ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಜಿನೀವಾದಲ್ಲಿ ನಡೆದ 114ನೇ ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಸಮಗ್ರ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ; ಭಾರತದ ಕಾರ್ಮಿಕ ಸುಧಾರಣೆಗಳು, ಸಾಮಾಜಿಕ ರಕ್ಷಣೆ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳ ಕುರಿತು ಪ್ರಮುಖವಾಗಿ ಪ್ರಸ್ತಾಪ


‘ಅಂತ್ಯೋದಯ’ ತತ್ವದಿಂದ ಮಾರ್ಗದರ್ಶಿಸಲ್ಪಟ್ಟ ಕಾರ್ಮಿಕ ಸಂಹಿತೆಗಳು ಅನುಪಾಲನೆ ಸರಳಗೊಳಿಸುತ್ತವೆ, ಕಾರ್ಮಿಕರ ಕಲ್ಯಾಣ ಬಲಪಡಿಸುತ್ತವೆ ಮತ್ತು ಆಧುನಿಕ, ಪಾರದರ್ಶಕ ಕಾರ್ಮಿಕ ಪರಿಸರ ವ್ಯವಸ್ಥೆ ಸೃಷ್ಟಿಸುತ್ತವೆ: ಸುಶ್ರೀ ಕರಂದ್ಲಾಜೆ

114ನೇ ಐಎಲ್‌ಸಿಯಲ್ಲಿ ನಡೆದ ಸಮಗ್ರ ಭಾಷಣದಲ್ಲಿ ಯುವ ಉದ್ಯೋಗಾವಕಾಶ ಮತ್ತು ಮಹಿಳಾ ಕಾರ್ಯಪಡೆಯ ಭಾಗವಹಿಸುವಿಕೆಯ ಹೆಚ್ಚಳದ ಬಗ್ಗೆ ಗಮನ ಸೆಳೆದ ಸಚಿವರಾದ ಕರಂದ್ಲಾಜೆ

ರಾಜ್ಯ ಸಚಿವರಾದ ಮತ್ತು ಐಎಲ್‌ಒ ಮಹಾನಿರ್ದೇಶಕರ ನಡುವಿನ ಚರ್ಚೆಯಲ್ಲಿ ಕಳೆದ ದಶಕದಲ್ಲಿ ಭಾರತದ ಸಾಮಾಜಿಕ ಭದ್ರತಾ ವ್ಯಾಪ್ತಿಯಲ್ಲಿನ ತ್ವರಿತ ವಿಸ್ತರಣೆ ವಿಚಾರ ಪ್ರಮುಖ ಪ್ರಸ್ತಾಪ

प्रविष्टि तिथि: 11 JUN 2026 1:34PM by PIB Bengaluru

ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ರಾಜ್ಯ ಸಚಿವರಾದ ಶ್ರೀಮತಿ ಶೋಭಾ ಕರಂದ್ಲಾಜೆ ಅವರು ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ನಡೆದ 114ನೇ ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ (ಐಎಲ್ ಸಿ) ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದರು.

114ನೇ ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನದ ಸಮಗ್ರ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ಸಮ್ಮೇಳನವನ್ನು ಆಯೋಜಿಸಿದ್ದಕ್ಕಾಗಿ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯನ್ನು ಅಭಿನಂದಿಸಿದರು ಮತ್ತು ವೇಗವಾಗಿ ವಿಕಸನಗೊಳ್ಳುತ್ತಿರುವ ಜಾಗತಿಕ ಪರಿವರ್ತನೆಗಳ ನಡುವೆ ಸಾಮಾಜಿಕ ನ್ಯಾಯ ಮತ್ತು ಯೋಗ್ಯ ಕೆಲಸವನ್ನು ಉತ್ತೇಜಿಸುವಲ್ಲಿ ಅದರ ನಿರಂತರ ನಾಯಕತ್ವವನ್ನು ಶ್ಲಾಘಿಸಿದರು.

