ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಹಮದಾಬಾದ್ ನಲ್ಲಿ ಪ್ರಥಮ ವಿಶ್ವ ಯೋಗಾಸನ ಚಾಂಪಿಯನ್ ಶಿಪ್ 2026 ಅನ್ನು ಉದ್ಘಾಟಿಸಿದರು
"ಈ ಚಾಂಪಿಯನ್ಶಿಪ್ ಮೂಲಕ ಯೋಗಾಸನವು ಸ್ಪರ್ಧಾತ್ಮಕ ಕ್ರೀಡೆಯಾಗಿ ಹೊಸ ಗುರುತನ್ನು ಪಡೆಯಲಿದೆ": ಪ್ರಧಾನಮಂತ್ರಿ ಮೋದಿ*
"ಯೋಗಾಸನ ಕ್ರೀಡೆಯು ವಿಸ್ತರಿಸುತ್ತಿದ್ದಂತೆ, ಹೊಸ ಸಾಧ್ಯತೆಗಳು ಮತ್ತು ವೃತ್ತಿಗಳೂ ಬೆಳೆಯುತ್ತವೆ": ಪ್ರಧಾನಮಂತ್ರಿ ಮೋದಿ
"ಅಂತಾರಾಷ್ಟ್ರೀಯ ಯೋಗ ದಿನಕ್ಕೂ ಮುನ್ನ, ವಿಶ್ವ ಯೋಗಾಸನ ಚಾಂಪಿಯನ್ ಶಿಪ್ ಆರೋಗ್ಯ ಮತ್ತು ಯೋಗಕ್ಷೇಮದ ಡಬಲ್ ಡೋಸ್ ಅನ್ನು ತಂದಿದೆ": ಪ್ರಧಾನಮಂತ್ರಿ ಮೋದಿ
"ಭಾರತವು 2030 ರಲ್ಲಿ ಕಾಮನ್ವೆಲ್ತ್ ಗೇಮ್ಸ್ ಮತ್ತು 2036ರಲ್ಲಿ ಒಲಿಂಪಿಕ್ಸ್ ಅನ್ನು ಆಯೋಜಿಸಿದಾಗ, ಯೋಗಾಸನವು ಈ ಜಾಗತಿಕ ಕ್ರೀಡಾಕೂಟಗಳ ಭಾಗವಾಗುವುದನ್ನು ನೋಡುವುದು ನಮ್ಮ ಮಹತ್ವಾಕಾಂಕ್ಷೆಯಾಗಿದೆ" : ಡಾ. ಮನ್ಸುಖ್ ಮಾಂಡವೀಯ
ವಿಶ್ವ ಯೋಗಾಸನ ಚಾಂಪಿಯನ್ ಶಿಪ್ 60 ಕ್ಕೂ ಹೆಚ್ಚು ದೇಶಗಳ ಗಣ್ಯ ಯೋಗಪಟುಗಳು ಮತ್ತು ನಿಯೋಗಗಳನ್ನು ಒಟ್ಟುಗೂಡಿಸಿದೆ
प्रविष्टि तिथि:
04 JUN 2026 9:21PM by PIB Bengaluru
ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಅಹಮದಾಬಾದ್ ನಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಥಮ ವಿಶ್ವ ಯೋಗಾಸನ ಚಾಂಪಿಯನ್ಶಿಪ್ 2026 ಅನ್ನು ಉದ್ಘಾಟಿಸಿದರು.
ಚಾಂಪಿಯನ್ ಶಿಪ್ ನ ಪಾತ್ರವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಮೋದಿ ಅವರು, "ಅಂತಾರಾಷ್ಟ್ರೀಯ ಯೋಗ ದಿನಕ್ಕೂ ಮುನ್ನ, ವಿಶ್ವ ಯೋಗಾಸನ ಚಾಂಪಿಯನ್ಶಿಪ್ ಆರೋಗ್ಯ ಮತ್ತು ಯೋಗಕ್ಷೇಮದ ಡಬಲ್ ಡೋಸ್ ತಂದಿದೆ" ಎಂದು ತಿಳಿಸಿದರು.

ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ, ಪ್ರತಿಯೊಂದು ಜೀವಂತ ಸಂಪ್ರದಾಯವು ಕಾಲಕ್ಕೆ ತಕ್ಕಂತೆ ಹೊಸ ಹಂತವನ್ನು ಪ್ರವೇಶಿಸುತ್ತದೆ ಎಂದು ಹೇಳಿದರು ಮತ್ತು ಈ ಚಾಂಪಿಯನ್ ಶಿಪ್ ಅನ್ನು ಯೋಗಕ್ಕೆ ಒಂದು ಹೊಸ ಅಧ್ಯಾಯದ ಆರಂಭ ಎಂದು ಬಣ್ಣಿಸಿದರು.
