ಪ್ರಧಾನ ಮಂತ್ರಿಯವರ ಕಛೇರಿ
ಲೋಕಮಾತೆ ಅಹಿಲ್ಯಾಬಾಯಿ ಹೋಳ್ಕರ್ ಅವರ ಜಯಂತಿಯಂದು ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
31 MAY 2026 11:15AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೋಕಮಾತೆ ಅಹಿಲ್ಯಾಬಾಯಿ ಹೋಳ್ಕರ್ ಅವರ ಜಯಂತಿಯ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಶ್ರೀ ಮೋದಿ ಅವರು, ಅಹಿಲ್ಯಾಬಾಯಿ ಹೋಳ್ಕರ್ ಅವರ ಬುದ್ಧಿವಂತಿಕೆ, ಕರುಣೆ ಹಾಗೂ ಜನಕಲ್ಯಾಣದತ್ತ ಅವರ ಅಚಲ ನಿಷ್ಠೆಯನ್ನು ಇಡೀ ರಾಷ್ಟ್ರವು ಅತ್ಯಂತ ಗೌರವ ಮತ್ತು ಭಕ್ತಿಯಿಂದ ಸ್ಮರಿಸುತ್ತಿದೆ ಎಂದು ಹೇಳಿದ್ದಾರೆ.
ಅವರ ಜೀವನವು ಉತ್ತಮ ಆಡಳಿತ, ರಾಷ್ಟ್ರಭಕ್ತಿ ಮತ್ತು ಸಾಂಸ್ಕೃತಿಕ ಗೌರವದ ಅತ್ಯುತ್ತಮ ಮಾದರಿಯಾಗಿದೆ ಎಂದು ಶ್ಲಾಘಸಿದ್ದಾರೆ. ಅವರು ಸದಾ ಧೈರ್ಯ ಮತ್ತು ಕರ್ತವ್ಯನಿಷ್ಠೆಯೊಂದಿಗೆ ನಾಯಕತ್ವ ವಹಿಸಿದ್ದರು ಎಂದು ಹೇಳಿದ್ದಾರೆ.
ದೇಶಾದ್ಯಂತ ಪವಿತ್ರ ದೇವಾಲಯಗಳು ಹಾಗೂ ತೀರ್ಥಕ್ಷೇತ್ರಗಳ ಪುನರ್‌ನಿರ್ಮಾಣಕ್ಕೆ ಅವರು ನೀಡಿದ ಕೊಡುಗೆ, ಜೊತೆಗೆ ಎಲ್ಲರಿಗೂ ನ್ಯಾಯ ಮತ್ತು ಕಲ್ಯಾಣವನ್ನು ಖಚಿತವಾಗಿ ಒದಗಿಸಲು ಮಾಡಿದ ಅಪೂರ್ವ ಸೇವೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಅವರ ಕಾರ್ಯಗಳು ಭಾರತದ ಸಾಂಸ್ಕೃತಿಕ ಚೈತನ್ಯವನ್ನು ಮತ್ತಷ್ಟು ಬಲಪಡಿಸಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಮಾಜ, ಸಂಸ್ಕೃತಿ ಹಾಗೂ ರಾಷ್ಟ್ರ ನಿರ್ಮಾಣದತ್ತ ಲೋಕಮಾತೆ ಅಹಿಲ್ಯಾಬಾಯಿ ಹೋಳ್ಕರ್ ಅವರ ಸಮರ್ಪಣಾಭಾವವು ದೇಶದ ಪ್ರತಿಯೊಂದು ಪೀಳಿಗೆಗೂ ನಿರಂತರ ಪ್ರೇರಣೆಯಾಗಿರಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಪ್ರಧಾನಮಂತ್ರಿ ಅವರು ತಮ್ಮಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದಿದ್ದಾರೆ:
“लोकमाता अहिल्याबाई होल्कर जी को उनकी जयंती पर कोटि-कोटि नमन! बुद्धिमत्ता, करुणा और जनकल्याण के प्रति अटूट निष्ठा को लेकर पूरा देश उन्हें आदर और सम्मान के साथ स्मरण करता है। उनका जीवन सुशासन, राष्ट्रभक्ति और सांस्कृतिक गौरव का एक उत्कृष्ट उदाहरण है। उन्होंने सदैव साहस और कर्तव्यनिष्ठा के साथ नेतृत्व किया। देशभर में पावन मंदिरों और तीर्थस्थलों के पुनर्निर्माण से लेकर सभी के लिए न्याय और कल्याण सुनिश्चित करने में उन्होंने अतुलनीय योगदान दिया। उन्होंने भारत की सांस्कृतिक चेतना को और सशक्त बनाया। समाज, संस्कृति और राष्ट्र निर्माण के प्रति उनका समर्पण भाव देश की हर पीढ़ी को प्रेरित करता रहेगा।”
*****
(ಪ್ರಕಟಣೆ ಐ.ಡಿ.: 2267358)
ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Tamil
,
Telugu
,
Malayalam