ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರಪತಿ ಅವರ ಆತ್ಮೀಯ ಶುಭಾಶಯಗಳು ಮತ್ತು ಹೃತ್ಪೂರ್ವಕ ಅಭಿನಂದನೆಗಳಿಗೆ ಕೃತಜ್ಞತೆ ಸಲ್ಲಿಸಿದ್ದ ಪ್ರಧಾನಮಂತ್ರಿ
प्रविष्टि तिथि:
10 JUN 2026 7:18PM by PIB Bengaluru
ರಾಷ್ಟ್ರಪತಿ ಅವರ ಆತ್ಮೀಯ ಶುಭಾಶಯಗಳು ಮತ್ತು ಹೃತ್ಪೂರ್ವಕ ಅಭಿನಂದನೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಕೃತಜ್ಞತೆ ಸಲ್ಲಿಸಿದರು. ತಮ್ಮ ಅಧಿಕಾರದ ಅವಧಿಯಲ್ಲಿ ಸಾಧಿಸಲಾಗಿರುವುದು ಭಾರತದ ಜನರ ಸಾಮೂಹಿಕ ಪ್ರಯತ್ನಗಳು ಮತ್ತು ಆಕಾಂಕ್ಷೆಗಳ ಫಲಿತಾಂಶ ಎಂದು ಪ್ರಧಾನಮಂತ್ರಿ ಹೇಳಿದರು.
140 ಕೋಟಿ ಭಾರತೀಯರ ಪ್ರೀತಿ ಮತ್ತು ಆಶೀರ್ವಾದಗಳು ತಮ್ಮ ದೊಡ್ಡ ಶಕ್ತಿ ಮತ್ತು ಸ್ಫೂರ್ತಿ ಎಂದು ಶ್ರೀ ಮೋದಿಯವರು ಹೇಳಿದರು. ರಾಷ್ಟ್ರಪತಿಯವರು ಪ್ರಧಾನಮಂತ್ರಿ-ಜನ್ಮಾನ್ ಮತ್ತು ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನವನ್ನು ಉಲ್ಲೇಖಿಸಿದ್ದಕ್ಕೆ ತಾವು ವಿಶೇಷವಾಗಿ ಸಂತೋಷಪಟ್ಟಿದ್ದಾಗಿ ಪ್ರಧಾನಿಯವರು ಹೇಳಿದರು. ಅಂತ್ಯೋದಯದ ನಿಜವಾದ ಮನೋಭಾವದಲ್ಲಿ ಅಭಿವೃದ್ಧಿಯ ಪ್ರಯೋಜನಗಳು ಸಮಾಜದ ಪ್ರತಿಯೊಂದು ವರ್ಗವನ್ನು ತಲುಪುತ್ತವೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಅವರು ದೃಢಪಡಿಸಿದರು.
ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:
"ರಾಷ್ಟ್ರಪತಿಯವರೇ,
ನಿಮ್ಮ ಆತ್ಮೀಯ ಶುಭಾಶಯಗಳು ಮತ್ತು ಹೃತ್ಪೂರ್ವಕ ಅಭಿನಂದನೆಗಳಿಗೆ ನಾನು ನಿಮಗೆ ಕೃತಜ್ಞನಾಗಿದ್ದೇನೆ. ನಮ್ಮ ಅಧಿಕಾರದ ಅವಧಿಯ ವರ್ಷಗಳಲ್ಲಿ ಏನನ್ನು ಸಾಧಿಸಲಾಗಿದೆಯೋ ಅದು ಭಾರತದ ಜನರ ಸಾಮೂಹಿಕ ಪ್ರಯತ್ನಗಳು ಮತ್ತು ಆಕಾಂಕ್ಷೆಗಳ ಫಲಿತಾಂಶವಾಗಿದೆ. 140 ಕೋಟಿ ಭಾರತೀಯರ ಪ್ರೀತಿ ಮತ್ತು ಆಶೀರ್ವಾದಗಳು ನನ್ನ ದೊಡ್ಡ ಶಕ್ತಿ ಮತ್ತು ಸ್ಫೂರ್ತಿಯಾಗಿವೆ. ನೀವು ಪ್ರಧಾನ ಮಂತ್ರಿ-ಜನ್ಮಾನ್ ಮತ್ತು ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನವನ್ನು ಉಲ್ಲೇಖಿಸಿದ್ದಕ್ಕೆ ನನಗೆ ವಿಶೇಷವಾಗಿ ಸಂತೋಷವಾಗಿದೆ. ಅಂತ್ಯೋದಯದ ನಿಜವಾದ ಉತ್ಸಾಹದಲ್ಲಿ ಅಭಿವೃದ್ಧಿಯ ಪ್ರಯೋಜನಗಳು ಸಮಾಜದ ಪ್ರತಿಯೊಂದು ವರ್ಗವನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಸರ್ಕಾರ ಬದ್ಧವಾಗಿದೆ.
@rashtrapatibhvn"
*****
(रिलीज़ आईडी: 2272218)
आगंतुक पटल : 7
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Manipuri
,
Assamese
,
Punjabi
,
Gujarati
,
Tamil
,
Telugu
,
Malayalam