ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ ಪವನ ಶಕ್ತಿ ಬೆಳವಣಿಗೆ ಉತ್ತೇಜಿಸಲು ಗೋವಾದಲ್ಲಿ 2026ರ ಜಾಗತಿಕ ಪವನ ದಿನ ಸಮ್ಮೇಳನ ಆಯೋಜನೆ


ಭಾರತದ ಪವನ ಶಕ್ತಿ ಮಹತ್ವಾಕಾಂಕ್ಷೆಗಳನ್ನು ವೇಗಗೊಳಿಸುವ ಆಚರಣೆಗಳ ನೇತೃತ್ವವನ್ನು ವಹಿಸಲಿರುವ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ

प्रविष्टि तिथि: 12 JUN 2026 2:58PM by PIB Bengaluru

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂ ಎನ್ ಆರ್ ಇ) 2026ರ ಜೂನ್ 15 ರಂದು ಗೋವಾದಲ್ಲಿ ”ಪವನ ಶಕ್ತಿ: ಮಹತ್ವಾಕಾಂಕ್ಷೆಯಿಂದ ವೇಗವರ್ಧನೆಗೆ’’ ಎಂಬ ವಿಷಯವನ್ನು ಆಧರಿಸಿ ಜಾಗತಿಕ ಪವನ ದಿನ 2026 ಸಮ್ಮೇಳನವನ್ನು ಆಯೋಜಿಸಿದೆ.

ಈ ಕಾರ್ಯಕ್ರಮದಲ್ಲಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಮತ್ತು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಭಾಗವಹಿಸಲಿದ್ದು, ಕೇಂದ್ರ ವಿದ್ಯುತ್ ಪ್ರಾಧಿಕಾರ (ಸಿಇಎ), ಭಾರತೀಯ ಸೌರಶಕ್ತಿ ನಿಗಮ (ಎಸ್ ಇ ಸಿ ಐ), ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಐ ಆರ್ ಇ ಡಿ ಎ), ರಾಷ್ಟ್ರೀಯ ಪವನ ಶಕ್ತಿ ಸಂಸ್ಥೆ (ಎನ್ ಐ ಡಬ್ಲೂ ಇ) ಗ್ರಿಡ್ ಇಂಡಿಯಾ, ಪ್ರಮುಖ ರಾಜ್ಯ ಸರ್ಕಾರಗಳು ಮತ್ತು ಭಾರತೀಯ ಪವನ ಟರ್ಬೈನ್ ತಯಾರಕರ ಸಂಘ (ಐಡಬ್ಲೂಟಿಎಂಎ), ಡಬ್ಲೂಐಪಿಪಿಎ ಮತ್ತು ಐಡಬ್ಲೂಪಿಎ ಸೇರಿದಂತೆ ಕೈಗಾರಿಕಾ ಸಂಸ್ಥೆಗಳ ಹಿರಿಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಪವನ ವಿದ್ಯುತ್ ಮಾರುಕಟ್ಟೆಯಾಗಿದೆ. ಇದರ ಗುರಿಯೊಂದಿಗೆ 2030ರ ವೇಳೆಗೆ 100 ಗಿಗಾವ್ಯಾಟ್ ಮತ್ತು 2035 ರ ವೇಳೆಗೆ 155 ಗಿಗಾವ್ಯಾಟ್, 2070 ರ ವೇಳೆಗೆ 500 ಗಿಗಾವ್ಯಾಟ್ ಬಳಸಿದರೆ ಬರಿದಾಗದಿರುವ ಅಥವಾ ನವೀಕರಿಸಬಹುದಾದ ವಿದ್ಯುತ್ ಸಾಮರ್ಥ್ಯ ಮತ್ತು ನಿವ್ವಳ-ಶೂನ್ಯ ಹೊರಸೂಸುವಿಕೆಯ ಭಾರತದ ಗುರಿಗೆ ಪವನ ಶಕ್ತಿಯು ಮುಖ್ಯವಾಗಿದೆ.

”ಭಾರತದ ನವೀಕರಿಸಬಹುದಾದ ಕಾರ್ಯತಂತ್ರದ ಹೃದಯಭಾಗದಲ್ಲಿ ಪವನ ಶಕ್ತಿ ಇದೆ ಮತ್ತು 2025–26ರಲ್ಲಿ ದಾಖಲೆಯ 6.1 ಗಿಗಾವ್ಯಾಟ್ ಸೇರ್ಪಡೆಯು ಬಲವಾದ ನೀತಿ ಮತ್ತು ಕೈಗಾರಿಕಾ ಸಹಯೋಗವನ್ನು ಸಾಧಿಸಬಹುದು ಎಂಬುದನ್ನು ಸಾಬೀತುಪಡಿಸಿದೆ. ಮುಂದಿನ ಹಂತವು ವೇಗವನ್ನು ಬಯಸುತ್ತದೆ. 2026ರ ಜಾಗತಿಕ ಪವನ ದಿನದಂದು, ಜಾಗತಿಕ ರಫ್ತು ಅವಕಾಶಗಳನ್ನು ವಶಪಡಿಸಿಕೊಳ್ಳಲು ಭಾರತವೂ ತನ್ನನ್ನು ತಾನು ಇರಿಸಿಕೊಂಡಿರುವುದರಿಂದ ಮಹತ್ವಾಕಾಂಕ್ಷೆಯಿಂದ ಅನುಷ್ಠಾನದತ್ತ ಗಮನ ಹರಿಸಬೇಕು’’ ಎಂದು ಶ್ರೀ ಜೋಶಿ ಸಮ್ಮೇಳನದ ಕುರಿತು ಹೇಳಿದ್ದಾರೆ.

