ಉಪರಾಷ್ಟ್ರಪತಿಗಳ ಕಾರ್ಯಾಲಯ
ಹಿರಿಯ ಚಲನಚಿತ್ರ ನಿರ್ದೇಶಕ ಭಾರತಿರಾಜ್ ಅವರ ನಿಧನಕ್ಕೆ ಉಪರಾಷ್ಟ್ರಪತಿ ಸಂತಾಪ
ಪ್ರಕಟಣಾ ದಿನಾಂಕ:
10 JUN 2026 1:41PM by PIB Bengaluru
ಭಾರತದ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಹಿರಿಯ ಚಲನಚಿತ್ರ ನಿರ್ದೇಶಕರಾದ ಭಾರತಿರಾಜ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಶ್ರೀ ಸಿ.ಪಿ. ರಾಧಾಕೃಷ್ಣನ್ ತಮ್ಮ ಸಂದೇಶದಲ್ಲಿ, ಭಾರತಿರಾಜ್ ಅವರು ಗ್ರಾಮೀಣ ಭಾರತದ ಅಂತರಂಗ ಮತ್ತು ಮಾನವ ಭಾವನೆಗಳ ಆಳವನ್ನು ಅತ್ಯುತ್ಕೃಷ್ಟ ರೂಪದಲ್ಲಿ ಬೆಳ್ಳಿ ತೆರೆಗೆ ತರುವ ಮೂಲಕ ತಮಿಳು ಸಿನಿಮಾದಲ್ಲಿ ಕ್ರಾಂತಿಯನ್ನುಂಟು ಮಾಡಿದ ದಾರ್ಶನಿಕ ಕಥೆಗಾರ ಎಂದು ಸ್ಮರಿಸಿದ್ದಾರೆ.
ವಿಶಿಷ್ಟ ಸಿನಿಮೀಯ ಭಾಷೆ, ಮರೆಯಲಾಗದ ಪಾತ್ರಗಳು ಮತ್ತು ಕಾಲಾತೀತ ಚಲನಚಿತ್ರಗಳ ಮೂಲಕ ಭಾರತಿರಾಜ ಅವರು ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದು, ಪೀಳಿಗೆಗಳ ಚಲನಚಿತ್ರ ನಿರ್ಮಾತೃಗಳು ಮತ್ತು ಕಲಾವಿದರಿಗೆ ಸ್ಫೂರ್ತಿ ತುಂಬಿದ್ದಾರೆ ಎಂದು ಉಪರಾಷ್ಟ್ರಪತಿ ಹೇಳಿದ್ದಾರೆ.
ಭಾರತಿರಾಜ್ ಅವರ ನಿಧನವು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿರುವ ಅವರು, ಖ್ಯಾತ ಚಲನಚಿತ್ರ ನಿರ್ದೇಶಕರಾದ ಭಾರತಿರಾಜ್ ಅವರ ಕುಟುಂಬವರ್ಗ, ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಜಗತ್ತಿನಾದ್ಯಂತದ ಅಸಂಖ್ಯಾತ ಅಭಿಮಾನಿಗಳಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ.
*****
(ಪ್ರಕಟಣೆ ಐ.ಡಿ.: 2271087)
ವಿಸಿಟರ್ ಕೌಂಟರ್ : 81