ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ
azadi ka amrit mahotsav

ಕೌಶಲ್ ಭವನದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ನೌಕರರ ಮಕ್ಕಳಿಗಾಗಿ ಶಿಶುಪಾಲನಾ ಸೌಲಭ್ಯವನ್ನು ಉದ್ಘಾಟಿಸಿದ ಕೇಂದ್ರ ಸಚಿವರಾದ ಶ್ರೀ ಜಯಂತ್ ಚೌಧರಿ; ಎಲ್ಲರನ್ನೂ ಒಳಗೊಳ್ಳುವ ಕೆಲಸದ ವಾತಾವರಣದ ಸರ್ಕಾರದ ದೃಷ್ಟಿಕೋನಕ್ಕೆ ಬಲ

प्रविष्टि तिथि: 06 JUN 2026 1:49PM by PIB Bengaluru

ಎಲ್ಲರನ್ನೊಳಗೊಳ್ಳುವ, ಸಹಾನುಭೂತಿಯ ಮತ್ತು ಜನಕೇಂದ್ರಿತ ಕೆಲಸದ ವಾತಾವರಣವನ್ನು ಪೋಷಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ, ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಹಾಗೂ ಶಿಕ್ಷಣ ಸಚಿವಾಲಯದ ರಾಜ್ಯ ಸಚಿವರಾದ (ಸ್ವತಂತ್ರ ಉಸ್ತುವಾರಿ) ಶ್ರೀ ಜಯಂತ್ ಚೌಧರಿ ಅವರು, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಪ್ರಧಾನ ಕಚೇರಿಯಾದ ಕೌಶಲ್ ಭವನದಲ್ಲಿ ನೌಕರರ ಮಕ್ಕಳಿಗಾಗಿ ಹೊಸ ಶಿಶುಪಾಲನಾ (ಡೇಕೇರ್) ಕೇಂದ್ರವನ್ನು ಉದ್ಘಾಟಿಸಿದರು.

ಸುಮಾರು 600 ಚದರ ಮೀಟರ್ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಹೊಸ ಶಿಶುಪಾಲನಾ ಕೇಂದ್ರವು ಮಕ್ಕಳು ಕಲಿಯಲು, ಆಟವಾಡಲು, ವಿಶ್ರಾಂತಿ ಪಡೆಯಲು ಮತ್ತು ಬೆಳೆಯಲು ಆಹ್ಲಾದಕರ, ಸುರಕ್ಷಿತ ಹಾಗೂ ಪೋಷಣೆಯ ವಾತಾವರಣವನ್ನು ಒದಗಿಸುತ್ತದೆ. ಈ ಕೇಂದ್ರವು ಆರಾಮದಾಯಕವಾದ ಮಲಗುವ ಮತ್ತು ವಿಶ್ರಾಂತಿ ಪಡೆಯುವ ಸ್ಥಳಗಳು, ಆಕರ್ಷಕ ಆಟ ಮತ್ತು ಚಟುವಟಿಕೆ ವಲಯ, ವಯಸ್ಸಿಗೆ ಸೂಕ್ತವಾದ ಕಲಿಕಾ ಸಂಪನ್ಮೂಲಗಳು, ಮಕ್ಕಳಿಗೆ ತಕ್ಕ  ಪೀಠೋಪಕರಣಗಳು, ನೈರ್ಮಲ್ಯವಾದ ಶೌಚಾಲಯಗಳು ಮತ್ತು ಶಿಶುಗಳು ಹಾಗೂ ಚಿಕ್ಕ ಮಕ್ಕಳ ಸೌಕರ್ಯ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ತಿನ್ನಿಸುವ, ಕುಡಿಸುವ ಮತ್ತು ಮಗುವಿನ ಬಟ್ಟೆ ಬದಲಾಯಿಸುವ ಕೋಣೆಗಳನ್ನು ಹೊಂದಿದೆ. ತರಬೇತಿ ಪಡೆದ ಆರೈಕೆದಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಹೊಂದಿರುವ ಈ ಶಿಶುಪಾಲನಾ ಕೇಂದ್ರವನ್ನು 6 ತಿಂಗಳಿಂದ 6 ವರ್ಷದೊಳಗಿನ ಮಕ್ಕಳ ಬೆಳವಣಿಗೆ ಮತ್ತು ಆರೈಕೆಯ ಅಗತ್ಯಗಳನ್ನು ಪೂರೈಸಲು ವಿಚಾರಪೂರ್ಣವಾಗಿ ವಿನ್ಯಾಸಗೊಳಿಸಲಾಗಿದೆ.