ಸರಳ ಪಾಲನೆ, ಕಾರ್ಮಿಕರ ಕಲ್ಯಾಣವನ್ನು ಬಲಪಡಿಸಲು ಮತ್ತು ಆಧುನಿಕ ಮತ್ತು ಪಾರದರ್ಶಕ ಕಾರ್ಮಿಕ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಲು 29 ಕೇಂದ್ರ ಕಾರ್ಮಿಕ ಕಾನೂನುಗಳನ್ನು ನಾಲ್ಕು ಕಾರ್ಮಿಕ ಸಂಹಿತೆಗಳಾಗಿ ಒಗ್ಗೂಡಿಸುವ ಮೂಲಕ "ಅಂತ್ಯೋದಯ" ತತ್ವದಿಂದ ಮಾರ್ಗದರ್ಶಿಸಲ್ಪಟ್ಟ ವ್ಯಾಪಕ ಶ್ರೇಣಿಯ ಕಾರ್ಮಿಕ ಸುಧಾರಣೆಗಳನ್ನು ಭಾರತ ಕೈಗೊಂಡಿದೆ ಎಂದು ಸುಶ್ರೀ ಶೋಭಾ ಕರಂದ್ಲಾಜೆ ಪ್ರಮುಖವಾಗಿ ಪ್ರಸ್ತಾಪಿಸಿದರು.

2014ರಲ್ಲಿ ಶೇ. 34 ರಷ್ಟಿದ್ದ ಯುವ ಉದ್ಯೋಗಾರ್ಹತೆಯು 2025 ರಲ್ಲಿ ಶೇ.56 ಕ್ಕಿಂತ ಹೆಚ್ಚಾಗಿದೆ ಎಂದು ಅವರು 2017 ಮತ್ತು 2025ರ ನಡುವೆ, ನಿರುದ್ಯೋಗ ದರವು ಶೇ. 6 ರಿಂದ ಶೇ. 3.1ಕ್ಕೆ ಇಳಿದಿದೆ ಮತ್ತು ಮಹಿಳಾ ದುಡಿಯುವ ಪಡೆಯ ಭಾಗವಹಿಸುವಿಕೆ ಶೇ. 22 ರಿಂದ ಶೇ. 38.8ಕ್ಕೆ ಏರಿದೆ ಎಂದು ಹೇಳಿದರು.

ರಾಷ್ಟ್ರೀಯ ವೃತ್ತಿ ಸೇವಾ ಪೋರ್ಟಲ್ ಮತ್ತು ಇ-ಶ್ರಮ್ ಪೋರ್ಟಲ್ ಮೂಲಕ ಕಾರ್ಮಿಕ ಮತ್ತು ಉದ್ಯೋಗ ವಲಯದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಭಾರತದ ಪ್ರಗತಿಯ ಬಗ್ಗೆ ಕೇಂದ್ರ ಸಚಿವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಕೌಶಲ್ಯ ಮತ್ತು ಉದ್ಯೋಗಗಳ ಮೇಲಿನ ಅಂತಾರಾಷ್ಟ್ರೀಯ ಸಹಕಾರದ ಪ್ರಾಮುಖ್ಯತೆ ಮತ್ತು ಅಂತಾರಾಷ್ಟ್ರೀಯ ರೆಫೆರೆನ್ಸ್  ಉದ್ಯೋಗಗಳ ವರ್ಗೀಕರಣವನ್ನು ಅಭಿವೃದ್ಧಿಪಡಿಸುವಲ್ಲಿ ಐಎಲ್ ಒ ದೊಂದಿಗೆ ಭಾರತದ ನಡೆಯುತ್ತಿರುವ ಕಾರ್ಯಸಾಧ್ಯತಾ ಅಧ್ಯಯನವನ್ನು ಸಹ ಉಲ್ಲೇಖಿಸಿದರು.

