ಪ್ರಧಾನ ಮಂತ್ರಿಯವರ ಕಛೇರಿ
ಎನ್.ಟಿ.ಆರ್ ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
28 MAY 2026 9:56AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎನ್.ಟಿ.ಆರ್. ಗಾರು ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದರು.
ಬಡವರು ಮತ್ತು ಅಂಚಿನಲ್ಲಿರುವವರಿಗೆ ಘನತೆಯನ್ನು ಖಾತ್ರಿ ಪಡಿಸಿದ ಸಾರ್ವಜನಿಕ ಕಲ್ಯಾಣ ಮತ್ತು ಆಡಳಿತದ ಬಗೆಗಿನ ಅವರ ಬದ್ಧತೆಗಾಗಿ ಎನ್ ಟಿ ಆರ್ ಅವರನ್ನು ಪ್ರೀತಿಯಿಂದ ಸ್ಮರಿಸಲಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಎನ್.ಟಿ.ಆರ್ ಅವರು ಸಿನೆಮಾಕ್ಕೆ ನೀಡಿದ ಕೊಡುಗೆಗಳು ತಲೆಮಾರುಗಳನ್ನು ಆಕರ್ಷಿಸುತ್ತಲೇ ಇವೆ ಮತ್ತು ಅವರ ಜೀವನ ಮತ್ತು ಆದರ್ಶಗಳು ಅಪಾರ ಸ್ಫೂರ್ತಿಯ ಮೂಲವಾಗಿ ಉಳಿದಿವೆ ಎಂದು ಪ್ರಧಾನಮಂತ್ರಿ ಹೇಳಿದರು.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;
"ಮಹಾನ್ ಎನ್.ಟಿ.ಆರ್ ಅವರ ಜನ್ಮದಿನದಂದು ಅವರಿಗೆ ಗೌರವ ನಮನಗಳು. ಬಡವರು ಮತ್ತು ಅಂಚಿನಲ್ಲಿರುವವರಿಗೆ ಘನತೆಯನ್ನು ಖಾತ್ರಿಪಡಿಸಿದ ಸಾರ್ವಜನಿಕ ಕಲ್ಯಾಣ ಮತ್ತು ಆಡಳಿತದ ಬಗೆಗಿನ ಅವರ ಬದ್ಧತೆಗಾಗಿ ಅವರನ್ನು ಪ್ರೀತಿಯಿಂದ ಸ್ಮರಿಸಲಾಗುತ್ತದೆ. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಗಳು ತಲೆಮಾರುಗಳನ್ನು ಆಕರ್ಷಿಸುತ್ತಲೇ ಇವೆ. ಅವರ ಜೀವನ ಮತ್ತು ಆದರ್ಶಗಳು ಅಪಾರ ಸ್ಫೂರ್ತಿಯ ಸೆಲೆಯಾಗಿ ಉಳಿದಿವೆ. ನನ್ನ ಸ್ನೇಹಿತ ಚಂದ್ರಬಾಬು ನಾಯ್ಡು ಅವರ ನೇತೃತ್ವದಲ್ಲಿ ಆಂಧ್ರಪ್ರದೇಶದ ಎನ್ ಡಿ ಎ ಸರ್ಕಾರವು ಅವರು ಜನರಿಗಾಗಿ ಪ್ರೀತಿಸುತ್ತಿದ್ದ ಆಕಾಂಕ್ಷೆಗಳನ್ನು ಮುನ್ನಡೆಸಲು ಬದ್ಧವಾಗಿದೆ.
@ncbn"
*****
(ಪ್ರಕಟಣೆ ಐ.ಡಿ.: 2266169)
ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Gujarati
,
Odia
,
Tamil
,
Telugu
,
Malayalam