ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
azadi ka amrit mahotsav

ಭಾರತವು ತನ್ನ 2026ರ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ಎಂ.ಎಸ್.ಎಂ.ಇ. ಸಹಕಾರವನ್ನು ಮುನ್ನಡೆಸುತ್ತಿದೆ


"ಎಂ.ಎಸ್.ಎಂ.ಇ.ಗಳಿಗೆ ತಂತ್ರಜ್ಞಾನ ಪ್ರವೇಶವನ್ನು ಹೆಚ್ಚಿಸುವುದು" ಎಂಬ ವಿಷಯಧಾರದಲ್ಲಿ ಬ್ರಿಕ್ಸ್ ಪಾರ್ಟ್ ಎನ್.ಐ.ಆರ್. ಟ್ರ್ಯಾಕ್ ಅಡಿಯಲ್ಲಿ ಕೇಂದ್ರ ಎಂ.ಎಸ್.ಎಂ.ಇ. ಸಚಿವಾಲಯವು 2ನೇ ಎಸ್.ಎಂ.ಇ. ಕಾರ್ಯ ಗುಂಪು ಸಭೆಯನ್ನು ಯಶಸ್ವಿಯಾಗಿ ನಡೆಸಿದೆ

"ಎಂ.ಎಸ್.ಎಂ.ಇ.ಗಳಿಗೆ ನಾವೀನ್ಯತೆಗಳನ್ನು ಬಳಸಿಕೊಳ್ಳುವುದು ಮತ್ತು ತಂತ್ರಜ್ಞಾನ ವಾಣಿಜ್ಯೀಕರಣ" ದ ಮೇಲೆ ಕೇಂದ್ರೀಕರಿಸಿದ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವಿನ ಚರ್ಚೆಗಳು ನಡೆದಿವೆ

ಪ್ರಕಟಣಾ ದಿನಾಂಕ: 29 MAY 2026 1:15PM by PIB Bengaluru

ಭಾರತ ಸರ್ಕಾರದ ಎಂ.ಎಸ್.ಎಂ.ಇ.ಸಚಿವಾಲಯದ ನೇತೃತ್ವದಲ್ಲಿ ಹೊಸ ಕೈಗಾರಿಕಾ ಕ್ರಾಂತಿಯ (ಪಾರ್ಟ್ ಎನ್.ಐ.ಆರ್.) ಬ್ರಿಕ್ಸ್ ಪಾಲುದಾರಿಕೆಯ ಅಡಿಯಲ್ಲಿ ಎಸ್.ಎಂ.ಇ. ಕಾರ್ಯ ಗುಂಪು ಕಾರ್ಯಚಟುವಟಿಕೆ ನಡೆಸುತ್ತಿದೆ. ಭಾರತದ 2026 ರ ಬ್ರಿಕ್ಸ್ ಅಧ್ಯಕ್ಷತೆಯ ಅಡಿಯಲ್ಲಿ, ಸಚಿವಾಲಯವು ಮೂರು ಎಸ್.ಎಂ.ಇ. ಕಾರ್ಯ ಗುಂಪು ಸಭೆಗಳನ್ನು ಮತ್ತು ಉದ್ಘಾಟನಾ ಬ್ರಿಕ್ಸ್ ಎಂ.ಎಸ್.ಎಂ.ಇ.ವೇದಿಕೆಯನ್ನು ಕರೆದಿದೆ. ಇದು - ಹಣಕಾಸು ಪ್ರವೇಶ, ತಂತ್ರಜ್ಞಾನ ಪ್ರವೇಶ ಮತ್ತು ಎಂ.ಎಸ್.ಎಂ.ಇ.ಗಳಿಗೆ ಸುಸ್ಥಿರತೆ-ಆಧಾರಿತ ಬೆಳವಣಿಗೆ ಎಂಬ ಮೂರು ಆದ್ಯತೆಯ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ. 

ಏಪ್ರಿಲ್ 24, 2026 ರಂದು ನಡೆದ ಮೊದಲ ಎಸ್.ಎಂ.ಇ. ಕಾರ್ಯ ಗುಂಪು ಸಭೆಯ ನಂತರ, ಕೇಂದ್ರ ಎಂ.ಎಸ್.ಎಂ.ಇ. ಸಚಿವಾಲಯವು ಮೇ 26, 2026 ರಂದು "ಎಂ.ಎಸ್.ಎಂ.ಇ.ಗಳಿಗೆ ತಂತ್ರಜ್ಞಾನ ಪ್ರವೇಶ ಅವಕಾಶವನ್ನು ಹೆಚ್ಚಿಸುವುದು" ಎಂಬ ಬ್ರಿಕ್ಸ್ ಪಾರ್ಟ್ಎನ್.ಐ.ಆರ್. ಟ್ರ್ಯಾಕ್ ನಡಿಯಲ್ಲಿ 2 ನೇ ಎಸ್.ಎಂ.ಇ. ಕಾರ್ಯ ಗುಂಪು ಸಭೆಯನ್ನು ಯಶಸ್ವಿಯಾಗಿ ನಡೆಸಿತು. ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವಿನ ಚರ್ಚೆಗಳು "ಎಂ.ಎಸ್.ಎಂ.ಇ.ಗಳಿಗೆ ನಾವೀನ್ಯತೆಗಳನ್ನು ಬಳಸಿಕೊಳ್ಳುವುದು ಮತ್ತು ತಂತ್ರಜ್ಞಾನ ವಾಣಿಜ್ಯೀಕರಣ" ಮತ್ತು "ಎಂ.ಎಸ್.ಎಂ.ಇ.ತಂತ್ರಜ್ಞಾನ ಅಳವಡಿಕೆಗಾಗಿ ಉದ್ಯಮ-ಸಿದ್ಧ ಮಾನವಶಕ್ತಿಯ ಕೌಶಲ್ಯ ಮತ್ತು ಅಭಿವೃದ್ಧಿ" ದ ಮೇಲೆ ಕೇಂದ್ರೀಕರಿಸಿದವು.