ಭಾರತದ ಸಾಮಾಜಿಕ ಸಂರಕ್ಷಣಾ ವ್ಯಾಪ್ತಿಯ ಗಮನಾರ್ಹ ವಿಸ್ತರಣೆಯ ಕುರಿತು ಮತ್ತಷ್ಟು ವಿವರಿಸಿದ ಅವರು,  ಇದು ಐಎಲ್ ಒದ  ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು 1001 ಮಿಲಿಯನ್ ತಲುಪಿದೆ. ಭಾರತದ ಹೆಚ್ಚುತ್ತಿರುವ ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆಯನ್ನೂ ಸಹ ಆರಂಭಿಸಲಾಗಿದೆ ಎಂದರು.

ಜಿನೀವಾದಲ್ಲಿ ನಡೆದ 114ನೇ ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನದ ನೇಪಥ್ಯದಲ್ಲಿ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ರುವಾಂಡಾದ ಸಾರ್ವಜನಿಕ ಸೇವೆ ಮತ್ತು ಕಾರ್ಮಿಕ ಸಚಿವರಾದ ಅಂಬ್. ಕ್ರಿಸ್ಟೀನ್ ನ್ಕುಲಿಕಿಯಿಂಕಾ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

ಉದ್ಯೋಗ ಸೇವೆಗಳು, ಕೌಶಲ್ಯೀಕರಣ, ಕಾರ್ಯಪಡೆಯ ಯೋಜನೆ ಮತ್ತು ಡಿಜಿಟಲ್ ಆಡಳಿತದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಮೇಲೆ ಚರ್ಚೆಗಳು ಕೇಂದ್ರೀಕೃತವಾಗಿದ್ದವು. ರಾಷ್ಟ್ರೀಯ ವೃತ್ತಿ ಸೇವಾ ಪೋರ್ಟಲ್ ಮತ್ತು ಇ-ಶ್ರಮ್ ಪೋರ್ಟಲ್‌ಗಳನ್ನು ವಿಸ್ತರಿಸಲ್ಪಟ್ಟ ಡಿಜಿಟಲ್ ಸಾರ್ವಜನಿಕ ಸರಕುಗಳಾಗಿ ಯಶಸ್ವಿಯಾಗಿ ಬಳಸುವುದನ್ನು ಭಾರತ ಪ್ರಮುಖವಾಗಿ ಪ್ರಸ್ತಾಪಿಸಿತು ಮತ್ತು ಉದ್ಯೋಗ ಸೇವೆಗಳು, ಕಾರ್ಮಿಕರ ನೋಂದಣಿ, ಉದ್ಯೋಗಗಳು ಮತ್ತು ಕೌಶಲ್ಯ ಹೊಂದಾಣಿಕೆಗಾಗಿ ಡಿಜಿಟಲ್ ವೇದಿಕೆಗಳನ್ನು ಅಭಿವೃದ್ಧಿಪಡಿಸಲು ತಾಂತ್ರಿಕ ನೆರವು ಮತ್ತು ಸಾಮರ್ಥ್ಯ ವೃದ್ಧಿ ಬೆಂಬಲವನ್ನು ವಿಸ್ತರಿಸಿತು. ರುವಾಂಡಾ ಭಾರತದ ಪ್ರಭಾವಶಾಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಎತ್ತಿ ತೋರಿಸಿತು ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಕಾರ್ಮಿಕ ಅನೌಪಚಾರಿಕೀಕರಣದಿಂದ ಸಾಂಸ್ಥಿಕೀಕರಣದವರೆಗಿನ ಪಯಣದ ಬಗ್ಗೆ ಬೆಂಬಲವನ್ನು ಕೋರಿತು.