ಎಂ ಎನ್ ಆರ್ ಇ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಸಾರಂಗಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಪನ್ಮೂಲ ಸಮರ್ಪಕತೆ, ಗ್ರಿಡ್ ಸಿದ್ಧತೆ, ಸಾಮರ್ಥ್ಯ ಸೇರ್ಪಡೆ, ದೇಶೀಯ ಉತ್ಪಾದನಾ ಸ್ಪರ್ಧಾತ್ಮಕತೆ, ರಫ್ತು ಅವಕಾಶಗಳು ಮತ್ತು ಮುನ್ಸೂಚನೆ ಮತ್ತು ನವೀಕರಿಸಬಹುದಾದ ಇಂಧನ ದೃಢೀಕರಣದಲ್ಲಿನ ಪ್ರಗತಿಗಳು ಸೇರಿದಂತೆ ಭಾರತದ ಪವನ ಶಕ್ತಿ ಪಯಣದ ಮುಂದಿನ ಹಂತವನ್ನು ರೂಪಿಸುವ ಪ್ರಮುಖ ಆದ್ಯತೆಗಳನ್ನು ಸಮ್ಮೇಳನದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗುವುದು. ಆಚರಣೆಯ ಭಾಗವಾಗಿ ”ಜಾಗತಿಕ ಮಾರುಕಟ್ಟೆಗಳಿಗೆ ಭಾರತದ ಪವನ ಟರ್ಬೈನ್ ರಫ್ತುಗಳನ್ನು ಹೆಚ್ಚಿಸುವುದು’’ ಸೇರಿದಂತೆ ಹಲವು ಉದ್ಯಮ ವರದಿಗಳು ಮತ್ತು ಭಾರತದ ಪವನ ಟರ್ಬೈನ್ ಉತ್ಪಾದನೆ ಮತ್ತು ರಫ್ತುಗಳಿಗೆ ಜಾಗತಿಕ ಕೇಂದ್ರವಾಗುವ ಸಾಮರ್ಥ್ಯವನ್ನು ಉಲ್ಲೇಖಿಸುವ ಹಲವು ಕಿರು ಹೊತ್ತಿಗೆಗಳನ್ನು ಅನಾವರಣಗೊಳಿಸಲಾಗುವುದು.

ನಿಯೋಜನೆಯನ್ನು ವೇಗಗೊಳಿಸಲು, ಕಾರ್ಯಗತಗೊಳಿಸುವಿಕೆಯನ್ನು ಸುಧಾರಿಸಲು ಮತ್ತು ದೇಶೀಯ ಸಾಮರ್ಥ್ಯಗಳನ್ನು ಬಲಪಡಿಸಲು ಪ್ರಾಯೋಗಿಕ ಕ್ರಮಗಳನ್ನು ಗುರುತಿಸಲು ಸರ್ಕಾರ, ನಿಯಂತ್ರಕರು, ಅಭಿವರ್ಧಕರು, ತಯಾರಕರು ಮತ್ತು ತಜ್ಞರೊಂದಿಗೆ ಸಮ್ಮೇಳನವು ಸಮಗ್ರ ಗೋಷ್ಠಿಗಳು ಮತ್ತು ಚರ್ಚೆಗಳನ್ನು ಆಯೋಜಿಸುತ್ತದೆ. ವಲಯವು ತನ್ನ ಮುಂದಿನ ಬೆಳವಣಿಗೆಯ ಹಂತವನ್ನು ಪ್ರವೇಶಿಸುತ್ತಿದ್ದಂತೆ ಜಾಗತಿಕ ಪವನ ದಿನ 2026 ನಿರಂತರ ವಿಸ್ತರಣೆ ಮತ್ತು ಶುದ್ಧ ಇಂಧನ ಮಹತ್ವಾಕಾಂಕ್ಷೆಗಳಿಗಾಗಿ ಮಾರ್ಗಸೂಚಿಯನ್ನು ರೂಪಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಿ ಕಾರ್ಯನಿರ್ವಹಿಸುತ್ತದೆ.

 

*****


(रिलीज़ आईडी: 2272141) आगंतुक पटल : 17
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Gujarati , Tamil