"ಪ್ರತಿಯೊಂದು ಜೀವಂತ ಸಂಪ್ರದಾಯವು ಕಾಲಕ್ಕೆ ತಕ್ಕಂತೆ ಹೊಸ ಹಂತಗಳನ್ನು ಪ್ರವೇಶಿಸುತ್ತದೆ. ಯೋಗಾಸನ ಕ್ರೀಡೆಯ ಈ ವಿಶ್ವ ಚಾಂಪಿಯನ್ಶಿಪ್ ಅಂತಹ ಒಂದು ಹೊಸ ಹಂತದ ಆರಂಭವನ್ನು ಸೂಚಿಸುತ್ತದೆ."
ಕ್ರೀಡೆಯ ವ್ಯಾಪಕ ಪರಿಣಾಮವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಪ್ರತಿಯೊಂದು ಪ್ರಮುಖ ಕ್ರೀಡೆಯು ತನ್ನ ಸುತ್ತಲೂ ಒಂದು ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಎಂದು ಹೇಳಿದರು.

"ಯೋಗಾಸನ ಕ್ರೀಡೆಯು ವಿಸ್ತರಿಸುತ್ತಿದ್ದಂತೆ, ಅದರೊಂದಿಗೆ ಸಂಬಂಧಿಸಿದ ಹೊಸ ಸಾಧ್ಯತೆಗಳೂ ಬೆಳೆಯುತ್ತವೆ. ಇದು ಕ್ರೀಡಾಪಟುಗಳಿಗೆ ಹೊಸ ವೃತ್ತಿಯ ಅವಕಾಶಗಳನ್ನು ತರುತ್ತದೆ ಮತ್ತು ತರಬೇತುದಾರರು, ಕ್ರೀಡಾ ವಿಜ್ಞಾನಿಗಳು, ಸಂಶೋಧಕರು ಹಾಗೂ ಈವೆಂಟ್ ಮ್ಯಾನೇಜರ್ ಗಳಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ" ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.
ಭಾಗವಹಿಸುವವರನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, ವಿಶ್ವ ಯೋಗಾಸನ ಚಾಂಪಿಯನ್ಶಿಪ್ನ ಮಹತ್ವವು ಕೇವಲ ಸ್ಪರ್ಧೆಯಲ್ಲದೆ ಅದನ್ನೂ ಮೀರಿದ್ದಾಗಿದೆ ಎಂದು ಹೇಳಿದರು.
"ಈ ಸ್ಪರ್ಧೆಯಲ್ಲಿ ಯಾರು ಗೆದ್ದರೂ, ಈ ಐತಿಹಾಸಿಕ ಅಧ್ಯಾಯದ ಭಾಗವಾಗುವ ಮೂಲಕ ನೀವೆಲ್ಲರೂ ಈಗಾಗಲೇ ವಿಜೇತರಾಗಿದ್ದೀರಿ." ಎಂದು ಅವರು ಹೇಳಿದರು.
ಚಾಂಪಿಯನ್ ಪ್ನಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಆಯುಷ್ ಸಚಿವಾಲಯದ 'ಯೋಗ ತ್ರೀ ಸಿಕ್ಸ್ಟಿ ಫೈವ್' ಅಭಿಯಾನದ ರಾಯಭಾರಿಗಳಾಗಬೇಕು ಎಂದು ಪ್ರಧಾನಮಂತ್ರಿಯವರು ಒತ್ತಾಯಿಸಿದರು. ಯೋಗದ ಸಂದೇಶವನ್ನು ತಮ್ಮ ದೇಶಗಳಿಗೆ ಕೊಂಡೊಯ್ಯಲು ಮತ್ತು ಈ ಪ್ರಾಚೀನ ಅಭ್ಯಾಸದಲ್ಲಿ ವರ್ಷವಿಡೀ ಪಾಲ್ಗೊಳ್ಳುವಂತೆ ಜನರನ್ನು ಪ್ರೇರೇಪಿಸಲು ಅವರು ಕರೆಯನ್ನು ನೀಡಿದರು.