ಶ್ರೀಲಂಕಾದ ಕಾರ್ಮಿಕ ಸಚಿವರಾದ ಶ್ರೀ ಅನಿಲ್ ಜಯಂತ ಫೆರ್ನಾಂಡೊ ಅವರೊಂದಿಗೆ ಶೋಭಾ ಕರಂದ್ಲಾಜೆ ದ್ವಿಪಕ್ಷೀಯ ಸಭೆಯನ್ನೂ ನಡೆಸಿದರು. ಭಾರತದ ಕಾರ್ಮಿಕ ಸುಧಾರಣೆಗಳಲ್ಲಿ ಶ್ರೀಲಂಕಾ ಬಲವಾದ ಆಸಕ್ತಿಯನ್ನು ವ್ಯಕ್ತಪಡಿಸಿತು ಮತ್ತು ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳ ಯಶಸ್ವಿ ಅನುಷ್ಠಾನದ ಕುರಿತು ಒಳನೋಟಗಳನ್ನು ಕೋರಿತು. ಈ ಪರಿವರ್ತನಾ ಪಯಣವನ್ನು ಸಕ್ರಿಯಗೊಳಿಸಿದ ಸುಧಾರಣಾ ಮಾರ್ಗಸೂಚಿ, ಅನುಷ್ಠಾನ ವಿಧಾನಗಳು ಮತ್ತು ವ್ಯಾಪಕವಾದ ಪಾಲುದಾರರ ಸಮಾಲೋಚನೆಗಳನ್ನು ಎತ್ತಿ ತೋರಿಸುವ ಮೂಲಕ ಭಾರತೀಯ ನಿಯೋಗವು ತನ್ನ ಅನುಭವವನ್ನು ಹಂಚಿಕೊಂಡಿತು.

ಚರ್ಚೆಗಳಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿನ ಸಹಯೋಗದ ಬಗ್ಗೆಯೂ ಗಮನಹರಿಸಲಾಯಿತು, ಭಾರತವು ಇ-ಶ್ರಮ್ ಮತ್ತು ರಾಷ್ಟ್ರೀಯ ವೃತ್ತಿ ಸೇವಾ ಪೋರ್ಟಲ್‌ನಂತಹ ಉಪಕ್ರಮಗಳ ಮೂಲಕ ಕೌಶಲ್ಯ, ಉದ್ಯೋಗ ಸೇವೆಗಳು ಮತ್ತು ಕಾರ್ಯಪಡೆಯ ಅಭಿವೃದ್ಧಿಯನ್ನು ಬಲಪಡಿಸಲು ಬೆಂಬಲವನ್ನು ನೀಡಿತು.

ಕೇಂದ್ರ ಸಚಿವರು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ (ಐ ಎಲ್ ಒ) ಮಹಾನಿರ್ದೇಶಕ ಶ್ರೀ ಗಿಲ್ಬರ್ಟ್ ಎಫ್. ಹೌಂಗ್ಬೊ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನೂ ನಡೆಸಿದರು. ಸಭೆಯ ವೇಳೆ ಯೋಗ್ಯವಾದ ಕೆಲಸ, ಸಾಮಾಜಿಕ ನ್ಯಾಯ ಮತ್ತು ಅಂತರ್ಗತ ಬೆಳವಣಿಗೆಯನ್ನು ಮುನ್ನಡೆಸುವಲ್ಲಿ ಐ ಎಲ್ ಒ ಜೊತೆಗಿನ ಪಾಲುದಾರಿಕೆಯನ್ನು ಬಲಪಡಿಸುವ ಭಾರತದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಭಾರತದ ಸಾಮಾಜಿಕ ರಕ್ಷಣಾ ವ್ಯಾಪ್ತಿಯ ವಿಸ್ತರಣೆಯ ಬಗ್ಗೆ ಅವರು ಮಹಾನಿರ್ದೇಶಕರಿಗೆ ಮಾಹಿತಿ ನೀಡಿದರು, ಇದು 2015ರಲ್ಲಿ ಶೇ.19 ದ 2025ರಲ್ಲಿ ಶೇ.64.3 ಕ್ಕೆ ಏರಿತು, ಇದು ದೇಶಾದ್ಯಂತ 940 ಮಿಲಿಯನ್ ಜನರನ್ನು ಸಾಮಾಜಿಕ ಭದ್ರತಾ ಜಾಲದ ಅಡಿಯಲ್ಲಿ ತಂದಿದೆ.

