ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಆಂಧ್ರಪ್ರದೇಶದ ನೂತನ ರಾಜಧಾನಿಯಾದ ಅಮರಾವತಿಯಲ್ಲಿ ಕೇಂದ್ರ ಸರ್ಕಾರದ ಹೊಸ ಜನರಲ್ ಪೂಲ್ ಕಚೇರಿ ವಸತಿ ಗೃಹ ಸಂಕೀರ್ಣದ ನಿರ್ಮಾಣಕ್ಕೆ ಸಚಿವ ಸಂಪುಟದ ಅನುಮೋದನೆ
प्रविष्टि तिथि:
10 JUN 2026 1:52PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ಆಂಧ್ರಪ್ರದೇಶದ ನೂತನ ರಾಜಧಾನಿಯಾದ ಅಮರಾವತಿಯಲ್ಲಿ ʻಕೇಂದ್ರ ಸರ್ಕಾರದ ಜನರಲ್ ಪೂಲ್ ಕಚೇರಿಗಳ ಸಂಕೀರ್ಣʼದ (Central Government General Pool Office Accommodation - CGGPOA) ನಿರ್ಮಾಣಕ್ಕೆ ಅನುಮೋದನೆ ನೀಡಿದೆ.
ವಿಶ್ವದರ್ಜೆಯ ನಗರ ಕೇಂದ್ರವಾಗಿ ವಿಕಸನಗೊಳ್ಳಲು ಯೋಜಿಸಲಾಗಿರುವ ನೂತನ ಗ್ರೀನ್ಫೀಲ್ಡ್ ನಗರ ಅಮರಾವತಿಯಲ್ಲಿ ಈ ಯೋಜನೆಯು ಒಂದು ಮೈಲಿಗಲ್ಲು ಉಪಕ್ರಮವಾಗಿದೆ. ವಿವಿಧ ಕೇಂದ್ರ ಸರ್ಕಾರದ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಮೂಲಕ ಅವುಗಳ ಕಚೇರಿಗಳಿಗೆ ಸ್ಥಳಾವಕಾಶದ ಹೆಚ್ಚುತ್ತಿರುವ ಬೇಡಿಕೆಯನ್ನು ಈಡೇರಿಸುವುದು ಈ ಪ್ರಸ್ತಾವನೆಯ ಉದ್ದೇಶವಾಗಿದೆ. ಈ ಒಗ್ಗೂಡಿಸುವಿಕೆಯು ಇಲಾಖೆಗಳ ನಡುವಿನ ಸಮನ್ವಯವನ್ನು ವೃದ್ಧಿಸಲಿದೆ ಮತ್ತು ಆಂಧ್ರಪ್ರದೇಶ ರಾಜ್ಯಕ್ಕೆ ಕೇಂದ್ರ ಸರ್ಕಾರವು ಒದಗಿಸುವ ಸೇವೆಗಳ ದಕ್ಷತೆ ಹಾಗೂ ಪರಿಣಾಮತೆಯನ್ನು ಸುಧಾರಿಸಲಿದೆ.
ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಯಲ್ಲಿ ನಿರ್ಮಾಣವಾಗಲಿರುವ ಈ ʻಕೇಂದ್ರ ಸರ್ಕಾರದ ಜನರಲ್ ಪೂಲ್ ಕಚೇರಿಗಳ ಸಂಕೀರ್ಣʼವನ್ನು 53 ಎಕರೆ ಪ್ರದೇಶದಲ್ಲಿ ಯೋಜಿಸಲಾಗಿದೆ. ಈ ಸಿಜಿಜಿಪಿಒಎ ಸಂಕೀರ್ಣವು ಎರಡು ಬ್ಲಾಕ್ಗಳನ್ನು ಒಳಗೊಂಡಿರುತ್ತದೆ: ಪ್ಲಾಟ್ ಸಿ-9 ರಲ್ಲಿ ಒಂದು ಬ್ಲಾಕ್ ನೆಲಮಹಡಿ + 13 ಮಹಡಿಗಳನ್ನು ಹೊಂದಿರಲಿದ್ದು (ಸೇವೆಗಳಿಗಾಗಿ ನೆಲಮಹಡಿ, ಪೋಡಿಯಂ ಪಾರ್ಕಿಂಗ್ ಗಾಗಿ ಮೂರು ಮಹಡಿಗಳು ಮತ್ತು ಕಚೇರಿ ಸ್ಥಳಗಳಿಗಾಗಿ ಹತ್ತು ಮಹಡಿಗಳು), ಮತ್ತು ಪ್ಲಾಟ್ ಸಿ-8 ರಲ್ಲಿ ಮತ್ತೊಂದು ಬ್ಲಾಕ್ ನೆಲಮಹಡಿ + 10 ಮಹಡಿಗಳನ್ನು ಹೊಂದಿರಲಿದೆ (ಸೇವೆಗಳಿಗಾಗಿ ನೆಲಮಹಡಿ, ಪೋಡಿಯಂ ಪಾರ್ಕಿಂಗ್ಗಾಗಿ ಮೂರು ಮಹಡಿಗಳು ಮತ್ತು ಕಚೇರಿ ಸ್ಥಳಗಳಿಗಾಗಿ ಏಳು ಮಹಡಿಗಳು). ಈ ಸೌಲಭ್ಯವನ್ನು ಸರಿಸುಮಾರು 8,000 ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸ್ಥಳಾವಕಾಶ ಕಲ್ಪಿಸುವಂತೆ ವಿನ್ಯಾಸಗೊಳಿಸಲಾಗಿದೆ. ಸುಮಾರು 1,800 ಸಮಾನ ಕಾರುಗಳ ಸ್ಥಳಗಳಿಗಾಗಿ (ಇ ಸಿ ಎಸ್) ಪೋಡಿಯಂ ಪಾರ್ಕಿಂಗ್ ವ್ಯವಸ್ಥೆಯನ್ನು ಪ್ರಸ್ತಾಪಿಸಲಾಗಿದೆ. ಈ ಯೋಜನೆಯ ಒಟ್ಟು ನಿರ್ಮಿತ ಪ್ರದೇಶ 23,25,000 ಚದರ ಅಡಿ (2,16,032 ಚದರ ಮೀಟರ್) ಆಗಿದೆ.
ಜಾಗತಿಕವಾಗಿ, ಪರಿಸರ ಸುಸ್ಥಿರ ಮತ್ತು ಸಂಪನ್ಮೂಲ-ಸಮರ್ಥ ನಿರ್ಮಾಣ ಪದ್ಧತಿಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ಬದ್ಧತೆಯನ್ನು ಪ್ರತಿಬಿಂಬಿಸುವಂತೆ, ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಯಲ್ಲಿ ಪ್ರಸ್ತಾಪಿಸಲಾದ ಕೇಂದ್ರ ಸರ್ಕಾರದ ಸಾಮಾನ್ಯ ಪೂಲ್ ಕಚೇರಿ ಸಂಕೀರ್ಣವನ್ನು ಭಾರತದಲ್ಲಿ ಪ್ರಚಲಿತದಲ್ಲಿರುವ ಅತ್ಯುನ್ನತ ಹಸಿರು ಕಟ್ಟಡ ಮಾನದಂಡಗಳಿಗೆ ಅನುಗುಣವಾಗಿ ಯೋಜಿಸಲಾಗುತ್ತಿದೆ ಮತ್ತು ವಿನ್ಯಾಸಗೊಳಿಸಲಾಗುತ್ತಿದೆ. ಸುಸ್ಥಿರ ಸ್ಥಳ ಯೋಜನೆ, ಹೆಚ್ಚಿನ ಇಂಧನ ದಕ್ಷತೆ, ನೀರಿನ ಸಂರಕ್ಷಣೆ, ಸ್ಥಳೀಯವಾಗಿ ಲಭ್ಯವಿರುವ ಸಾಮಗ್ರಿಗಳ ಬಳಕೆ ಮತ್ತು ಕಚೇರಿಯಲ್ಲಿರುವವರ ಆರೋಗ್ಯ ಹಾಗೂ ಸೌಕರ್ಯವನ್ನು ಸುಧಾರಿಸುವ ಮೂಲಕ ಪರಿಸರದ ಮೇಲಾಗುವ ದುಷ್ಪರಿಣಾಮವನ್ನು ಕನಿಷ್ಠಗೊಳಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಈ ಆವರಣವನ್ನು ಕನಿಷ್ಠ 'ಗೃಹ 4-ಸ್ಟಾರ್ ರೇಟಿಂಗ್' (GRIHA 4-Star Rating) ಸಾಧಿಸಲು ವಿನ್ಯಾಸಗೊಳಿಸಿ, ನಿರ್ಮಿಸಿ, ನೋಂದಾಯಿಸಲಾಗುವುದು ಮತ್ತು ಇದು ಇಂಧನ ಸಂರಕ್ಷಣೆ ಮತ್ತು ಸುಸ್ಥಿರ ಕಟ್ಟಡ ಸಂಹಿತೆ (ಇಸಿಎಸ್ ಬಿ ಸಿ) 2024 ರ ಇತ್ತೀಚಿನ ನಿಬಂಧನೆಗಳಿಗೆ ಬದ್ಧವಾಗಿರುತ್ತದೆ.
ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಯಲ್ಲಿನ ಈ ಕೇಂದ್ರ ಸರ್ಕಾರದ ಸಾಮಾನ್ಯ ಪೂಲ್ ಕಚೇರಿ ಸಂಕೀರ್ಣವು ಅಗತ್ಯ ನಾಗರಿಕ ಮತ್ತು ಸಮುದಾಯ ಸೌಲಭ್ಯಗಳೊಂದಿಗೆ ಸುಸಜ್ಜಿತವಾಗಿರಲಿದ್ದು, ಇದರಲ್ಲಿ ಎಟಿಎಂ ಹೊಂದಿರುವ ಬ್ಯಾಂಕ್, ಅಂಚೆ ಕಚೇರಿ, ಶಿಶುಪಾಲನಾ ಕೇಂದ್ರ, ಮನರಂಜನಾ ಕೊಠಡಿ, ಮಹಿಳೆಯರ ಕೊಠಡಿ, 100 ಆಸನಗಳ ಸಾಮರ್ಥ್ಯದ ಕಾನ್ಫರೆನ್ಸ್ ಹಾಲ್, 500 ಆಸನಗಳ ಸಾಮರ್ಥ್ಯದ ವಿವಿಧೋದ್ದೇಶ ಸಭಾಂಗಣ ಮತ್ತು ಉದ್ಯೋಗಿಗಳು ಹಾಗೂ ಸಂದರ್ಶಕರ ಅಗತ್ಯತೆಗಳನ್ನು ಪೂರೈಸಲು ನಾಲ್ಕು ಉಪಹಾರಗೃಹಗಳು ಕ್ಯಾಂಟೀನ್ ಇರಲಿವೆ.
ಅನ್ವಯವಾಗುವ ಪ್ರವೇಶಸಾಧ್ಯತೆಯ ಮಾನದಂಡಗಳು ಮತ್ತು ನಿಯಮಾವಳಿಗಳಿಗೆ ಅನುಸಾರವಾಗಿ, ವಿಶೇಷಚೇತನರಿಗೆ ಸುಲಭ ಪ್ರವೇಶ, ಸುರಕ್ಷತೆ ಮತ್ತು ಅನುಕೂಲತೆಯನ್ನು ಖಚಿತಪಡಿಸಿಕೊಳ್ಳಲು ಈ ಆವರಣವು ತಡೆರಹಿತ ನಿರ್ಮಿತ ಪರಿಸರವನ್ನು ಒಳಗೊಂಡಿರುತ್ತದೆ.
