ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಕಳೆದ 10 ವರ್ಷಗಳಲ್ಲಿ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದ ದೂರದೃಷ್ಟಿಯ ಉಪಕ್ರಮವು ಭಾರತದ ತಾಯ್ತನದ ಆರೋಗ್ಯ ಪಯಣ ರೂಪಿಸಿದೆ: ಶ್ರೀಮತಿ ಅನ್ನಪೂರ್ಣ ದೇವಿ
प्रविष्टि तिथि:
09 JUN 2026 2:45PM by PIB Bengaluru
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಅವರು ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನವನ್ನು ಉಲ್ಲೇಖಿಸಿ ತಮ್ಮ ಸಾಮಾಜಿಕ ಮಾಧ್ಯಮ X ಪೋಸ್ಟ್ ನಲ್ಲಿ ಪ್ರತಿ ಹೊಸ ಜೀವನವು ತಾಯಿಯ ಗರ್ಭದಲ್ಲಿ ಆರಂಭವಾಗುತ್ತದೆ ಮತ್ತು ಗರ್ಭಧಾರಣೆಯ ಪ್ರತಿಯೊಂದು ಹಂತವು ಸುರಕ್ಷಿತ, ಆರೋಗ್ಯಕರ ಮತ್ತು ಗೌರವಯುತ ಆರೈಕೆಯ ಹಕ್ಕನ್ನು ಹೊಂದಿದೆ ಎಂದು ಹೇಳಿದ್ದಾರೆ. ಕಳೆದೊಂದು ದಶಕದಲ್ಲಿ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ (ಪಿಎಂಎಸ್ ಎಂಎ) ಲಕ್ಷಾಂತರ ಗರ್ಭಿಣಿ ಮಹಿಳೆಯರಿಗೆ ಸಕಾಲಿಕ ಆರೋಗ್ಯ ತಪಾಸಣೆ, ತಜ್ಞರ ಸಮಾಲೋಚನೆ ಮತ್ತು ಸುಧಾರಿತ ತಾಯಿಯ ಆರೋಗ್ಯ ಸೇವೆಗಳನ್ನು ಒದಗಿಸುವ ಮೂಲಕ ಸುರಕ್ಷಿತ ತಾಯ್ತನವನ್ನು ಒಂದು ಸಾಮೂಹಿಕ ಚಳವಳಿಯನ್ನಾಗಿ ಮಾಡಿದೆ. ಇದು ಕೇವಲ ಒಂದು ಯೋಜನೆಯಲ್ಲ ಆದರೆ ಪ್ರತಿಯೊಬ್ಬ ತಾಯಿ ಮತ್ತು ಆಕೆಯಲ್ಲಿ ಹುಟ್ಟಲಿರುವ ಮಗುವಿಗೆ ಆರೋಗ್ಯಕರ ಭವಿಷ್ಯ ಒದಗಿಸುವುದು ನಮ್ಮ ಬದ್ಧತೆಯಾಗಿದೆ. ಈ ದೂರದೃಷ್ಟಿಯ ಉಪಕ್ರಮವು ಕಳೆದ 10 ವರ್ಷಗಳಲ್ಲಿ ಭಾರತದ ತಾಯ್ತನದ ಆರೋಗ್ಯ ಪಯಣವನ್ನು ರೂಪಿಸಿದೆ ಮತ್ತು ಲಕ್ಷಾಂತರ ತಾಯಂದಿರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯ ಮಾಧ್ಯಮವಾಗಿದೆ.
#10YearsOfPMSurakshitMatritva
*****
(रिलीज़ आईडी: 2270762)
आगंतुक पटल : 13