ಅಲ್ಪಾವಧಿಯಲ್ಲಿಯೇ ಭಾರತದ ಸಾಮಾಜಿಕ ಭದ್ರತಾ ವ್ಯಾಪ್ತಿಯಲ್ಲಿನ ಗಮನಾರ್ಹ ಏರಿಕೆಗೆ ಐಎಲ್ಒ ಮಹಾನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದರು. ಕಳೆದ ವರ್ಷದಲ್ಲಿ ಈ ವ್ಯಾಪ್ತಿ ಮತ್ತಷ್ಟು ವಿಸ್ತರಣೆಯಾಗಿದ್ದು, ಜನಸಂಖ್ಯೆಯ ಇನ್ನೂ ಹೆಚ್ಚಿನ ಶೇಕಡಾವಾರು ಜನರನ್ನು ಸಾಮಾಜಿಕ ಭದ್ರತೆಯ ವ್ಯಾಪ್ತಿಗೆ ತಂದಿದೆ ಎಂದು ಅವರು ಪ್ರಸ್ತಾಪಿಸಿದರು.

ನಾಲ್ಕು ಕಾರ್ಮಿಕ ಸಂಹಿತೆಗಳ ಮೂಲಕ ಭಾರತದ ಹೆಗ್ಗುರುತು ಕಾರ್ಮಿಕ ಸುಧಾರಣೆಗಳು, ಸಾಮಾಜಿಕ ರಕ್ಷಣಾ ವ್ಯಾಪ್ತಿಯ ವಿಸ್ತರಣೆ, ಕಾರ್ಮಿಕ ಮತ್ತು ಉದ್ಯೋಗ ವಲಯದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿ, ಭವಿಷ್ಯ-ಆಧಾರಿತ ಕೌಶಲ್ಯ ಉಪಕ್ರಮಗಳು ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಸಂಚಾರದ ಮೇಲೆ ಚರ್ಚೆಗಳು ಹೆಚ್ಚು ಕೇಂದ್ರೀಕರಿಸಿದವು.

ಅಂತಾರಾಷ್ಟ್ರೀಯ ರೆಫರೆನ್ಸ್ ವರ್ಗೀಕರಣದ ಅಭಿವೃದ್ಧಿಯ ಕುರಿತು ಕಾರ್ಯಸಾಧ್ಯತಾ ಅಧ್ಯಯನಕ್ಕೆ ಬೆಂಬಲ ಸೇರಿದಂತೆ ಭಾರತದೊಂದಿಗೆ ಐಎಲ್ಒನ ತಾಂತ್ರಿಕ ಸಹಕಾರವನ್ನು ರಾಜ್ಯ ಸಚಿವರು ಶ್ಲಾಘಿಸಿದರು. ಅಂತರ್ಗತ, ಸ್ಥಿತಿಸ್ಥಾಪಕ ಮತ್ತು ಭವಿಷ್ಯಕ್ಕೆ ಸಿದ್ಧವಾದ ಕಾರ್ಮಿಕ ಮಾರುಕಟ್ಟೆಗಳನ್ನು ನಿರ್ಮಿಸಲು ಐಎಲ್ಒ ಜೊತೆ ನಿಕಟವಾಗಿ ಕೆಲಸ ಮಾಡುವ ಭಾರತದ ಬದ್ಧತೆಯನ್ನು ಸಹ ಒತ್ತಿಹೇಳಲಾಯಿತು.