ಹೊಸದಾಗಿ ಉದ್ಘಾಟನೆಗೊಂಡಿರುವ ಈ ಶಿಶುಪಾಲನಾ ಕೇಂದ್ರವು  ಕೇವಲ ಮೂಲಸೌಕರ್ಯ ಹೊಂದಿರುವುದು ಮಾತ್ರವಲ್ಲದೆ , ಇದು ಆರೈಕೆಯನ್ನು ಗೌರವಿಸುವ, ಬಾಲ್ಯವನ್ನು ಸಂಭ್ರಮಿಸುವ ಮತ್ತು ನೌಕರರು ತಮ್ಮ ವೃತ್ತಿಪರ ಬದ್ಧತೆಗಳೊಂದಿಗೆ ಕೌಟುಂಬಿಕ ಜವಾಬ್ದಾರಿಗಳನ್ನು ಸಮತೋಲನಗೊಳಿಸಲು ಅನುವು ಮಾಡಿಕೊಡುವ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಕೆಲಸದ ಸ್ಥಳಕ್ಕೆ ಗುಣಮಟ್ಟದ ಮಕ್ಕಳ ಆರೈಕೆಯನ್ನು ಹತ್ತಿರ ತರುವ ಮೂಲಕ, ಈ ಉಪಕ್ರಮವು ಕೆಲಸ ಮಾಡುವ ಪೋಷಕರಿಗೆ ಬೆಂಬಲ ನೀಡುವ ಗುರಿಯನ್ನು ಹೊಂದಿದೆ ಮತ್ತು ಹೆಚ್ಚು ಎಲ್ಲವನ್ನೊಳಗೊಳ್ಳುವ, ಕುಟುಂಬಸ್ನೇಹಿ ಹಾಗೂ ಜನಕೇಂದ್ರಿತ ಕೆಲಸದ ವಾತಾವರಣವನ್ನು ಪೋಷಿಸುವಲ್ಲಿ ಸಚಿವಾಲಯದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ದೇವಶ್ರೀ ಮುಖರ್ಜಿ; ತರಬೇತಿ ಮಹಾನಿರ್ದೇಶನಾಲಯದ (ಡಿಜಿಟಿ) ಮಹಾನಿರ್ದೇಶಕರು (ತರಬೇತಿ) ಶ್ರೀ ದಿಲೀಪ್ ಕುಮಾರ್; ಎನ್ ಸಿ ವಿ ಇ ಟಿನ ಕಾರ್ಯಕಾರಿ ಸದಸ್ಯ ಪ್ರೊ. (ಡಾ.) ಅಶೋಕ್ ಕುಮಾರ್ ಗಾಬಾ; ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ನಿರಂಜನ್ ಕುಮಾರ್ ಸುಧಾಂಶು; ಸಚಿವಾಲಯದ ಹಿರಿಯ ಆರ್ಥಿಕ ಸಲಹೆಗಾರರಾದ ಶ್ರೀಮತಿ ಮನೀಷಾ ಸೆನ್ ಶರ್ಮಾ; ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಮತಿ ಹೆನಾ ಉಸ್ಮಾನ್; ಸಚಿವಾಲಯದ ಆರ್ಥಿಕ ಸಲಹೆಗಾರರಾದ ಶ್ರೀಮತಿ ಅರ್ಚನಾ ಮಾಯಾರಾಮ್; ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಮತಿ ಮಾನಸಿ ಸಹಾಯ್ ಠಾಕೂರ್; ಸಚಿವಾಲಯದ  ಜಂಟಿ ಕಾರ್ಯದರ್ಶಿ ಶ್ರೀ ಎಂ. ಸುಬ್ರಮಣಿಯನ್ ಅವರೊಂದಿಗೆ ಸಚಿವಾಲಯ, ಡಿಜಿತ, ಎನ್ ಸಿ ವಿ ಇ ಟಿ ಮತ್ತು ಎನ್ ಎಸ್ ಡಿ ಸಿಯ ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಭಾರತವು ಭವಿಷ್ಯಕ್ಕೆ ಸಿದ್ಧವಿರುವ ಮತ್ತು ಎಲ್ಲರನ್ನೂ ಒಳಗೊಳ್ಳುವ ಆರ್ಥಿಕತೆಯತ್ತ ಮುನ್ನಡೆಯುತ್ತಿರುವಾಗ, ಇಂತಹ ಉಪಕ್ರಮಗಳು ಪ್ರಗತಿಪರ, ಜನಕೇಂದ್ರಿತ ಮತ್ತು ಆಧುನಿಕ ಕೆಲಸಗಾರರ ಅಗತ್ಯಗಳಿಗೆ ಸ್ಪಂದಿಸುವ ಸಂಸ್ಥೆಗಳನ್ನು ನಿರ್ಮಿಸುವಲ್ಲಿ ಸರ್ಕಾರದ ಆದ್ಯತೆಗಳನ್ನು ಮತ್ತಷ್ಟು ಬಲಪಡಿಸುತ್ತವೆ.

 

*****


(रिलीज़ आईडी: 2269790) आगंतुक पटल : 5
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Gujarati , Tamil