ಯೋಗಾಸನವು ಅಂತಿಮವಾಗಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸ್ಥಾನ ಪಡೆಯುತ್ತದೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿಯವರು ವ್ಯಕ್ತಪಡಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಅವರು, ಈ ಯೋಗಾಸನ ಚಾಂಪಿಯನ್ ಶಿಪ್ ಭಾರತ ಮತ್ತು ಜಾಗತಿಕ ಯೋಗ ಸಮುದಾಯಕ್ಕೆ ಒಂದು ಐತಿಹಾಸಿಕ ಕ್ಷಣವಾಗಿದೆ ಎಂದು ಹೇಳಿದರು.

"ವಿಶ್ವ ಯೋಗಾಸನ ಚಾಂಪಿಯನ್ ಶಿಪ್ ಭಾರತದಲ್ಲಿ ಪ್ರಾರಂಭವಾಗುತ್ತಿದೆ; ಇದರ ಮೊದಲ ಆವೃತ್ತಿಯಲ್ಲೇ 78 ದೇಶಗಳು ಮತ್ತು 500 ಕ್ಕೂ ಹೆಚ್ಚು ಕ್ರೀಡಾಪಟುಗಳು ಒಟ್ಟಿಗೆ ಸೇರಿದ್ದಾರೆ. ಇದು ದೇಶಕ್ಕೆ ಒಂದು ಐತಿಹಾಸಿಕ ಕ್ಷಣವಾಗಿದೆ," ಎಂದು ಅವರು ಹೇಳಿದರು.
ಯೋಗಾಸನವು ಈಗ ಸ್ಪರ್ಧಾತ್ಮಕ ಕ್ರೀಡೆಯಾಗಿ ಹೊರಹೊಮ್ಮುತ್ತಿದೆ ಮತ್ತು ಭಾರತವು ಈ ರೂಪಾಂತರದ ನೇತೃತ್ವ ವಹಿಸಿದೆ ಎಂದು ಕ್ರೀಡಾ ಸಚಿವರು ಮತ್ತಷ್ಟು ಒತ್ತಿ ಹೇಳಿದರು.
"ಭಾರತವು 2030 ರಲ್ಲಿ ಕಾಮನ್ವೆಲ್ತ್ ಗೇಮ್ಸ್ ಮತ್ತು 2036 ರಲ್ಲಿ ಒಲಿಂಪಿಕ್ಸ್ ಅನ್ನು ಆಯೋಜಿಸಿದಾಗ, ಯೋಗಾಸನವು ಈ ಜಾಗತಿಕ ಕ್ರೀಡಾಕೂಟಗಳ ಭಾಗವಾಗುವುದನ್ನು ನೋಡುವುದು ನಮ್ಮ ಮಹತ್ವಾಕಾಂಕ್ಷೆಯಾಗಿದೆ" ಎಂದು ಅವರು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಗುಜರಾತಿನ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್; ಗುಜರಾತ್ ಸರ್ಕಾರದ ಗೃಹ, ಕ್ರೀಡೆ, ಯುವಜನ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಗೌರವಾನ್ವಿತ ರಾಜ್ಯ ಸಚಿವರಾದ ಶ್ರೀ ಹರ್ಷ್ ಸಂಘವಿ; ಮತ್ತು ವಿಶ್ವ ಯೋಗಾಸನದ ಗೌರವಾನ್ವಿತ ಅಧ್ಯಕ್ಷರಾದ ಸ್ವಾಮಿ ರಾಮದೇವ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ವಿಶ್ವ ಯೋಗಾಸನ ಚಾಂಪಿಯನ್ಶಿಪ್ ಉಗಾಂಡಾ, ಜಾಂಬಿಯಾ, ಶ್ರೀಲಂಕಾ, ನೇಪಾಳ, ಕೀನ್ಯಾ, ಜಪಾನ್, ಒಮಾನ್, ಮಾರಿಷಸ್ ಮತ್ತು ನೆದರ್ಲ್ಯಾಂಡ್ಸ್ ಸೇರಿದಂತೆ 60 ಕ್ಕೂ ಹೆಚ್ಚು ದೇಶಗಳ ಗಣ್ಯ ಯೋಗಪಟುಗಳು ಮತ್ತು ನಿಯೋಗಗಳನ್ನು ಒಟ್ಟುಗೂಡಿಸಿದೆ ಮತ್ತು ಯೋಗಾಸನವನ್ನು ಜಾಗತಿಕವಾಗಿ ಮನ್ನಣೆ ಪಡೆದ ಕ್ರೀಡಾ ವಿಭಾಗವಾಗಿ ಸ್ಥಾಪಿಸುವ ಗುರಿಯನ್ನು ಇದು ಹೊಂದಿದೆ.

*****
(रिलीज़ आईडी: 2269215)
आगंतुक पटल : 4