"ಭಾರತದ ಹೊಸ ಕಾರ್ಮಿಕ ಸಂಹಿತೆಗಳ ಕುರಿತು ಜಾಗತಿಕ ಸಂವಾದ"ದ ಉನ್ನತ ಮಟ್ಟದ ಕಾರ್ಯಕ್ರಮದಲ್ಲಿ, ಕೇಂದ್ರ ಸಚಿವರು ನಾಲ್ಕು ಕಾರ್ಮಿಕ ಸಂಹಿತೆಗಳ ಮೂಲಕ ಭಾರತದ ಸಮಗ್ರ ಕಾರ್ಮಿಕ ಸುಧಾರಣೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.

ಸುಧಾರಣೆಗಳು ಕನಿಷ್ಠ ವೇತನ ರಕ್ಷಣೆಯನ್ನು ಬಲಪಡಿಸುತ್ತವೆ, ಅಸಂಘಟಿತ, ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸುತ್ತವೆ, ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಮಾನದಂಡಗಳನ್ನು ಬಲಪಡಿಸುತ್ತವೆ, ಲಿಂಗ ಸಮಾನತೆ ಉತ್ತೇಜಿಸುತ್ತವೆ ಮತ್ತು ಸಾಮೂಹಿಕ ಚೌಕಾಸಿಯನ್ನು ಬಲಪಡಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಕೌಶಲ್ಯವನ್ನು ಜಾಗತಿಕ ಉದ್ಯೋಗಾವಕಾಶಗಳೊಂದಿಗೆ ಸಂಪರ್ಕಿಸುವ ಸಂಘಟಿತ ಸಂಪೂರ್ಣ ಸರ್ಕಾರಿ ವಿಧಾನದ ಮೂಲಕ ಅಂತಾರಾಷ್ಟ್ರೀಯ ಕಾರ್ಮಿಕ ಸಂಚಾರದ ಮೇಲೆ ಭಾರತದ ಹೆಚ್ಚುತ್ತಿರುವ ಗಮನವನ್ನು ಪ್ರತಿಪಾದಿಸಲಾಯಿತು ಮತ್ತು ಸುರಕ್ಷಿತ, ಕ್ರಮಬದ್ಧ ಮತ್ತು ಪಾರದರ್ಶಕ ವಲಸೆ ಮಾರ್ಗಗಳನ್ನು ಖಾತ್ರಿಪಡಿಸಿಕೊಳ್ಳಲಾಯಿತು.

ಯೋಗ್ಯವಾದ ಕೆಲಸವನ್ನು ಉತ್ತೇಜಿಸಲು, ಕಾರ್ಮಿಕರ ರಕ್ಷಣೆಯನ್ನು ಬಲಪಡಿಸಲು, ಜಾಗತಿಕ ಉದ್ಯೋಗಾವಕಾಶವನ್ನು ಹೆಚ್ಚಿಸಲು ಮತ್ತು ಅಂತಾರಾಷ್ಟ್ರೀಯ ಸಹಕಾರ ಮತ್ತು ಸಾಮಾಜಿಕ ಸಂವಾದದ ಮೂಲಕ ಸಮಾನ, ಅಂತರ್ಗತ ಮತ್ತು ಭವಿಷ್ಯಕ್ಕೆ ಸಿದ್ಧವಾದ ಕಾರ್ಮಿಕ ಮಾರುಕಟ್ಟೆ ವ್ಯವಸ್ಥೆಗಳನ್ನು ನಿರ್ಮಿಸಲು ಐಎಲ್ಒ ಮತ್ತು ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡುವ ಭಾರತದ ಬದ್ಧತೆಯನ್ನು ಸುಶ್ರೀ ಶೋಭಾ ಕರಂದ್ಲಾಜೆ ಪುನರುಚ್ಚರಿಸಿದರು.

 

*****


(रिलीज़ आईडी: 2271603) आगंतुक पटल : 11
इस विज्ञप्ति को इन भाषाओं में पढ़ें: English , Urdu , हिन्दी , Gujarati , Tamil , Malayalam