ಈ ಯೋಜನೆಯು ನುರಿತ, ಅರೆ-ನುರಿತ ಮತ್ತು ಅನನುಭವಿ ಕಾರ್ಮಿಕರಿಗೆ ಗಣನೀಯ ಪ್ರಮಾಣದ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ನಿರ್ಮಾಣ ಹಂತದಲ್ಲಿ, ಉದ್ಯೋಗ ಸೃಷ್ಟಿಯು ವಾರ್ಷಿಕವಾಗಿ ಸರಿಸುಮಾರು 7,00,000 ಮಾನವ ದಿನಗಳು ಎಂದು ಅಂದಾಜು ಮಾಡಲಾಗಿದೆ, ಜೊತೆಗೆ ಕಾರ್ಯ ನಡೆಸುವ ಹಂತದಲ್ಲಿ ವಾರ್ಷಿಕವಾಗಿ ಸುಮಾರು 50,000 ಮಾನವ ದಿನಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ಯೋಜನಾ ವೆಚ್ಚ ಮತ್ತು ಹಣಕಾಸು
ಈ ಯೋಜನೆಯ ಅಂದಾಜು ವೆಚ್ಚ ₹1,299.08 ಕೋಟಿಗಳಾಗಿದ್ದು, ಇದನ್ನು ಭಾರತ ಸರ್ಕಾರವು ಬಜೆಟ್ ಬೆಂಬಲದ ಮೂಲಕ 'ಲೆಕ್ಕ ಪತ್ರ ಶೀರ್ಷಿಕೆ: 4059 ಸಾರ್ವಜನಿಕ ಕಾಮಗಾರಿಗಳ ಮೇಲಿನ ಬಂಡವಾಳ ವೆಚ್ಚ'ದ ಅಡಿಯಲ್ಲಿ ಹಣಕಾಸನ್ನು ಒದಗಿಸಲಿದೆ.
ಯೋಜನೆಯ ಪೂರ್ವ ಚಟುವಟಿಕೆಗಳು
ಈ ಯೋಜನೆಯನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಕೇಂದ್ರೀಯ ಸಾರ್ವಜನಿಕ ಕಾಮಗಾರಿ ಇಲಾಖೆ (ಸಿಪಿಡಬ್ಲ್ಯೂ ಡಿ) ಯ ಮೂಲಕ ಅನುಷ್ಠಾನಗೊಳಿಸಲಿದೆ. ಬಿಡ್ಡಿಂಗ್ ಮುಂಚಿನ ಚಟುವಟಿಕೆಗಳು ಈಗಾಗಲೇ ಪ್ರಾರಂಭವಾಗಿದ್ದು, ಪ್ರಸ್ತುತ ಟೆಂಡರ್ ದಾಖಲೆಗಳ ಸಿದ್ಧತೆ ಪ್ರಗತಿಯಲ್ಲಿದೆ.
ಆಂಧ್ರಪ್ರದೇಶದ ಅಮರಾವತಿಯಲ್ಲಿರುವ ಹೊಸ ರಾಜಧಾನಿಯಲ್ಲಿ ಪ್ರಸ್ತಾವಿತ ಕೇಂದ್ರ ಸರ್ಕಾರದ ಜನರಲ್ ಪೂಲ್ ಕಚೇರಿ ವಸತಿ (CGGPOA)


*****
(रिलीज़ आईडी: 2271074)
आगंतुक पटल : 12
इस विज्ञप्ति को इन भाषाओं में पढ़ें:
Urdu
,
English
,
हिन्दी
,
Marathi
,
Bengali
,
Bengali-TR
,
Assamese
,
Punjabi
,
Gujarati
,
Tamil
,
Telugu
,
Malayalam