ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದ ಕ್ಷಣಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 25 MAY 2026 11:19PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದ ಕ್ಷಣಗಳನ್ನು ಹಂಚಿಕೊಂಡರು.

ಸಮಾಜ ಮತ್ತು ರಾಷ್ಟ್ರಕ್ಕೆ ನೀಡಿದ ಅಸಾಧಾರಣ ಕೊಡುಗೆಗಳಿಗಾಗಿ ವಿವಿಧ ಕ್ಷೇತ್ರಗಳ ವಿಶಿಷ್ಟ ವ್ಯಕ್ತಿಗಳನ್ನು ಗೌರವಿಸಲಾಗುತ್ತಿರುವುದರಿಂದ ಸಮಾರಂಭವು ಹೆಮ್ಮೆ, ಕೃತಜ್ಞತೆ ಮತ್ತು ಸ್ಫೂರ್ತಿಯಿಂದ ತುಂಬಿತ್ತು ಎಂದು ಪ್ರಧಾನಮಂತ್ರಿಯವರು ಹೇಳಿದರು.

ನಮ್ಮ ಸಾಮೂಹಿಕ ಪ್ರಯಾಣವನ್ನು ಶ್ರೀಮಂತಗೊಳಿಸುವ ಕೆಲಸ ಮಾಡುವ ಇಂತಹ ಗಮನಾರ್ಹ ವ್ಯಕ್ತಿಗಳಲ್ಲಿ ಭಾರತದ ಶಕ್ತಿ ಅಡಗಿದೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಅವರು ಉಲ್ಲೇಖಿಸಿದರು.

ಪ್ರಧಾನಮಂತ್ರಿಯವರರು ಎಕ್ಸ್ ತಾಣದ ಸರಣಿ ಸಂದೇಶದಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ:

"ಇಂದು ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದೆ. ವಿವಿಧ ಕ್ಷೇತ್ರಗಳ ವಿಶಿಷ್ಟ ವ್ಯಕ್ತಿಗಳನ್ನು ಸಮಾಜ ಮತ್ತು ನಮ್ಮ ರಾಷ್ಟ್ರಕ್ಕೆ ನೀಡಿದ ಅಸಾಧಾರಣ ಕೊಡುಗೆಗಳಿಗಾಗಿ ಗೌರವಿಸಲಾಗಿದ್ದರಿಂದ ಸಮಾರಂಭವು ಹೆಮ್ಮೆ, ಕೃತಜ್ಞತೆ ಮತ್ತು ಸ್ಫೂರ್ತಿಯಿಂದ ತುಂಬಿತ್ತು.

@PadmaAwards"

" ನಮ್ಮ ಸಾಮೂಹಿಕ ಪ್ರಯಾಣವನ್ನು ಶ್ರೀಮಂತಗೊಳಿಸುವ ಇಂತಹ ಗಮನಾರ್ಹ ವ್ಯಕ್ತಿಗಳಲ್ಲಿ ಭಾರತದ ಶಕ್ತಿಯಿದೆ.
ಪದ್ಮ ಸಮಾರಂಭದ ಇನ್ನೂ ಕೆಲವು ನೋಟಗಳು ಇಲ್ಲಿವೆ.

@PadmaAwards"

"ಪ್ರತಿಯೊಬ್ಬ ಪದ್ಮ ಪ್ರಶಸ್ತಿ ಪುರಸ್ಕೃತರು ಸ್ಪೂರ್ತಿದಾಯಕ ಜೀವನ ಪ್ರಯಾಣವನ್ನು ಹೊಂದಿದ್ದಾರೆ. ಅಧಿಕೃತ ಪದ್ಮ ಪ್ರಶಸ್ತಿಗಳ ಮಾಹಿತಿಯ ಇಂಸ್ಟಾಗ್ರಾಮ್ ಪುಟವು ಅವರುಗಳ ಕೆಲವು ಆಕರ್ಷಕ ಪ್ರಯತ್ನಗಳನ್ನು ವಿವರಿಸುತ್ತದೆ. ಒಮ್ಮೆ ನೋಡಿ.

instagram.com/padmaawards/"

 

*****


(ಪ್ರಕಟಣೆ ಐ.ಡಿ.: 2265742) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Manipuri , Assamese , Punjabi , Gujarati , Tamil , Telugu , Malayalam