ಈ ಸಭೆಯಲ್ಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಸಕ್ರಿಯವಾಗಿ ಭಾಗವಹಿಸಿದವು ಮತ್ತು ಅನುಭವಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸಿದವು, ಅದೇ ಸಮಯದಲ್ಲಿ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ, ನಾವೀನ್ಯತೆ ಮತ್ತು ಸಮಗ್ರ ಅಭಿವೃದ್ಧಿಯಲ್ಲಿ ಎಂ.ಎಸ್.ಎಂ.ಇ.ಗಳ ಪಾತ್ರವನ್ನು ಒತ್ತಿಹೇಳಿದವು. ಹೆಚ್ಚಿನ ಡಿಜಿಟಲ್ ಸೇರ್ಪಡೆ, ಬಲವಾದ ನಾವೀನ್ಯತೆ ಸಾಮರ್ಥ್ಯಗಳು ಮತ್ತು ಪ್ರಾದೇಶಿಕ ಮತ್ತು ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಅವುಗಳ ಏಕೀಕರಣವನ್ನು ಬೆಂಬಲಿಸಲು ಎಂ.ಎಸ್.ಎಂ.ಇ.ಗಳ ಸುಧಾರಿತ ತಂತ್ರಜ್ಞಾನ ಸಿದ್ಧತೆಯ ಮೂಲಕ ತಂತ್ರಜ್ಞಾನ ವಿಭಜನೆಯನ್ನು ಕಡಿಮೆ ಮಾಡಲು ಬಹುಮುಖಿ ವಿಧಾನದ ಅಗತ್ಯವನ್ನು ಚರ್ಚೆಗಳು ಎತ್ತಿ ತೋರಿಸಿದವು.

ಎಂ.ಎಸ್.ಎಂ.ಇ.ಗಳಿಗೆ ತಂತ್ರಜ್ಞಾನ ಪ್ರವೇಶ, ನಾವೀನ್ಯತೆ ಪರಿಸರ ವ್ಯವಸ್ಥೆಗಳು ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಬ್ರಿಕ್ಸ್ ಆರ್ಥಿಕತೆಗಳ ನಡುವಿನ ಆಳವಾದ ಸಹಯೋಗದ ಮಹತ್ವವನ್ನು ಸಭೆಯು ಪುನರುಚ್ಚರಿಸಿತು. ಈ ಚರ್ಚೆಗಳು ಇದೇ ರೀತಿಯ ಅಭಿವೃದ್ಧಿ ಸವಾಲುಗಳನ್ನು ಎದುರಿಸುತ್ತಿರುವ ದೇಶಗಳ ನಡುವೆ ಮೌಲ್ಯಯುತ ನೀತಿ ವಿನಿಮಯಕ್ಕೆ ಅವಕಾಶ ಮಾಡಿಕೊಟ್ಟವು ಮತ್ತು ಬ್ರಿಕ್ಸ್ ಆರ್ಥಿಕತೆಗಳಾದ್ಯಂತ ಸ್ಥಿತಿಸ್ಥಾಪಕ, ಅಂತರ್ಗತ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಎಂ.ಎಸ್.ಎಂ.ಇ.ವಲಯಗಳನ್ನು ನಿರ್ಮಿಸುವ ಹಂಚಿಕೆಯ ಬದ್ಧತೆಯನ್ನು ಬಲಪಡಿಸಿದವು.

ಸಭೆಯು ಅತ್ಯಂತ ಯಶಸ್ವಿ ಮತ್ತು ಉತ್ಪಾದಕವಾಗಿ, ಸಫಲತೆ ಕಂಡಿತು, ಅರ್ಥಪೂರ್ಣ ವಿನಿಮಯಗಳನ್ನು ಸುಗಮಗೊಳಿಸಿತು, ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರವನ್ನು ಬಲಪಡಿಸಿತು ಮತ್ತು ಬ್ರಿಕ್ಸ್ ಆರ್ಥಿಕತೆಗಳಾದ್ಯಂತ ಎಂ.ಎಸ್.ಎಂ.ಇ.ಗಳಿಗೆ ತಂತ್ರಜ್ಞಾನ ಪ್ರವೇಶ ಮತ್ತು ಸಾಮರ್ಥ್ಯ ವೃದ್ಧಿಯನ್ನು ಹೆಚ್ಚಿಸಲು ಅಮೂಲ್ಯವಾದ ಒಳನೋಟಗಳನ್ನು ಕೂಡಾ ಸೃಷ್ಟಿಸಿತು.

 

*****


(ಪ್ರಕಟಣೆ ಐ.ಡಿ.: 2266580) ವಿಸಿಟರ್ ಕೌಂಟರ್ : 12
ಪ್ರಕಟಣೆಯನ್ನು ಇದರಲ್ಲಿ ಓದಿ: English , Bengali , Bengali-TR , Urdu , हिन्दी , Manipuri , Gujarati , Tamil , Telugu