷಣ ಮತ್ತು ಸಬಲೀಕರಣವನ್ನು ಸಕ್ರಿಯಗೊಳಿಸುತ್ತದೆ. ಈ ಯೋಜನೆಯು ನಿರಂತರ ಜಾಗೃತಿ, ಸಮುದಾಯ ತೊಡಗಿಸಿಕೊಳ್ಳುವಿಕೆ, ಸಚಿವಾಲಯಗಳು ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ನಡುವೆ ಒಮ್ಮತದ ಮೂಲಕ ನಡವಳಿಕೆಯ ಬದಲಾವಣೆಯನ್ನು ಬಲಪಡಿಸುತ್ತದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ʻಬೇಟಿ ಬಚಾವೋ ಪಢಾವೋʼ ನೀತಿ ಚೌಕಟ್ಟನ್ನು ಬಲಪಡಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಭಾರತದ ಪ್ರತಿ ಹೆಣ್ಣು ಮಗುವಿನ ರಕ್ಷಣೆ, ಶಿಕ್ಷಣ ಮತ್ತು ಸಬಲೀಕರಣವನ್ನು ಎಂದು ಖಾತರಿಪಡಿಸುತ್ತದೆ. ಆ ಮೂಲಕ ಮಹಿಳಾ ನೇತೃತ್ವದ ಅಭಿವೃದ್ಧಿಯ ದೃಷ್ಟಿಕೋನಕ್ಕೆ ಕೊಡುಗೆ ನೀಡುತ್ತದೆ.
*****
(रिलीज़ आईडी: 2272425)
आगंतुक पटल : 23